Pages

ಅಧ್ಯಾಯ - ೧೭ [17]

 
श्रीमद्भगवद्गीता
ಶ್ರೀಮದ್ಭಗವದ್ಗೀತಾ
सप्तदशोऽध्यायः
ಸಪ್ತದಶೋಧ್ಯಾಯಃ
श्रद्धात्रयविभागयोगः
ಶ್ರದ್ದಾತ್ರಯವಿಭಾಗಯೊಗಃ

17-01
अर्जुन  उवाच
ये शास्त्रविधिमुत्सृज्य   यजन्ते श्रद्धयाऽन्विताः ।
तेषां निष्ठा तु का कृष्ण   सत्त्वमाहो रजस्तमः ॥ १७-१
ಅರ್ಜುನ ಉವಾಚ
ಯೇ ಶಾಸ್ತ್ರವಿಧಿಮುತ್ಸೃಜ್ಯ    ಯಜನ್ತೇ ಶ್ರದ್ಧಯಾನ್ವಿತಾಃ
ತೇಷಾಂ ನಿಷ್ಠಾ ತು ಕಾ ಕೃಷ್ಣ    ಸತ್ತ್ವಮಾಹೋ ರಜಸ್ತಮಃ 17.1
 
17-02
श्रीभगवानुवाच
त्रिविधा भवति श्रद्धा   देहिनां सा स्वभावजा ।
सात्त्विकी राजसी चैव   तामसी चेति तां श्रृणु ॥ १७-२
ಶ್ರೀ ಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ    ದೇಹಿನಾಂ ಸಾ ಸ್ವಭಾವಜಾ
ಸಾತ್ತ್ವಿಕೀ ರಾಜಸೀ ಚೈವ    ತಾಮಸೀ ಚೇತಿ ತಾಂ ಶ್ರೃಣು 17.2
 
17-03
सत्त्वानुरूपा सर्वस्य   श्रद्धा भवति भारत ।
श्रद्धामयोऽयं पुरुषो   यो यच्छ्रद्धः स एव सः ॥ १७-३
ಸತ್ತ್ವಾನುರೂಪಾ ಸರ್ವಸ್ಯ    ಶ್ರದ್ಧಾ ಭವತಿ ಭಾರತ
ಶ್ರದ್ಧಾಮಯೋಯಂ ಪುರುಷೋ    ಯೋ ಯಚ್ಛ್ರದ್ಧಃ ಸ ಏವ ಸಃ 17.3
 
17-04
यजन्ते सात्त्विका देवान्   यक्षरक्षांसि राजसाः ।
प्रेतान्भूतगणांश्चान्ये   यजन्ते तामसा जनाः ॥ १७-४
ಯಜನ್ತೇ ಸಾತ್ತ್ವಿಕಾ ದೇವಾನ್   ಯಕ್ಷರಕ್ಷಾಂಸಿ ರಾಜಸಾಃ
ಪ್ರೇತಾನ್ಭೂತಗಣಾಂಶ್ಚಾನ್ಯೇ    ಯಜನ್ತೇ ತಾಮಸಾ ಜನಾಃ 17.4
 
17-05
अशास्त्रविहितं घोरं   तप्यन्ते ये तपो जनाः ।
दम्भाहङ्कारसंयुक्ताः   कामरागबलान्विताः ॥ १७-५
ಅಶಾಸ್ತ್ರವಿಹಿತಂ ಘೋರಂ    ತಪ್ಯನ್ತೇ ಯೇ ತಪೋ ಜನಾಃ
ದಮ್ಭಾಹಙ್ಕಾರಸಂಯುಕ್ತಾಃ    ಕಾಮರಾಗಬಲಾನ್ವಿತಾಃ 17.5
 ಯಾವ ಜನರು ಡಂಬಾಚಾರ ಅಂದರೆ ಹೊರಗಿನ ಪ್ರದರ್ಶನಕ್ಕಾಗಿ ಮತ್ತು ಅಹಂಕಾರದಿಂದ ಕೂಡಿದವರಾಗಿ, ಹಾಗೂ ಕಾಮನೆ, ಆಸಕ್ತಿ ಮತ್ತು ಬಲದ ಮದದಿಂದ ಪ್ರೇರಿತರಾಗಿ ಶಾಸ್ತ್ರಗಳಲ್ಲಿ ಹೇಳದಿರುವಂತಹ ಘೋರ ಹಾಗೂ ಕಠಿಣವಾದ ತಪಸ್ಸನ್ನು ಆಚರಿಸುತ್ತಾರೋ
(ಅವರು ಆಸುರೀ ಸ್ವಭಾವದವರು)
 
17-06
कर्षयन्तः शरीरस्थं   भूतग्राममचेतसः ।
मां चैवान्तःशरीरस्थं   तान्विद्ध्यासुरनिश्चयान् ॥ १७-६
ಕರ್ಷಯನ್ತಃ ಶರೀರಸ್ಥಂ    ಭೂತಗ್ರಾಮಮಚೇತಸಃ
ಮಾಂ ಚೈವಾನ್ತಃಶರೀರಸ್ಥಂ    ತಾನ್ವಿದ್ಧ್ಯಾಸುರನಿಶ್ಚಯಾನ್ 17.6
 ಯಾವ ಅಜ್ಞಾನಿಗಳು ತಮ್ಮ ದೇಹದಲ್ಲಿರುವ ಪಂಚಭೂತಗಳ ಸಮೂಹವನ್ನು ಅಂದರೆ ಇಂದ್ರಿಯ ಹಾಗೂ ಅಂಗಾಗಗಳನ್ನು ಮತ್ತು ಅಂತಃಕರಣದಲ್ಲಿ ಅಂದರೆ ದೇಹದ ಒಳಗೆ ಅಂತರ್ಯಾಮಿಯಾಗಿ ನೆಲೆಸಿರುವ ಪರಮಾತ್ಮನನ್ನು ಶಾಸ್ತ್ರದ ನಿಯಮಗಳನ್ನು ಮೀರಿ, ತೀವ್ರವಾದ ತಪಸ್ಸಿನ ಮೂಲಕ ಹಿಂಸೆಗೊಳಪಡಿಸುತ್ತಾರೋ, ಅಂತಹವರು ರಾಕ್ಷಸೀ ಸ್ವಭಾವದವರು
 
ಈ ಶ್ಲೋಕದಲ್ಲಿ ಕಪಟ ತಪಸ್ಸು, ಭಕ್ತಿಯ ಹೆಸರಿನಲ್ಲಿ ಮಾಡುವ ಅಂಧಶ್ರದ್ದೆಯ ಆಚರಣೆಗಳು ಅಥವಾ ಧರ್ಮದ ಹೆಸರಿನಲ್ಲಿ ದೇಹಕ್ಕೆ ಕೊಡುವ ಅನಗತ್ಯ ಹಿಂಸೆಯನ್ನು ತೀವ್ರವಾಗಿ ಖಂಡಿಸಿ ಎಚ್ಚರಿಸಲಾಗಿದೆ.
ಇದರ ಮುಖ್ಯ ಮುಖ್ಯಾಂಶಗಳು ಹೀಗಿವೆ:
 
1. ಶರೀರಸ್ಥಂ ಭೂತಗ್ರಾಮಂ ಕರ್ಷಯಂತಃ
ಕೆಲವರು ತಮಗನಿಸಿದಂತೆ, ಶಾಸ್ತ್ರಗಳಲ್ಲಿ ಹೇಳದೆ ಇರುವ ಕೆಲವು ಕಠಿಣ ನಿಯಮಗಳನ್ನು ತಾವೇ ಸೃಷ್ಟಿಸಿಕೊಂಡು, ಒಂದೇ ಅಹಂಕಾರದಿಂದ ಅಥವಾ ಲೋಕದ ಪ್ರಶಂಸೆಗಾಗಿ ಕಠಿಣವಾದ ದೇಹಕ್ಕೆ ಹಿಂಸೆ ನೀಡುವ ಆಚರಣೆಗಳನ್ನು ಮಾಡುತ್ತಾರೆ, ಉದಾಹರಣೆಗೆ: ದೀರ್ಘಕಾಲ ಉಪವಾಸ, ನೆಲದ ಮೇಲೆ ಹೊರಳಾಡಿ ಪ್ರದಕ್ಷಿಣೆ ಮಾಡುವುದು, ಕೆಂಡದ ಮೇಲೆ ನಡೆಯುವುದು, ಗುಡ್-ಫ್ರೈಡೆ ದಿನ ಶಿಲುಬೆಗೆ ಏರಿಸಿಕೊಳ್ಳುವುದು, ಮಾತಮ್ ಅಂದರೆ ಮೊಹರಂಗೆ ಬೆನ್ನ ಮೇಲೆ ಹರಿತವಾದ ವಸ್ತುಗಳಿಂದ ಹೊಡೆದು ರಕ್ತ ಬರಿಸುವುದು, ಇತ್ಯಾದಿ. ಇಂತಹ ಮೂರ್ಖರು ಧರ್ಮದ ಹೆಸರಿನಲ್ಲಿ ತಮ್ಮ ಸ್ವಂತ ಇಂದ್ರಿಯಗಳನ್ನು ಮತ್ತು ಪಂಚಭೂತಗಳಿಂದ ಮಾಡಲ್ಪಟ್ಟ ದೇಹವನ್ನು ಅನಾವಶ್ಯ ಹಿಂಸಿಸುತ್ತಾರೆ. ದೇಹವನ್ನು ಅನಗತ್ಯವಾಗಿ ಪೀಡಿಸುವುದು ಭಕ್ತಿ ಅಥವಾ ಆಧ್ಯಾತ್ಮಿಕತೆಯಲ್ಲ. ದೇಹವು ಭಗವಂತನನ್ನು ತಲುಪಲು ಇರುವ ಸಾಧನ.
(ಪಂಚಭೂತಗಳು = ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ)
 
2. ಮಾಂ ಚೈವಾಂತಃಶರೀರಸ್ಥಂ:
ಪ್ರತಿಯೊಂದು ಜೀವಿಯ ದೇಹದೊಳಗೆ ಪರಮಾತ್ಮನು 'ಅಂತರ್ಯಾಮಿ'ಯಾಗಿ ನೆಲೆಸಿದ್ದಾನೆ. ಆದ್ದರಿಂದ, ದೇಹಕ್ಕೆ ಕೊಡುವ ಅನಗತ್ಯ ಹಿಂಸೆಯು ನೇರವಾಗಿ ಆ ದೇಹದೊಳಗೆ ಕುಳಿತಿರುವ ಭಗವಂತನಿಗೂ ಹಿಂಸೆ ನೀಡಿದಂತೆ. ಶರೀರವು ಭಗವಂತನ ಆವಾಸಸ್ಥಾನ ಅಂದರೆ ದೇವಸ್ಥಾನ, ಆದ ಕಾರಣ ಅದನ್ನು ಸರಿಯಾಗಿ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ.
 
