Pages

ಅಧ್ಯಾಯ - ೧೪ [14]

 
श्रीमद्भगवद्गीता
ಶ್ರೀಮದ್ಭಗವದ್ಗೀತಾ
चतुर्दशोऽध्यायः
ಚತುರ್ದಶೋಧ್ಯಾಯಃ
गुणत्रयविभागयोगः
ಗುಣತ್ರಯವಿಭಾಗಯೊಗಃ
 
14-01
श्रीभगवानुवाच
परं भूयः प्रवक्ष्यामि   ज्ञानानां ज्ञानमुत्तमम् ।
यञ्ज्ञात्वा मुनयः सर्वे   परां सिद्धिमितो गताः ॥ १४-१
ಶ್ರೀ ಭಗವಾನುವಾಚ
ಪರಂ ಭೂಯಃ ಪ್ರವಕ್ಷ್ಯಾಮಿ    ಜ್ಞಾನಾನಾಂ ಜ್ಞಾನಮುತ್ತಮಮ್
ಯಜ್ ಜ್ಞಾತ್ವಾ ಮುನಯಃ ಸರ್ವೇ    ಪರಾಂ ಸಿದ್ಧಿಮಿತೋ ಗತಾಃ 14.1
 
14-02
इदं ज्ञानमुपाश्रित्य   मम साधर्म्यमागताः ।
सर्गेऽपि नोपजायन्ते   प्रलये न व्यथन्ति च ॥ १४-२
ಇದಂ ಜ್ಞಾನಮುಪಾಶ್ರಿತ್ಯ    ಮಮ ಸಾಧರ್ಮ್ಯಮಾಗತಾಃ
ಸರ್ಗೇಪಿ ನೋಪಜಾಯನ್ತೇ    ಪ್ರಲಯೇ ನ ವ್ಯಥನ್ತಿ ಚ 14.2
 
14-03
मम योनिर्महद् ब्रह्म   तस्मिन्गर्भं दधाम्यहम् ।
सम्भवः सर्वभूतानां   ततो भवति भारत ॥ १४-३
ಮಮ ಯೋನಿರ್ಮಹದ್ಬ್ರಹ್ಮ    ತಸ್ಮಿನ್ ಗರ್ಭಂ ದಧಾಮ್ಯಹಮ್
ಸಂಭವಃ ಸರ್ವಭೂತಾನಾಂ    ತತೋ ಭವತಿ ಭಾರತ 14.3
 
14-04
सर्वयोनिषु कौन्तेय   मूर्तयः सम्भवन्ति याः ।
तासां ब्रह्म महद्योनिः   अहं बीजप्रदः पिता ॥ १४-४
ಸರ್ವಯೋನಿಷು ಕೌನ್ತೇಯ    ಮೂರ್ತಯಃ ಸಮ್ಭವನ್ತಿ ಯಾಃ
ತಾಸಾಂ ಬ್ರಹ್ಮ ಮಹದ್ಯೋನಿಃ   ಅಹಂ ಬೀಜಪ್ರದಃ ಪಿತಾ 14.4
 "ಓ ಅರ್ಜುನಾ! ಜಗತ್ತಿನ ಯಾವುದೇ ಯೋನಿಗಳಲ್ಲಿ (ಗರ್ಭಗಳಲ್ಲಿ) ಏನೆಲ್ಲಾ ಜೀವರಾಶಿಗಳು ಯಾವ ರೂಪಗಳನ್ನು ಧರಿಸಿ ಜನಿಸುತ್ತವೆಯೋ, ಆ ಎಲ್ಲ ಜೀವಿಗಳಿಗೂ ಮೂಲ ಪ್ರಕೃತಿಯೇ ಗರ್ಭ (ತಾಯಿ) ಮತ್ತು ನಾನೇ (ಪರಮಾತ್ಮನೇ) ಜೀವರೂಪಿ ಬೀಜವನ್ನು ಕೊಡುವ ತಂದೆ."
 
ಸರ್ವಯೋನಿಷು = ಎಲ್ಲಾ ಜೀವ ಜಾತಿಗಳ ಗರ್ಭಗಳಲ್ಲಿ ಅಥವಾ ಜನ್ಮಸ್ಥಾನಗಳಲ್ಲಿ,    ಕೌಂತೇಯ = ಕುಂತಿಯ ಮಗನೇ (ಅರ್ಜುನ),    ಮೂರ್ತಯಃ = ಶರೀರಗಳು, ಜೀವ ರೂಪಗಳು (ಪ್ರಾಣಿ, ಪಕ್ಷಿ, ಮನುಷ್ಯ, ದೇವತೆ ಇತ್ಯಾದಿ) ಅಥವಾ ಆಕಾರಗಳು,    ಸಂಭವಂತಿ ಯಾಃ = ಹುಟ್ಟುತ್ತವೆಯೋ
ತಾಸಾಂ = ಅವೆಲ್ಲವುಗಳ,    ಬ್ರಹ್ಮ = ಬ್ರಹ್ಮ (ಪ್ರಕೃತಿ ಅಥವಾ ಮಾಯೆ),    ಮಹತ್ = ಮಹತ್ತಾದ,    ಯೋನಿಃ = ಜನನದ ಮೂಲ, ಗರ್ಭದಾನದ ಸ್ಥಾನ,    ಅಹಂ = ನಾನು,    ಬೀಜಪ್ರದಃ = ಬೀಜವನ್ನು ಕೊಡುವ,    ಪಿತಾ = ತಂದೆ
 
ಈ ಶ್ಲೋಕದಲ್ಲಿ ಇಡೀ ಬ್ರಹ್ಮಾಂಡದ ಸೃಷ್ಟಿಯ ಪ್ರಕ್ರಿಯೆಯನ್ನು ಗಂಡು ಮತ್ತು ಹೆಣ್ಣು ಅಥವಾ ತಾಯಿ ಮತ್ತು ತಂದೆಯ ಉದಾಹರಣೆಯ ಮೂಲಕ ವಿವರಿ ಸಲಾಗಿದೆ:
 
ಪ್ರಕೃತಿ ಮತ್ತು ಪರಮಾತ್ಮನ ಸಂಯೋಗಯಾವುದೇ ಒಂದು ಜೀವ ಜನಿಸಬೇಕಾದರೆ ಒಂದು ಗಂಡು ಮತ್ತು ಒಂದು ಹೆಣ್ಣು ಅಥವಾ ತಾಯಿ ಮತ್ತು ತಂದೆ ಇಬ್ಬರೂ ಅಗತ್ಯ. ಈ ಸೃಷ್ಟಿಯಲ್ಲಿ ಜೀವಿಗಳು ಹುಟ್ಟಲು ಜಡ ಪ್ರಕೃತಿ ಮತ್ತು ಚೇತನ ಪರಮಾತ್ಮ ಸಂಯೋಗ ಕಾರಣ. ಭೌತಿಕ ಜಗತ್ತು ಅಥವಾ ಪ್ರಕೃತಿಯು (ಮಹತ್-ಬ್ರಹ್ಮ) ಜೀವಿಗಳಿಗೆ ಶರೀರವನ್ನು ನೀಡುವ ತಾಯಿಯಾಗಿದೆ. ಪರಮಾತ್ಮನು ಆ ಪ್ರಕೃತಿಯೊಳಗೆ ಆತ್ಮಗಳೆಂಬ ಚೈತನ್ಯದ ಬೀಜವನ್ನು ಬಿತ್ತುತ್ತಾನೆ. ಪರಮಾತ್ಮನ ಚೈತನ್ಯವಿಲ್ಲದೆ ಕೇವಲ ಜಡ ಪ್ರಕೃತಿಯಿಂದ ಯಾವುದೇ ಜೀವ ಸೃಷ್ಟಿಯಾಗಲು ಸಾಧ್ಯವಿಲ್ಲ.
 
