Pages

ಅಧ್ಯಾಯ - ೦೪ [04]

 

श्रीमद्भगवद्गीता
ಶ್ರೀಮದ್ಭಗವದ್ಗೀತಾ
चतुर्थोऽध्यायः
ಚತುರ್ಥೊಧ್ಯಾಯಃ
ज्ञानकर्मसन्न्यासयोगः
ಜ್ಞಾನಕರ್ಮ ಸಂನ್ಯಾಸಯೊಗಃ

04-01
श्रीभगवानुवाच
इमं विवस्वते योगं   प्रोक्तवानहमव्ययम् ।
विवस्वान् मनवे प्राह   मनुरिक्ष्वाकवेऽब्रवीत् ॥ ४-१
ಶ್ರೀ ಭಗವಾನುವಾಚ
ಇಮಂ ವಿವಸ್ವತೇ ಯೋಗಂ   ಪ್ರೋಕ್ತವಾನಹಮವ್ಯಯಮ್  
ವಿವಸ್ವಾನ್ ಮನವೇ ಪ್ರಾಹ   ಮನುರಿಕ್ಷ್ವಾಕವೇಬ್ರವೀತ್ 4.1
 
04-02
एवं परम्पराप्राप्तम्   इमं राजर्षयो विदुः ।
स कालेनेह महता   योगो नष्टः परन्तप ॥ ४-२
ಏವಂ ಪರಮ್ಪರಾಪ್ರಾಪ್ತಂ   ಇಮಂ ರಾಜರ್ಷಯೋ ವಿದುಃ
ಸ ಕಾಲೇನೇಹ ಮಹತಾ   ಯೋಗೋ ನಷ್ಟಃ ಪರನ್ತಪ 4.2
 
04-03
स एवायं मया तेऽद्य   योगः प्रोक्तः पुरातनः ।
भक्तोऽसि मे सखा चेति   रहस्यं ह्येतदुत्तमम् ॥ ४-३
ಸ ಏವಾಯಂ ಮಯಾ ತೇದ್ಯ   ಯೋಗಃ ಪ್ರೋಕ್ತಃ ಪುರಾತನಃ
ಭಕ್ತೋಸಿ ಮೇ ಸಖಾ ಚೇತಿ    ರಹಸ್ಯಂ ಹ್ಯೇತದುತ್ತಮಮ್ 4.3
 
04-04
अर्जुन  उवाच
अपरं भवतो जन्म   परं जन्म विवस्वतः ।
कथमेतद्विजानीयां   त्वमादौ प्रोक्तवानिति ॥ ४-४
ಅರ್ಜುನ ಉವಾಚ  
ಅಪರಂ ಭವತೋ ಜನ್ಮ   ಪರಂ ಜನ್ಮ ವಿವಸ್ವತಃ
ಕಥಮೇತದ್ವಿಜಾನೀಯಾಂ   ತ್ವಮಾದೌ ಪ್ರೋಕ್ತವಾನಿತಿ 4.4
 
04-05
श्रीभगवानुवाच
बहूनि मे व्यतीतानि   जन्मानि तव चार्जुन ।
तान्यहं वेद सर्वाणि   न त्वं वेत्थ परन्तप ॥ ४-५
ಶ್ರೀ ಭಗವಾನುವಾಚ
ಬಹೂನಿ ಮೇ ವ್ಯತೀತಾನಿ   ಜನ್ಮಾನಿ ತವ ಚಾರ್ಜುನ
ತಾನ್ಯಹಂ ವೇದ ಸರ್ವಾಣಿ   ನ ತ್ವಂ ವೇತ್ಥ ಪರನ್ತಪ 4.5
 
04-06
अजोऽपि सन्नव्ययात्मा   भूतानामीश्वरोऽपि सन् ।
प्रकृतिं स्वामधिष्ठाय   संभवाम्यात्ममायया ॥ ४-६
ಅಜೋಪಿ ಸನ್ನವ್ಯಯಾತ್ಮಾ   ಭೂತಾನಾಮೀಶ್ವರೋಪಿ ಸನ್
ಪ್ರಕೃತಿಂ ಸ್ವಾಮಧಿಷ್ಠಾಯ   ಸಂಭವಾಮ್ಯಾತ್ಮಮಾಯಯಾ 4.6
 
