श्रीमद्भगवद्गीता
ಶ್ರೀಮದ್ಭಗವದ್ಗೀತಾ
द्वादशोऽध्यायः
ದ್ವಾದಶೋಧ್ಯಾಯಃ
भक्तियोगः
ಭಕ್ತಿಯೊಗಃ
12-01
अर्जुन उवाच
एवं सततयुक्ता ये भक्तास्त्वां पर्युपासते ।
येचाप्यक्षरमव्यक्तं तेषां के योगवित्तमाः ॥ १२-१
ಅರ್ಜುನ ಉವಾಚ
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ
ಯೇಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ 12.1
12-02
श्रीभगवानुवाच
मय्यावेश्य मनो ये मां नित्ययुक्ता उपासते ।
श्रद्धया परयोपेताः ते मे युक्ततमा मताः ॥ १२-२
ಶ್ರೀ ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ
ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ 12.2
12-03
ये त्वक्षरमनिर्देश्यम् अव्यक्तं पर्युपासते ।
सर्वत्रगमचिन्त्यं च कूटस्थमचलं ध्रुवम् ॥ १२-३
ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತಂ ಪರ್ಯುಪಾಸತೇ
ಸರ್ವತ್ರಗಮಚಿನ್ತ್ಯಂ ಚ ಕೂಟಸ್ಥಮಚಲಂ ಧ್ರುವಮ್ 12.3
12-04
संनियम्येन्द्रियग्रामं सर्वत्र समबुद्धयः ।
ते प्राप्नुवन्ति मामेव सर्वभूतहिते रताः ॥ १२-४
ಸಂನಿಯಮ್ಯೇನ್ದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ
ತೇ ಪ್ರಾಪ್ನುವನ್ತಿ ಮಾಮೇವ ಸರ್ವಭೂತಹಿತೇ ರತಾಃ 12.4
12-05
क्लेशोऽधिकतरस्तेषाम् अव्यक्तासक्तचेतसाम् ।
अव्यक्ता हि गतिर्दुःखं देहवद्भिरवाप्यते ॥ १२-५
ಕ್ಲೇಶೋಧಿಕತರಸ್ತೇಷಾಮ್ ಅವ್ಯಕ್ತಾಸಕ್ತಚೇತಸಾಮ್
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ 12.5
12-06
ये तु सर्वाणि कर्माणि मयि संन्यस्य मत्पराः ।
अनन्येनैव योगेन मां ध्यायन्त उपासते ॥ १२-६
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ
ಅನನ್ಯೇನೈವ ಯೋಗೇನ ಮಾಂ ಧ್ಯಾಯನ್ತ ಉಪಾಸತೇ 12.6
12-07
तेषामहं समुद्धर्ता मृत्युसंसारसागरात् ।
भवामि नचिरात्पार्थ मय्यावेशितचेतसाम् ॥ १२-७
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ 12.7
ಹೇ ಪಾರ್ಥ, ನನ್ನಲ್ಲೇ ಮನಸ್ಸನ್ನು
ನೆಲೆಗೊಳಿಸಿದ ಆ ಭಕ್ತರನ್ನು ನಾನು ಮೃತ್ಯುಮಯವಾದ ಸಂಸಾರ ಸಾಗರದಿಂದ ಬೇಗನೆ ಉದ್ಧರಿಸುತ್ತೇನೆ (ಮುಕ್ತಿ
ನೀಡುತ್ತೇನೆ).
12-08
मय्येव मन आधत्स्व मयि बुद्धिं निवेशय ।
निवसिष्यसि मय्येव अत ऊर्ध्वं न संशयः ॥ १२-८
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ 12.8
ಮನಸ್ಸನ್ನು ಪರಮಾತ್ಮನಲ್ಲಿಯೇ ಸ್ಥಿರಗೊಳಿಸಿ,
ಬುದ್ಧಿಯನ್ನೂ ಪರಮಾರ್ತ್ಮನಲ್ಲಿಯೇ ತೊಡಗಿಸಿದರೆ, ಈ ರೀತಿ ಮಾಡುವವರು ನಿಸ್ಸಂದೇಹವಾಗಿ ಪರಮಾತ್ಮನಲ್ಲಿಯೇ
ನೆಲೆಸುವರು.
12-09
अथ चित्तं समाधातुं न शक्नोषि मयि स्थिरम् ।
अभ्यासयोगेन ततः मामिच्छाप्तुं धनञ्जय ॥ १२-९
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್
ಅಭ್ಯಾಸಯೋಗೇನ ತತಃ ಮಾಮಿಚ್ಛಾಪ್ತುಂ ಧನಞ್ಜಯ 12.9
ಅರ್ಜುನ, ಒಂದು ವೇಳೆ ನೀನು ಮನಸ್ಸನ್ನು
ಅಚಲವಾಗಿ ನೆಲೆಗೊಳಿಸಲು ಸಾಧ್ಯವಾಗದಿದ್ದರೆ, ಅಭ್ಯಾಸ ಯೋಗದ ಮೂಲಕ ಅಂದರೆ ನಿರಂತರ ಪ್ರಯತ್ನದ ಮೂಲಕ
ಮನಸ್ಸನ್ನು ನನ್ನ ಕಡೆಗೆ ತರಲು ಅಭ್ಯಾಸ ಮಾಡು.
12-10
अभ्यासेऽप्यसमर्थोऽसि मत्कर्मपरमो भव ।
मदर्थमपि कर्माणि कुर्वन् सिद्धिमवाप्स्यसि ॥ १२-१०
ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮಪರಮೋ ಭವ
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ 12.10
अर्जुन उवाच
एवं सततयुक्ता ये भक्तास्त्वां पर्युपासते ।
येचाप्यक्षरमव्यक्तं तेषां के योगवित्तमाः ॥ १२-१
ಅರ್ಜುನ ಉವಾಚ
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ
ಯೇಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ 12.1
श्रीभगवानुवाच
मय्यावेश्य मनो ये मां नित्ययुक्ता उपासते ।
श्रद्धया परयोपेताः ते मे युक्ततमा मताः ॥ १२-२
ಶ್ರೀ ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ
ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ 12.2
ये त्वक्षरमनिर्देश्यम् अव्यक्तं पर्युपासते ।
सर्वत्रगमचिन्त्यं च कूटस्थमचलं ध्रुवम् ॥ १२-३
ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತಂ ಪರ್ಯುಪಾಸತೇ
ಸರ್ವತ್ರಗಮಚಿನ್ತ್ಯಂ ಚ ಕೂಟಸ್ಥಮಚಲಂ ಧ್ರುವಮ್ 12.3
संनियम्येन्द्रियग्रामं सर्वत्र समबुद्धयः ।
ते प्राप्नुवन्ति मामेव सर्वभूतहिते रताः ॥ १२-४
ಸಂನಿಯಮ್ಯೇನ್ದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ
ತೇ ಪ್ರಾಪ್ನುವನ್ತಿ ಮಾಮೇವ ಸರ್ವಭೂತಹಿತೇ ರತಾಃ 12.4
क्लेशोऽधिकतरस्तेषाम् अव्यक्तासक्तचेतसाम् ।
अव्यक्ता हि गतिर्दुःखं देहवद्भिरवाप्यते ॥ १२-५
ಕ್ಲೇಶೋಧಿಕತರಸ್ತೇಷಾಮ್ ಅವ್ಯಕ್ತಾಸಕ್ತಚೇತಸಾಮ್
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ 12.5
ये तु सर्वाणि कर्माणि मयि संन्यस्य मत्पराः ।
अनन्येनैव योगेन मां ध्यायन्त उपासते ॥ १२-६
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ
ಅನನ್ಯೇನೈವ ಯೋಗೇನ ಮಾಂ ಧ್ಯಾಯನ್ತ ಉಪಾಸತೇ 12.6
तेषामहं समुद्धर्ता मृत्युसंसारसागरात् ।
भवामि नचिरात्पार्थ मय्यावेशितचेतसाम् ॥ १२-७
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ 12.7
ಈ ಶ್ಲೋಕದಲ್ಲಿ ಪರಮಾತ್ಮನು
ಅನನ್ಯ ಭಕ್ತಿಯಿಂದ ಪರಮಾತ್ಮನನ್ನು ಆರಾಧಿಸುವ ಭಕ್ತರನ್ನು ತಾನೇ ಸ್ವತಃ ಸಂಸಾರ ಸಾಗರದಿಂದ ಪಾರು ಮಾಡುತ್ತಾನೆ
ಎಂದು ಭರವಸೆ ನೀಡುತ್ತಾನೆ.