ಪ್ರಕೃತಿ (ತಾಯಿ): ಇಲ್ಲಿ ಹೇಳಿರುವ 'ಬ್ರಹ್ಮ' ಎಂದರೆ ಸೃಷ್ಟಿಕರ್ತನಾದ ಬ್ರಹ್ಮದೇವನಲ್ಲ, ಬದಲಿಗೆ ಪ್ರಕೃತಿ ಅಥವಾ ಭೌತಿಕ ಮಾಯಾ ಶಕ್ತಿ (ಮಹತ್-ತತ್ತ್ವ). ಈ ಭೌತಿಕ ಪ್ರಕೃತಿಯು ಎಲ್ಲಾ ಜೀವಿಗಳ ಶರೀರಕ್ಕೆ ಮೂಲವಾದ ಗರ್ಭದಂತೆ ಕಾರ್ಯನಿರ್ವಹಿಸುತ್ತದೆ. ಪ್ರಕೃತಿಯು ಪ್ರತಿಯೊಂದು ಜೀವಿಯ ದೇಹವನ್ನು ರೂಪಿಸುತ್ತದೆ.
 
ಪರಮಾತ್ಮ (ತಂದೆ): ಪರಮಾತ್ಮನು ಪ್ರಕೃತಿಯ ಗರ್ಭದಲ್ಲಿ ಚೈತನ್ಯದ ರೂಪದಲ್ಲಿ ಬೀಜವನ್ನು ಅಂದರೆ ಆತ್ಮವನ್ನು ಪ್ರವೇಶಿಸುವಂತೆ ಮಾಡುತ್ತಾನೆ. ತಂದೆಯಿಲ್ಲದೆ ಕೇವಲ ತಾಯಿಯಿಂದ ಜೀವ ಸೃಷ್ಟಿಯಾಗಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಪರಮಾತ್ಮನ ಚೈತನ್ಯವಿಲ್ಲದೆ ಪ್ರಕೃತಿಯು ಜೀವಿಗಳಿಗೆ ಜನ್ಮ ನೀಡಲು ಸಾಧ್ಯವಿಲ್ಲ.
 
ಮನುಷ್ಯರು, ಪ್ರಾಣಿಗಳು, ಸಸ್ಯಗಳು ಸೇರಿದಂತೆ ಪ್ರತಿಯೊಂದು ಜೀವಿಯೂ ಒಂದೇ ತಾಯಿ (ಪ್ರಕೃತಿ) ಮತ್ತು ಒಬ್ಬನೇ ತಂದೆಯ (ಪರಮಾತ್ಮ) ಮಕ್ಕಳು. ಜೀವಿಗಳು ತಮ್ಮ ಹಿಂದಿನ ಕರ್ಮಗಳ ಆಧಾರದ ಮೇಲೆ ವಿವಿಧ ಯೋನಿಗಳಲ್ಲಿ (ರೂಪಗಳಲ್ಲಿ) ಜನ್ಮ ಪಡೆಯುತ್ತವೆ. ಆದರೆ ಅವರಲ್ಲಿರುವ ಆತ್ಮವು ಪರಮಾತ್ಮನ ಅಂಶವೇ ಆಗಿರುತ್ತದೆ. ರೂಪಗಳು ಬೇರೆಯಾಗಿದ್ದರೂ, ಒಳಗಿರುವ ಚೈತನ್ಯ ಒಂದೇ ಆಗಿರುತ್ತದೆ

14-05
सत्त्वं रजस्तम इति   गुणाः प्रकृतिसम्भवाः ।
निबध्नन्ति महाबाहो   देहे देहिनमव्ययम् ॥ १४-५
ಸತ್ತ್ವಂ ರಜಸ್ತಮ ಇತಿ    ಗುಣಾಃ ಪ್ರಕೃತಿಸಂಭವಾಃ
ನಿಬಧ್ನನ್ತಿ ಮಹಾಬಾಹೋ    ದೇಹೇ ದೇಹಿನಮವ್ಯಯಮ್ 14.5
 
14-06
तत्र सत्वं निर्मलत्वात्   प्रकाशकमनामयम् ।
सुखसङ्गेन बध्नाति   ज्ञानसङ्गेन चानघ ॥ १४-६
ತತ್ರ ಸತ್ತ್ವಂ ನಿರ್ಮಲತ್ವಾತ್   ಪ್ರಕಾಶಕಮನಾಮಯಮ್
ಸುಖಸಙ್ಗೇನ ಬಧ್ನಾತಿ    ಜ್ಞಾನಸಙ್ಗೇನ ಚಾನಘ 14.6
 
14-07
रजो रागात्मकं विद्धि   तृष्णासङ्गसमुद्भवम् ।
तन्निबध्नाति कौन्तेय   कर्मसङ्गेन देहिनम् ॥ १४-७
ರಜೋ ರಾಗಾತ್ಮಕಂ ವಿದ್ಧಿ    ತೃಷ್ಣಾಸಙ್ಗಸಮುದ್ಭವಮ್
ತನ್ನಿಬಧ್ನಾತಿ ಕೌನ್ತೇಯ    ಕರ್ಮಸಙ್ಗೇನ ದೇಹಿನಮ್ 14.7
 
14-08
तमस्त्वज्ञानजं विद्धि   मोहनं सर्वदेहिनाम् ।
प्रमादालस्यनिद्रभिः   तन्निबध्नाति भारत ॥ १४-८
ತಮಸ್ತ್ವಜ್ಞಾನಜಂ ವಿದ್ಧಿ    ಮೋಹನಂ ಸರ್ವದೇಹಿನಾಮ್
ಪ್ರಮಾದಾಲಸ್ಯನಿದ್ರಾಭಿಃ   ತನ್ನಿಬಧ್ನಾತಿ ಭಾರತ 14.8
 ಅರ್ಜುನನೇ, ಅಜ್ಞಾನದಿಂದ ಹುಟ್ಟಿದ ತಮೋಗುಣವು ಎಲ್ಲಾ ದೇಹಧಾರಿ ಜೀವಿಗಳಿಗೆ ಮೋಹವನ್ನು ಅಂದರೆ ಭ್ರಮೆಯನ್ನು ಉಂಟುಮಾಡುತ್ತದೆ. ಈ ಗುಣವು ಮನುಷ್ಯನನ್ನು ಪ್ರಮಾದ ಅಂದರೆ ಅಜಾಗರೂಕತೆ/ಹುಚ್ಚುತನ, ಸೋಮಾರಿತನ/ಆಲಸ್ಯ ಮತ್ತು ಅತಿಯಾದ ನಿದ್ರೆಯ ಮೂಲಕ ಬಿಗಿಯಾಗಿ ಬಂಧಿಸುತ್ತದೆ.
 
ತಮಃ = ತಮೋಗುಣವು,    ತು = ಆದರೆ,    ಅಜ್ಞಾನಜಮ್ = ಅಜ್ಞಾನದಿಂದ ಹುಟ್ಟಿದ್ದು ಎಂದು,    ವಿದ್ಧಿ = ತಿಳಿ,    ಮೋಹನಮ್ = ಭ್ರಮೆ ಉಂಟುಮಾಡುವುದು (ಮೋಹಗೊಳಿಸುವುದು),    ಸರ್ವದೇಹಿನಾಮ್ = ಎಲ್ಲಾ ದೇಹಧಾರಿಗಳಿಗೆ (ಜೀವಿಗಳಿಗೆ)
ಪ್ರಮಾದ-ಆಲಸ್ಯ-ನಿದ್ರಾಭಿಃ = ಅಜಾಗರೂಕತೆ (ಬೇಜವಾಬ್ದಾರಿತನ), ಸೋಮಾರಿತನ ಮತ್ತು ನಿದ್ರೆಯ ಮೂಲಕ,    ತತ್ = ಅದು,    ನಿಬಧ್ನಾತಿ = ಬಂಧಿಸುತ್ತದೆ,    ಭಾರತ = ಓ ಭರತವಂಶದವನೇ (ಅರ್ಜುನನೇ)

ಈ ಶ್ಲೋಕದಲ್ಲಿ ಭೌತಿಕ ಪ್ರಕೃತಿಯ ಮೂರನೇ ಗುಣವಾದ ತಮೋಗುಣದ (ಅಜ್ಞಾನದ ಗುಣ) ಲಕ್ಷಣಗಳು ಮತ್ತು ಅದು ಮನುಷ್ಯನನ್ನು ಹೇಗೆ ಬಂಧಿಸುತ್ತದೆ ಎಂಬುದನ್ನು ತಿಳಿಸಲಾಗಿದೆ.