ಇಂತಹ ಅಂಧಶ್ರದ್ದೆಯ ತಪಸ್ಸು, ಆಚರಣೆಗಳನ್ನು ಮಾಡುವವರು ಸಾಮಾನ್ಯವಾಗಿ ಭಗವಂತನ ಪ್ರೀತಿಗಾಗಲಿ ಅಥವಾ ಆತ್ಮೋದ್ಧಾರಕ್ಕಾಗಲಿ ಮಾಡುವುದಿಲ್ಲ. ಶಾಸ್ತ್ರಗಳ ಮಾರ್ಗದರ್ಶನವಿಲ್ಲದೆ, ಕೇವಲ ಸಮಾಜದಲ್ಲಿ ತಮಗೆ ಗೌರವ ಸಿಗಲಿ, ತಾವು ಶ್ರೇಷ್ಠರೆಂದು ಇತರರು ಭಾವಿಸಲಿ ಎಂಬ ಅಹಂಕಾರ ಹೆಮ್ಮೆ ಮತ್ತು ಆಸೆಯಿಂದ ಭಕ್ತಿ ಅಥವಾ ಆಚರಣೆಗಳನ್ನು ಮಾಡುವವರು 'ತಾಮಸಿಕ' ಅಥವಾ ‘ಆಸುರೀ’ ಅಂದರೆ ರಾಕ್ಷಸ ಬುದ್ಧಿಯವರಾಗಿರುತ್ತಾರೆ. ಪ್ರಹ್ಲಾದನ ತಂದೆಯಾದ ಹಿರಣ್ಯಕಶಿಪು ಮಾಡಿದ ತಪಸ್ಸು ಇದಕ್ಕೆ ಉತ್ತಮ ಉದಾಹರಣೆ.
 
ಭಕ್ತಿಯು ಯಾವಾಗಲೂ ಸರಳ, ಸಹಜ ಮತ್ತು ಶಾಸ್ತ್ರಬದ್ಧವಾಗಿರಬೇಕು. ಸದಾ ಮಧ್ಯಮ ಮಾರ್ಗ ಅಥವಾ ಸಮತೋಲನವಿರಬೇಕು. 'ಯುಕ್ತಾಹಾರವಿಹಾರಸ್ಯ' ಎಂದರೆ ಮಿತವಾದ, ಅಳತೆ ಮತ್ತು ನಿಯಮಬದ್ಧವಾದ ಆಹಾರ ಸೇವನೆ ಮತ್ತು ವಿಶ್ರಾಂತಿ ಅಥವಾ ಮನೋರಂಜನೆ ಹೊಂದಿರ ಬೇಕು. ಅತಿಯಾದ ಭೋಗವೂ ತಪ್ಪು, ಅತಿಯಾದ ದೇಹದಂಡನೆಯೂ ತಪ್ಪು, ಇತರರನ್ನು ಅಥವಾ ತನ್ನನ್ನು ತಾನೇ ದಂಡಿಸುವುದು ಭಕ್ತಿಯಲ್ಲ, ಅದು ಅಜ್ಞಾನಿ ಅಸುರರ ಬುದ್ದಿ.

17-07
आहारस्त्वपि सर्वस्य   त्रिविधो भवति प्रियः ।
यज्ञस्तपस्तथा दानं   तेषां भेदमिमं श्रृणु ॥ १७-७
ಆಹಾರಸ್ತ್ವಪಿ ಸರ್ವಸ್ಯ    ತ್ರಿವಿಧೋ ಭವತಿ ಪ್ರಿಯಃ
ಯಜ್ಞಸ್ತಪಸ್ತಥಾ ದಾನಂ    ತೇಷಾಂ ಭೇದಮಿಮಂ ಶ್ರೃಣು 17.7
 ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಸ್ವಭಾವಕ್ಕೆ ಅನುಗುಣವಾಗಿ ಇಷ್ಟವಾಗುವ ಆಹಾರವು ಮೂರು ವಿಧವಾಗಿರುತ್ತದೆ, ಸಾತ್ತ್ವಿಕ, ರಾಜಸಿಕ, ತಾಮಸಿಕ ಅಂತ. ಅದೇ ರೀತಿ ಅವರು ಮಾಡುವ ಯಜ್ಞ, ತಪಸ್ಸು ಮತ್ತು ದಾನಗಳೂ ಕೂಡ ಮೂರು ವಿಧವಾಗಿರುತ್ತವೆ. ಅವುಗಳ ನಡುವೆ ಇರುವ ವ್ಯತ್ಯಾಸಗಳನ್ನು ಈಗ ನನ್ನಿಂದ ಕೇಳು.
 
ಇಲ್ಲಿ ಮಾನವನ ದೈನಂದಿನ ಜೀವನದ ನಾಲ್ಕು ಅತ್ಯಂತ ಪ್ರಮುಖ ಅಂಶಗಳಾದ ಆಹಾರ, ಯಜ್ಞ, ತಪಸ್ಸು ಮತ್ತು ದಾನ ಇವುಗಳ ಮೇಲೆ ಪ್ರಕೃತಿಯ ಮೂರು ಗುಣಗಳಾದ ಸತ್ತ್ವ, ರಜಸ್ಸು, ಮತ್ತು ತಮಸ್ಸು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ವಿವರಣೆ ಪ್ರಾರಂಭವಾಗುತ್ತದೆ.
 
ಆಹಾರ: ಶರೀರ ಮತ್ತು ಮನಸ್ಸಿಗೆ ಶಕ್ತಿ ನೀಡಿ ಪೋಶಿಶುವ ಮಾಧ್ಯಮ.
ಹಿಂದಿಯಲ್ಲಿ “ಜೈಸಾ ಅನ್ನ್, ವೈಸಾ ಮನ್” ಅನ್ನುವ ನುಡಿಯಂತೆ ನಾವು ಉಣ್ಣುವ ಆಹಾರದಂತೆಯೇ ನಮ್ಮ ಮನಸ್ಸು ಇರುತ್ತದೆ. ನಾವು ತಿನ್ನುವ ಆಹಾರವು ಕೇವಲ ಹಸಿವನ್ನು ನೀಗಿಸುವುದಲ್ಲದೆ, ಅದು ನಮ್ಮ ಆಲೋಚನೆಗಳನ್ನು ರೂಪಿಸುತ್ತದೆ. ಯಾರೂ ಒಟ್ಟಾರೆ ಸಿಕ್ಕಿದ ಆಹಾರವನ್ನು ತಿನ್ನುವುದಿಲ್ಲ, ಬದಲಿಗೆ ಅವರೊಳಗೆ ಯಾವ ಗುಣ ಹೆಚ್ಚಾಗಿದೆಯೋ, ಅದಕ್ಕೆ ತಕ್ಕ ಪ್ರಚೋದನೆ  ಅವರ ದೇಹ ಮತ್ತು ಮನಸ್ಸಿನಿಂದ ಬರುತ್ತದೆ. 
ಸಂಸ್ಕೃತದಲ್ಲಿ  “ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ” ಅನ್ನುವ ಮಾತಿನಂತೆ, ಸಾತ್ತ್ವಿಕ ಸ್ವಭಾವದವನಿಗೆ ಪವಿತ್ರ ಮತ್ತು ಶಾಂತಿಯುತ ಆಹಾರ ಇಷ್ಟವಾದರೆ, ರಾಜಸಿಕ ವ್ಯಕ್ತಿಗೆ ತೀವ್ರ ಮಸಾಲೆ ಮತ್ತು ಖಾರದ ಆಹಾರ ಇಷ್ಟವಾಗುತ್ತದೆ. ತಾಮಸಿಕ ವ್ಯಕ್ತಿಗೆ ಹಳಸಿದ ಅಥವಾ ಅಶುದ್ಧ ಆಹಾರ ಇಷ್ಟವಾಗುತ್ತದೆ.
ಯಜ್ಞ (ಆರಾಧನೆ): ಸಮಾಜಕ್ಕೆ ಅಥವಾ ಪರಮಾತ್ಮನಿಗೆ ಸಲ್ಲಿಸುವ ಕರ್ತವ್ಯ, ಪೂಜೆ, ಸೇವೆ.
ತಪಸ್ಸು (ಶಿಸ್ತು): ಶರೀರ, ಮನಸ್ಸು ಮತ್ತು ಇಂದ್ರಿಯಗಳ ಸಂಯಮ ಹಾಗೂ ಅವುಗಳನ್ನು ನಿಯಂತ್ರಿಸುವ ಶಿಸ್ತು.
ದಾನ (ಸಾಮಾಜಿಕ ಜವಾಬ್ದಾರಿ): ಸ್ವಾರ್ಥವಿಲ್ಲದೆ ಸಮಾಜಕ್ಕೆ ಮತ್ತು ಅರ್ಹರಿಗೆ ಮಾಡುವ ಸಹಾಯ.
 
ಆಹಾರದಂತೆಯೇ ಮನುಷ್ಯನ ಧಾರ್ಮಿಕ ಮತ್ತು ಸಾಮಾಜಿಕ ಕ್ರಿಯೆಗಳಾದ ಯಜ್ಞ, ತಪಸ್ಸು ಮತ್ತು ದಾನ ಇವುಗಳು ಕೂಡ ಮೂರು ಗುಣಗಳ ಆಧಾರದ ಮೇಲೆ ವಿಂಗಡಿತವಾಗುತ್ತವೆ. ಮಾಡುವ ಕೆಲಸ ಒಂದೇ ಆದರೂ, ಅದನ್ನು ಮಾಡುವವನ ಉದ್ದೇಶ ಮತ್ತು ಶ್ರದ್ಧೆಯ ಆಧಾರದ ಮೇಲೆ ಅದು ಸಾತ್ತ್ವಿಕವೋ, ರಾಜಸಿಕವೋ ಅಥವಾ ತಾಮಸಿಕವೋ ಎಂದು ನಿರ್ಧಾರವಾಗುತ್ತದೆ.
 
17-08
आयुःसत्त्वबलारोग्य   सुखप्रीतिविवर्धनाः ।
रस्याः स्निग्धाः स्थिरा हृद्याः   आहाराः सात्त्विकप्रियाः ॥ १७-८
ಆಯುಃಸತ್ತ್ವಬಲಾರೋಗ್ಯ   ಸುಖಪ್ರೀತಿವಿವರ್ಧನಾಃ
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ    ಆಹಾರಾಃ ಸಾತ್ತ್ವಿಕಪ್ರಿಯಾಃ 17.8
 ಆಯಸ್ಸು, ಬುದ್ಧಿಶಕ್ತಿ, ದೈಹಿಕ ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ಹೆಚ್ಚಿಸುವಂತಹ ಹಾಗೂ ರಸಭರಿತವಾದ, ನೈಸರ್ಗಿಕ ಜಿಡ್ಡಿನಿಂದ ಕೂಡಿದ, ಶರೀರದಲ್ಲಿ ದೀರ್ಘಕಾಲ ಉಳಿಯುವ ಮತ್ತು ಮನಸ್ಸಿಗೆ ಹಿತಕರವಾದ ಆಹಾರಗಳು ಸಾತ್ತ್ವಿಕ ಸ್ವಭಾವದ ಜನರಿಗೆ ಇಷ್ಟವಾಗುತ್ತವೆ.
 