ಮೃತ್ಯುರೂಪೀ ಸಂಸಾರ ಸಾಗರ ಅಂದರೆ - ಸಮುದ್ರದಲ್ಲಿ ಹೇಗೆ ಅಸಂಖ್ಯ ತೆರೆಗಳು
ಹುಟ್ಟಿ ಕೊನೆಗೊಳ್ಳುತ್ತವೋ ಹಾಗೆನೇ ಸಂಸಾರ ಸಾಗರದಲ್ಲಿ ಜೀವಿಗಳು ಅನಾವರತಾ ಜನನ ಮರಣಗಳ ತರಂಗಗಳು,
ಅಂದರೆ ಹುಟ್ಟು ಸಾವಿನ ಪ್ರಕ್ರಿಯೆಯು ನೆಡೆಯುತ್ತಿರುತ್ತದೆ. ಮತ್ತು ಅದು ಅಪಾರ ಕಷ್ಟ ಮತ್ತು ದುಃಖಗಳಿಂದ
ಕೂಡಿರುತ್ತದೆ. ಎಲ್ಲಿಯವರೆಗೆ ಪರಮಾತ್ಮನ ಪ್ರಾಪ್ತಿಯಾಗುವುದಿಲ್ಲವೋ ಅಲ್ಲಿಯವರೆಗೆ ಜೀವಿಗಳು ಹುಟ್ಟಿ
ಸಾಯುವ ಚಕ್ರದಲ್ಲಿ ಸಿಲುಕಿರುತ್ತಾರೆ.
ಆದರೆ ಪರಮಾತ್ಮನಲ್ಲಿ
ಶರಣಾಗತನಾದ ಭಕ್ತರನ್ನು, ಹೇಗೆ ದೋಣಿಯಲ್ಲಿ ಕೂತ ಜನರನ್ನು ಅಂಬಿಗನು ನದಿ ದಾಟಿಸುತ್ತಾನೋ, ಹಾಗೆಯೆ
ಭಕ್ತಿರೂಪೀ ನೌಕೆಯಲ್ಲಿ ಸ್ಥಿತರಾದ ಭಕ್ತರನ್ನು ಸಂಸಾರ ಸಾಗರವನ್ನು ದಾಟಿಸಿ ಮೋಕ್ಷವನ್ನು ಕರುಣುಸುತ್ತಾನೆ.
ಅಂದರೆ ಆತ್ಮಸಾಕ್ಷಾತ್ಕಾರದ
ಬೇರೆ ಎಲ್ಲ ಪ್ರಕ್ರಿಯೆಗಳನ್ನು ತ್ಯಜಿಸಿದರೂ ಪರಮಾತ್ಮನ ಪ್ರಜ್ಞೆಯಲ್ಲಿ ಭಕ್ತಿ ಸೇವೆ ಮಾಡಿದರೆ ಮಾನವ
ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ತಲುಪಲು ಪರಮಾತ್ಮನೇ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ.
मय्येव मन आधत्स्व मयि बुद्धिं निवेशय ।
निवसिष्यसि मय्येव अत ऊर्ध्वं न संशयः ॥ १२-८
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ 12.8
ಪರಮಾತ್ಮನಲ್ಲಿ ನಮಗೆ
ಸ್ವತಃ ಸಿದ್ಧ ಸ್ಥಿತಿ ಇದೆ. ಆದರೆ ಸಾಮಾನ್ಯವಾಗಿ ಪರಮಾತ್ಮನಲ್ಲಿ ನಮ್ಮ ಮನಸ್ಸು ತೊಡಗದಿರುವ ಕಾರಣ
ನಮಗೆ ಪರಮಾತ್ಮನೊಂದಿಗೆ ಇರುವ ಸ್ವತಃ ಸಿದ್ಧ ನಿತ್ಯ ಸಂಬಂಧದ ಅನುಭವವಾಗುವುದಿಲ್ಲ. ಯಾಕೆಂದರೆ
"ಮಯ್ಯೇವ ಮನ ಆಧತ್ಸ್ವ" ಅಂದರೆ ಮನಸ್ಸು ಚಂಚಲವಾದದ್ದು. ಅದನ್ನು ಲೌಕಿಕ ವಿಷಯಗಳಿಂದ ದೂರ
ಸರಿಸಿ, ಮನಸ್ಸು ಮತ್ತು ಬುದ್ಧಿಯನ್ನು ಪರಮಾತ್ಮನಲ್ಲಿಯೇ ಕೇಂದ್ರೀಕರಿಸ ಬೇಕು. ಇದು ಭಕ್ತಿಯ ಮೊದಲನೆಯ
ಹಂತ.
ಇಲ್ಲಿ ಮನಸ್ಸು ಮತ್ತು
ಬುದ್ಧಿ ಎರಡನ್ನೂ ಪರಮಾತ್ಮನಲ್ಲಿ ಕೇಂದ್ರೀಕರಿಸ ಬೇಕು ಎಂದಿದೆ. ಯಾಕೆಂದರೆ ಮನಸ್ಸು ಕೇವಲ ಭಾವನೆಗಳನ್ನು
ತೋರಿಸಿದರೆ, ಬುದ್ಧಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ, ಬುದ್ಧಿಯ ಮೂಲಕ ಪರಮಾತ್ಮನೇ ಪರಮ ಸತ್ಯ
ಅನ್ನುವ ಆಲೋಚನೆ ಬರ ಬೇಕು.
ಸೂಜಿಯೊಟ್ಟಿಗೆ ನೂಲು
ಹೋಗುವಂತೆ ಮನ ಬುದ್ಧಿಗಳು ಹೋದಲ್ಲಿ ಅದರೊಟ್ಟಿಗೆ ಸ್ವಯಂ ಕೂಡ ಹೋಗುತ್ತದೆ. ಯಾರು ತಮ್ಮ ಮನಸ್ಸು ಮತ್ತು
ಬುದ್ಧಿಯನ್ನು ಸಂಪೂರ್ಣವಾಗಿ ಪರಮಾತ್ಮನಿಗೆ ಅರ್ಪಿಸುತ್ತಾರೋ, ಅವರು ಲೌಕಿಕ ಜೀವನದಲ್ಲಿ ಇದ್ದರೂ ಪರಮಾತ್ಮನಲ್ಲಿಯೇ,
ಅಂದರೆ ಪರಮಾತ್ಮನ ಸೇವೆ ಮತ್ತು ಚಿಂತನೆ ಮಾಡುತ್ತಾ, ನೆಲೆಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ,
“ಅತ ಊರ್ಧ್ವಂ ನ ಸಂಶಯಃ”.