14-09
सत्त्वं सुखे सञ्जयति   रजः कर्मणि भारत ।
ज्ञानमावृत्य तु तमः   प्रमादे सञ्जयत्युत ॥ १४-९
ಸತ್ತ್ವಂ ಸುಖೇ ಸಞ್ಜಯತಿ    ರಜಃ ಕರ್ಮಣಿ ಭಾರತ
ಜ್ಞಾನಮಾವೃತ್ಯ ತು ತಮಃ    ಪ್ರಮಾದೇ ಸಞ್ಜಯತ್ಯುತ 14.9
 ಅರ್ಜುನನೇ, ಸತ್ತ್ವಗುಣವು ಮನುಷ್ಯನನ್ನು ಸುಖದಲ್ಲಿ ತೊಡಗಿಸುತ್ತದೆ; ರಜೋಗುಣವು ಸ್ವಾರ್ಥದ ಕರ್ಮಗಳಲ್ಲಿ (ಕೆಲಸಗಳಲ್ಲಿ) ತೊಡಗಿಸುತ್ತದೆ; ಆದರೆ ತಮೋಗುಣವು ಮನುಷ್ಯನ ಜ್ಞಾನವನ್ನು ಮುಚ್ಚಿಹಾಕಿ, ಅವನನ್ನು ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಹುಚ್ಚುತನದಲ್ಲಿ ತೊಡಗಿಸುತ್ತದೆ.
 
ಸತ್ತ್ವಮ್ = ಸತ್ತ್ವಗುಣವು,    ಸುಖೇ = ಸುಖದಲ್ಲಿ,    ಸಂಜಯತಿ = ಬಂಧಿಸುತ್ತದೆ, ಪ್ರೇರೇಪಿಸುತ್ತದೆ,   ರಜಃ = ರಜೋಗುಣವು,    ಕರ್ಮಣಿ = ಲೌಕಿಕ ಕ್ರಿಯೆ ಅಥವಾ ಕಾಮ್ಯ ಕರ್ಮಗಳಲ್ಲಿ (ಫಲಾಪೇಕ್ಷೆಯ ಕೆಲಸಗಳಲ್ಲಿ),    ಭಾರತ = ಹೇ ಭರತವಂಶಜನೇ (ಅರ್ಜುನನೇ)
ಜ್ಞಾನಮ್ = ಜ್ಞಾನವನ್ನು,    ಆವೃತ್ಯ = ಮುಚ್ಚಿಹಾಕಿ (ಮರೆಮಾಚಿ),    ತು = ಆದರೆ,    ತಮಃ = ತಮೋಗುಣವು,    ಪ್ರಮಾದೇ = ಅಜಾಗರೂಕತೆ ಅಥವಾ ಹುಚ್ಚುತನದಲ್ಲಿ,    ಸಂಜಯತಿ = ಸಿಲುಕಿಸುತ್ತದೆ, ಸಿಲುಕಿಸುತ್ತದೆ,    ಉತ = ಖಂಡಿತವಾಗಿಯೂ

ಶ್ಲೋಕವು ಭೌತಿಕ ಪ್ರಕೃತಿಯ ಮೂರೂ ಗುಣಗಳಾದ ಸತ್ತ್ವ, ರಜ ಮತ್ತು ತಮೋಗುಣಗಳು ಮನುಷ್ಯನನ್ನು ಯಾವ ರೀತಿಯ ವಿಶಿಷ್ಟ ಬಂಧನಗಳಿಗೆ ಒಳಪಡಿಸುತ್ತವೆ ಎಂಬುದನ್ನು ವಿವರಿಸುತ್ತದೆ.

14-10
रजस्तमश्चाभिभूय   सत्त्वं भवति भारत ।
रजः सत्त्वं तमश्चैव   तमः सत्त्वं रजस्तथा ॥ १४-१०
ರಜಸ್ತಮಶ್ಚಾಭಿಭೂಯ    ಸತ್ತ್ವಂ ಭವತಿ ಭಾರತ
ರಜಃ ಸತ್ತ್ವಂ ತಮಶ್ಚೈವ    ತಮಃ ಸತ್ತ್ವಂ ರಜಸ್ತಥಾ 14.10
 ಅರ್ಜುನ, ರಜೋಗುಣ ಮತ್ತು ತಮೋಗುಣಗಳನ್ನು ಅಡಗಿಸಿ ಸತ್ತ್ವಗುಣವು ಪ್ರಬಲವಾಗುತ್ತದೆ. ಸತ್ತ್ವಗುಣ ಮತ್ತು ತಮೋಗುಣಗಳನ್ನು ಅಡಗಿಸಿ ರಜೋಗುಣವು ಪ್ರಬಲವಾಗುತ್ತದೆ. ಅದೇ ರೀತಿ, ಸತ್ವ ಮತ್ತು ರಜೋಗುಣಗಳನ್ನು ಅದುಮಿ ತಮೋಗುಣವು ಪ್ರಭಾವಶಾಲಿಯಾಗುತ್ತದೆ.
 
ರಜಃ: = ರಜೋಗುಣವನ್ನು,    ತಮಃ ಚ = ಮತ್ತು ತಮೋಗುಣವನ್ನು,    ಅಭಿಭೂಯ = ಸೋಲಿಸಿ/ ಅದುಮಿಹಾಕಿ/ ಅಡಗಿಸಿ,    ಸತ್ತ್ವಮ್ ಭವತಿ = ಸತ್ತ್ವಗುಣವು ಪ್ರಬಲವಾಗುತ್ತದೆ (ವೃದ್ಧಿಯಾಗುತ್ತದೆ),    ಭಾರತ = ಭರತವಂಶಜನೇ (ಅರ್ಜುನನೇ)
ರಜಃ = ರಜೋಗುಣವು (ಪ್ರಬಲವಾಗುತ್ತದೆ),    ಸತ್ತ್ವಂ ತಮಃ ಚ ಏವ = ಸತ್ತ್ವಗುಣ ಮತ್ತು ತಮೋಗುಣಗಳನ್ನು ಅಡಗಿಸಿ,    ತಮಃ = ತಮೋಗುಣವು ಪ್ರಬಲವಾಗುತ್ತದೆ,    ಸತ್ತ್ವಂ ರಜಃ = ಸತ್ತ್ವಗುಣ ಮತ್ತು ರಜೋಗುಣಗಳನ್ನು ಅಡಗಿಸಿ,    ತಥಾ = ಅದೇ ರೀತಿ, ಹಾಗೆಯೇ

ಶ್ಲೋಕವು ಭೌತಿಕ ಪ್ರಕೃತಿಯ ಮೂರು ಗುಣಗಳಾದ ಸತ್ವ, ರಜಸ್ಸು ಮತ್ತು ತಮೋಗುಣಗಳು ಹೇಗೆ ಒಂದನ್ನೊಂದು ಮೀರಿಸಿ ಮೇಲುಗೈ ಸಾಧಿಸುತ್ತವೆ (ಮತ್ತು ವ್ಯಕ್ತಿಯ ಸ್ವಭಾವವನ್ನು ನಿಯಂತ್ರಿಸುತ್ತವೆ) ಎಂಬುದನ್ನು ವಿವರಿಸುತ್ತದೆ.

14-11
सर्वद्वारेषु देहेऽस्मिन्   प्रकाश उपजायते ।
ज्ञानं यदा तदा विद्यात्   विवृद्धं सत्त्वमित्युत ॥ १४-११
ಸರ್ವದ್ವಾರೇಷು ದೇಹೇಸ್ಮಿನ್   ಪ್ರಕಾಶ ಉಪಜಾಯತೇ
ಜ್ಞಾನಂ ಯದಾ ತದಾ ವಿದ್ಯಾತ್   ವಿವೃದ್ಧಂ ಸತ್ತ್ವಮಿತ್ಯುತ 14.11
 ಯಾವಾಗ ಈ ಶರೀರದ ಎಲ್ಲಾ ದ್ವಾರಗಳಲ್ಲಿಯೂ (ಜ್ಞಾನೇಂದ್ರಿಯಗಳಲ್ಲಿಯೂ) ವಿವೇಕ ಮತ್ತು ಜ್ಞಾನದ ಬೆಳಕು ಪ್ರಕಾಶಿಸುತ್ತದೆಯೋ, ಆಗ ಆ ಮನುಷ್ಯನಲ್ಲಿ ಸತ್ತ್ವಗುಣವು ವೃದ್ಧಿಯಾಗಿ ಪ್ರಬಲವಾಗಿದೆ ಎಂದು ತಿಳಿಯಬೇಕು
 