04-07
यदा यदा हि धर्मस्य   ग्लानिर्भवति भारत ।
अभ्युत्थानमधर्मस्य   तदात्मानं सृजाम्यहम् ॥ ४-७
ಯದಾ ಯದಾ ಹಿ ಧರ್ಮಸ್ಯ   ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ   ತದಾತ್ಮಾನಂ ಸೃಜಾಮ್ಯಹಮ್ 4.7
 
04-08
परित्राणाय साधूनां   विनाशाय च दुष्कृताम् ।
धर्मसंस्थापनार्थाय   संभवामि युगे युगे ॥ ४-८
ಪರಿತ್ರಾಣಾಯ ಸಾಧೂನಾಂ   ವಿನಾಶಾಯ ಚ ದುಷ್ಕೃತಾಮ್
ಧರ್ಮಸಂಸ್ಥಾಪನಾರ್ಥಾಯ   ಸಂಭವಾಮಿ ಯುಗೇ ಯುಗೇ 4.8
 
04-09
जन्म कर्म च मे दिव्यम्   एवं यो वेत्ति तत्त्वतः ।
त्यक्त्वा देहं पुनर्जन्म   नैति मामेति सोऽर्जुन ॥ ४-९
ಜನ್ಮ ಕರ್ಮ ಚ ಮೇ ದಿವ್ಯಮ್   ಏವಂ ಯೋ ವೇತ್ತಿ ತತ್ತ್ವತಃ
ತ್ಯಕ್ತ್ವಾ ದೇಹಂ ಪುನರ್ಜನ್ಮ   ನೈತಿ ಮಾಮೇತಿ ಸೋರ್ಜುನ 4.9
 
04-10
वीतरागभयक्रोधाः   मन्मया मामुपाश्रिताः ।
बहवो ज्ञानतपसा   पूता मद्भावमागताः ॥ ४-१०
ವೀತರಾಗಭಯಕ್ರೋಧಾಃ    ಮನ್ಮಯಾ ಮಾಮುಪಾಶ್ರಿತಾಃ
ಬಹವೋ ಜ್ಞಾನತಪಸಾ   ಪೂತಾ ಮದ್ಭಾವಮಾಗತಾಃ 4.10

04-11
ये यथा मां प्रपद्यन्ते   तांस्तथैव भजाम्यहम् ।
मम वर्त्मानुवर्तन्ते   मनुष्याः पार्थ सर्वशः ॥ ४-११
ಯೇ ಯಥಾ ಮಾಂ ಪ್ರಪದ್ಯನ್ತೇ   ತಾಂಸ್ತಥೈವ ಭಜಾಮ್ಯಹಮ್
ಮಮ ವರ್ತ್ಮಾನುವರ್ತನ್ತೇ   ಮನುಷ್ಯಾಃ ಪಾರ್ಥ ಸರ್ವಶಃ 4.11
 
04-12
काङ्क्षन्तः कर्मणां सिद्धिं   यजन्त इह देवताः ।
क्षिप्रं हि मानुषे लोके   सिद्धिर्भवति कर्मजा ॥ ४-१२
ಕಾಙ್ಕ್ಷನ್ತಃ ಕರ್ಮಣಾಂ ಸಿದ್ಧಿಂ   ಯಜನ್ತ ಇಹ ದೇವತಾಃ
ಕ್ಷಿಪ್ರಂ ಹಿ ಮಾನುಷೇ ಲೋಕೇ   ಸಿದ್ಧಿರ್ಭವತಿ ಕರ್ಮಜಾ 4.12
 
04-13
चातुर्वर्ण्यं मया सृष्टं   गुणकर्मविभागशः ।
तस्य कर्तारमपि मां   विद्ध्यकर्तारमव्ययम् ॥ ४-१३
ಚಾತುರ್ವರ್ಣ್ಯಂ ಮಯಾ ಸೃಷ್ಟಂ   ಗುಣಕರ್ಮವಿಭಾಗಶಃ
ತಸ್ಯ ಕರ್ತಾರಮಪಿ ಮಾಂ   ವಿದ್ಧ್ಯಕರ್ತಾರಮವ್ಯಯಮ್ 4.13
 ಚಾತುರ್ವರ್ಣ್ಯಮ್  ಮಯಾ  ಸೃಷ್ಟಮ್  ಗುಣ-ಕರ್ಮ-ವಿಭಾಗಶಃ
ತಸ್ಯ  ಕರ್ತಾರಮ್  ಅಪಿ  ಮಾಮ್  ವಿದ್ಧಿ  ಅಕರ್ತಾರಮ್  ಅವ್ಯಯಮ್
 