अथ चित्तं समाधातुं न शक्नोषि मयि स्थिरम् ।
अभ्यासयोगेन ततः मामिच्छाप्तुं धनञ्जय ॥ १२-९
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್
ಅಭ್ಯಾಸಯೋಗೇನ ತತಃ ಮಾಮಿಚ್ಛಾಪ್ತುಂ ಧನಞ್ಜಯ 12.9
ಕೃಷ್ಣನು ಅರ್ಜುನನಿಗೆ
ಮನಸ್ಸು ಬುದ್ಧಿಗಳನ್ನು ಅಚಲವಾಗಿ ಪರಮಾತ್ಮನಲ್ಲಿ ಕೇಂದ್ರೀಕರಿಸಲು ತುಂಬ ಕಠಿಣವಾದರೆ ಅಭ್ಯಾಸಯೋಗದ
ಮೂಲಕ ಪರಮಾತ್ಮನನ್ನು ಪಡೆಯಲು ಪ್ರಯತ್ನಿಸು ಎನ್ನುತ್ತಾನೆ.
ಅಭ್ಯಾಸ ಅಂದರೆ ಯಾವುದೊ ಲಕ್ಷ್ಯದಲ್ಲಿ ಮನಸ್ಸನ್ನು ಪದೇ
ಪದೇ ತೊಡಗಿಸುವುದು. ಸಾಮಾನ್ಯವಾಗಿ ಮತ್ತು ಸ್ವಾಭಾವಿಕವಾಗಿ ಮನಸ್ಸು ಲೌಕಿಕ ವಿಷಯಗಳ ಕಡೆಗೆ ಓಡುತ್ತದೆ.
ಅದನ್ನು ಬಲವಂತ ಮಾಡದೆ, ನಯವಾಗಿ ಮತ್ತೆ ಮತ್ತೆ ಪರಮಾತ್ಮನ ಮೇಲೆ ನೆಲೆಗೊಳಿಸುವುದು ಅಭ್ಯಾಸಯೋಗವಾಗಿದೆ.
ಇದನ್ನೆ ಭಕ್ತಿಯೋಗ ಅಂತಲೂ ಹೇಳಬಹುದು. ಐಹಿಕ ಅಸ್ತಿತ್ವದಲ್ಲಿ ನಮ್ಮ ಇಂದ್ರಿಯಗಳು ಇಂದ್ರಿಯ ತೃಪ್ತಿಯಲ್ಲಿ ಮಗ್ನವಾಗಿ ಮಲಿನವಾಗಿರುತ್ತವೆ.
ಭಕ್ತಿಯೋಗದ ಅಭ್ಯಾಸದಿಂದ
ಈ ಇಂದ್ರಿಯಗಳು ಪರಿಶುದ್ಧವಾಗ ಬಹುದು. ಈ ಪರಿಶುದ್ಧ ಸ್ಥಿತಿಯಲ್ಲಿ ಅವು ನೇರವಾಗಿ ಪರಮಾತ್ಮನ ಸಂಪರ್ಕ
ಪಡೆಯಲು ಅರ್ಹವಾಗುತ್ತವೆ.
ಆ ಮೇಲೆ ಈ ಅಭ್ಯಾಸ, ಒಂದು ಸಲ ಅಥವಾ ಒಂದು ದಿನದ್ದಲ್ಲ, ನಿರಂತರವಾಗಿರ
ಬೇಕು. ಮನಸ್ಸು ವಿಷಯಾಸಕ್ತಿಗೆ ಹೋದಾಗಲೆಲ್ಲ, ಎಚ್ಚರದಿಂದ ಅದನ್ನು ಪುನಃ ಪರಮಾತ್ಮನ ಕಡೆಗೆ ಸೆಳೆಯ
ಬೇಕು. ಆವಾಗ ಅಂತಃಕರಣ ಶುದ್ಧವಾಗಲು ತೊಡಗುತ್ತದೆ, ಮತ್ತು ಭಗವದ್ಪ್ರಾಪ್ತಿಯ ಇಚ್ಚೆ ಜಾಗ್ರತವಾಗುತ್ತದೆ.
ಭಗವದ್ ಪ್ರಾಪ್ತಿಯ ಇಚ್ಚೆ ತೀವ್ರವಾದಾಗ ಪರಮಾತ್ಮನೊಂದಿಗೆ ಸೇರುವ ವ್ಯಾಕುಲತೆ ಉಂಟಾಗುತ್ತದೆ. ಈ ವ್ಯಾಕುಲತೆಯಿಂದ
ಪ್ರಾಪಂಚಿಕ ಆಸಕ್ತಿ ಮತ್ತು ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ. ಆಗ ಭಗವದ್ಪ್ರಾಪ್ತಿಯಾಗುವ ಸಂಭವ
ಅಧಿಕವಾಗುತ್ತದೆ.
अभ्यासेऽप्यसमर्थोऽसि मत्कर्मपरमो भव ।
मदर्थमपि कर्माणि कुर्वन् सिद्धिमवाप्स्यसि ॥ १२-१०
ಅಭ್ಯಾಸೇಪ್ಯಸಮರ್ಥೋಸಿ ಮತ್ಕರ್ಮಪರಮೋ ಭವ
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ 12.10
ಒಂದು ವೇಳೆ ಅಭ್ಯಾಸಯೋಗ, ಅಂದರೆ ಧ್ಯಾನದ
ಅಭ್ಯಾಸವೂ ಕಷ್ಟವಾದರೆ, ಪರಮಾತ್ಮನಿಗಾಗಿ ಕರ್ಮಗಳನ್ನು, ಅಂದರೆ ಕೆಲಸಗಳನ್ನು ಮಾಡಲು ಪ್ರಯತ್ನಿಸು.
ಮಾಡುವ ಕೆಲೆಸಗಳನ್ನು ಪರಮಾತ್ಮನ ಪೂಜೆ ಎಂದು ಮಾಡಿಯೂ ಸಿದ್ಧಿ ಪಡೆಯ ಬಹುದು.
ಕೆಲವರಿಗೆ ಎಷ್ಟೇ
ಪ್ರಯತ್ನ ಮಾಡಿದರೂ ಮನಸ್ಸು ಮತ್ತು ಬುದ್ಧಿಯನ್ನು ಏಕಾಗ್ರತೆಯಿಂದ ಪರಮಾತ್ಮನಲ್ಲಿಯೆ ಸ್ಥಿರಗೊಳಿಸುವುದು
ಅಸಾಧ್ಯವಾಗ ಬಹುದು. ಏಕೆಂದರೆ ಈ ಆಧ್ಯಾತ್ಮ ಮಾರ್ಗದ ಸಾಧನೆಗೆ ಕಾಲಿ ಒಂದು ಜನ್ಮದ ಅಭ್ಯಾಸ ಸಾಕಾಗುವುದಿಲ್ಲ.
ಇಂತಹವರಿಗೆ, ಅವರು ಮಾಡುವ ದಿನ ನಿತ್ಯದ ಉದ್ಯೋಗ ಮತ್ತು ಮನೆಕೆಲಸಗಳನ್ನು ಪರಮಾತ್ಮನ ಸೇವೆ ಎಂದು ಮಾಡಿದರೆ
ಸಿದ್ಧಿ ಪಡೆಯಬಹುದು.
ಇಲ್ಲಿ “ಮತ್ಕರ್ಮ” ಎನ್ನುವ ಪದವನ್ನು ಉಪಯೋಗಿಸಲಾಗಿದೆ. ಯಾವ ಕರ್ಮಗಳಲ್ಲಿ ತನಗಾಗಿ
ಸ್ವಲ್ಪವೂ ಸ್ವಾರ್ಥ, ಮಮತ್ವ, ಆಸಕ್ತಿ ಇತ್ಯಾದಿಗಳ ಸಂಬಂಧವಿಲ್ಲದಿರುವುದೋ ಅದು ಮತ್ಕರ್ಮವಾಗಿದೆ.
ಹೀಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರಂತರ ಧ್ಯಾನ ಕಷ್ಟವಾದರೆ,
ತಾನು ಮಾಡುವ ಪ್ರತಿಯೊಂದು ಕೆಲಸವನ್ನು ಸ್ವಾರ್ಥ,
ಮಮತ್ವ ಇಲ್ಲದೆ ಪರಮಾತ್ಮನ ಸೇವೆ ಎಂದು ಮಾಡಿ ಸಿದ್ಧಿ ಪಡೆಯ ಬಹುದು.