ಸರ್ವ-ದ್ವಾರೇಷು = ಎಲ್ಲಾ ದ್ವಾರಗಳಲ್ಲಿಯೂ (ಕಣ್ಣು, ಕಿವಿ, ಮೂಗು ಇತ್ಯಾದಿ ಇಂದ್ರಿಯಗಳಲ್ಲಿಯೂ),    ಅಸ್ಮಿನ್ ದೇಹೇ = ಈ ಶರೀರದಲ್ಲ,    ಪ್ರಕಾಶಃ = ಪ್ರಕಾಶವು (ಜ್ಞಾನದ ಬೆಳಕು),    ಉಪಜಾಯತೇ = ಉತ್ಪನ್ನವಾಗುತ್ತದೆಯೋ (ಪ್ರಕಟವಾಗುತ್ತದೆಯೋ)
ಜ್ಞಾನಮ್ = ವಿವೇಚನಾ ಶಕ್ತಿ, ತಿಳುವಳಿಕೆ (ವಿವೇಕವು),    ಯದಾ = ಯಾವಾಗ,    ತದಾ = ಆಗ,    ವಿದ್ಯಾತ್ = ತಿಳಿಯಬೇಕು,    ವಿವೃದ್ಧಮ್ = ವೃದ್ಧಿಯಾಗಿದೆ (ಹೆಚ್ಚಾಗಿದೆ),    ಸತ್ತ್ವಮ್ = ಸತ್ತ್ವಗುಣವು,    ಇತಿ ಉತ = ಎಂದು ಖಂಡಿತವಾಗಿಯೂ

ಶ್ಲೋಕವು ನಮ್ಮ ಮನಸ್ಸು ಮತ್ತು ದೇಹದಲ್ಲಿ ಸತ್ತ್ವಗುಣವು ಪ್ರಬಲವಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು ಎಂಬುದನ್ನು ವಿವರಿಸುತ್ತದೆ.

14-12
लोभः प्रवृत्तिरारम्भः   कर्मणामशमः स्पृहा ।
रजस्येतानि जायन्ते   विवृद्धे भरतर्षभ ॥ १४-१२
ಲೋಭಃ ಪ್ರವೃತ್ತಿರಾರಮ್ಭಃ    ಕರ್ಮಣಾಮಶಮಃ ಸ್ಪೃಹಾ
ರಜಸ್ಯೇತಾನಿ ಜಾಯನ್ತೇ    ವಿವೃದ್ಧೇ ಭರತರ್ಷಭ 14.12
 ಭರತವಂಶ ಶ್ರೇಷ್ಠನಾದ ಅರ್ಜುನನೇ, ರಜೋಗುಣವು ಮನಸ್ಸಿನಲ್ಲಿ ಹೆಚ್ಚಾದಾಗ ದುರಾಸೆ, ಸದಾ ಲೌಕಿಕ ಚಟುವಟಿಕೆಗಳಲ್ಲಿ ಅತಿಯಾದ ಆಸಕ್ತಿ, ಸ್ವಾರ್ಥ ಲಾಭಕ್ಕಾಗಿ ಹೊಸ ಹೊಸ ಕೆಲಸಗಳನ್ನು ಆರಂಭಿಸುವುದು, ಮನಸ್ಸಿನ ಚಡಪಡಿಕೆ ಮತ್ತು ಇಂದ್ರಿಯ ಸುಖ ಭೋಗಗಳಿಗಾಗಿ ತೀವ್ರ ಹಂಬಲ - ಈ ಲಕ್ಷಣಗಳು ಹೆಚ್ಚಾಗುತ್ತವೆ.

ಲೋಭಃ = ದುರಾಸೆ, ಜಿಪುಣತನ, ಅತ್ಯಾಸೆ,    ಪ್ರವೃತ್ತಿಃ = ಸ್ವಾರ್ಥಪರವಾದ ಲೌಕಿಕ ಚಟುವಟಿಕೆಗಳು ಅಥವಾ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವುದು,    ಆರಂಭಃ ಕರ್ಮಣಾಮ್ = ಸ್ವಾರ್ಥಕ್ಕಾಗಿ ಅಥವಾ ಲಾಭದ ಉದ್ದೇಶದಿಂದ ಹೊಸ ಕೆಲಸಗಳನ್ನು ಪ್ರಾರಂಭಿಸುವುದು,    ಅಶಮಃ = ಅಶಾಂತಿ, ಮನಸ್ಸಿನ ಚಡಪಡಿಕೆ, ತೃಪ್ತಿ ಇಲ್ಲದಿರುವುದು,    ಸ್ಪೃಹಾ = ಇಂದ್ರಿಯ ಸುಖ ಭೋಗಗಳಿಗಾಗಿ ತೀವ್ರ ಹಂಬಲ/ ಆಸೆ
ರಜಸಿ = ರಜೋಗುಣವು,    ಏತಾನಿ = ಇವೆಲ್ಲವೂ,    ಜಾಯಂತೇ = ಉತ್ಪನ್ನವಾಗುತ್ತವೆ (ಕಾಣಿಸಿಕೊಳ್ಳುತ್ತವೆ),    ವಿವೃದ್ಧೇ = ವೃದ್ಧಿಯಾದಾಗ (ಹೆಚ್ಚಾದಾಗ),    ಭರತರ್ಷಭ = ಭರತವಂಶದ ಶ್ರೇಷ್ಠನೇ (ಅರ್ಜುನ)

ಶ್ಲೋಕವು ಮನುಷ್ಯನಲ್ಲಿ ರಜೋಗುಣವು ಪ್ರಬಲವಾದಾಗ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ವಿವರಿಸುತ್ತದೆ.

14-13
अप्रकाशोऽप्रवृत्तिश्च   प्रमादो मोह एव च ।
तमस्येतानि जायन्ते   विवृद्धे कुरुनन्दन ॥ १४-१३
ಅಪ್ರಕಾಶೋಪ್ರವೃತ್ತಿಶ್ಚ    ಪ್ರಮಾದೋ ಮೋಹ ಏವ ಚ
ತಮಸ್ಯೇತಾನಿ ಜಾಯನ್ತೇ    ವಿವೃದ್ಧೇ ಕುರುನನ್ದನ 14.13
 ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಅಂದರೆ ಚೈತನ್ಯ ಶಕ್ತಿಯ ಅಭಾವ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ ಮತ್ತು ಪ್ರಮಾದ ಅಂದರೆ ವ್ಯರ್ಥ ಚೇಷ್ಟೆಗಳು ಹಾಗೂ ನಿದ್ದೆಯಂತಹ ಅಂತಃಕರಣವನ್ನು ಮೋಹಿತಗೊಳಿಸುವ ವೃತ್ತಿಗಳು ಹುಟ್ಟಿಕೊಳ್ಳುತ್ತವೆ.
 
ಅಂತಃಕರಣ ಅಂದರೆ ಮನಸ್ಸು, ಬುದ್ಧಿ, ಚಿತ್ತ, ಮತ್ತು ಅಹಂಕಾರ
ಅಹಂಕಾರ ಅಂದರೆ "ನಾನು" ಎಂಬ ಅಸ್ತಿತ್ವದ ಭಾವನೆ

ಈ ಶ್ಲೋಕದಲ್ಲಿ ಮನುಷ್ಯನಲ್ಲಿ ತಮೋಗುಣವು ಪ್ರಬಲವಾದಾಗ ವ್ಯಕ್ತವಾಗುವ ಲಕ್ಷಣಗಳು ಏನು ಎಂದು ತಿಳಿಸಲಾಗಿದೆ:
 
1. ಅಪ್ರಕಾಶಃ ಅಂದರೆ ಜ್ಞಾನದ / ತಿಳುವಳಿಕೆಯ ಕೊರತೆ ಅಥವಾ ಕತ್ತಲು. ಅಜ್ಞಾನ.
ಅಂದರೆ ಯಾವುದು ಸರಿ ಯಾವುದು ತಪ್ಪು ಎಂದು ಗ್ರಹಿಸಲು ಮನಸ್ಸಿಗೆ ಸಾಧ್ಯವಾಗದೆ ಇರುವುದು. ಬುದ್ಧಿ ಮಂದವಾಗುವುದು.
 