ಸಾತ್ತ್ವಿಕ ಆಹಾರವು ಕೇವಲ ನಾಲಿಗೆಯ ರುಚಿಗಾಗಿ ಇರುವುದಿಲ್ಲ. ಅದರ ಗುಣಗಳು ಹೀಗಿವೆ. ಅದು ಮನುಷ್ಯನ -
ಆಯುಃ ವಿವರ್ಧನಾಃ: ಮನುಷ್ಯನ ಆಯಸ್ಸನ್ನು ಹೆಚ್ಚಿಸುತ್ತದೆ.
ಸತ್ತ್ವ ವಿವರ್ಧನಾಃ: ಮನಸ್ಸನ್ನು ಪವಿತ್ರಗೊಳಿಸಿ ಮಾನಸಿಕ ನೆಮ್ಮದಿ, ವಿವೇಚನಾ ಶಕ್ತಿ ಮತ್ತು ಸ್ಮರಣಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ.
ಬಲ ವಿವರ್ಧನಾಃ: ರೋಗನಿರೋಧಕ ಶಕ್ತಿ ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
ಆರೋಗ್ಯ ವಿವರ್ಧನಾಃ: ಶರೀರವನ್ನು ಕಾಯಿಲೆಗಳಿಂದ ದೂರವಿಟ್ಟು ನಿರೋಗಿಯನ್ನಾಗಿ ಮಾಡುತ್ತದೆ.
ಸುಖ ವಿವರ್ಧನಾಃ: ತಿಂದ ನಂತರ ಹೊಟ್ಟೆ ಉರಿ ಅಥವಾ ಅಜೀರ್ಣ ಉಂಟುಮಾಡದೆ ಮನಸ್ಸಿಗೆ ಶಾಂತಿ ಮತ್ತು ಸುಖ ನೀಡುತ್ತದೆ.
ಪ್ರೀತಿ ವಿವರ್ಧನಾಃ: ಇತರರ ಮೇಲೆ ದಯೆ, ಪ್ರೀತಿ ಮತ್ತು ಸತ್ಚಿಂತನೆಗಳು ಮೂಡುತ್ತವೆ. ಕೋಪ, ಉದ್ವೇಗಗಳು ದೂರವಾಗುತ್ತವೆ.
 
ಸಾತ್ತ್ವಿಕ ಆಹಾರದ ಭೌತಿಕ ಲಕ್ಷಣಗಳು -
ರಸ್ಯಾಃ: ನೈಸರ್ಗಿಕವಾಗಿ ಸಿಹಿಯಾಗಿರುವ ಹಣ್ಣುಗಳು, ತರಕಾರಿಗಳು ಧಾನ್ಯಗಳು ಮತ್ತು ನೈಸರ್ಗಿಕ ರಸವಿರುವ ತಾಜಾ ಪದಾರ್ಥಗಳು.
ಸ್ನಿಗ್ಧಾಃ: ನೈಸರ್ಗಿಕ ಜಿಡ್ಡಿನಾಂಶವಿರುವ ಹಸುವಿನ ಹಾಲು, ಬೆಣ್ಣೆ, ತುಪ್ಪ ಮತ್ತು ಒಣಹಣ್ಣುಗಳು (ನಟ್ಸ್).
ಸ್ಥಿರಾಃ: ತಿಂದ ತಕ್ಷಣ ಕರಗಿಹೋಗದೆ, ದೇಹಕ್ಕೆ ದೀರ್ಘಕಾಲದವರೆಗೆ ಸ್ಥಿರವಾದ ಪೋಷಕಾಂಶ ಮತ್ತು ಶಕ್ತಿಯನ್ನು ಒದಗಿಸುವ ತಾಜಾ ಧಾನ್ಯಗಳು.
ಹೃದ್ಯಾಃ: ಶುಚಿಯಾಗಿದ್ದು, ಯಾವುದೇ ಪ್ರಾಣಿ ಹಿಂಸೆಯಿಲ್ಲದೆ ಸಿಗುವ, ಮನಸ್ಸಿಗೆ ಸಂತೋಷ ನೀಡುವ ತಾಜಾ ಶಾಕಾಹಾರ.
 
ಸತ್ವಗುಣ ಪ್ರಧಾನವಾಗಿರುವ ಜನರು ಸಸ್ಯಾಹಾರಿ, ತಾಜಾ, ಪೌಷ್ಟಿಕ ಮತ್ತು ಸಾತ್ವಿಕ ಆಹಾರವನ್ನೇ ಇಷ್ಟಪಟ್ಟು ಸೇವಿಸುತ್ತಾರೆ.

17-09
कट्वम्ललवणात्युष्ण   तीक्ष्णरूक्षविदाहिनः ।
आहारा राजसस्येष्टाः   दुःखशोकामयप्रदाः ॥ १७-९
ಕಟ್ವಮ್ಲಲವಣಾತ್ಯುಷ್ಣ   ತೀಕ್ಷ್ಣರೂಕ್ಷವಿದಾಹಿನಃ
ಆಹಾರಾ ರಾಜಸಸ್ಯೇಷ್ಟಾಃ    ದುಃಖಶೋಕಾಮಯಪ್ರದಾಃ 17.9
ಅತಿಯಾದ ಕಹಿ, ಅತಿ ಹುಳಿ, ಅತಿ ಉಪ್ಪು, ವಿಪರೀತ ಬಿಸಿ, ತುಂಬ ಖಾರ ಅಥವಾ ಮಸಾಲೆ, ನೈಸರ್ಗಿಕ ತೇವಾಂಶವಿಲ್ಲದೆ ಒಣಗಿರುವ ಮತ್ತು ದೇಹದಲ್ಲಿ ಉರಿ ಉಂಟುಮಾಡುವ ಆಹಾರಗಳು ರಜೋಗುಣದ ಸ್ವಭಾವವುಳ್ಳವರಿಗೆ ಪ್ರಿಯವಾಗಿರುತ್ತವೆ. ಇಂತಹ ರಾಜಸಿಕ ಆಹಾರಗಳು ಮನುಷ್ಯನಿಗೆ ದುಃಖ, ಶೋಕ ಅಥವಾ ಚಿಂತೆ ಮತ್ತು ರೋಗಗಳನ್ನು ತಂದೊಡ್ಡುತ್ತವೆ.

ರಾಜಸಿಕ ಆಹಾರದ ಗುರುತುಗಳು:
ರಾಜಸಿಕ ಆಹಾರ ಎಂದರೆ ನಾಲಿಗೆಯ ರುಚಿಗಾಗಿ ಮತ್ತು ಇಂದ್ರಿಯಗಳ ತೃಪ್ತಿಗಾಗಿ ಅತಿಯಾದ ಮಸಾಲೆ, ಖಾರ, ಉಪ್ಪು ಮತ್ತು ಹುಳಿಯನ್ನು ಬಳಸಿ ತಯಾರಿಸಿದ ಆಹಾರವಸ್ತುಗಳು. ಇಂದು ನಾವು ತಿನ್ನುವ ಜಂಕ್ ಫುಡ್ಸ್, ಫಾಸ್ಟ್ ಫುಡ್ಸ್, ಎಣ್ಣೆಯಲ್ಲಿ ಅತಿಯಾಗಿ ಕರಿದು ತಯಾರಿಸಿದ ತಿಂಡಿಗಳು, ಮತ್ತು ಚಹಾ-ಕಾಫಿಯಂತಹ ಅತಿ ಬಿಸಿ ಪಾನೀಯಗಳು ಸಂಸ್ಕರಿಸಿದ ಆಹಾರ ಪದಾರ್ಥಗಳು ಈ ವರ್ಗಕ್ಕೆ ಸೇರುತ್ತವೆ.
 
ದೈಹಿಕ ಮತ್ತು ಮಾನಸಿಕ ಪರಿಣಾಮಗಳು:
ದುಃಖ: ರಾಜಸಿಕ ಆಹಾರ ತಿಂದ ತಕ್ಷಣ ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ಎನಿಸಿದರೂ, ತಿಂದ ನಂತರ ಶರೀರದಲ್ಲಿ ಅಸಮಾಧಾನ, ಹೊಟ್ಟೆ ನೋವು, ಆಲಸ್ಯ ಅಥವಾ ಮಲಬದ್ಧತೆಯಂತಹ ದೈಹಿಕ ಅಶ್ವಸ್ಥತೆಯನ್ನು ತರುತ್ತವೆ.
ಶೋಕ: ರಾಜಸಿಕ ಆಹಾರವು ಮನಸ್ಸನ್ನು ಉತ್ತೇಜಿಸುತ್ತದೆ. ಇದರಿಂದ ಚಂಚಲತೆ, ಕಾಮ, ಕ್ರೋಧ (ಕೋಪ), ಅತಿಯಾದ ಆಸೆ, ಅಸೂಯೆ ಮತ್ತು ಉದ್ವೇಗ ಹೆಚ್ಚಾಗಿ ಮಾನಸಿಕ ನಿಯಂತ್ರಣ ತಪ್ಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜೀವನದಲ್ಲಿ ನಿರಾಸೆ, ಅಶಾಂತಿ ಹಾಗೂ ಚಿಂತೆ (ಶೋಕ) ಮೂಡುತ್ತದೆ.
ಆಮಯ (ರೋಗ): 'ಆಮಯ' ಎಂದರೆ ರೋಗ ಅಥವಾ ಕಾಯಿಲೆ. ಅತಿಯಾದ ಉಪ್ಪು, ಖಾರ, ಹುಳಿ ಮತ್ತು ಕರಿದ ಪದಾರ್ಥಗಳ ಸೇವನೆಯಿಂದ ಗ್ಯಾಸ್ಟ್ರಿಕ್, ಅಲ್ಸರ್, ರಕ್ತದೊತ್ತಡ (BP), ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಂತಹ ಹಲವು ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತವೆ.
ವ್ಯಕ್ತಿತ್ವದ ಮೇಲಿನ ಪ್ರಭಾವ: ರಾಜಸಿಕ ಆಹಾರ ಸೇವಿಸುವವರು ಸದಾ ಲೌಕಿಕ ಯಶಸ್ಸು, ಅಧಿಕಾರ ಮತ್ತು ಭೌತಿಕ ಸುಖಗಳ ಬೆನ್ನತ್ತಿ ಓಡುತ್ತಾರೆ. ತಾತ್ಕಾಲಿಕವಾಗಿ ಇದು ಅವರಿಗೆ ಶಕ್ತಿ ಮತ್ತು ಖುಷಿ ಕೊಟ್ಟಂತೆ ಕಂಡರೂ, ದೀರ್ಘಕಾಲದಲ್ಲಿ ಇದು ಅವರ ಆರೋಗ್ಯ ಮತ್ತು ನೆಮ್ಮದಿಯನ್ನು ನಾಶಪಡಿಸುತ್ತದೆ.