ಮನುಷ್ಯರ ಆಂತರಿಕ ಗುಣಗಳು ಮತ್ತು ಅವರು ಮಾಡುವ ಕರ್ಮಗಳ ಆಧಾರದ ಮೇಲೆ ನಾಲ್ಕು ವರ್ಣಗಳ ವ್ಯವಸ್ಥೆಯನ್ನು ನನ್ನಿಂದಲೇ ಸೃಷ್ಟಿಸಲಾಗಿದೆ. ಈ ವ್ಯವಸ್ಥೆಯನ್ನು ಸೃಷ್ಟಿಸಿದವನು ನಾನೇ ಆಗಿದ್ದರೂ ಸಹ, ಅವ್ಯಯನಾದ (ಬದಲಾವಣೆ ಇಲ್ಲದ) ನನ್ನನ್ನು ನೀನು ಅಕರ್ತನೆಂದು (ಯಾವ ಕರ್ಮದ ಬಂಧನವೂ ಇಲ್ಲದವನು) ಎಂದು ತಿಳಿ.
 
ಮಾನವ ಸಮಾಜದ ಸಮತೋಲನ ಮತ್ತು ಸುಗಮ ನಿರ್ವಹಣೆಗಾಗಿ ನಾಲ್ಕು ವಿಭಾಗಗಳನ್ನು ಅಂದರೆ ಜನರ ವರ್ಗೀಕರಣವನ್ನು ಮಾಡಲಾಗಿದೆ.
 'ಗುಣಕರ್ಮವಿಭಾಗಶಃ' ಎಂದು ಈ ಶ್ಲೋಕದಲ್ಲಿ ಪ್ರಸ್ತಾಪಿಸಲಾಗಿದೆ. ಇದರರ್ಥ, ಈ ವಿಭಜನೆಯು ಒಬ್ಬ ವ್ಯಕ್ತಿಯು ಯಾವ ಕುಟುಂಬದಲ್ಲಿ ಹುಟ್ಟಿದ್ದಾನೆ ಅಥವಾ ಯಾವ ಜಾತಿಯವನು ಎನ್ನುವ ಆಧಾರದ ಮೇಲೆ ಅಲ್ಲ, ಬದಲಿಗೆ ಅವನ ಯೋಗ್ಯತೆ, ಅವನಲ್ಲಿ ಯಾವ ಗುಣಗಳು (ಸ್ವಭಾವ/Aptitude) ಪ್ರಬಲವಾಗಿವೆ, ಮತ್ತು ಅವನು ಮಾಡುವ ಕರ್ಮ (ಕೆಲಸ/Action) ಇವುಗಳ ಆಧಾರದ ಮೇಲೆ ಆದುದಾಗಿದೆ. ಮನುಷ್ಯನ ಸ್ವಭಾವ ಪ್ರಕೃತಿಯ ಮೂರು ಗುಣಗಳಾದ ಸತ್ತ್ವ (ಜ್ಞಾನ/ಶಾಂತಿ), ರಜಸ್ (ಕ್ರಿಯಾಶೀಲತೆ/ಅಧಿಕಾರ) ಮತ್ತು ತಮಸ್ (ಸೋಮರಿತನ/ಅಜ್ಞಾನ) ಇವುಗಳ ಮಿಶ್ರಣದಿಂದ ರೂಪಿತವಾಗುತ್ತದೆ.
 