2. ಅಪ್ರವೃತ್ತಿಃ ಅಂದರೆ ಕ್ರಿಯಾಶೀಲತೆಯಿಲ್ಲದಿರುವುದು, ಸೋಮಾರಿತನ. ನಿಷ್ಕ್ರಿಯತೆ, ಜಡತ್ವ.
ಯಾವುದೇ ಕೆಲಸ ಮಾಡಲು ಉತ್ಸಾಹವಿಲ್ಲದಿರುವುದು. ನಿಷ್ಕ್ರಿಯತೆ ಮತ್ತು ಜವಾಬ್ದಾರಿಗಳಿಂದ ಓಡಿಹೋಗುವ ಸ್ವಭಾವ ಮತ್ತುತೀವ್ರವಾದ ಸೋಮಾರಿತನ ಆವರಿಸಿಕೊಳ್ಳುವುದು.
 
3. ಪ್ರಮಾದಃ ಅಂದರೆ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಮರೆವು.
ಮಾಡಬೇಕಾದ ಕರ್ತವ್ಯಗಳನ್ನು ಮರೆತು ಬಿಡುವುದು ಅಥವಾ ನಿರ್ಲಕ್ಷ್ಯ ಮಾಡುವುದು. ಎಷ್ಟೋ ಸಲ ಮಾಡಬೇಕಾದ ಕೆಲಸಗಳನ್ನು ಮಾಡದೆ ಮಾಡಬಾರದ ಕೆಲಸಗಳನ್ನು ಮಾಡುವುದು.
 
4. ಮೋಹಃ ಅಂದರೆ ಗೊಂದಲ ಅಥವಾ ತಪ್ಪು ತಿಳುವಳಿಕೆ. ಭ್ರಮೆ.
ಅಸತ್ಯವನ್ನು ಸತ್ಯವೆಂದು ನಂಬುವುದು ಮತ್ತು ತಪ್ಪು ದಾರಿಯನ್ನು ಸರಿ ಎಂದು ನಂಬಿ ಭ್ರಮೆಗೆ ಒಳಗಾಗುವುದು.

14-14
यदा सत्त्वे प्रवृद्धे तु   प्रलयमं याति देहभृत् ।
तदोत्तमविदां लोकान्   अमलान्प्रतिपद्यते ॥ १४-१४
ಯದಾ ಸತ್ತ್ವೇ ಪ್ರವೃದ್ಧೇ ತು    ಪ್ರಲಯಂ ಯಾತಿ ದೇಹಭೃತ್
ತದೋತ್ತಮವಿದಾಂ ಲೋಕಾನ್   ಅಮಲಾನ್ಪ್ರತಿಪದ್ಯತೇ 14.14
 ಯಾರಾದರೂ ಸತ್ತ್ವಗುಣವು ಹೆಚ್ಚಾಗಿದ್ದಾಗ (ಅಥವಾ ಪ್ರಬಲವಾಗಿದ್ದಾಗ) ಮರಣ ಹೊಂದಿದರೆ, ಅವರು ಉತ್ತಮ ಕರ್ಮ ಮಾಡುವವರ ಅಂದರೆ ಸತ್ಪುರುಷರಿಗೆ ಅಥವಾ ಜ್ಞಾನಿಗಳಿಗೆ ಸೇರಿರುವ ನಿರ್ಮಲವಾದ, ಪವಿತ್ರವಾದ ಸ್ವರ್ಗಾದಿ ಉನ್ನತ ಲೋಕಗಳನ್ನು ತಲಪುತ್ತಾರೆ.
 
ಇಲ್ಲಿ ಅಮಾಲಾನ್ ಅಂದರೆ ರಜೋಗುಣ ಮತ್ತು ತಮೋಗುಣಗಳಿಂದ ಮುಕ್ತವಾಗಿದ್ದು, ಪಾಪ ಕಲ್ಮಶವಿಲ್ಲದೆ ನಿರ್ಮಲ ವಾದದ್ದು ಎಂದು ಅರ್ಥ.
 
ಮನುಷ್ಯನು ತನ್ನ ಜೀವನದಲ್ಲಿ ಜ್ಞಾನ, ಸತ್ಯ, ಶಾಂತಿ, ದೈವಭಕ್ತಿ ಮತ್ತು ನಿಷ್ಕಾಮ ಕರ್ಮಗಳನ್ನು ರೂಢಿಸಿಕೊಂಡಿದ್ದರೆ, ಅವರಲ್ಲಿ ಸತ್ವಗುಣವು ಪ್ರಭಲವಾಗುತ್ತದೆ. ಅಂತಹ ಶುದ್ಧ ಮನಸ್ಸಿನೊಂದಿಗೆ ದೇಹವನ್ನು ತ್ಯಾಗ ಮಾಡುವ ಜೀವಾತ್ಮವು, ಉತ್ತಮ ಜ್ಞಾನಿಗಳು ಮತ್ತು ಪುಣ್ಯಾತ್ಮರು ಹೋಗುವ ಸ್ಥಳಗಳಾದ ಸ್ವರ್ಗ, ಬ್ರಹ್ಮಲೋಕಗಳಂತಹ  ಅತ್ಯುನ್ನತ ಮತ್ತು ದೈವಿಕವಾದ ಲೋಕಗಳನ್ನು ತಲುಪುತ್ತಾರೆ. ಅಲ್ಲಿ ಯಾವುದೇ ದೋಷವಿಲ್ಲದ ಮನುಷ್ಯರಾಗಿ ಜ್ಞಾನಿಗಳು ಮತ್ತು ಪುಣ್ಯಾತ್ಮರ ಸಮುದಾಯದಲ್ಲಿ ಹುಟ್ಟುತ್ತಾರೆ. ಆ ಜ್ಞಾನಿಗಳ ನಡುವೆ ಇದ್ದು ಜ್ಞಾನವನ್ನು ಇನ್ನೂ ಬೆಳೆಸಿ ಜ್ಞಾನ ಮಾರ್ಗದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ.

14-15
रजसि प्रलयमं गत्वा   कर्मसङ्गिषु जायते ।
तथा प्रलीनस्तमसि   मूढयोनिषु जायते ॥ १४-१५
ರಜಸಿ ಪ್ರಲಯಂ ಗತ್ವಾ    ಕರ್ಮಸಙ್ಗಿಷು ಜಾಯತೇ
ತಥಾ ಪ್ರಲೀನಸ್ತಮಸಿ    ಮೂಢಯೋನಿಷು ಜಾಯತೇ 14.15
ಜೋಗುಣವು ಹೆಚ್ಚಾಗಿದ್ದಾಗ (ಅಥವಾ ಪ್ರಬಲವಾಗಿದ್ದಾಗ) ಮರಣ ಹೊಂದಿದವರು ಫಲಾಪೇಕ್ಷೆಯ ಕಾರ್ಯಗಳಲ್ಲಿ ಆಸಕ್ತರಾಗಿರುವ ಮನುಷ್ಯರ ಮದ್ಯೆ ಜನಿಸುತ್ತಾರೆ, ಹಾಗೆಯೆ ತಮೋಗುಣವು ಹೆಚ್ಚಾಗಿದ್ದಾಗ ಮರಣ ಹೊಂದಿದವರು ಪ್ರಾಣಿ-ಪಕ್ಷಿ ಅಥವಾ ಕೀಟಗಳಂತಹ ಬುದ್ಧಿಹೀನ ಜೀವಿಗಳ ಯೋನಿಗಳಲ್ಲಿ ಜನ್ಮ ತಳೆಯುತ್ತಾರೆ.
 
ಮನುಷ್ಯನು ಸತ್ವ, ರಜಸ್, ಅಥವಾ ತಮಸ್ ಇದರಲ್ಲಿ ಯಾವ ಗುಣಗಳನ್ನು ಬೆಳೆಸಿಕೊಂಡು ಜೀವನ ಮಾಡುತ್ತಾನೋ ಮತ್ತು ಕೊನೆಯ ಕ್ಷಣದಲ್ಲಿ ಯಾವ ಗುಣ  ಅವರಲ್ಲಿ ಪ್ರಬಲವಾಗಿರುತ್ತದೆಯೋ, ಅದೇ ಆಧಾರದ ಮೇಲೆ ಅವರ ಮುಂದಿನ ಜನ್ಮ ನಿರ್ಧಾರವಾಗುತ್ತದೆ.
 