12-11
अथैतदप्यशक्तोऽसि कर्तुं मद्योगमाश्रितः ।
सर्वकर्मफलत्यागं ततः कुरु यतात्मवान् ॥ १२-११
ಅಥೈತದಪ್ಯಶಕ್ತೋಸಿ ಕರ್ತುಂ ಮದ್ಯೋಗಮಾಶ್ರಿತಃ
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ 12.11
ಒಂದು ವೇಳೆ ಪರಮಾತ್ಮನನ್ನು ಧ್ಯಾನಿಸುವುದು
ಅಥವಾ ಪರಮಾತ್ಮನಿಗಾಗಿ ಕೆಲಸ ಮಾಡುವುದೂ ಸಾಧ್ಯವಾಗದಿದ್ದರೆ ಮನಸ್ಸು ಬುದ್ಧಿ ಮೊದಲಾದವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು
ನಿನ್ನ ಎಲ್ಲಾ ಕರ್ಮಗಳ/ಕೆಲಸಗಳ ಫಲ ತ್ಯಾಗ ಮಾಡಿ ನಿಷ್ಕಾಮ ಕರ್ಮ ಮಾಡು.
अथैतदप्यशक्तोऽसि कर्तुं मद्योगमाश्रितः ।
सर्वकर्मफलत्यागं ततः कुरु यतात्मवान् ॥ १२-११
ಅಥೈತದಪ್ಯಶಕ್ತೋಸಿ ಕರ್ತುಂ ಮದ್ಯೋಗಮಾಶ್ರಿತಃ
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ 12.11
ಸಾಮಾನ್ಯ ಜನರಲ್ಲಿ
ಎಷ್ಟೋ ಜನರಿಗೆ ಸಾಮಾಜಿಕ, ಕೌಟುಂಬಿಕ ಅಥವಾ ಧಾರ್ಮಿಕ ಕಾರಣಗಳಿಂದಾಗಿ ಅಥವಾ ಬೇರೆ ರೀತಿಯ ಅಡಚಣೆಗಳಿಂದಾಗಿ
ಭಕ್ತಿ, ಧ್ಯಾನ ಮಾಡುವುದರಲ್ಲಿ ಒಂದೇ ವಿಶ್ವಾಸ ಇಲ್ಲದಿರ ಬಹುದು ಅಥವಾ ಅಸಾದ್ಯವಾಗ ಬಹುದು. ಅಂತವರು
ಸಮಾಜ ಸೇವೆ, ದೇಶ ಸೇವೆ, ಶಾಸ್ತ್ರವಿಹಿತ ಕರ್ತವ್ಯ ಕರ್ಮಗಳಂತಹ ಕುಶಲ ಕರ್ಮಗಳನ್ನು ಮಾಡಿ ಬಂದ ಫಲಿತಾಂಶವನ್ನು
ಪರಮಾತ್ಮನ ಪ್ರಸಾದವೆಂದು ಸ್ವೀಕರಿಸಿ, ಫಲತ್ಯಾಗ ಮಾಡ ಬಹುದು. ಆದರೆ ಸಾಮಾನ್ಯ ಜನರಿಗೆ ಕರ್ಮಗಳಲ್ಲಿ
ಫಲಾಸಕ್ತಿ ಇರುವುದರಿಂದ ಬಂಧನಕ್ಕೊಳಗಾಗುತ್ತಾರೆ. ಅದಕ್ಕಾಗಿ "ಸರ್ವ ಕರ್ಮ ಫಲತ್ಯಾಗಂ ತತಃ ಕುರು ಯತಾತ್ಮವಾನ್" ಅಂತಂದಿದ್ದಾರೆ, ಹಾಗೆಂದರೆ ಎಲ್ಲಾ ಕರ್ಮಗಳ
ಫಲತ್ಯಾಗ; ಮನಸ್ಸು, ಬುದ್ಧಿ, ಇಂದ್ರಿಯಗಳ ಸಹಿತ ಶರೀರದ ಮೇಲೆ ಸಂಯಮ ಅಥವಾ ಹತೋಟಿ ಇಟ್ಟು ಕರ್ಮ ಮಾಡು
ಎಂದು. ಮತ್ತು “ಯತಾತ್ಮವಾನ್” ಎಂದರೆ ಮನಸ್ಸು, ಬುದ್ಧಿ, ಇಂದ್ರಿಯಗಳ ಸಹಿತ ಶರೀರದ ಮೇಲೆ ಹತೋಟಿ
ಇಟ್ಟುಕೊಳ್ಳಬಲ್ಲವರು ಅಂತ.
ಇಲ್ಲಿ ಶಾಸ್ತ್ರವಿಹಿತ ಕರ್ತವ್ಯ ಕರ್ಮಗಳಂತಹ ಕುಶಲ ಕರ್ಮಗಳನ್ನು
ಫಲತ್ಯಾಗ ಮಾಡಿ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಆದರೆ ಶಾಸ್ತ್ರನಿಷೇಧಿತ
ಪಾಪಕರ್ಮ ಅಥವಾ ಅಕುಶಲಕರ್ಮಗಳನ್ನು ಫಲಾಪೇಕ್ಷೆ ಇಲ್ಲದೆ ಫಲತ್ಯಾಗ ಮಾಡಿ ಮಾಡಿದರೆ ಒಳ್ಳೆಯದಾಗುವುದಿಲ್ಲ.
ಅಕುಶಲಕರ್ಮಗಳು ವರ್ಜಿತ.
12-12
श्रेयो हि ज्ञानमभ्यासात् ज्ञानाद्ध्यानं विशिष्यते ।
ध्यानात्कर्मफलत्यागः त्यागाच्छान्तिरनन्तरम् ॥ १२-१२
ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ
ಧ್ಯಾನಾತ್ಕರ್ಮಫಲತ್ಯಾಗಃ ತ್ಯಾಗಾಚ್ಛಾನ್ತಿರನನ್ತರಮ್ 12.12
ಯಾಂತ್ರಿಕವಾಗಿ ಮಾಡುವ ಅಭ್ಯಾಸಕ್ಕಿಂತ
ಜ್ಞಾನವು ಶ್ರೇಷ್ಠವಾಗಿದೆ. ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠವಾಗಿದೆ. ಮತ್ತು ಧ್ಯಾನಕ್ಕಿಂತಲೂ ಸಹ
ಎಲ್ಲಾ ಕರ್ಮಗಳ ಫಲದ ತ್ಯಾಗವು ಶ್ರೇಷ್ಠವಾಗಿದೆ. ಏಕೆಂದರೆ ಕರ್ಮಫಲ ತ್ಯಾಗದಿಂದ ತಕ್ಷಣವೇ ಪರಮ ಶಾಂತಿ
ದೊರೆಯುತ್ತದೆ.
श्रेयो हि ज्ञानमभ्यासात् ज्ञानाद्ध्यानं विशिष्यते ।
ध्यानात्कर्मफलत्यागः त्यागाच्छान्तिरनन्तरम् ॥ १२-१२
ಶ್ರೇಯೋ ಹಿ ಜ್ಞಾನಮಭ್ಯಾಸಾತ್ ಜ್ಞಾನಾದ್ಧ್ಯಾನಂ ವಿಶಿಷ್ಯತೇ
ಧ್ಯಾನಾತ್ಕರ್ಮಫಲತ್ಯಾಗಃ ತ್ಯಾಗಾಚ್ಛಾನ್ತಿರನನ್ತರಮ್ 12.12
ಇಲ್ಲಿ ಯಾಂತ್ರಿಕವಾಗಿ ಮಾಡುವ ಅಭ್ಯಾಸ ಅಂದರೆ ಸಕಾಮ ಭಾವದಿಂದ ಪದೇ ಪದೇ ಮಾಡುವ ಪ್ರಾಣಾಯಾಮ,
ಮನೋನಿಗ್ರಹ, ಭಗವನ್ನಾಮ ಜಪ ಅಂತ ತಿಳಿದುಕೊಳ್ಳ ಬೇಕು. ಇದರಲ್ಲಿ ವಿವೇಕ, ಜ್ಞಾನ, ಧ್ಯಾನ, ಮತ್ತು
ಕರ್ಮಫಲ ತ್ಯಾಗವಿರುವುದಿಲ್ಲ.