17-10
यातयामं गतरसं   पूति पर्युषितं च यत् ।
उच्छिष्टमपि चामेध्यं   भोजनं तामसप्रियम् ॥ १७-१०
ಯಾತಯಾಮಂ ಗತರಸಂ    ಪೂತಿ ಪರ್ಯುಷಿತಂ ಚ ಯತ್
ಉಚ್ಛಿಷ್ಟಮಪಿ ಚಾಮೇಧ್ಯಂ    ಭೋಜನಂ ತಾಮಸಪ್ರಿಯಮ್ 17.10
 ಯಾವ ಆಹಾರವು ಬೇಯಿಸಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದು ತಣ್ಣಗಾಗಿದೆಯೋ, ನೈಸರ್ಗಿಕ ಸತ್ವ ಹಾಗೂ ರುಚಿಯನ್ನು ಕಳೆದುಕೊಂಡಿದೆಯೋ, ದುರ್ವಾಸನೆ ಉಳ್ಳದ್ದಾಗಿದೆಯೋ, ಹಳಸಿಹೋಗಿದೆಯೋ, ಇತರರ ಎಂಜಲಾಗಿದೆಯೋ ಮತ್ತು ಅಪವಿತ್ರ ಹಾಗೂ ಅಶುದ್ಧವಾಗಿದೆಯೋ — ಅಂತಹ ಆಹಾರವು ತಾಮಸಿಕ ಗುಣವುಳ್ಳ ಜನರಿಗೆ ಇಷ್ಟವಾಗುತ್ತದೆ.
 
ತಾಮಸಿಕ ಆಹಾರದ ಪ್ರಮುಖ ಲಕ್ಷಣಗಳು:
ಯಾತಯಾಮಮ್ ಅಂದರೆ ಸಮಯದ ಮಿತಿ: ಸನಾತನ ಧರ್ಮ ಶಾಸ್ತ್ರಗಳ ಮತ್ತು ಆಯುರ್ವೇದದ ಪ್ರಕಾರ, ಆಹಾರವನ್ನು ಬೇಯಿಸಿದ ಒಂದು ಯಾಮದೊಳಗೆ ಸೇವಿಸಬೇಕು. ಒಂದು ಯಾಮ ಅಥವಾ ಪ್ರಹರ ಅಂದರೆ ಮೂರು ಗಂಟೆಗಳ ಕಾಲ. ಅದಾದ ನಂತರ ಆಹಾರದಲ್ಲಿನ ಜೀವಶಕ್ತಿ (ಪ್ರಾಣ) ಕಡಿಮೆಯಾಗುತ್ತಾ ಹೋಗುತ್ತದೆ.
ಇಂದಿನ ದಿನಗಳಲ್ಲಿ ಕೆಲವರ ಜೀವನ ಶೈಲಿಯಲ್ಲಿ ಅಳವಡಿಸಿ ತಿನ್ನುವ ಸಂಸ್ಕರಿಸಿದ (Preserved/Canned/Frozen foods) ಮತ್ತು ದಿನಗಟ್ಟಲೆ ಫ್ರೀಜ್ ಮಾಡಿ ಇಟ್ಟು ಮರುಕಾಯಿಸಿ ತಿನ್ನುವ ಆಹಾರಗಳು ಈ ವರ್ಗಕ್ಕೆ ಸೇರುತ್ತವೆ.
ಗತರಸಮ್ ಅಂದರೆ ಸತ್ವಹೀನ ಆಹಾರ: ಅತಿಯಾಗಿ ಸಂಸ್ಕರಿಸಿದ ಅಥವಾ ಪದೇ ಪದೇ ಅತಿಯಾಗಿ ಬೇಯಿಸಿ ಅದರೊಳಗಿನ ನೈಸರ್ಗಿಕ ಪೋಷಕಾಂಶ, ಜೀವಸತ್ವ ಮತ್ತು ರುಚಿ ಕಳೆದುಕೊಂಡ ಆಹಾರ.
ಪೂತಿ ಅಂದರೆ ದುರ್ವಾಸನೆಯುಳ್ಳ: ದುರ್ವಾಸನೆ ಬರುವ ಆಹಾರಗಳು.
ಪರ್ಯುಷಿತಮ್ ಅಂದರೆ ಹಳಸಿಹೋದ: ಕೊಳೆತುಹೋದ ಆಹಾರ.
ಉಚ್ಛಿಷ್ಟಮ್ ಅಂದರೆ ಎಂಜಲಾದದ್ದು: ಇತರರು ತಿಂದು ಬಿಟ್ಟ ಎಂಜಲು ಮಾಡಿದ ಆಹಾರ.
ಅಮೇಧ್ಯಮ್ ಅಂದರೆ ಅಪವಿತ್ರ: ಅಶುದ್ಧವಾದ ಅಂದರೆ ಧಾರ್ಮಿಕವಾಗಿ ಅಥವಾ ವೈಜ್ಞಾನಿಕವಾಗಿ ಸ್ವಚ್ಛತೆಯಿಲ್ಲದ ಜಾಗದಲ್ಲಿ ತಯಾರಿಸಿದ ಮತ್ತು ಮದ್ಯದಂತ ಮಾದಕ ವಸ್ತುಗಳು, ಮಾಂಸ ಅಥವಾ ಹಿಂಸೆಯಿಂದ ತಯಾರಾದ ಆಹಾರಗಳು ಅಪವಿತ್ರ ಆಹಾರ.
 
ತಾಮಸಿಕ ಆಹಾರದಿಂದ ಮಾನಸಿಕ ಮತ್ತು ದೈಹಿಕ ಪರಿಣಾಮಗಳು:
ಅನಾರೋಗ್ಯ: ಸ್ವಚ್ಛತೆಯಿಲ್ಲದ ಜಾಗದಲ್ಲಿ ತಯಾರಿಸಿದ, ಹಳಸಿಹೋದ, ದುರ್ವಾಸನೆ ಬರುವ ಆಹಾರಗ ಳನ್ನು ಸೇವಿಸುವುದರಿಂದ ರೋಗಾಣುಗಳು ಹರಡುವುದಲ್ಲದೆ, ಮಾನಸಿಕ ಅಶುದ್ಧತೆಯೂ ಉಂಟಾಗುತ್ತದೆ.
ಆಲಸ್ಯ ಮತ್ತು ಮಂದತ್ವ: ತಾಮಸಿಕ ಆಹಾರವು ದೇಹದಲ್ಲಿ ತೂಕ, ಸೋಂಬೇರಿತನ ಮತ್ತು ಅತಿಯಾದ ನಿದ್ರೆಯನ್ನು ಉಂಟುಮಾಡುತ್ತದೆ. ಇದು ಮನುಷ್ಯನ ಉತ್ಸಾಹವನ್ನು ನಾಶಪಡಿಸುತ್ತದೆ.
ಅಜ್ಞಾನ ಮತ್ತು ಭ್ರಮೆ: ತಾಮಸಿಕ ಆಹಾರ ಸೇವನೆಯಿಂದ ಬುದ್ಧಿಶಕ್ತಿ ಮಂಕಾಗುತ್ತದೆ. ಸರಿ-ತಪ್ಪುಗಳನ್ನು ನಿರ್ಧರಿಸುವ ವಿವೇಕ ಶಕ್ತಿ ನಾಶವಾಗಿ, ಮನುಷ್ಯನು ಕೋಪ, ಕ್ರೌರ್ಯ ಮತ್ತು ಖಿನ್ನತೆಗೆ ಒಳಗಾಗುತ್ತಾನೆ. ಇದು ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಗತಿ ಎರಡನ್ನೂ ಕುಂಠಿತಗೊಳಿಸುತ್ತದೆ.

17-11
अफलाकाङ्क्षिभिर्यज्ञो   विधिदृष्टो य इज्यते ।
यष्टव्यमेवेति मनः   समाधाय स सात्त्विकः ॥ १७-११
ಅಫಲಾಕಾಙ್ಕ್ಷಿಭಿರ್ಯಜ್ಞೋ    ವಿಧಿದೃಷ್ಟೋ ಯ ಇಜ್ಯತೇ
ಯಷ್ಟವ್ಯಮೇವೇತಿ ಮನಃ    ಸಮಾಧಾಯ ಸ ಸಾತ್ತ್ವಿಕಃ 17.11
 
17-12
अभिसंधाय तु फलं   दम्भार्थमपि चैव यत् ।
इज्यते भरतश्रेष्ठ   तं यज्ञं विद्धि राजसम् ॥ १७-१२
ಅಭಿಸಂಧಾಯ ತು ಫಲಂ    ದಮ್ಭಾರ್ಥಮಪಿ ಚೈವ ಯತ್
ಇಜ್ಯತೇ ಭರತಶ್ರೇಷ್ಠ    ತಂ ಯಜ್ಞಂ ವಿದ್ಧಿ ರಾಜಸಮ್ 17.12
 
17-13
विधिहीनमसृष्टान्नं   मन्त्रहीनमदक्षिणम् ।
श्रद्धाविरहितं यज्ञं   तामसं परिचक्षते ॥ १७-१३
ವಿಧಿಹೀನಮಸೃಷ್ಟಾನ್ನಂ    ಮನ್ತ್ರಹೀನಮದಕ್ಷಿಣಮ್
ಶ್ರದ್ಧಾವಿರಹಿತಂ ಯಜ್ಞಂ    ತಾಮಸಂ ಪರಿಚಕ್ಷತೇ 17.13
 
17-14
देवद्विजगुरुप्राज्ञ   पूजनं शौचमार्जवम् ।
ब्रह्मचर्यमहिंसा च   शारीरं तप उच्यते ॥ १७-१४
ದೇವದ್ವಿಜಗುರುಪ್ರಾಜ್ಞ   ಪೂಜನಂ ಶೌಚಮಾರ್ಜವಮ್
ಬ್ರಹ್ಮಚರ್ಯಮಹಿಂಸಾ ಚ    ಶಾರೀರಂ ತಪ ಉಚ್ಯತೇ 17.14
 
17-15
अनुद्वेगकरं वाक्यं   सत्यं प्रियहितं च यत् ।
स्वाध्यायाभ्यसनं चैव   वाङ्मयं तप उच्यते ॥ १७-१५
ಅನುದ್ವೇಗಕರಂ ವಾಕ್ಯಂ    ಸತ್ಯಂ ಪ್ರಿಯಹಿತಂ ಚ ಯತ್
ಸ್ವಾಧ್ಯಾಯಾಭ್ಯಸನಂ ಚೈವ    ವಾಙ್ಮಯಂ ತಪ ಉಚ್ಯತೇ 17.15

17-16
मनःप्रसादः सौम्यत्वं   मौनमात्मविनिग्रहः ।
भावसंशुद्धिरित्येतत्   तपो मानसमुच्यते ॥ १७-१६
ಮನಃಪ್ರಸಾದಃ ಸೌಮ್ಯತ್ವಂ    ಮೌನಮಾತ್ಮವಿನಿಗ್ರಹಃ
ಭಾವಸಂಶುದ್ಧಿರಿತ್ಯೇತತ್   ತಪೋ ಮಾನಸಮುಚ್ಯತೇ 17.16
 