ರಜೋಗುಣದಲ್ಲಿರುವವರು ಭೌತಿಕ ಸುಖಗಳಿಗಾಗಿ ನಿರಂತರವಾಗಿ ದುಡಿಯುತ್ತಾರೆ ಮತ್ತು ಫಲಕ್ಕಾಗಿ ಹಾತೊರೆಯುತ್ತಾರೆ. ಲಾಭದ ಆಸೆ, ಅತಿಯಾದ ಭೋಗ ಜೀವನ ಮತ್ತು ಕರ್ಮಗಳಲ್ಲಿಯೇ ಆಸಕ್ತಿ ಹೊಂದಿದ್ದು ಅದೇ ಪ್ರಜ್ಞೆಯಲ್ಲಿ ದೇಹತ್ಯಾಗ ಮಾಡಿದರೆ ಅವರ ಮುಂದಿನ ಜನ್ಮವು ಮತ್ತೆ ಕರ್ಮಕಾಂಡಗಳು ಮತ್ತು ಭೋಗ-ಭಾಗ್ಯಗಳಲ್ಲಿ ಆಸಕ್ತರಾಗಿರುವ ಮಾನವರ ನಡುವೆ ಆಗುತ್ತದೆ.
 
ತಮೋಗುಣವೆಂದರೆ ಅಜ್ಞಾನ, ನಿದ್ರೆ, ಆಲಸ್ಯ, ಮಂಕು, ಮತ್ತು ವಿವೇಕವಿಲ್ಲದಿರುವುದು. ಜೀವನವನ್ನು ಕೇವಲ ತಿನ್ನುವುದು, ಮಲಗುವುದು ಮತ್ತು ಇತರರಿಗೆ ಹಾನಿ ಮಾಡುವುದರಲ್ಲಿ ಕಳೆಯುವುದು. ಈ ರೀತಿಯ ಜೀವನ ಮಾಡಿ ಈ ಸ್ಥಿತಿಯಲ್ಲಿ ದೇಹತ್ಯಾಗ ಮಾಡಿದವರು ಪ್ರಾಣಿ, ಪಕ್ಷಿ ಅಥವಾ ಕೀಟಗಳಂತಹ ತೀರಾ ಕೆಳಮಟ್ಟದ ಜೀವಿಗಳಾಗಿ ಜನ್ಮ ಪಡೆಯುತ್ತಾರೆ. ಇಲ್ಲಿ ಕೆಳಮಟ್ಟದ ಜೀವಿ ಅಂದರೆ ಕೇವಲ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಅಂತ ಅಲ್ಲ. ಯಾವುದೇ ಸಂಸ್ಕಾರವಿಲ್ಲದೆ, ಸ್ವಚ್ಛತೆ ಇಲ್ಲದೆ, ಜ್ಞಾನವಿಲ್ಲದೆ ಕೇವಲ ಮನುಷ್ಯನ ಆಕಾರದ ದೇಹ ಪಡೆದು ತಮ್ಮ ಜೀವನದಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡದೆ ಏನೆಲ್ಲ ಮಾಡಬಾರದೋ ಅದನ್ನು ಮಾಡುತ್ತಾ ಪ್ರಾಣಿಸ್ವಭಾವದಿಂದ ಜೀವಿಸುವವರೂ ಆಗಿರ ಬಹುದು. 
 
ಇಲ್ಲಿ ಪರೋಕ್ಷವಾಗಿ ಸಾತ್ವಿಕ ಗುಣಗಳಾದ ಸತ್ಕರ್ಮ ಮತ್ತು ಜ್ಞಾನದಿಂದ ಮಾತ್ರ ಮನುಷ್ಯನು ಉನ್ನತ ಲೋಕಗಳನ್ನು ಮತ್ತು ಮುಕ್ತಿಯನ್ನು ಪಡೆಯಲು ಸಾಧ್ಯ ಎಂಬ ಸೂಚನೆ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮಲ್ಲಿರುವ ಅಜ್ಞಾನ ಮತ್ತು ದುರಾಶೆಯನ್ನು ತೊರೆದು, ಸಾತ್ವಿಕತೆಯತ್ತ ಸಾಗುವುದು ಉತ್ತಮ ಎಂದು ವ್ಯಕ್ತವಾಗುತ್ತದೆ.

14-16
कर्मणः सुकृतस्याहुः   सात्त्विकं निर्मलं फलम् ।
रजसस्तु फलं दुःखम्   अज्ञानं तमसः फलम् ॥ १४-१६
ಕರ್ಮಣಃ ಸುಕೃತಸ್ಯಾಹುಃ    ಸಾತ್ತ್ವಿಕಂ ನಿರ್ಮಲಂ ಫಲಮ್
ರಜಸಸ್ತು ಫಲಂ ದುಃಖಮ್   ಅಜ್ಞಾನಂ ತಮಸಃ ಫಲಮ್ 14.16
 ಶ್ರೇಷ್ಠವಾದ ಶುಭ ಕರ್ಮದ ಫಲವು ಸಾತ್ವಿಕ ಮತ್ತು ನಿರ್ಮಲವಾದದ್ದು, ರಾಜಸ ಕರ್ಮದ ಫಲವು ದುಃಖದಾಯಕ, ಮತ್ತು ತಾಮಸ ಕರ್ಮದ ಫಲವು ಅಜ್ಞಾನ ಅಥವಾ ಮೂಢತೆ ಎಂದು ಹೇಳುತ್ತಾರೆ.
 
ಶುದ್ಧ ಮನಸ್ಸಿನಿಂದ, ಒಳ್ಳೆಯ ಆಲೋಚನೆ, ದಯೆ, ಕರ್ತವ್ಯ ಪ್ರಜ್ಞೆ ಮತ್ತು ನಿಸ್ವಾರ್ಥವಾಗಿ ಧರ್ಮದ ದಾರಿಯಲ್ಲಿ ಮಾಡುವ ಕೆಲಸಗಳು ಸಾತ್ವಿಕರು ಮಾಡುವ ಕರ್ಮಗಳು. ಇವು ಆಂತರಿಕ ಶಾಂತಿ, ಸ್ಪಷ್ಟತೆ, ಜ್ಞಾನ ಮತ್ತು ಸಂತೋಷವನ್ನು ನೀಡುತ್ತವೆ. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ.
 
ಅಪಾರವಾದ ಭೋಗ-ಭಾಗ್ಯಗಳ ಆಸೆ, ಮಹತ್ವಾಕಾಂಕ್ಷೆ, ಲಾಭದ ನಿರೀಕ್ಷೆ ಮತ್ತು ಸ್ವಾರ್ಥದಿಂದ ಮಾಡುವ ಕೆಲಸಗಳು ರಾಜಸಿಕರು ಮಾಡುವ ಕರ್ಮಗಳು. ಇದರಿಂದ ತಾತ್ಕಾಲಿಕವಾಗಿ ಖುಷಿ ಕೊಟ್ಟಂತೆ ಅನಿಸಿದರೂ ಅಂತಿಮವಾಗಿ ಮಾನಸಿಕ ಒತ್ತಡ, ಆತಂಕ, ತಳಮಳ ಮತ್ತು ದುಃಖದಲ್ಲಿ ಕೊನೆಗೊಳ್ಳುತ್ತವೆ
 
ಸೋಮಾರಿತನ, ಅಜ್ಞಾನ, ದುರಭ್ಯಾಸ, ನಿರ್ಲಕ್ಷ್ಯ ಮತ್ತು ಮೂರ್ಖತನದಿಂದ ಮಾಡುವ ಕೆಲಸಗಳು ತಾಮಸಿಕರು ಮಾಡುವ ಕರ್ಮಗಳು. ಇವು ಮನುಷ್ಯನನ್ನು ಕತ್ತಲೆಯತ್ತ ಅಧೋಗತಿಗೆ ಕೊಂಡೊಯ್ಯುತ್ತವೆ. ಇದು ಬೆಳವಣಿಗೆಯನ್ನು ಕುಂಠಿತಗೊಳಿಸಿ ಮೂಢನಂಬಿಕೆಗಳನ್ನು ಸೃಷ್ಟಿಸುತ್ತದೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾಶ ಮಾಡುತ್ತದೆ.