'ಅಕರ್ತಾರಮ್' ಅಂದರೆ ಏನನ್ನೂ ಮಾಡದವನು ಅಂತ. ಪರಮಾತ್ಮನನ್ನು ಸೂರ್ಯನಿಗೆ ಹೋಲಿಸಿದರೆ, ಸೂರ್ಯನು ಜಗತ್ತಿಗೆ ಬೆಳಕನ್ನು ನೀಡುತ್ತಾನೆ. ಸೂರ್ಯನ ಬೆಳಕಿನಿಂದ ಜಗತ್ತಿನಲ್ಲಿ ಎಲ್ಲವೂ ನಡೆಯುತ್ತದೆ — ಒಬ್ಬನು ಒಳ್ಳೆಯ ಕೆಲಸ ಮಾಡಬಹುದು, ಇನ್ನೊಬ್ಬನು ಕೆಟ್ಟ ಕೆಲಸ ಮಾಡಬಹುದು. ಅದಕ್ಕೆ ಸೂರ್ಯನು ಜವಾಬ್ದಾರನಲ್ಲ, ಅವನು ಕೇವಲ ಸಾಕ್ಷಿ. ಸೂರ್ಯನಿಗೆ ಆ ಕರ್ಮಗಳ ಪಾಪ-ಪುಣ್ಯ ತಟ್ಟುವುದಿಲ್ಲ. ಅದೇ ರೀತಿ, ಪರಮಾತ್ಮನು ಈ ಇಡೀ ಸೃಷ್ಟಿ ಮತ್ತು ಪ್ರಕೃತಿಯ ನಿಯಮಗಳನ್ನು ಸೃಷ್ಟಿಸಿದ್ದರೂ, ಅವನು ಈ ಭೌತಿಕ ನಿಯಮಗಳಿಗೆ ಬದ್ಧನಲ್ಲ. ಅವನು ಈ ಇಡೀ ಜಗತ್ತನ್ನು ಸೃಷ್ಟಿಸಿದ್ದರೂ ಸಹ, ಎಲ್ಲವನ್ನೂ ಮಾಡಿಯೂ ಕೇವಲ ಸಾಕ್ಷಿಯಾಗಿ, ಕರ್ಮದ ಫಲಗಳಿಂದ ಮುಕ್ತನಾಗಿದ್ದು, ಯಾವಾಗಲೂ ಅಲಿಪ್ತನಾಗಿರುತ್ತಾನೆ. ಆದರೆ, ಆಯಾ ಜೀವಿಗಳು ತಮ್ಮ ಗುಣಗಳಿಗೆ ತಕ್ಕಂತೆ ಕರ್ಮಗಳನ್ನು ಮಾಡುತ್ತಾ ಸುಖ-ದುಃಖಗಳನ್ನು ಅನುಭವಿಸುತ್ತಾರೆ. ಭಗವಂತನು ಇದಕ್ಕೆಲ್ಲ ಸಾಕ್ಷಿ ಮಾತ್ರ. ಆತನು ಯಾವುದೇ ಕರ್ಮಫಲಗಳಿಗೆ ಬದ್ಧನಾಗದ ಕಾರಣ ಆತನನ್ನು 'ಅಕರ್ತ' ಎಂದು ಕರೆಯಲಾಗುತ್ತದೆ. ನಾವೂ ಸಹ ಈ ಗುಣವನ್ನು ಅಳವಡಿಸಿಕೊಂಡು, ಕರ್ತೃತ್ವದ ಅಹಂಕಾರವಿಲ್ಲದೆ ಕರ್ಮಗಳನ್ನು ಮಾಡಿದರೆ ಕರ್ಮಬಂಧನದಿಂದ ಮುಕ್ತರಾಗಬಹುದು.
 
ಮನುಷ್ಯನ ಆಂತರಿಕ ಗುಣ, ಸ್ವಭಾವ ಮತ್ತು ಕರ್ಮಗಳ ಆಧಾರದ ಮೇಲೆ ನಿರ್ಧರಿಸಿರುವ ನಾಲ್ಕು ವರ್ಣಗಳು ಮತ್ತು ಸ್ವಭಾವ:
 
ಬ್ರಾಹ್ಮಣ ಸ್ವಭಾವ: ಸತ್ತ್ವ ಗುಣದ ಪ್ರಾಧಾನ್ಯತೆ ಇರುವವರು. ಇವರ ಸ್ವಭಾವ ಜ್ಞಾನಾರ್ಜನೆ, ಅಧ್ಯಾಪನ ಮತ್ತು ಆಧ್ಯಾತ್ಮಿಕ ಸಾಧನೆ ಮಾಡುವುದು.
(ಶಿಕ್ಷಕರು ಮತ್ತು ತತ್ವಜ್ಞಾನಿಗಳು)
(ಜ್ಞಾನ, ಶಾಂತಿ, ತಪಸ್ಸು, ಪವಿತ್ರತೆ)
 