17-17
श्रद्धया परया तप्तं   तपस्तत्त्रिविधं नरैः ।
अफलाकाङ्क्षिभिर्युक्तैः   सात्त्विकं परिचक्षते ॥ १७-१७
ಶ್ರದ್ಧಯಾ ಪರಯಾ ತಪ್ತಂ    ತಪಸ್ತತ್ತ್ರಿವಿಧಂ ನರೈಃ
ಅಫಲಾಕಾಙ್ಕ್ಷಿಭಿರ್ಯುಕ್ತೈಃ    ಸಾತ್ತ್ವಿಕಂ ಪರಿಚಕ್ಷತೇ 17.17
 
17-18
सत्कारमानपूजार्थं   तपो दम्भेन चैव यत् ।
क्रियते तदिह प्रोक्तं   राजसं चलमध्रुवम् ॥ १७-१८
ಸತ್ಕಾರಮಾನಪೂಜಾರ್ಥಂ    ತಪೋ ದಮ್ಭೇನ ಚೈವ ಯತ್
ಕ್ರಿಯತೇ ತದಿಹ ಪ್ರೋಕ್ತಂ    ರಾಜಸಂ ಚಲಮಧ್ರುವಮ್ 17.18
 
17-19
मूढग्राहेणात्मनो यत्   पीडया क्रियते तपः ।
परस्योत्सादनार्थं वा   तत्तामसमुदाहृतम् ॥ १७-१९
ಮೂಢಗ್ರಾಹೇಣಾತ್ಮನೋ ಯತ್   ಪೀಡಯಾ ಕ್ರಿಯತೇ ತಪಃ
ಪರಸ್ಯೋತ್ಸಾದನಾರ್ಥಂ ವಾ    ತತ್ತಾಮಸಮುದಾಹೃತಮ್ 17.19
 
17-20
दातव्यमिति यद्दानं   दीयतेऽनुपकारिणे ।
देशे काले च पात्रे च   तद्दानं सात्त्विकं स्मृतम् ॥ १७-२०
ದಾತವ್ಯಮಿತಿ ಯದ್ದಾನಂ    ದೀಯತೇನುಪಕಾರಿಣೇ
ದೇಶೇ ಕಾಲೇ ಚ ಪಾತ್ರೇ ಚ    ತದ್ದಾನಂ ಸಾತ್ತ್ವಿಕಂ ಸ್ಮೃತಮ್ 17.20
 
17-21
यत्तु प्रत्युपकारार्थं   फलमुद्दिश्य वा पुनः ।
दीयते च परिक्लिष्टं   तद्दानं राजसं स्मृतम् ॥ १७-२१
ಯತ್ತು ಪ್ರತ್ಯುಪಕಾರಾರ್ಥಂ    ಫಲಮುದ್ದಿಶ್ಯ ವಾ ಪುನಃ
ದೀಯತೇ ಚ ಪರಿಕ್ಲಿಷ್ಟಂ    ತದ್ದಾನಂ ರಾಜಸಂ ಸ್ಮೃತಮ್ 17.21
 
17-22
अदेशकाले यद्दानम्   अपात्रेभ्यश्च दीयते ।
असत्कृतमवज्ञातं   तत्तामसमुदाहृतम् ॥ १७-२२
ಅದೇಶಕಾಲೇ ಯದ್ದಾನಮ್   ಅಪಾತ್ರೇಭ್ಯಶ್ಚ ದೀಯತೇ
ಅಸತ್ಕೃತಮವಜ್ಞಾತಂ    ತತ್ತಾಮಸಮುದಾಹೃತಮ್ 17.22
 
17-23
ओं तत्सदिति निर्देशो   ब्रह्मणस्त्रिविधः स्मृतः ।
ब्राह्मणास्तेन वेदाश्च   यज्ञाश्च विहिताः पुरा ॥ १७-२३
ಓಂ ತತ್ಸದಿತಿ ನಿರ್ದೇಶೋ    ಬ್ರಹ್ಮಣಸ್ತ್ರಿವಿಧಃ ಸ್ಮೃತಃ
ಬ್ರಾಹ್ಮಣಾಸ್ತೇನ ವೇದಾಶ್ಚ    ಯಜ್ಞಾಶ್ಚ ವಿಹಿತಾಃ ಪುರಾ 17.23
 ಓಂ ತತ್ ಸತ್" ಎಂಬುದು ಪರಬ್ರಹ್ಮನನ್ನು (ಪರಮಾತ್ಮನನ್ನು) ಸೂಚಿಸುವ ಮೂರು ವಿಧದ ಸಾಂಕೇತಿಕ ನಾಮಗಳೆಂದು ಹೇಳಲ್ಪಟ್ಟಿದೆ. ಸೃಷ್ಟಿಯ ಆರಂಭದಲ್ಲಿ ಆ ಪರಬ್ರಹ್ಮನಿಂದಲೇ ಬ್ರಾಹ್ಮಣರು (ಜ್ಞಾನಿಗಳು), ವೇದಗಳು ಮತ್ತು ಯಜ್ಞಗಳು ಸೃಷ್ಟಿಸಲ್ಪಟ್ಟವು.
 
ಓಂ: ಇದು ಪರಮಾತ್ಮನ ಸರ್ವವ್ಯಾಪಿತ್ವ ಮತ್ತು ಆದಿ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಯಾವುದೇ ವೈದಿಕ ಮಂತ್ರ ಅಥವಾ ಶುಭ ಕಾರ್ಯವನ್ನು ಪ್ರಾರಂಭಿಸುವ ಮುನ್ನ 'ಓಂ' ಎಂದು ಉಚ್ಚರಿಸುವುದು ಸನಾತನ ಸಂಪ್ರದಾಯ.
ತತ್: ಎಂದರೆ 'ಅದು' (ಅಂದರೆ ಆ ಪರಮ ಸತ್ಯ) ಎಂದರ್ಥ ನಾವು ಮಾಡುವ ಕರ್ಮಗಳೆಲ್ಲವೂ ನಮಗಾಗಿ ಅಲ್ಲ, ಆ ಕರ್ಮಗಳ ಫಲ ನಮಗಲ್ಲ, ಅದು ಕೇವಲ 'ಅವನಿಗಾಗಿ' (ಅಂದರೆ ಪರಮಾತ್ಮನಿಗಾಗಿ) ಎಂಬ ನಿಷ್ಕಾಮ ಭಾವನೆಯ ಅನಾಸಕ್ತಿಯನ್ನು ಇದು ಸೂಚಿಸುತ್ತದೆ, ಮತ್ತು ಅಹಂಕಾರವನ್ನು ದೂರವಿಡುತ್ತದೆ.
ಸತ್: ಎಂದರೆ ಯಾವುದು ಸದಾ ಇರುತ್ತದೆಯೋ, ಯಾವುದು ಶಾಶ್ವತವೋ, ಸತ್ಯವೋ, ಮಂಗಳಕರವೋ  ಮತ್ತು ಅಸ್ತಿತ್ವದಲ್ಲಿರುವ ಉತ್ತಮ ಗುಣವೋ ಅದು. ನಾವು ಮಾಡುವ ಕರ್ಮಗಳು ಸತ್ಕರ್ಮಗಳಾಗಬೇಕು ಮತ್ತು ಸಕಲರಿಗೂ ಒಳ್ಳೆಯದನ್ನು ಮಾಡಬೇಕು. ಭಗವದರ್ಪಿತವಾಗಿ ಮಾಡುವ ಸತ್ಕರ್ಮಗಳು ಮಾತ್ರ ಜೀವನದಲ್ಲಿ ಶಾಶ್ವತವಾದ ಶ್ರೇಯಸ್ಸನ್ನು ನೀಡುತ್ತವೆ ಎಂಬುದನ್ನು ಇದು ತಿಳಿಸುತ್ತದೆ.
 
ಮಾನವರು ಎಷ್ಟೇ ಜಾಗರೂಕರಾಗಿ ಸಾತ್ವಿಕ ಯಜ್ಞ, ತಪಸ್ಸು ಅಥವಾ ದಾನಗಳಂತಹ ಒಳ್ಳೆಯ ಕೆಲಸಗಳನ್ನು ಮಾಡಿದರೂ, ಮಾನವ ಸಹಜವಾಗಿ ಅಜ್ಞಾನದಿಂದ ಅದರಲ್ಲಿ ಏನಾದರೂ ಕೆಲವು ದೋಷಗಳು ಅಥವಾ ನ್ಯೂನತೆಗಳು ಉಳಿದುಕೊಳ್ಳಬಹುದು. ಅಂತಹ ಕರ್ಮಗಳನ್ನು ದೋಷಮುಕ್ತ ಹಾಗೂ ಪರಿಪೂರ್ಣವಾಗಿಸಲು "ಓಂ ತತ್ ಸತ್" ಎಂಬ ಪರಮಾತ್ಮನ ಪವಿತ್ರ ನಾಮದ ಉಚ್ಚಾರಣೆ ಒಂದು ದಿವ್ಯ ಪರಿಹಾರವಾಗಿದೆ. ಇದು ಲೌಕಿಕ ಕರ್ಮಗಳನ್ನು ಅಲೌಕಿಕ ಅಥವಾ ಅತೀಂದ್ರಿಯವನ್ನಾಗಿ ಪರಿವರ್ತಿಸುತ್ತದೆ.
 
17-24
तस्मादोमित्युदाहृत्य   यज्ञदानतपःक्रियाः ।
प्रवर्तन्ते विधानोक्ताः   सततं ब्रह्मवादिनाम् ॥ १७-२४
ತಸ್ಮಾದೋಮಿತ್ಯುದಾಹೃತ್ಯ    ಯಜ್ಞದಾನತಪಃಕ್ರಿಯಾಃ
ಪ್ರವರ್ತನ್ತೇ ವಿಧಾನೋಕ್ತಾಃ    ಸತತಂ ಬ್ರಹ್ಮವಾದಿನಾಮ್ 17.24
 ಆದುದರಿಂದ, ವೇದಗಳನ್ನು ಮತ್ತು ಪರಮಾತ್ಮನನ್ನು ನಂಬುವ ಜ್ಞಾನಿಗಳು (ಬ್ರಹ್ಮವಾದಿಗಳು), ವೇದಗಳನ್ನು ಅನುಸರಿಸಿ ಶಾಸ್ತ್ರೋಕ್ತವಾದ ಯಜ್ಞ, ದಾನ ಮತ್ತು ತಪಸ್ಸುಗಳಂತಹ ಉತ್ತಮ ಕಾರ್ಯಗಳನ್ನು ಮಾಡುವಾಗ, ಯಾವಾಗಲೂ 'ಓಂ' ಎಂಬ ಪ್ರಣವ ಮಂತ್ರವನ್ನು ಉಚ್ಚರಿಸಿಯೇ ಆರಂಭಿಸುತ್ತಾರೆ.
 