14-17
सत्त्वासञ्जायते ज्ञानं   रजसो लोभ एव च ।
प्रमादमोहौ तमसो   भवतोऽज्ञानमेव च ॥ १४-१७
ಸತ್ತ್ವಾತ್ಸಞ್ಜಾಯತೇ ಜ್ಞಾನಂ    ರಜಸೋ ಲೋಭ ಏವ ಚ
ಪ್ರಮಾದಮೋಹೌ ತಮಸೋ    ಭವತೋಜ್ಞಾನಮೇವ ಚ 14.17
 ಸತ್ವ ಗುಣದಿಂದ ಜ್ಞಾನವು ಬೆಳೆಯುತ್ತದೆ; ರಜೋಗುಣದಿಂದ ಲೋಭವು ಬೆಳೆಯುತ್ತದೆ; ತಮೋಗುಣದಿಂದ ಭ್ರಮೆ, ಭ್ರಾಂತಿ ಮತ್ತು ತಿಳಿಗೇಡಿತನ  ಬೆಳೆಯುತ್ತದೆ.
 
ಈ ಶ್ಲೋಕದಲ್ಲಿ, ಸತ್ವ, ರಜಸ್ಸು, ಮತ್ತು ತಮಸ್ಸು ಈ ಮೂರು ಗುಣಗಳು ನಮ್ಮ ಮಾನಸಿಕ ಸ್ಥಿತಿ, ಬುದ್ಧಿ ಮತ್ತು ಕ್ರಿಯೆಗಳ ಮೇಲೆ ಯಾವ ಪರಿಣಾಮ ಭೀಳುತ್ತವೆ ಎಂದು ತಿಳಿಸಲಾಗಿದೆ.
 
ಸತ್ವಗುಣ ಶುದ್ಧವಾದದ್ದು. ಮನುಷ್ಯನಲ್ಲಿ ಸಾತ್ವಿಕ ಗುಣ ಹೆಚ್ಚಾದಾಗ ಆತನಲ್ಲಿ ನಿಜವಾದ ಜ್ಞಾನ, ವಿವೇಕ ಹಾಗೂ ಸರಿಯಾದುದನ್ನು ಗ್ರಹಿಸುವ ಶಕ್ತಿ ಜಾಗೃತ ಗೊಂಡು ವೃದ್ದಿಯಾಗುತ್ತದೆ. ಅಂತವರು ಸತ್ಯ ಮತ್ತು ಧರ್ಮದ ಮಾರ್ಗವನ್ನು ಅನುಸರಿಸುತ್ತಾರೆ. ಇದು ಆಂತರಿಕ ಶಾಂತಿ, ಸ್ಪಷ್ಟತೆ, ಮತ್ತು ಸಂತೃಪ್ತಿಯನ್ನು ನೀಡುತ್ತದೆ.
 
ರಜೋಗುಣ ಆಸೆ ಮತ್ತು ಉತ್ಸಾಹದಿಂದ ಕೂಡಿದ್ದು, ರಜೋಗುಣ ಹೆಚ್ಚಾದಾಗ ಮನುಷ್ಯನಲ್ಲಿ ಅಪಾರವಾದ ಆಸೆಗಳು, ದುರಾಸೆ, ತೃಪ್ತಿಯಿಲ್ಲದ ಅಪೇಕ್ಷೆ, ಲೋಭ, ಮತ್ತು ಸ್ವಾರ್ಥವು ಉಂಟಾಗುತ್ತದೆ. ಇದರಿಂದಾಗಿ ಅಂತವರು ನಿರಂತರ ಭೋಗ ಜೀವನದ ಹಿಂದೆ ಓಡುತ್ತಾರೆ ಮತ್ತು ಎಂದಿಗೂ ತೃಪ್ತರಾಗುವುದಿಲ್ಲ. ಹಲ್ಲಿದ್ದಾಗ ಕಡಲೆ ಕಾಯಿ ಸಿಗಲಿಲ್ಲ, ಕಡಲೆ ಕಾಯಿ ಸಿಕ್ಕಿದಾಗ ಹಲ್ಲಿಲ್ಲ ಎಂದುಕೊಂಡು, ಸಿಕ್ಕಿದ್ದನ್ನು ತಾನೂ ಉಪಯೋಗಿಸದೆ ಇನ್ನೊಬ್ಬರಿಗೂ ಕೊಡದೆ, ದಾನ ಅನ್ನುವುದರ ಗಂಧ ಗಾಳಿ ಇಲ್ಲದೆ, ಹಂಚಿಕೊಂಡು ತಿಂದರೆ ಹಬ್ಬ ಎನ್ನುವುದರ ಅರಿವೂ ಇಲ್ಲದೆ, ಸದಾ ತಡಪಡಿಸುತ್ತಾ ಜೀವಿಸುತ್ತಾರೆ.
 
ತಾಮಸ ಗುಣ ಅತ್ಯಂತ ಕನಿಷ್ಠ ಮಟ್ಟದ್ದಾಗಿದ್ದು ಕತ್ತಲೆ ಮತ್ತು ಅಜ್ಞಾನದ ಪ್ರತೀಕವಾಗಿದೆ. ತಮೋಗುಣವು ಪ್ರಬಲವಾದಾಗ ಮನುಷ್ಯನಲ್ಲಿ ಆಲಸ್ಯ, ನಿರ್ಲಕ್ಷ್ಯ, ಮೋಹ (ಭ್ರಮೆ), ಗೊಂದಲ ಮತ್ತು ಅಜ್ಞಾನ ಆವರಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಕತ್ತಲೆಯಲ್ಲಿ ಮುಳುಗುತ್ತಾರೆ
 
ಇನ್ನೊಂದು ರೀತಿಯಲ್ಲಿ ಇದನ್ನೆ ಚುಟುಕಾಗಿ, ಜ್ಞಾನದ ತೃಷೆ ಇದ್ದರೆ ಅದು ಸಾತ್ವಿಕ ಗುಣ, ಎಲ್ಲಾ ನನಗೇ ಸಿಗಬೇಕು ಉಳಿದವರಿಗೆ ಸಿಗ ಬಾರದು ಎನ್ನುವ ಲೋಭವಿದ್ದರೆ ಅದು ರಾಜಸಿಕ ಗುಣ, ಅದರ ಪರಿಣಾಮ ಏನು ಎನ್ನುವುದರ ಅರಿವಿಲ್ಲದೆ ಯಾವುದೊ ಭೌತಿಕ ವಸ್ತುವಿನ ಮೇಲೆ ಅತಿಯಾದ ಮಮತೆ ಮೋಹ ಬೆಳೆದರೆ ಅದು ತಾಮಸಿಕ ಗುಣ ಅಂತ ಹೇಳಬಹುದು.

14-18
ऊध्र्वं गच्छन्ति सत्त्वस्था   मध्ये तिष्ठन्ति राजसाः ।
जघन्यगुणवृत्तिस्था   अधोगच्छन्ति तामसाः ॥ १४-१८
ಊರ್ಧ್ವಂ ಗಚ್ಛನ್ತಿ ಸತ್ತ್ವಸ್ಥಾ    ಮಧ್ಯೇ ತಿಷ್ಠನ್ತಿ ರಾಜಸಾಃ
ಜಘನ್ಯಗುಣವೃತ್ತಿಸ್ಥಾ    ಅಧೋ ಗಚ್ಛನ್ತಿ ತಾಮಸಾಃ 14.18
ಸತ್ತ್ವಗುಣದಲ್ಲಿ ನೆಲೆಸಿರುವ ಸಾತ್ತ್ವಿಕ ಜನರು ಮರಣಾನಂತರ ಉನ್ನತ ಲೋಕಗಳಿಗೆ (ಸ್ವರ್ಗಾದಿ ಮೇಲಿನ ಪುಣ್ಯಲೋಕಗಳಿಗೆ ಅಥವಾ ಉತ್ತಮ ಜನ್ಮಕ್ಕೆ) ಹೋಗುತ್ತಾರೆ. ರಜೋಗುಣ ಪ್ರಧಾನವಾಗಿರುವ ರಾಜಸಿಕ ಜನರು ಮಧ್ಯ ಲೋಕದಲ್ಲೇ (ಅಂದರೆ ಭೂಲೋಕದಲ್ಲಿ ಮಾನವರಾಗಿಯೇ) ಉಳಿಯುತ್ತಾರೆ. ಅತ್ಯಂತ ಕೀಳಾದ ತಮೋಗುಣದ ಪ್ರವೃತ್ತಿಯಲ್ಲಿ ಮುಳುಗಿರುವ ತಾಮಸಿಕ ಜನರು ಅಧೋಗತಿಗೆ (ಪಶು, ಪಕ್ಷಿ, ಕೀಟ ಮುಂತಾದ ಕೀಳು ಜನ್ಮಗಳಿಗೆ ಅಥವಾ ನರಕಕ್ಕೆ) ಇಳಿದು ಹೋಗುತ್ತಾರೆ.