ಮನೋನಿಗ್ರಹ ಎಂದರೆ ಮನಸ್ಸನ್ನು ಹತೋಟಿಯಲ್ಲಿಡುವುದು ಅಥವಾ
ನಿಯಂತ್ರಿಸುವುದು ಎಂದರ್ಥ. ಇದು ಚಂಚಲವಾಗಿ ಓಡುವ ಮನಸ್ಸಿನ ಆಲೋಚನೆಗಳು, ಆಸೆಗಳು ಮತ್ತು
ಭಾವನೆಗಳನ್ನು ಬುದ್ಧಿಯ ಮೂಲಕ ನಿಯಂತ್ರಿಸುವ ಒಂದು ಪ್ರಕ್ರಿಯೆಯಾಗಿದೆ.
ಮನೋನಿಗ್ರಹದ ಮುಖ್ಯ
ಅಂಶಗಳು:
ಇಂದ್ರಿಯ ನಿಗ್ರಹ: ಕಣ್ಣು, ಕಿವಿ, ಮೂಗು, ನಾಲಿಗೆ
ಮತ್ತು ಚರ್ಮ ಈ ಜ್ಞಾನೇಂದ್ರಿಯಗಳನ್ನು ತಪ್ಪು ದಾರಿಗೆ ಹೋಗದಂತೆ ತಡೆಯುವುದು.
ಆಲೋಚನೆಗಳ ನಿಯಂತ್ರಣ: ಮನಸ್ಸಿನಲ್ಲಿ ಬರುವ ನಕಾರಾತ್ಮಕ
ಮತ್ತು ಅನಗತ್ಯ ಯೋಚನೆಗಳನ್ನು ದೂರ ಮಾಡುವುದು.
ಭಾವನಾತ್ಮಕ ಸಮತೋಲನ: ಕೋಪ, ಹಠ, ಅಸೂಯೆ ಮತ್ತು ಅತಿಯಾದ
ಆಸೆಗಳನ್ನು ನಿಯಂತ್ರಣದಲ್ಲಿಡುವುದು.
ಏಕಾಗ್ರತೆ: ಮನಸ್ಸನ್ನು ಯಾವುದೇ ಒಂದು ಒಳ್ಳೆಯ
ಕೆಲಸ ಅಥವಾ ಗುರಿಯತ್ತ ಸ್ಥಿರವಾಗಿ ನಿಲ್ಲಿಸುವುದು.
ಜ್ಞಾನ ಎಂದರೆ ತಿಳುವಳಿಕೆ, ಅರಿವು ಅಥವಾ ಸತ್ಯದ ಸಾಕ್ಷಾತ್ಕಾರ
ಎಂದರ್ಥ. ಒಂದು ವಿಷಯ, ವಸ್ತು ಅಥವಾ ಸಿದ್ಧಾಂತದ ಬಗ್ಗೆ ನಮಗಿರುವ ನಿಖರವಾದ ಮಾಹಿತಿ ಮತ್ತು
ಅದನ್ನು ಜೀವನದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯವೇ ಜ್ಞಾನ. ಪ್ರಸ್ತುತ ಇಲ್ಲಿ ಸತ್ಸಂಗ ಮತ್ತು ಶಾಸ್ತ್ರಗಳಿಂದ ಬರುವ ಶಾಸ್ತ್ರಜ್ಞಾನವಾಗಿದೆ,
ತತ್ವಜ್ಞಾನ ಅಲ್ಲ. ಇದರಿಂದ ಸಾಧಕರು "ನಾನು ಯಾರು,
ದೇವರು ಯಾರು" ಎನ್ನುವ ಅಥವಾ ಆತ್ಮ ಮತ್ತು ಪರಮಾತ್ಮನ ಸ್ವರೂಪದ ಜ್ಞಾನ ಪಡೆಯುತ್ತಾರೆ.
ಈ ರೀತಿಯ ಜ್ಞಾನ ಪಡೆದು ಮಾಡುವ ಭಕ್ತಿ ಮೊದಲು ಹೇಳಿದ ಯಾಂತ್ರಿಕವಾಗಿ ಮಾಡುವ ಅಭ್ಯಾಸಕ್ಕಿಂತ ಉತ್ತಮ.
ಜ್ಞಾನದ ಪ್ರಮುಖ ಮೂಲಗಳು:
ಪ್ರತ್ಯಕ್ಷ: ಕಣ್ಣಾರೆ ನೋಡಿ, ಕಿವಿ ಆಲಿಸಿ ಪಡೆಯುವ ಪ್ರಾಯೋಗಿಕ ಅನುಭವ.
ಅನುಮಾನ: ತಾರ್ಕಿಕ ಯೋಚನೆ ಮತ್ತು ವಿಶ್ಲೇಷಣೆಯ ಮೂಲಕ ತೀರ್ಮಾನಕ್ಕೆ
ಬರುವುದು.
ಶಬ್ದ: ಗುರುಗಳು, ಹಿರಿಯರು, ಪುಸ್ತಕಗಳು ಮತ್ತು ಶಾಸ್ತ್ರಗಳ ಮೂಲಕ
ಸಿಗುವ ಮಾಹಿತಿ.
ಜ್ಞಾನದ ಮಹತ್ವ:
ಇದು ಮನುಷ್ಯನ ಮನಸ್ಸಿನ ಕತ್ತಲೆಯನ್ನು (ಅಜ್ಞಾನ) ದೂರ ಮಾಡಿ ತಿಳಿವಳಿಕೆಯಬೆಳಕನ್ನು
ನೀಡುತ್ತದೆ.
ತಪ್ಪು ಮತ್ತು ಸರಿಗಳ ನಡುವಿನ ವ್ಯತ್ಯಾಸವನ್ನು
ತಿಳಿಸಿಕೊಡುತ್ತದೆ.
ಅಹಂಕಾರವನ್ನು ಅಳಿಸಿ, ವ್ಯಕ್ತಿಯಲ್ಲಿ ವಿನಯವನ್ನು
ತುಂಬುತ್ತದೆ.
"ಜ್ಞಾನಾದೇವ ತು ಕೈವಲ್ಯಂ" ಎಂಬ ಒಂದು ಮಾತಿದೆ,
ಅಂದರೆ ಜ್ಞಾನದಿಂದ ಮಾತ್ರವೇ ಮನುಷ್ಯನಿಗೆ ಮುಕ್ತಿ ಅಥವಾ ಪರಮ ಶಾಂತಿ ಸಿಗಲು ಸಾಧ್ಯ.