ಈ ಶ್ಲೋಕವು ಹಿಂದಿನ 23ನೇ ಶ್ಲೋಕದಲ್ಲಿ ಬರುವ ಪ್ರಸಿದ್ಧ "ಓಂ ತತ್ ಸತ್" ಎಂಬುದರಲ್ಲಿ ಓಂ ಎಂಬುದರ ವಿವರಣೆಯನ್ನು ನೀಡುತ್ತದೆ:
ತಸ್ಮಾತ್ ಓಮಿತ್ಯುದಾಹೃತ್ಯ (=ಆದ್ದರಿಂದ 'ಓಂ' ಎಂದು ಉಚ್ಚರಿಸಿ): 'ಓಂ' ಎಂಬುದು ಯಾವುದೇ ವೈದಿಕ ಪ್ರಕ್ರಿಯೆಯ ಮೂಲಾಧಾರ. ಇದು ಮನಸ್ಸನ್ನು ಏಕಾಗ್ರತೆಗೆ ತರುತ್ತದೆ ಮತ್ತು ಭೌತಿಕ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಕರ್ಮದ ಆರಂಭದಲ್ಲೇ 'ಓಂ' ಎನ್ನುವುದರಿಂದ ನಮ್ಮ ಅಹಂಕಾರ ದೂರವಾಗಿ, ಪರಮಾತ್ಮನೇ ಈ ಕಾರ್ಯದ ಸೂತ್ರಧಾರ ಎಂಬ ಭಾವ ಮೂಡುತ್ತದೆ.
ಯಜ್ಞ-ದಾನ-ತಪಃ-ಕ್ರಿಯಾಃ: ಈ ಮೂರು ಕ್ರಿಯೆಗಳು ಮನುಷ್ಯನ ಆತ್ಮಶುದ್ಧಿಗೆ ಅತ್ಯಗತ್ಯ. ಆದರೆ ಇವುಗಳನ್ನು ಕೇವಲ ಪ್ರದರ್ಶನಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಮಾಡಬಾರದು.
ವಿಧಾನೋಕ್ತಾಃ (=ಶಾಸ್ತ್ರವಿಧಿಗಳ ಪ್ರಕಾರ): ಆಧ್ಯಾತ್ಮಿಕ ಸಾಧಕರು ತಮಗೆ ಇಷ್ಟ ಬಂದಂತೆ ಕರ್ಮಗಳನ್ನು ಮಾಡದೆ, ಶಾಸ್ತ್ರಗಳಲ್ಲಿ ನಿರ್ದೇಶಿಸಿದ ನಿಯಮಗಳ ಅನುಸಾರವಾಗಿಯೇ ಕಾರ್ಯಪ್ರವೃತ್ತರಾಗ ಬೇಕು.
ಬ್ರಹ್ಮವಾದಿನಾಮ್ (=ಬ್ರಹ್ಮವನ್ನು ಅನ್ವೇಷಿಸುವವರು): ಇಲ್ಲಿ ಬ್ರಹ್ಮವಾದಿಗಳು ಎಂದರೆ ಕೇವಲ ಒಂದು ಜಾತಿಗೆ ಸೇರಿದವರಲ್ಲ; ಯಾರು ಪರಮ ಸತ್ಯವನ್ನು ಅಥವಾ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸುತ್ತಾರೋ, ಅಂತಹ ಎಲ್ಲಾ ಆಧ್ಯಾತ್ಮಿಕ ಸಾಧಕರು ಎಂದರ್ಥ.
 
17-25
तदित्यनभिसन्धाय   फलं यज्ञतपःक्रियाः ।
दानक्रियाश्च विविधाः   क्रियन्ते मोक्षकाङ्क्षि ॥ १७-२५
ತದಿತ್ಯನಭಿಸನ್ಧಾಯ    ಫಲಂ ಯಜ್ಞತಪಃಕ್ರಿಯಾಃ
ದಾನಕ್ರಿಯಾಶ್ಚ ವಿವಿಧಾಃ    ಕ್ರಿಯನ್ತೇ ಮೋಕ್ಷಕಾಙ್ಕ್ಷಿ 17.25
 ಶ್ರೇಯಸ್ಸಿನ ಇಚ್ಛೆಯುಳ್ಳ, ಅಂದರೆ ಮೋಕ್ಷವನ್ನು ಬಯಸುವ ಸಾಧಕರು, ಯಜ್ಞ, ತಪಸ್ಸು ಮತ್ತು ದಾನ ಮುಂತಾದ ಎಲ್ಲಾ ಸತ್ಕರ್ಮಗಳನ್ನು ಅದರ ಫಲದ ಮೇಲೆ ಯಾವುದೇ ಆಸೆಯನ್ನು ಇಡದೆ, 'ತತ್' (ಅಂದರೆ ಇದೆಲ್ಲವೂ ತತ್ ಎಂದು ಹೇಳಲಾಗುವ ಆ ಪರಮಾತ್ಮನಿಗೆ ಸಮರ್ಪಿತ) ಎಂಬ ಭಾವನೆಯಿಂದ ಮಾಡುತ್ತಾರೆ
 
ಈ ಶ್ಲೋಕವು ಹಿಂದಿನ 23ನೇ ಶ್ಲೋಕದಲ್ಲಿ ಬರುವ ಪ್ರಸಿದ್ಧ "ಓಂ ತತ್ ಸತ್" ಎಂಬುದರಲ್ಲಿ ತತ್ ಪದದ ಮಹತ್ವ ಮತ್ತು ಆಧ್ಯಾತ್ಮಿಕ ಸಾಧಕರು ತಮ್ಮ ಕರ್ಮಗಳನ್ನು ಯಾವ ಮನೋಭಾವದಿಂದ ಮಾಡಬೇಕು ಎಂಬುದರ ವಿವರಣೆಯನ್ನು ನೀಡುತ್ತದೆ:
ಉಪನಿಷತ್ತುಗಳಲ್ಲಿ ಪರಮಾತ್ಮನನ್ನು ವರ್ಣಿಸಲು 'ತತ್' (ಅದು) ಎಂಬ ಸರ್ವನಾಮವನ್ನು ಬಳಸಲಾಗುತ್ತದೆ. ಏಕೆಂದರೆ ಪರಮಾತ್ಮನು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ, ಬುದ್ಧಿಗೆ ನಿಲುಕುವುದಿಲ್ಲ. ಅವನು ಎಲ್ಲದಕ್ಕೂ ಅತೀತನಾದವನು.
 
ಈ ಜಗತ್ತಿನಲ್ಲಿ ಎರಡು ರೀತಿಯ ಕರ್ಮಗಳಿವೆ: ಒಂದು ಲೌಕಿಕ ಸುಖಕ್ಕಾಗಿ ಮಾಡುವ 'ಕಾಮ್ಯ ಕರ್ಮ', ಮತ್ತೊಂದು ಮುಕ್ತಿಗಾಗಿ ಮಾಡುವ 'ನಿಷ್ಕಾಮ ಕರ್ಮ'. ಸಾಮಾನ್ಯ ಜನರು ಸ್ವರ್ಗ ಪ್ರಾಪ್ತಿ, ಸಂಪತ್ತು ಅಥವಾ ಹೆಸರಿಗಾಗಿ ಯಜ್ಞ-ದಾನಗಳನ್ನು ಮಾಡುತ್ತಾರೆ. ಇದು 'ಕಾಮ್ಯ ಕರ್ಮ'. ಆದರೆ ಮೋಕ್ಷವನ್ನು ಬಯಸುವ ಮುಮುಕ್ಷುಗಳು ಇಂತಹ ಕ್ಷಣಿಕ ಸುಖಗಳನ್ನು ತುಚ್ಛವೆಂದು ಭಾವಿಸುತ್ತಾರೆ. ಅವರ ದೃಷ್ಟಿ ಕೇವಲ ಆತ್ಮೋದ್ಧಾರದ ಕಡೆಗಿರುತ್ತದೆ. ಸಾಧಕರು ತನಗಾಗಿ ಏನನ್ನೂ ಬಯಸದೆ, ಪ್ರತಿಯೊಂದು ಕ್ರಿಯೆಯನ್ನೂ ಭಗವಂತನ ಪ್ರೀತಿಗಾಗಿ ಮಾಡಿದಾಗ ಆ ಕರ್ಮವು ಅವರನ್ನು ಸಂಸಾರದ ಬಂಧನಕ್ಕೆ ತಳ್ಳುವುದಿಲ್ಲ. 'ತತ್' ಎಂದಾಗ "ಇದು ನನ್ನದಲ್ಲ, ಆ ಪರಮಾತ್ಮನಿಗೆ ಸೇರಿದ್ದು" ಎಂಬ ಭಾವನೆ, ಮತ್ತು ನಮ್ಮಲ್ಲಿರುವ "ನಾನು ಮಾಡಿದೆ, ಇದು ನನ್ನದು" ಎಂಬ ಅಹಂಕಾರವನ್ನು ಕರಗಿಸಿ, ಕರ್ಮವನ್ನು ಪಾವನಗೊಳಿಸುವ ಅದ್ಭುತ ಭಾವನೆಯಾಗಿದೆ.
 
17-26
सद्भावे साधुभावे च   सदित्येतत्प्रयुज्यते ।
प्रशस्ते कर्मणि तथा   सच्छब्दः पार्थ युज्यते ॥ १७-२६
ಸದ್ಭಾವೇ ಸಾಧುಭಾವೇ ಚ    ಸದಿತ್ಯೇತತ್ಪ್ರಯುಜ್ಯತೇ
ಪ್ರಶಸ್ತೇ ಕರ್ಮಣಿ ತಥಾ    ಸಚ್ಛಬ್ದಃ ಪಾರ್ಥ ಯುಜ್ಯತೇ 17.26
 ಹೇ ಪಾರ್ಥ, 'ಸತ್' ಎಂಬ ಪದವನ್ನು ಪರಮ ಸತ್ಯ ಅಥವಾ ಶಾಶ್ವತವಾದ ಅಸ್ತಿತ್ವ ಅಂದರೆ ಯಾವತ್ತೂ ಬದಲಾಗದ ಪರಮಾತ್ಮನ ಭಾವದಲ್ಲಿ ಹಾಗೂ 'ಸಾಧುತ್ವ’ ಅಂದರೆ ಒಳ್ಳೆಯತನದ ಅಥವಾ ಶ್ರೇಷ್ಠ ಗುಣದ' ಅರ್ಥದಲ್ಲಿ ಬಳಸಲಾಗುತ್ತದೆ.  ಹಾಗೆಯೇ, ಸಮಾಜಕ್ಕೆ ಹಿತಕರವಾದ ಯಾವುದೇ ಮಂಗಳಕರವಾದ ಮತ್ತು ಪ್ರಶಂಸನೀಯವಾದ ಉತ್ತಮ ಕರ್ಮವನ್ನು ಮಾಡುವಾಗಲೂ ಈ 'ಸತ್' ಎಂಬ ಶಬ್ದವನ್ನು ಬಳಸಲಾಗುತ್ತದೆ.
 