ಕ್ಷತ್ರಿಯ ಸ್ವಭಾವ: ರಜೋ ಗುಣ ಪ್ರಧಾನವಾಗಿದ್ದು, ಸ್ವಲ್ಪ ಸತ್ತ್ವ ಗುಣ ಉಳ್ಳವರು. ಇವರು ರಕ್ಷಣೆ, ಆಡಳಿತ, ಮತ್ತು ನಾಯಕತ್ವ ವಹಿಸುವವರು.
(ಆಡಳಿತಗಾರರು, ಯೋಧರು ಮತ್ತು ರಕ್ಷಕರು)
(ಶೌರ್ಯ, ಸಾಹಸ, ಕ್ರಿಯಾಶೀಲತೆ, ರಕ್ಷಣೆ, ನಾಯಕತ್ವ, ಮಹತ್ವಾಕಾಂಕ್ಷೆ ಮತ್ತು ಭೋಗದ ಹಂಬಲ)
 
ವೈಶ್ಯ ಸ್ವಭಾವ: ರಜೋ ಗುಣ ಪ್ರಧಾನವಾಗಿದ್ದು, ಸ್ವಲ್ಪ ತಮೋಗುಣ ಹೊಂದಿರುವವರು. ಇವರು ವ್ಯಾಪಾರ, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗುವವರು.
(ವ್ಯಾಪಾರಿಗಳು, ರೈತರು ಮತ್ತು ಉದ್ಯಮಿಗಳು)
(ವ್ಯಾಪಾರ, ಕೃಷಿ, ಧನಾರ್ಜನೆ)
 
ಶೂದ್ರ ಸ್ವಭಾವ: ತಮೋ ಗುಣ ಪ್ರಧಾನವಾಗಿದ್ದು, ಸ್ವಲ್ಪ ರಜೋಗುಣ ಉಳ್ಳವರು. ಇವರು ಸಮಾಜದ ಇತರ ವರ್ಗಗಳಿಗೆ ಸೇವೆ ಸಲ್ಲಿಸುವ ಮತ್ತು ಶ್ರಮದಾಯಕ ಕೆಲಸ ಮಾಡುವ ಕಾರ್ಮಿಕರು.
(ಸಮಾಜದ ಇತರ ವರ್ಗಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಉಳ್ಳವರು)
(ಸೇವೆ, ಶ್ರಮದಾಯಕ ಕೆಲಸಗಳು)
 
ಇಂದಿನ ಸಮಾಜದಲ್ಲೂ ನಾವು ಈ ನಾಲ್ಕು ವಿಭಾಗಗಳನ್ನು ಕಾಣಬಹುದು. ಬುದ್ಧಿಜೀವಿಗಳು / ಸಂಶೋಧಕರು (ಬ್ರಾಹ್ಮಣ), ಯೋಧರು / ರಾಜಕಾರಣಿಗಳು / ಪೊಲೀಸರು (ಕ್ಷತ್ರಿಯ), ಉದ್ಯಮಿಗಳು / ವ್ಯಾಪಾರಿಗಳು (ವೈಶ್ಯ), ಮತ್ತು ಕಾರ್ಮಿಕರು / ಉದ್ಯೋಗಿಗಳು (ಶೂದ್ರ). ಯಾವುದೇ ಒಂದು ಸುಸ್ಥಿರ ಸಮಾಜ ಸುಗಮವಾಗಿ ನಡೆಯಬೇಕಾದರೆ ಈ ನಾಲ್ಕೂ ವಿಭಾಗಗಳ ಅಗತ್ಯವಿದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ; ಎಲ್ಲರೂ ಸಮಾಜವೆಂಬ ವ್ಯವಸ್ಥೆಯ ಪ್ರಮುಖ ಭಾಗಗಳು. ಮತ್ತು ಅವರವರ ಸ್ಥಾನ ಮತ್ತು ಕರ್ತವ್ಯದಲ್ಲಿ ಅವರವರು ಮುಖ್ಯ ಮತ್ತು ಶ್ರೇಷ್ಠ.
 
04-14
न मां कर्माणि लिम्पन्ति   न मे कर्मफले स्पृहा ।
इति मां योऽभिजानाति   कर्मभिर्न स बध्यते ॥ ४-१४
ನ ಮಾಂ ಕರ್ಮಾಣಿ ಲಿಮ್ಪನ್ತಿ   ನ ಮೇ ಕರ್ಮಫಲೇ ಸ್ಪೃಹಾ
ಇತಿ ಮಾಂ ಯೋಭಿಜಾನಾತಿ   ಕರ್ಮಭಿರ್ನ ಸ ಬಧ್ಯತೇ 4.14
 