ಊರ್ಧ್ವಮ್ = ಮೇಲಿನ ಲೋಕಗಳಿಗೆ (ಉನ್ನತ ಸ್ಥಿತಿಗೆ),    ಗಚ್ಛಂತಿ = ಹೋಗುತ್ತಾರೆ,    ಸತ್ತ್ವಸ್ಥಾಃ = ಸತ್ತ್ವಗುಣದಲ್ಲಿ ನೆಲೆಸಿರುವವರು,    ಮಧ್ಯೇ = ಮಧ್ಯದಲ್ಲಿ (ಮಾನವ ಲೋಕದಲ್ಲಿಯೇ),    ತಿಷ್ಠಂತಿ = ಇರುತ್ತಾರೆ / ಉಳಿಯುತ್ತಾರೆ,    ರಾಜಸಾಃ = ರಜೋಗುಣ ಪ್ರಧಾನವಾಗಿ ಉಳ್ಳವರು
ಜಘನ್ಯ-ಗುಣ-ವೃತ್ತಿ-ಸ್ಥಾಃ = ಅತ್ಯಂತ ಕೀಳಾದ ತಮೋಗುಣದ ಪ್ರವೃತ್ತಿಯಲ್ಲಿ ನೆಲೆಸಿರುವ,    ಅಧಃ = ಕೆಳಲೋಕಗಳಿಗೆ (ಪಶು-ಪಕ್ಷಿ ಮುಂತಾದ ಕೀಳು ಜನ್ಮಗಳಿಗೆ ಅಥವಾ ನರಕಾದಿ ಯೋನಿಗಳಿಗೆ),    ಗಚ್ಛಂತಿ = ಹೋಗುತ್ತಾರೆ,    ತಾಮಸಾಃ = ತಾಮಸ ಗುಣದ ಜನರು

14-19
नान्यं गुणेभ्यः कर्तारं   यदा द्रष्तटानुपश्यति ।
गुणेभ्यश्च प्रं वेत्ति   मद्भावं सोऽधिगच्छति ॥ १४-१९
ನಾನ್ಯಂ ಗುಣೇಭ್ಯಃ ಕರ್ತಾರಂ    ಯದಾ ದ್ರಷ್ಟಾನುಪಶ್ಯತಿ
ಗುಣೇಭ್ಯಶ್ಚ ಪರಂ ವೇತ್ತಿ    ಮದ್ಭಾವಂ ಸೋಧಿಗಚ್ಛತಿ 14.19
 
14-20
गुणानेतानतीत्य त्रीन्   देही देहसमुद्भवान् ।
जन्ममृत्युजरादुःखैः   विमुक्तोऽमृतमश्नुते ॥ १४-२०
ಗುಣಾನೇತಾನತೀತ್ಯ ತ್ರೀನ್   ದೇಹೀ ದೇಹಸಮುದ್ಭವಾನ್
ಜನ್ಮಮೃತ್ಯುಜರಾದುಃಖೈಃ   ವಿಮುಕ್ತೋಮೃತಮಶ್ನುತೇ 14.20
 
14-21
अर्जुन  उवाच
कैर्लिङ्गैस्त्रीन्गुणानेतान्   अतीतो भवति प्रभो ।
किमाचारःकथं चैतान्   त्रीन्गुणानतिवर्तते ॥ १४-२१
ಅರ್ಜುನ ಉವಾಚ
ಕೈರ್ಲಿಂಗೈಸ್ತ್ರೀನ್ಗುಣಾನೇತಾನ್   ಅತೀತೋ ಭವತಿ ಪ್ರಭೋ
ಕಿಮಾಚಾರಃ ಕಥಂ ಚೈತಾನ್   ತ್ರೀನ್ಗುಣಾನತಿವರ್ತತೇ 14.21
 
14-22
श्रीभगवानुवाच
प्रकाशं च प्रवृत्तिं च   मोहमेव च पाण्डव ।
न द्वेष्टि सम्प्रवृत्तानि   न निवृत्तानि काङ्क्षति ॥ १४-२२
ಶ್ರೀ ಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ    ಮೋಹಮೇವ ಚ ಪಾಣ್ಡವ
ನ ದ್ವೇಷ್ಟಿ ಸಮ್ಪ್ರವೃತ್ತಾನಿ    ನ ನಿವೃತ್ತಾನಿ ಕಾಙ್ಕ್ಷತಿ 14.22
 
14-23
उदासीनवदासीनो   गुणैर्यो न विचाल्यते ।
गुणा वर्तन्त इत्येव   योऽवतिष्ठति नेङ्गते ॥ १४-२३
ಉದಾಸೀನವದಾಸೀನೋ    ಗುಣೈರ್ಯೋ ನ ವಿಚಾಲ್ಯತೇ
ಗುಣಾ ವರ್ತನ್ತ ಇತ್ಯೇವ    ಯೋವತಿಷ್ಠತಿ ನೇಙ್ಗತೇ 14.23
 
14-24
समदुःखसुखः स्वस्थः   समलोष्टाश्मकाञ्चनः ।
तुल्यप्रियाप्रियो धीरः   तुल्यानिन्दात्मसंस्तुतिः ॥ १४-२४
ಸಮದುಃಖಸುಖಃ ಸ್ವಸ್ಥಃ    ಸಮಲೋಷ್ಟಾಶ್ಮಕಾಞ್ಚನಃ
ತುಲ್ಯಪ್ರಿಯಾಪ್ರಿಯೋ ಧೀರಃ   ತುಲ್ಯನಿನ್ದಾತ್ಮಸಂಸ್ತುತಿಃ 14.24
 
14-25
मानापमानयोस्तुल्यः   स्तुल्यो मित्रारिपक्षयोः ।
सर्वारम्भपरित्यागी   गुणातीतः स उच्यते ॥ १४-२५
ಮಾನಾಪಮಾನಯೋಸ್ತುಲ್ಯಃ   ಸ್ತುಲ್ಯೋ ಮಿತ್ರಾರಿಪಕ್ಷಯೋಃ
ಸರ್ವಾರಮ್ಭಪರಿತ್ಯಾಗೀ    ಗುಣಾತೀತಃ ಸ ಉಚ್ಯತೇ 14.25
 
14-26
मां च योऽव्यभिचारेण   भक्तियोगेन सेवते ।
स गुणान्समतीत्यैतान्   ब्रह्मभूयाय कल्पते ॥ १४-२६
ಮಾಂ ಚ ಯೋವ್ಯಭಿಚಾರೇಣ    ಭಕ್ತಿಯೋಗೇನ ಸೇವತೇ
ಸ ಗುಣಾನ್ಸಮತೀತ್ಯೈತಾನ್    ಬ್ರಹ್ಮಭೂಯಾಯ ಕಲ್ಪತೇ 14.26
 
14-27
ब्रह्मणो हि प्रतिष्ठाहम्   अमृतस्याव्ययस्य च ।
शाश्वतस्य च धर्मस्य   सुखस्यैकान्तिकस्य च ॥ १४-२७
ಬ್ರಹ್ಮಣೋ ಹಿ ಪ್ರತಿಷ್ಠಾಹಮ್   ಅಮೃತಸ್ಯಾವ್ಯಯಸ್ಯ ಚ
ಶಾಶ್ವತಸ್ಯ ಚ ಧರ್ಮಸ್ಯ    ಸುಖಸ್ಯೈಕಾನ್ತಿಕಸ್ಯ ಚ 14.27
 
 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे गुणत्रयविभागयोगो नाम चतुर्दशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಗುಣತ್ರಯವಿಭಾಗ ಯೊಗೊ ನಾಮ ಚತುರ್ದಶೋಧ್ಯಾಯಃ

No comments:

Post a Comment