ಈ ಶ್ಲೋಕವು 'ಓಂ ತತ್ ಸತ್' ಎಂಬ ತ್ರಿವಿಧ ನಾಮಗಳಲ್ಲಿ ಕೊನೆಯದಾದ 'ಸತ್' ಎಂಬ ಪದದ ಮಹತ್ವ, ಅದರ ಅರ್ಥ ಮತ್ತು ಅದನ್ನು ಯಾವ ಸಂದರ್ಭಗಳಲ್ಲಿ ಬಳಸಬೇಕು ಎಂಬುದನ್ನು ತಿಳಿಸುತ್ತದೆ.
 
'ಸತ್' ಎಂದರೆ ಎಂದಿಗೂ ಬದಲಾಗದ, ನಾಶವಿಲ್ಲದ, ಶಾಶ್ವತವಾದ 'ಪರಮ ಸತ್ಯ' ಎಂದರ್ಥ.
ಈ ಶ್ಲೋಕದಲ್ಲಿ 'ಸತ್' ಎಂಬ ಪದದ ಮೂರು ಮುಖ್ಯ ಆಯಾಮಗಳ ವಿವರಣೆ ಹೀಗಿದೆ:
1. (ಸದ್ಭಾವ) ಅಂದರೆ ಅಸ್ತಿತ್ವ: ಯಾವುದು ಸದಾ ಕಾಲವೂ ಇರುತ್ತದೆಯೋ ಅದು 'ಸತ್'. ಈ ಜಗತ್ತಿನಲ್ಲಿ ಶಾಶ್ವತವಾಗಿರುವುದು ಕೇವಲ ಪರಮಾತ್ಮ ಮಾತ್ರ. ಆದ್ದರಿಂದ ಪರಮಾತ್ಮನ ಅಸ್ತಿತ್ವವನ್ನು ಸೂಚಿಸಲು 'ಸತ್' ಎನ್ನಲಾಗುತ್ತದೆ.
ನಮ್ಮ ಮನಸ್ಸಿನಲ್ಲಿ ಪರಮಾತ್ಮನ ಕಡೆಗೆ ಇರುವ ನಿಶ್ಚಲವಾದ ಭಕ್ತಿ ಮತ್ತು ಶ್ರದ್ಧೆಯನ್ನು 'ಸದ್ಭಾವ' ಎನ್ನಬಹುದು.
2. (ಸಾಧುಭಾವ) ಅಂದರೆ ಒಳಿತನ/ಶ್ರೇಷ್ಠತೆ: ಒಳ್ಳೆಯ ಗುಣಗಳು, ಸದ್ವರ್ತನೆ, ಪ್ರಾಮಾಣಿಕತೆ ಮತ್ತು ಧರ್ಮನಿಷ್ಠೆಯನ್ನು 'ಸಾಧುಭಾವ' ಅಥವಾ ಸಾತ್ತ್ವಿಕತೆ ಎನ್ನಲು 'ಸತ್' ಬಳಸಲಾಗುತ್ತದೆ. (ಉದಾಹರಣೆಗೆ: ಸತ್ಪುರುಷ, ಸದ್ಗುಣ).
ವ್ಯಕ್ತಿಯೊಬ್ಬನ ನಡವಳಿಕೆಯಲ್ಲಿ ಕಾಣುವ ದಯೆ, ಕ್ಷಮೆ, ಮತ್ತು ಸೌಮ್ಯತೆಯನ್ನು 'ಸಾಧುಭಾವ' ಎನ್ನಬಹುದು.
'ಸದ್ಭಾವ' ಮತ್ತು 'ಸಾಧುಭಾವ' ಈ ಎರಡೂ ಸ್ಥಿತಿಗಳನ್ನು ಭಗವಂತನ ಸ್ವರೂಪವಾದ 'ಸತ್' ಎಂಬುದೇ ಪ್ರತಿನಿಧಿಸುತ್ತದೆ.
3. (ಪ್ರಶಸ್ತ ಕರ್ಮ) ಅಂದರೆ ಮಂಗಳಕರ ಕರ್ಮ: ದೇಶಸೇವೆ, ಯಜ್ಞ, ದಾನದಂತಹ ಸಮಾಜಕ್ಕೆ ಮತ್ತು ಆಧ್ಯಾತ್ಮಿಕತೆಗೆ ಪೂರಕವಾದ ಶ್ರೇಷ್ಠ ಕೆಲಸಗಳನ್ನು 'ಸತ್ಕರ್ಮ' ಎನ್ನಲಾಗುತ್ತದೆ.
 
ಹಿಂದಿನ ಶ್ಲೋಕಗಳಲ್ಲಿ ಹೇಳಲಾದ 'ಓಂ' ಮತ್ತು 'ತತ್' ಪದಗಳು ಹೆಚ್ಚಾಗಿ ನಿರಾಕಾರ ಭಾವ ಅಥವಾ ಆಧ್ಯಾತ್ಮಿಕ ಕ್ರಿಯೆಯ ಆರಂಭಕ್ಕೆ ಸೀಮಿತವಾಗಿರುತ್ತದೆ. ಆದರೆ 'ಸತ್' ಪದವು ನಮ್ಮ ದೈನಂದಿನ ನಡವಳಿಕೆ ಮತ್ತು ಸತ್ಕರ್ಮಗಳಿಗೆ ಸಂಬಂಧಿಸಿದೆ. ನಾವು ಮಾಡುವ ಕೆಲಸವು 'ಪ್ರಶಸ್ತ' (ಅಂದರೆ ಮಂಗಳಕರ) ಆಗಿರಬೇಕು ಎಂಬುದನ್ನು ಇದು ನೆನಪಿಸುತ್ತದೆ. 

ಯಾವೊಂದು ಕಾರ್ಯವು ಶಾಶ್ವತವಾದ ಸತ್ಯದ ಅರಿವಿನಿಂದ, ಒಳ್ಳೆಯ ಉದ್ದೇಶದಿಂದ ಮತ್ತು ಮಂಗಳಕರವಾಗಿ ಇರುತ್ತದೆಯೋ, ಅದು ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಎಂಬುದು ಈ ಶ್ಲೋಕದ ಭಾವಾರ್ಥ.

17-27
यज्ञे तपसि दाने च   स्थितिः सदिति चोच्यते ।
कर्म चैव तदर्थीयं   सदित्येवाभिधीयते ॥ १७-२७
ಯಜ್ಞೇ ತಪಸಿ ದಾನೇ ಚ    ಸ್ಥಿತಿಃ ಸದಿತಿ ಚೋಚ್ಯತೇ
ಕರ್ಮ ಚೈವ ತದರ್ಥೀಯಂ    ಸದಿತ್ಯೇವಾಭಿಧೀಯತೇ 17.27
 ಯಜ್ಞ, ತಪಸ್ಸು ಮತ್ತು ದಾನ ಕಾರ್ಯಗಳಲ್ಲಿ ದೃಢವಾಗಿ ತೊಡಗಿರುವುದನ್ನು (ಸ್ಥಿರತೆಯನ್ನು) 'ಸತ್' ಎಂದು ಕರೆಯಲಾಗುತ್ತದೆ. ಹಾಗೆಯೇ, ಆ ಪರಮಾತ್ಮನ ಪ್ರೀತಿಗಾಗಿ ಅಥವಾ ಪರಮಾತ್ಮನಿಗೆ ಅರ್ಪಿತವಾಗಿ ಮಾಡುವ ಪ್ರತಿಯೊಂದು ಕರ್ಮವನ್ನೂ ಕೂಡ 'ಸತ್' ಎಂದೇ ಕರೆಯಲಾಗುತ್ತದೆ
 
ಯಜ್ಞೇ  ತಪಸಿ  ದಾನೇ  ಚ     ಸ್ಥಿತಿಃ  ಸತ್  ಇತಿ  ಚ  ಉಚ್ಯತೇ
ಕರ್ಮ  ಚ  ಏವ  ತದ್-ಅರ್ಥೀಯಮ್     ಸತ್  ಇತಿ  ಏವ  ಅಭಿಧೀಯತೇ

ಈ ಶ್ಲೋಕವು 'ಸತ್' ಎಂಬ ಪದದ ಆಳವಾದ ಮಹತ್ವ ಹಾಗೂ ಯಜ್ಞ, ದಾನ ಮತ್ತು ತಪಸ್ಸುಗಳಂತಹ ದೈನಂದಿನ ಧರ್ಮಕಾರ್ಯಗಳಲ್ಲಿ ಅದರ ಅನ್ವಯವನ್ನು ತಿಳಿಸುತ್ತದೆ.
 