04-15
एवं ज्ञात्वा कृतं कर्म   पूर्वैरपि मुमुक्षुभिः ।
कुरु कर्मैव तस्मात्त्वं   पूर्वैः पूर्वतरं कृतम् ॥ ४-१५
ಏವಂ ಜ್ಞಾತ್ವಾ ಕೃತಂ ಕರ್ಮ   ಪೂರ್ವೈರಪಿ ಮುಮುಕ್ಷುಭಿಃ
ಕುರು ಕರ್ಮೈವ ತಸ್ಮಾತ್ತ್ವಂ   ಪೂರ್ವೈಃ ಪೂರ್ವತರಂ ಕೃತಮ್ 4.15
 
04-16
किं कर्म किमकर्मेति   कवयोऽप्यत्र मोहिताः ।
तत्ते कर्म प्रवक्ष्यामि   यज्ज्ञात्वा मोक्ष्यसेऽशुभात् ॥ ४-१६
ಕಿಂ ಕರ್ಮ ಕಿಮಕರ್ಮೇತಿ   ಕವಯೋಪ್ಯತ್ರ ಮೋಹಿತಾಃ
ತತ್ತೇ ಕರ್ಮ ಪ್ರವಕ್ಷ್ಯಾಮಿ   ಯಜ್ಜ್ಞಾತ್ವಾ ಮೋಕ್ಷ್ಯಸೇಶುಭಾತ್ 4.16
 
04-17
कर्मणो ह्यपि बोद्धव्यं   बोद्धव्यं च विकर्मणः ।
अकर्मणश्च बोद्धव्यं   गहना कर्मणो गतिः ॥ ४-१७
ಕರ್ಮಣೋ ಹ್ಯಪಿ ಬೋದ್ಧವ್ಯಂ   ಬೋದ್ಧವ್ಯಂ ಚ ವಿಕರ್ಮಣಃ
ಅಕರ್ಮಣಶ್ಚ ಬೋದ್ಧವ್ಯಂ   ಗಹನಾ ಕರ್ಮಣೋ ಗತಿಃ 4.17
 
04-18
कर्मण्यकर्म यः पश्येत्   अकर्मणि च कर्म यः ।
स बुद्धिमान् मनुष्येषु   स युक्तः कृत्स्नकर्मकृत् ॥ ४-१८
ಕರ್ಮಣ್ಯಕರ್ಮ ಯಃ ಪಶ್ಯೇತ್   ಅಕರ್ಮಣಿ ಚ ಕರ್ಮ ಯಃ
ಸ ಬುದ್ಧಿಮಾನ್ ಮನುಷ್ಯೇಷು    ಸ ಯುಕ್ತಃ ಕೃತ್ಸ್ನಕರ್ಮಕೃತ್ 4.18
 
04-19
यस्य सर्वे समारम्भाः   कामसङ्कल्पवर्जिताः ।
ज्ञानाग्निदग्धकर्माणं   तमाहुः पण्डितं बुधाः ॥ ४-१९
ಯಸ್ಯ ಸರ್ವೇ ಸಮಾರಮ್ಭಾಃ    ಕಾಮಸಙ್ಕಲ್ಪವರ್ಜಿತಾಃ
ಜ್ಞಾನಾಗ್ನಿದಗ್ಧಕರ್ಮಾಣಂ   ತಮಾಹುಃ ಪಣ್ಡಿತಂ ಬುಧಾಃ 4.19
 
04-20
त्यक्त्वा कर्मफलासङ्गं   नित्यतृप्तो निराश्रयः ।
कर्मण्यभिप्रवृत्तोऽपि   नैव किञ्चित्करोति सः ॥ ४-२०
ತ್ಯಕ್ತ್ವಾ ಕರ್ಮಫಲಾಸಙ್ಗಂ   ನಿತ್ಯತೃಪ್ತೋ ನಿರಾಶ್ರಯಃ
ಕರ್ಮಣ್ಯಭಿಪ್ರವೃತ್ತೋಪಿ   ನೈವ ಕಿಞ್ಚಿತ್ಕರೋತಿ ಸಃ 4.20

04-21
निराशीर्यतचित्तात्मा   त्यक्तसर्वपरिग्रहः ।
शारीरं केवलं कर्म   कुर्वन्नाप्नोति किल्बिषम् ॥ ४-२१
ನಿರಾಶೀರ್ಯತಚಿತ್ತಾತ್ಮಾ   ತ್ಯಕ್ತಸರ್ವಪರಿಗ್ರಹಃ
ಶಾರೀರಂ ಕೇವಲಂ ಕರ್ಮ   ಕುರ್ವನ್ನಾಪ್ನೋತಿ ಕಿಲ್ಬಿಷಮ್ 4.21
 