ಧ್ಯಾನ ಅಂದರೆ ಮನಸ್ಸು ಮತ್ತು ಬುದ್ಧಿಗಳನ್ನು ಒಂದು ನಿರ್ದಿಷ್ಟ ವಿಷಯ, ಆಲೋಚನೆ ಅಥವಾ ಉಸಿರಾಟದ ಮೇಲೆ ಕೇಂದ್ರೀಕರಿಸಿ,
ಮಾನಸಿಕ ಶಾಂತಿ ಮತ್ತು ಜಾಗೃತಿಯನ್ನು ಪಡೆಯುವುದು. ಇದು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ, ಬದಲಿಗೆ ಅಲೆದಾಡುವ ಮನಸ್ಸನ್ನು ನಿಯಂತ್ರಿಸಿ ಪರಮಾತ್ಮನ ಸ್ವರೂಪದಲ್ಲಿ ಸ್ಥಿರವಾಗಿಸಿವುದು. ಕೇವಲ ಶಾಸ್ತ್ರ ಜ್ಞಾನದಿಂದ ಮನಸ್ಸಿನ ನಿಯಂತ್ರಣವಾಗುವುದಿಲ್ಲ. ಆದುದರಿಂದ ಮನಸ್ಸಿನ
ನಿಯಂತ್ರಣದೊಂದಿಗೆ ಮಾಡುವ ಧ್ಯಾನವು ಜ್ಞಾನಕ್ಕಿಂತ ಉತ್ತಮವಾಗಿರುತ್ತದೆ.
ಧ್ಯಾನದ ಮೂಲ ಅರ್ಥ:
ಏಕಾಗ್ರತೆ: ಮನಸ್ಸಿನ ಎಲ್ಲ ಆಲೋಚನೆಗಳನ್ನು
ನಿಲ್ಲಿಸಿ, ಒಂದೇ ಕಡೆ ಗಮನ ಹರಿಸುವುದು.
ಆತ್ಮಾವಲೋಕನ: ನಮ್ಮ ಒಳಗಿನ ಆಲೋಚನೆಗಳು ಮತ್ತು
ಭಾವನೆಗಳನ್ನು ಸಾಕ್ಷಿ ಭಾವದಿಂದ (ಯಾವುದೇ ತೀರ್ಪು ನೀಡದೆ) ಗಮನಿಸುವುದು.
ಶೂನ್ಯ ಸ್ಥಿತಿ: ಮನಸ್ಸನ್ನು ಅನಗತ್ಯ ಚಿಂತೆಗಳಿಂದ
ಮುಕ್ತಗೊಳಿಸಿ, ಪ್ರಶಾಂತ ಗೊಳಿಸುವುದು.
ಕರ್ಮಫಲ ತ್ಯಾಗ ಅಂದರೆ
ಮಾಡುವ ಕರ್ಮಗಳ/ಕೆಲಸದ ಫಲ ಅಥವಾ ಲಾಭ - ನಷ್ಟಗಳನ್ನು ಪರಮಾತ್ಮನಿಗೆ ಅರ್ಪಿಸಿ, ನಿಷ್ಕಾಮವಾಗಿ ಕರ್ತವ್ಯ
ಮಾಡುವುದು. ಹೀಗೆ ಮಾಡುವುದರಿಂದ ಮನಸ್ಸು ಅಸ್ಥಿರತೆ ಮತ್ತು ಗೊದಲಗಳಿಂದ ಮುಕ್ತವಾಗಿ ಶಾಂತವಾಗುತ್ತದೆ.
ಪ್ರಮುಖ ಅಂಶಗಳು:
ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವುದು: ಕೆಲಸವನ್ನು ಸಂಪೂರ್ಣ ಜವಾಬ್ದಾರಿಯಿಂದ ಮಾಡಬೇಕು, ಆದರೆ "ನನಗೆ ಇದರಿಂದ ಏನು ಸಿಗುತ್ತದೆ?"
ಎಂಬ ಸ್ವಾರ್ಥ ಇರಬಾರದು.
ಕರ್ತವ್ಯಕ್ಕೆ ಆದ್ಯತೆ: ಫಲಿತಾಂಶದ ಯೋಚನೆ ಬಿಟ್ಟು, ಪ್ರಸ್ತುತ ಕ್ಷಣದಲ್ಲಿ ಕೈಲಾದಷ್ಟು ಅತ್ಯುತ್ತಮವಾಗಿ ಕೆಲಸ
ಮಾಡುವುದು.
ಪ್ರಮುಖ ತತ್ವಗಳು:
ನಿಮ್ಮ ಹಕ್ಕು ಕೇವಲ ಕರ್ಮದ ಮೇಲಿದೆ: ಫಲಿತಾಂಶವು ನಿಮ್ಮ ಕೈಯಲ್ಲಿಲ್ಲ, ಅದು ಹವಾಮಾನ, ಪರಿಸರ ಮತ್ತು ಕಾಲದ ಮೇಲೂ ನಿರ್ಧರಿತವಾಗಿರುತ್ತದೆ.
ಸಮಚಿತ್ತ ಕಾಯ್ದುಕೊಳ್ಳುವುದು: ಕೆಲಸದ ಫಲಿತಾಂಶ ಯಶಸ್ಸಾಗಲಿ ಅಥವಾ ಅಪಜಯವಾಗಲಿ, ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ
ಬೆಳೆಯುತ್ತದೆ.
ಅಹಂಕಾರದ ಮುಕ್ತಿ: "ನಾನೇ ಈ
ಕೆಲಸ ಮಾಡಿದೆ, ಇದರ ಲಾಭ ನನಗೇ ಸಿಗಬೇಕು" ಎಂಬ ಅಹಂಕಾರವನ್ನು ಇದು ದೂರ ಮಾಡುತ್ತದೆ.
अद्वेष्टा सर्वभूतानां मैत्रः करुण एव च ।
निर्ममो निरहङ्कारः समदुःखसुखः क्षमी ॥ १२-१३
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ
ನಿರ್ಮಮೋ ನಿರಹಙ್ಕಾರಃ ಸಮದುಃಖಸುಖಃ ಕ್ಷಮೀ 12.13
ಈ ಶ್ಲೋಕ ಶುರು ಮಾಡುತ್ತಲೆ
"ಅದ್ವೇಷ್ಟಾ ಸರ್ವಭೂತಾನಾಂ" ಅಂತ ಶುರುವಾಗುತ್ತದೆ. ಅಂದರೆ ಯಾರನ್ನೂ ದ್ವೇಷಿಸದೆ ಇರುವುದು.
ಕೇವಲ ಮನುಷ್ಯರನ್ನು ಮಾತ್ರ ಅಲ್ಲ, ಎಲ್ಲಾ ಜಾತಿಯ ಪ್ರಾಣಿ ಅಥವಾ ಜೀವ ಜಂತುಗಳನ್ನು ಕೂಡ. ಇದು ಪ್ರಾಣಿದಯಾ
ಸಂಘದವರ ಅತಿ ಮೆಚ್ಚಿನ ಮಾತು. ಮತ್ತು ಇದು ಪರಮಾತ್ಮನ ಭಕ್ತರಲ್ಲಿ ಇರಬೇಕಾದ ಮೊದಲನೆಯ ಗುಣ. ದ್ವೇಷದಲ್ಲಿ
ಎರಡು ವಿಧ - ಒಂದು ಕೆಟ್ಟ ಜನರ ಕೆಟ್ಟತನ ಕಂಡು ದ್ವೇಷಿಸುವುದು. ಎರಡನೆಯದು ಒಳ್ಳೆಯವರು ಉದ್ದಾರವಾಗುವುದನ್ನು
ಕಂಡು ದ್ವೇಷಿಸುವುದು. ಒಳ್ಳೆಯವನೆ ಇರಲಿ ಅಥವಾ ಕೆಟ್ಟವನೆ ಇರಲಿ, ಹೊಟ್ಟೆಕಿಚ್ಚು ಅಸಹನೆಗಳಿಲ್ಲದೆ
ಎಲ್ಲರಲ್ಲಿಯೂ ಒಳ್ಳೆಯತನ, ಪ್ರೀತಿ, ಸ್ನೇಹ ಬೆಳೆಸ ಬೇಕು. ದುಷ್ಟರಿಂದ ಸ್ವಲ್ಪ ದೂರದಲ್ಲಿರ ಬೇಕು.