ಈ ಶ್ಲೋಕದಲ್ಲಿರುವ ಪ್ರಮುಖ ತತ್ವಗಳೇನೆಂದರೆ:
ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ:
(ಯಜ್ಞೇ ತಪಸಿ  ದಾನೇ  ಚ     ಸ್ಥಿತಿಃ  ಸತ್  ಇತಿ  ಚ  ಉಚ್ಯತೇ) ಯಾವುದೇ ಒಳ್ಳೆಯ ಕೆಲಸ ಮಾಡುವಾಗ ನಮ್ಮ ಮನಸ್ಸು ಚಂಚಲವಾಗಬಾರದು. ಮತ್ತು ಯಾವುದೇ ಒಂದು ಶುಭ ಕಾರ್ಯವನ್ನು ಕೇವಲ ಹೆಸರಿಗಾಗಿ ಅಥವಾ ತಾತ್ಕಾಲಿಕವಾಗಿ ಮಾಡುವುದಲ್ಲ; ಬದಲಿಗೆ ಯಜ್ಞ, ತಪಸ್ಸು ಮತ್ತು ದಾನಗಳನ್ನು ಮಾಡುವಾಗ ಸಾಧಕನಿಗೆ ಇರುವ ಅಚಲವಾದ ಶ್ರದ್ಧೆ ಹಾಗೂ ಆ ಸತ್ಕರ್ಮಗಳಲ್ಲಿ ಸ್ಥಿರವಾಗಿ ನಿಲ್ಲುವ ಗುಣವನ್ನೇ 'ಸತ್' ಎಂದು ಕರೆಯಲಾಗುತ್ತದೆ.
ಕರ್ಮ ಚೈವ ತದರ್ಥೀಯಂ: (ರ್ಮ  ಚ  ಏವ  ತದ್-ಅರ್ಥೀಯಮ್) ದೈನಂದಿನ ಜೀವನದಲ್ಲಿ ನಾವು ಮಾಡುವ ಕರ್ತವ್ಯ ಕರ್ಮಗಳು ನಮಗೆ ಬಂಧನವನ್ನು ಉಂಟುಮಾಡಬಹುದು. ಆದರೆ, ಅದೇ ಕರ್ಮಗಳನ್ನು ಈಶ್ವರಾರ್ಪಣ ಬುದ್ಧಿಯಿಂದ ಅಂದರೆ ಅದನ್ನು ಭಗವಂತನ ಸೇವೆ ಎಂದು ಭಾವಿಸಿ ಮಾಡಿದಾಗ (ಉದಾಹರಣೆಗೆ: ಪ್ರಾಮಾಣಿಕವಾಗಿ ಉದ್ಯೋಗ ಮಾಡುವುದು, ಹಸಿದವರಿಗೆ ಅನ್ನ ನೀಡುವುದು), ಆ ಕರ್ಮಗಳು ಭಗವದರ್ಪಿತವಾಗುತ್ತವೆ. ಆಗ ಆ ಪ್ರತಿಯೊಂದು ಕೆಲಸವೂ 'ಸತ್' ಆಗುತ್ತದೆ. ಮತ್ತುಅದು ಕರ್ಮಯೋಗವಾಗಿ ಬದಲಾಗುತ್ತದೆ. 'ತದರ್ಥೀಯಂ' ಎಂದರೆ 'ಆ ಪರಮಾತ್ಮನಿಗಾಗಿ' ಎಂದರ್ಥ. ಪರಮಾತ್ಮನ ಆಜ್ಞೆಯಂತೆ, ಅವನ ಪ್ರಸಾದ ಬುದ್ಧಿಯಿಂದ ಮಾಡುವ ಎಲ್ಲಾ ಲೌಕಿಕ ಮತ್ತು ಆಧ್ಯಾತ್ಮಿಕ ಕರ್ಮಗಳು ಪವಿತ್ರಗೊಂಡು ನಮಗೆ ಮುಕ್ತಿಯನ್ನು ನೀಡುವ ಸಾಧನಗಳಾಗುತ್ತವೆ.
ಸದಿತ್ಯೇವಾಭಿಧೀಯತೇ: (ಸತ್  ಇತಿ  ಏವ  ಅಭಿಧೀಯತೇ) ಸ್ವಾರ್ಥವಿಲ್ಲದೆ, ಭಗವಂತನ ಸಾನ್ನಿಧ್ಯವನ್ನು ಬಯಸಿ ಮಾಡುವ ಇಂತಹ ಎಲ್ಲಾ ಕರ್ಮಗಳನ್ನು 'ಸತ್ ಕರ್ಮ' ಎಂದೇ ಕರೆಯಲಾಗುತ್ತದೆ. ಇವು ಮನುಷ್ಯನನ್ನು ಕರ್ಮದ ಬಂಧನಕ್ಕೆ ತಳ್ಳದೆ, ಮುಕ್ತಿಯ ಕಡೆಗೆ ನಡೆಸುತ್ತವೆ.
 
ಈ ಶ್ಲೋಕದ ಆಳವಾದ ಭಾವಾರ್ಥವೇನೆಂದರೆ, ನಾವು ಮಾಡುವ ಧಾರ್ಮಿಕ ವಿಧಿಗಳು ಅಥವಾ ಒಳ್ಳೆಯ ಕೆಲಸಗಳು ಕೇವಲ ಹೊರಗಿನ ಪ್ರದರ್ಶನವಾಗಬಾರದು. ಯಜ್ಞ, ತಪಸ್ಸು ಮತ್ತು ದಾನಗಳನ್ನು ಮಾಡುವಾಗ ಸಾಧಕನ ಮನಸ್ಸಿನಲ್ಲಿರುವ ಭಗವನ್ನಿಷ್ಠೆ ಅಥವಾ ದೃಢವಾದ ಶ್ರದ್ಧೆಯೇ 'ಸತ್' (ಶಾಶ್ವತ ಮತ್ತು ಕಲ್ಯಾಣಕಾರಿ) ಆಗಿದೆ. ಭಗವಂತನ ಪ್ರೀತಿಗಾಗಿ, ಲೋಕಕಲ್ಯಾಣಕ್ಕಾಗಿ ಮಾಡುವ ಯಾವುದೇ ದೈನಂದಿನ ಕೆಲಸವೂ ಸಹ 'ಸತ್' (ಪರಮ ಪವಿತ್ರ) ಎನಿಸಿಕೊಳ್ಳುತ್ತದೆ. ಇದು ಕರ್ಮವನ್ನು ಭಕ್ತಿಯನ್ನಾಗಿ ಪರಿವರ್ತಿಸುವ ಅದ್ಭುತ ಸೂತ್ರವಾಗಿದೆ.

17-28
अश्रद्धया हुतं दत्तं   तपस्तप्तं कृतं च यत् ।
असदित्युच्यते पार्थ   न च तत्प्रेत्य नो इह ॥ १७-२ ८
ಅಶ್ರದ್ಧಯಾ ಹುತಂ ದತ್ತಂ    ತಪಸ್ತಪ್ತಂ ಕೃತಂ ಚ ಯತ್
ಅಸದಿತ್ಯುಚ್ಯತೇ ಪಾರ್ಥ    ನ ಚ ತತ್ಪ್ರೇತ್ಯ ನೋ ಇಹ 17.28
 ಹೇ ಪಾರ್ಥ, ಶ್ರದ್ಧೆಯಿಲ್ಲದೆ ಮಾಡುವ ಯಜ್ಞ, ನೀಡುವ ದಾನ, ಆಚರಿಸುವ ತಪಸ್ಸು ಮತ್ತು ಬೇರೆ ಯಾವುದೇ ಶುಭ ಕರ್ಮಗಳಿದ್ದರೂ, ಅವೆಲ್ಲವನ್ನೂ 'ಅಸತ್' ಎಂದು ಕರೆಯಲಾಗುತ್ತದೆ. ಅಂತಹ ಕರ್ಮಗಳು ಈ ಲೋಕದಲ್ಲೂ ಯಾವುದೇ ಒಳಿತನ್ನು ಮಾಡುವುದಿಲ್ಲ ಮತ್ತು ಮರಣದ ನಂತರ ಪರಲೋಕದಲ್ಲೂ ಯಾವುದೇ ಪುಣ್ಯ ಅಥವಾ ಫಲ ನೀಡುವುದಿಲ್ಲ.
 
ಈ ಶ್ಲೋಕ ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಶುದ್ಧತೆ ಮತ್ತು ಶ್ರದ್ಧೆ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಶ್ರದ್ಧೆಯಿಲ್ಲದೆ ಮಾಡುವ ಯಾವುದೇ ಧಾರ್ಮಿಕ ಅಥವಾ ಲೌಕಿಕ ಕಾರ್ಯಗಳು ಹೇಗೆ ಸಂಪೂರ್ಣವಾಗಿ ವ್ಯರ್ಥವಾಗುತ್ತವೆ ಎಂಬುದನ್ನು ತಿಳಿಸುತ್ತದೆ.
 
ಒಬ್ಬ ಮನುಷ್ಯನು ಎಷ್ಟು ದೊಡ್ಡ ಯಜ್ಞ ಮಾಡಿದರೂ ಅಥವಾ ಎಷ್ಟು ಕೋಟಿ ದಾನ ಮಾಡಿದರೂ, ಅವನ ಮನಸ್ಸಿನಲ್ಲಿ ಶ್ರದ್ಧೆ, ನಂಬಿಕೆ ಮತ್ತು ಭಕ್ತಿ ಇಲ್ಲದಿದ್ದರೆ ಆ ಕೆಲಸಕ್ಕೆ ಯಾವುದೇ ಆಧ್ಯಾತ್ಮಿಕ ಮೌಲ್ಯವಿರುವುದಿಲ್ಲ. ಒಂದು ಕರ್ಮವು ಎಷ್ಟು ದೊಡ್ಡದಾಗಿದೆ ಅಥವಾ ಎಷ್ಟು ಖರ್ಚು ಮಾಡಿ ಮಾಡಲಾಗಿದೆ ಎಂಬುದು ಮುಖ್ಯವಲ್ಲ; ಆ ಕರ್ಮದ ಹಿಂದೆ ಎಂತಹ 'ಭಾವನೆ' ಇದೆ ಎಂಬುದು ಮುಖ್ಯ. ಕೇವಲ ಲೋಕದ ಜನರಿಗೆ ತೋರಿಸಿಕೊಳ್ಳಲು ಆಡಂಬರಕ್ಕಾಗಿ, ಅಹಂಕಾರದಿಂದ ಅಥವಾ ನಂಬಿಕೆಯಿಲ್ಲದೆ ಮಾಡುವ ಎಲ್ಲಾ ಕೆಲಸಗಳು 'ಅಸತ್', ಶೂನ್ಯಕ್ಕೆ ಸಮಾನ. ಅವುಗಳಿಂದ ಇಹಲೋಕದ ನೆಮ್ಮದಿಯೂ ಸಿಗುವುದಿಲ್ಲ, ಪರಲೋಕದ ಮುಕ್ತಿಯೂ ದೊರೆಯುವುದಿಲ್ಲ. ಬಾಹ್ಯ ಕ್ರಿಯೆಗಿಂತ ಆ ಕ್ರಿಯೆಯ ಹಿಂದಿರುವ ಆಂತರಿಕ ಶ್ರದ್ಧೆ ಮತ್ತು ಭಾವನೆ ಮುಖ್ಯ.
 
ಗುಣಮಟ್ಟ ಮುಖ್ಯ, ಪ್ರಮಾಣವಲ್ಲ: ದೇವರ ಪೂಜೆಯಗಲೀ ಅಥವಾ ಇನ್ನಾವುದೇ ಸತ್ಕಾರ್ಯಗಳಾಗಲೀ ನಾವು ಎಷ್ಟು ಖರ್ಚು ಮಾಡಿ ಮಾಡುತ್ತೇವೆ ಅಥವಾ ಎಷ್ಟು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಮತ್ತು ಅದು ಗಣನೆಗೆ ಬರುವುದಿಲ್ಲ. 
ಭಾವನೆಗೆ ಪ್ರಾಧಾನ್ಯತೆ: ಯಾವುದೇ ಕೆಲಸ ಮಾಡುವಾಗ ನಮ್ಮ ಒಳಗಿನ ಭಾವನೆ (Intention) ಶುದ್ಧವಾಗಿರಬೇಕು. ಕೇವಲ ಕರ್ತವ್ಯಕ್ಕಾಗಿ ಅಥವಾ ಒತ್ತಡಕ್ಕಾಗಿ ಕೆಲಸ ಮಾಡಬಾರದು. ಶುದ್ಧ ಭಾವನೆ, ಪೂರ್ಣ ಶ್ರದ್ಧೆ ಮತ್ತು ಭಕ್ತಿ ತುಂಬಾ ಮುಖ್ಯ. ಮನುಷ್ಯನ ಶ್ರದ್ಧೆಯೇ ಆತನ ಗುಣ ಮತ್ತು ಭವಿಷ್ಯದ ವಿಧಿಯನ್ನು ನಿರ್ಧರಿಸುತ್ತದೆ.

 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे श्रद्धात्रयविभागयोगो नाम सप्तदशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಶ್ರದ್ದಾತ್ರಯವಿಭಾಗ ಯೊಗೊ ನಾಮ ಸಪ್ತದಶೋಧ್ಯಾಯಃ

No comments:

Post a Comment