04-22
यदृच्छालाभसन्तुष्टः   द्वन्द्वातीतो विमत्सरः ।
समः सिद्धावसिद्धौ च   कृत्वापि न निबध्यते ॥ ४-२२
ಯದೃಚ್ಛಾಲಾಭಸನ್ತುಷ್ಟಃ   ದ್ವನ್ದ್ವಾತೀತೋ ವಿಮತ್ಸರಃ
ಸಮಃ ಸಿದ್ಧಾವಸಿದ್ಧೌ ಚ   ಕೃತ್ವಾಪಿ ನ ನಿಬಧ್ಯತೇ 4.22
 
04-23
गतसङ्गस्य मुक्तस्य   ज्ञानावस्थितचेतसः ।
यज्ञायाचरतः कर्म   समग्रं प्रविलीयते ॥ ४-२३
ಗತಸಙ್ಗಸ್ಯ ಮುಕ್ತಸ್ಯ   ಜ್ಞಾನಾವಸ್ಥಿತಚೇತಸಃ
ಯಜ್ಞಾಯಾಚರತಃ ಕರ್ಮ   ಸಮಗ್ರಂ ಪ್ರವಿಲೀಯತೇ 4.23
 
04-24
ब्रह्मार्पणं ब्रह्महविः  ब्रह्माग्नौ ब्रह्मणा हुतम् ।
ब्रह्मैव तेन गन्तव्यं   ब्रह्मकर्मसमाधिना ॥ ४-२४
ಬ್ರಹ್ಮಾರ್ಪಣಂ ಬ್ರಹ್ಮಹವಿಃ   ರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್
ಬ್ರಹ್ಮೈವ ತೇನ ಗನ್ತವ್ಯಂ   ಬ್ರಹ್ಮಕರ್ಮಸಮಾಧಿನಾ 4.24
 
04-25
दैवमेवापरे यज्ञं   योगिनः पर्युपासते ।
ब्रह्माग्नावपरे यज्ञं   यज्ञेनैवोपजुह्वति ॥ ४-२५
ದೈವಮೇವಾಪರೇ ಯಜ್ಞಂ   ಯೋಗಿನಃ ಪರ್ಯುಪಾಸತೇ
ಬ್ರಹ್ಮಾಗ್ನಾವಪರೇ ಯಜ್ಞಂ   ಯಜ್ಞೇನೈವೋಪಜುಹ್ವತಿ 4.25
 
04-26
श्रोत्रादीनीन्द्रियाण्यन्ये   संयमाग्निषु जुह्वति ।
शब्दादीन्विषयानन्य   इन्द्रियाग्निषु जुह्वति ॥ ४-२६
ಶ್ರೋತ್ರಾದೀನೀನ್ದ್ರಿಯಾಣ್ಯನ್ಯೇ   ಸಂಯಮಾಗ್ನಿಷು ಜುಹ್ವತಿ
ಶಬ್ದಾದೀನ್ವಿಷಯಾನನ್ಯ   ಇನ್ದ್ರಿಯಾಗ್ನಿಷು ಜುಹ್ವತಿ 4.26
 
04-27
सर्वाणीन्द्रियकर्माणि   प्राणकर्माणि चापरे ।
आत्मसंयमयोगाग्नौ   जुह्वति ज्ञानदीपिते ॥ ४-२७
ಸರ್ವಾಣೀನ್ದ್ರಿಯಕರ್ಮಾಣಿ   ಪ್ರಾಣಕರ್ಮಾಣಿ ಚಾಪರೇ
ಆತ್ಮಸಂಯಮಯೋಗಾಗ್ನೌ   ಜುಹ್ವತಿ ಜ್ಞಾನದೀಪಿತೇ 4.27
 