ಕಷ್ಟದಲ್ಲಿರುವವರ ಬಗ್ಗೆ ಸಹಾನುಭೂತಿ ಇರ ಬೇಕು. 'ನನ್ನದು' ಎಂಬ ಆಸ್ತಿ ಪಾಸ್ತಿಗಳ ಮೇಲಿನ ಮೋಹ ಮತ್ತು
'ನಾನು ಯಾರು ಗೊತ್ತಾ' ಎಂಬ ಅಹಂಕಾರವಿಲ್ಲದಿದ್ದಾಗ ಎಲ್ಲವೂ ಪರಮಾತ್ಮನದು ಎಂಬ ಭಾವನೆ ಬರುತ್ತದೆ.
सन्तुष्टः सततं योगी यतात्मा दृढनिश्चयः ।
मय्यर्पितमनोबुद्धिः यो मद्भक्तः स मे प्रियः ॥ १२-१४
ಸನ್ತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ
ಮಯ್ಯರ್ಪಿತಮನೋಬುದ್ಧಿಃ ಯೋ ಮದ್ಭಕ್ತಃ ಸ ಮೇ ಪ್ರಿಯಃ 12.14
ಸುಖ - ದುಃಖ, ಲಾಭ - ನಷ್ಟ, ಅಥವಾ ಜಯ - ಅಪಜಯದ ಸಂದರ್ಭಗಳಲ್ಲಿ
ವಿಚಲಿತನಾಗಿ ಸಮಾನ ಮನಸ್ಥಿತಿಯಿಂದ ಇದ್ದು ತಪ್ಪು ಮಾಡಿದವರನ್ನು ಪ್ರತೀಕಾರದ ಭಾವವಿಲ್ಲದೆ ಕ್ಷಮಿಸುವ
ಗುಣ ಹೊಂದಿ, ತನ್ನಲ್ಲಿ ಲಭ್ಯವಿರುವುದರಲ್ಲಿ ಅಸಮಾಧಾನವಿಲ್ಲದೆ ತೃಪ್ತಿಪಡುವ ಪ್ರವೃತ್ತಿ ಬೆಳೆಸಿ,
ಮತ್ತು ದೃಢ ನಿಶ್ಚಯ ಅಂದರೆ ದೃಢವಾದ ಮನಸ್ಸಿನಿಂದ ಇರುವವರು ಪರಮಾತ್ಮನಿಗೆ ಅತಿ ಪ್ರಿಯರು; ಮತ್ತು
ಇಂತವರು ಸುಲಭವಾಗಿ ಪರಮಾತ್ಮನನ್ನು ತಳಪ ಬಹುದು.
यस्मान्नोद्विजते लोकः लोकान्नोद्विजते च यः ।
हर्षामर्षभयोद्वेगैः मुक्तो यः स च मे प्रियः ॥ १२-१५
ಯಸ್ಮಾನ್ನೋದ್ವಿಜತೇ ಲೋಕಃ ಲೋಕಾನ್ನೋದ್ವಿಜತೇ ಚ ಯಃ
ಹರ್ಷಾಮರ್ಷಭಯೋದ್ವೇಗೈಃ ಮುಕ್ತೋ ಯಃ ಸ ಚ ಮೇ ಪ್ರಿಯಃ 12.15
ಅಂದರೆ ನಿಜವಾದ ಮತ್ತು
ಉತ್ತಮವಾದ ಭಕ್ತರು ತಮ್ಮ ಮಾತು ಕಾರ್ಯಗಳಿಂದ ಯಾರಿಗೂ ತೊಂದರೆ ಕೊಡುವುದಿಲ್ಲ ಮತ್ತು ದಯಾಮಯಿಯಾಗಿರುತ್ತಾರೆ.
ಬೇರೆಯವರು ತೊಂದರೆ
ಅಥವಾ ಕಷ್ಟ ಕೊಟ್ಟರೂ ಕೂಡ ಅಶಾಂತರಾಗದೆ ಶಾಂತವಾಗಿರುತ್ತಾರೆ. ಬೇರೆಯವರ ಹೊಗಳಿಕೆ ತೆಗಳಿಕೆಗಳಿಗೆ
ಮರುಳಾಗದೆ ಎಲ್ಲಾ ಪರಿಸ್ಥಿತಿಗಳಲ್ಲೂ ಸ್ಥಿರವಾಗಿರುತ್ತಾರೆ.
ಅತಿಯಾದ ಉತ್ಸಾಹ,
ಅಸೂಯೆ, ಭಯ ಮತ್ತು ಮಾನಸಿಕ ತಳಮಳಗಳಿಂದ ಮುಕ್ತರಾಗಿರುತ್ತಾರೆ, ಅಂದರೆ ಅದರಿಂದ ಪ್ರಭಾವಿತರಾಗುವುದಿಲ್ಲ.
ಬೌತಿಕ ಮತ್ತು ಬೌಧಿಕ ಜ್ಞಾನಕ್ಕಿಂತ ಅಂತರಂಗದ ಶುದ್ಧತೆ
ಮತ್ತು ಪ್ರೀತಿ ಜಾಸ್ತಿಯಾಗಿರುತ್ತದೆ.
ಭೌತಿಕ – (Physical) ಎಂಬುದು ಶರೀರ ಮತ್ತು ಕಣ್ಣಿಗೆ ಕಾಣುವ ವಸ್ತುಗಳಿಗೆ
ಸಂಬಂಧಿಸಿದ್ದಾಗಿದೆ.
ಬೌದ್ಧಿಕ – (Intellectual/Mental) ಎಂಬುದು ಮನಸ್ಸು ಮತ್ತು ಜ್ಞಾನಕ್ಕೆ
ಸಂಬಂಧಿಸಿದ್ದಾಗಿದೆ.
अनपेक्षः शुचिर्दक्षः उदासीनो गतव्यथः ।
सर्वारम्भपरित्यागी यो मद्भक्तः स मे प्रियः ॥ १२-१६
ಅನಪೇಕ್ಷಃ ಶುಚಿರ್ದಕ್ಷಃ ಉದಾಸೀನೋ ಗತವ್ಯಥಃ
ಸರ್ವಾರಮ್ಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ 12.16
ಇಲ್ಲಿ ಭಗವಂತನಲ್ಲಿ ಶುದ್ಧವಾದ ಭಕ್ತಿ ಇಡುವ
ನಿಜವಾದ ಭಕ್ತರ ಲಕ್ಷಣ ಗಳನ್ನು
ವಿವರಿಸಲಾಗಿದೆ -
ಅನಪೇಕ್ಷಃ ಅಂದರೆ ಯಾವುದೇ ಆಸೆ ಇಲ್ಲದವನು
ಮತ್ತುಏನು ಸಿಗುತ್ತದೊ ಅದರಲ್ಲೆ ಸಂತೋಷಪಟ್ಟುಕೊಳ್ಳುವವನು
ಅಂತ. ಯಾರು ಪ್ರಪಂಚದ ವಸ್ತುಗಳ ಮೇಲೆ ಅಥವಾ ಫಲಿತಾಂಶದ ಮೇಲೆ, ಲೌಕಿಕ ಲಾಭಗಳ ಮೇಲೆ ಆಸೆ ಆಸಕ್ತಿ ಇಟ್ಟುಕೊಳ್ಳದೆ
ಕೇವಲ ಆದ್ಯಾತ್ಮಿಕದ ಮೇಲೆ ಆಸಕ್ತಿ ಆಕರ್ಷಣೆ ಇಟ್ಟುಕೊಂಡಿರುತ್ತಾರೆ ಅಂತವರು.
ಶುಚಿಃ ಅಂದರೆ ನಿರ್ಮಲ ಮತ್ತು ನಿರಾಳವಾಗಿರುವುದು. ಯಾರು
ದೇಹ ಮತ್ತು ಮನಸ್ಸು ಎರಡರಲ್ಲೂ ಶುದ್ಧತೆಯನ್ನು ಕಾಪಾಡಿಕೊಂಡಿರುತ್ತಾರೆ. ಆ ಮೇಲೆ ಆಂತರಿಕ ಶುದ್ಧತೆ
ಅಂದರೆ ದುರಾಸೆ, ಕೋಪ, ಅಶ್ಲೀಲತೆ ಮುಂತಾದ ಕಲ್ಮಷಗಳಿಂದ ಮುಕ್ತರಾಗಿರುತ್ತಾರೆ ಅಂತವರು.
‘ಕಲ್ಮಶ’ - ಎಂದರೆ ಕೊಳೆ, ಕಸ, ಮಲಿನ ಅಥವಾ
ದೋಷ.
'ಕಲ್ಮಷ' - ಎಂದರೆ ಮನಸ್ಸಿನ ಅಥವಾ ವಸ್ತುವಿನ
ಅಪವಿತ್ರತೆ.
ಮೈ ಮೇಲೆ ಕೊಳೆ, ಮನಸ್ಸಿನಲ್ಲಿ
ಕೆಟ್ಟ ಯೋಚನೆ, ಬಾಯಲ್ಲಿ ಕೆಟ್ಟ ಮಾತು ಇವು ಮೈಲಿಗೆ. ಒಳ್ಳೆಯದನ್ನು
ಕೇಳುವುದು, ಒಳ್ಳೆಯದನ್ನು ನೋಡುವುದು, ಒಳ್ಳೆಯದನ್ನು ಯೋಚಿಸುವುದು, ಒಳ್ಳೆಯದನ್ನು ಮಾತಾಡುವುದು ನಿಜವಾದ
ಮಡಿ.
ದಕ್ಷಃ ಅಂದರೆ ತನ್ನ ಸ್ವಧರ್ಮ ಅಥವಾ ಕರ್ತವ್ಯಗಳನ್ನು
ಅರಿತು, ಅವುಗಳನ್ನು ನಿಷ್ಠೆಯಿಂದ, ದಕ್ಷತೆಯಿಂದ ನಿರ್ವಹಿಸುವುದು. ಯಾವಾಗಲೂ ಜಾಗರೂಕನಾಗಿದ್ದು ತನ್ನ
ಕರ್ತವ್ಯ ಮತ್ತು ಸೇವೆ ಮಾಡುವುದು.
ಉದಾಸೀನಃ (ಉತ ಆಸೀನಃ) ಅಂದರೆ ಎಲ್ಲರೊಂದಿಗೂ ಸಮಾನವಾಗಿರುವ ಅಥವಾ ತಟಸ್ಥನಾದ
ಅಂತ. ಜೀವನದ ಏರಿಳಿತಗಳು, ಸುಖ ದುಃಖಗಳು ಅಥವಾ ವಿವಾದ ಜಗಳಗಳಲ್ಲಿ ತಟಸ್ಥನಾಗಿ (neutral) ಇದ್ದು,
ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ಆಧ್ಯಾತ್ಮಿಕ ಚಿಂತನೆಯಲ್ಲಿರುವುದು. ಇದನ್ನು ಅಂತರ್ಯಾಮಿಯಾಗಿರುವುದು
ಅಂತಲೂ ಹೇಳ ಬಹುದು.
ಗತವ್ಯಥಃ: ಅಂದರೆ ಯಾವುದೇ ದುಃಖ
ಅಥವಾ ಭಯವಿಲ್ಲದವನು ಅಂತ. ಕಷ್ಟ ಬಂದಾಗ
ಅಳುಕದೆ ಆತಂಕ ದುಃಖಗಳಿಂದ ಮುಕ್ತರಾಗಿ ಅಂದರೆ ಯಾವುದಕ್ಕೂ ಹೆದರದೆ ಅಥವಾ ದುಃಖಪಡದೆ ಮತ್ತು ಏನೇ ಆದರೂ
ಬೇಸರ ಪಡದೆ ಸದಾ ಆನಂದವಾಗಿದ್ದು ಪರಮಾತ್ಮನ ಮೇಲೆ ಸಂಪೂರ್ಣ ವಿಶ್ವಾಸವಿಡುವುದು.
ಸರ್ವಾರಂಭ ಪರಿತ್ಯಾಗೀ: ಅಂದರೆ ಫಲದ ಆಸೆಯಿಲ್ಲದೆ
ಹೊಸ ಕೆಲಸಗಳನ್ನು ಆರಂಭಿಸದವನು. ಯಾವ ಕೆಲಸವನ್ನೂ ಲಾಭ ನಷ್ಟದ ಆಲೋಚನೆ ಅಥವಾ ಸ್ವಾರ್ಥದ ಉದ್ದೇಶದಿಂದ
ಮಾಡದೆ, ತಾನು ಮಾಡುವ ಪ್ರತಿಯೊಂದು ಕೆಲಸವನ್ನೂ ಏನೂ ಫಲಾಪೇಕ್ಷೆಯಿಲ್ಲದೆ ಪರಮಾತ್ಮನಿಗೆ ಅರ್ಪಿಸುವುದು.
ಚುಟುಕಾಗಿ ಹೇಳುವುದಾದರೆ
ಯಾವ ಲೌಕಿಕ ಆಸೆಗಳನ್ನೂ ಇಟ್ಟುಕೊಳ್ಳದೆ ಶರೀರ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಂಡು, ಸುಖ-ದುಃಖಗಳಲ್ಲಿ ಸಮಾನನಾಗಿದ್ದು ಸಮತೋಲನದ ಜೀವನ ನಡೆಸುತ್ತಾ ಆಧ್ಯಾತ್ಮಿಕ ಜೀವನ ನಡೆಸುವವರು ಪರಮಾತ್ಮನಿಗೆ ಪ್ರಿಯರು.
यो न हृष्यति न द्वेष्टि न शोचति न काङ्क्षति ।
शुभाशुभपरित्यागी भक्तिमान्यः स मे प्रियः ॥ १२-१७
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಙ್ಕ್ಷತಿ
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ 12.17
समः शत्रौ च मित्रे च तथा मानापमानयोः ।
शीतोष्णसुखदुःखेषु समः सङ्गविवर्जितः ॥ १२-१८
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ
ಶೀತೋಷ್ಣಸುಖದುಃಖೇಷು ಸಮಃ ಸಙ್ಗವಿವರ್ಜಿತಃ 12.18
तुल्यनिन्दास्तुतिर्मौनी सन्तुष्टो येनकेनचित् ।
अनिकेतः स्थिरमतिः भक्तिमान्मे प्रियो नरः ॥ १२-१९
ತುಲ್ಯನಿನ್ದಾಸ್ತುತಿರ್ಮೌನೀ ಸನ್ತುಷ್ಟೋ ಯೇನಕೇನಚಿತ್
ಅನಿಕೇತಃ ಸ್ಥಿರಮತಿಃ ಭಕ್ತಿಮಾನ್ಮೇ ಪ್ರಿಯೋ ನರಃ 12.19
ये तु धर्म्यामृतमिदं यथोक्तं पर्युपासते ।
श्रद्दधाना मत्परमाः भक्तास्तेऽतीव मे प्रियाः ॥ १२-२०
ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ
ಶ್ರದ್ದಧಾನಾ ಮತ್ಪರಮಾಃ ಭಕ್ತಾಸ್ತೇತೀವ ಮೇ ಪ್ರಿಯಾಃ 12.20
श्रीकृष्णार्जुनसंवादे भक्तियोगो नाम द्वादशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಭಕ್ತಿ ಯೊಗೊ ನಾಮ ದ್ವಾದಶೋಧ್ಯಾಯಃ
No comments:
Post a Comment