04-28
द्रव्ययज्ञास्तपोयज्ञाः   योगयज्ञास्तथापरे ।
स्वाध्यायज्ञानयज्ञाश्च   यतयः संशितव्रताः ॥ ४-२ ८
ದ್ರವ್ಯಯಜ್ಞಾಸ್ತಪೋಯಜ್ಞಾಃ    ಯೋಗಯಜ್ಞಾಸ್ತಥಾಪರೇ
ಸ್ವಾಧ್ಯಾಯಜ್ಞಾನಯಜ್ಞಾಶ್ಚ   ಯತಯಃ ಸಂಶಿತವ್ರತಾಃ 4.28
 ದ್ರವ್ಯ – ಯಜ್ಞಾಃ - ತಪಃ – ಯಜ್ಞಾಃ  ಯೋಗ – ಯಜ್ಞಾಃ – ತಥಾ – ಅಪರೇ
ಸ್ವಾಧ್ಯಾಯ - ಜ್ಞಾನ – ಯಜ್ಞಾಃ – ಚ  ಯತಯಃ  ಸಂಶಿತ - ವ್ರತಾಃ.
 
ಕೆಲವರು ಧನ-ಸಂಪತ್ತು, ಸೊತ್ತುಗಳನ್ನು ದಾನ ಮಾಡಿ ದ್ರವ್ಯದಾನರೂಪವಾದ ಯಜ್ಞವನ್ನು ಮಾಡುತ್ತಾರೆ. ಕೆಲವರು ತಪೋರೂಪದ ಯಜ್ಞವನ್ನು ಮಾಡುತ್ತಾರೆ. ಕೆಲವರು ಚಿತ್ತವೃತ್ತಿ ನಿರೋಧದ ಮೂಲಕ ಅಷ್ಟಾಂಗ ಯೋಗರೂಪದ ಯಜ್ಞವನ್ನು ಮಾಡುತ್ತಾರೆ. ಮತ್ತೆ ಕೆಲವರು ಸ್ವಾಧ್ಯಾಯ ರೂಪದ ಮತ್ತು ಜ್ಞಾನರೂಪದ ಯಜ್ಞಗಳನ್ನು ಮಾಡುತ್ತಾರೆ.
 
ಧನದಾನ, ಅನ್ನದಾನ, ವಿಧ್ಯಾದಾನ ಇತ್ಯಾದಿ ದಾನಗಳನ್ನು ಯೋಗ್ಯರಾದವರಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದನ್ನು ಅವರೊಳಗಿರುವ ಪರಮಾತ್ಮ ಪ್ರಸನ್ನನಾಗಲಿ ಎಂದು ಕೊಡುವುದು ದ್ರವ್ಯಯಜ್ಞ.

ನಿರಂತರ ಧ್ಯಾನ, ಪರಮಾತ್ಮನ ಚಿಂತನೆಗೆ ಬೇಕಾದ ಆತ್ಮ ಸಂಯಮ ಅಂದರೆ discipline, ಇದನ್ನು ಪಾಲಿಸುವುದು ತಪೋಯಜ್ಞ.

ಅಷ್ಟಾಂಗ ಯೋಗ ಅಲ್ಲದೆ ವಿಧ ವಿಧವಾದ ಕರ್ಮಯೋಗವನ್ನು ಪರಮಾತ್ಮನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು ಯೋಗಯಜ್ಞ.

ತನಗೆ ಸಂಬಂಧಪಟ್ಟದ್ದನ್ನು ಓದುವುದು, ವೇದಾಧ್ಯಯನ, ಪರಮಾತ್ಮ ಎಷ್ಟು ಬುದ್ದಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದು. ನಾವು ತಿಳಿದುಕೊಂಡದ್ದನ್ನು ಇತರರಿಗೆ ಹಂಚುವುದು. ಇವೆಲ್ಲ ಸ್ವಾಧ್ಯಾಯ ಜ್ಞಾನಯಜ್ಞ.
 
04-29
अपाने जुह्वति प्राणं   प्राणेऽपानं तथाऽपरे ।
प्राणापानगती रुद्ध्वा   प्राणायामपरायणाः ॥ ४-२ ९
ಅಪಾನೇ ಜುಹ್ವತಿ ಪ್ರಾಣಂ   ಪ್ರಾಣೇಪಾನಂ ತಥಾಪರೇ
ಪ್ರಾಣಾಪಾನಗತೀ ರುದ್ಧ್ವಾ   ಪ್ರಾಣಾಯಾಮಪರಾಯಣಾಃ 4.29
ಅಪಾನೇ ಜುಹ್ವತಿ ಪ್ರಾಣಮ್  ಪ್ರಾಣೇ  - ಅಪಾನಮ್ ತಥಾ - ಅಪರೇ
ಪ್ರಾಣ - ಅಪಾನ – ಗತೀ  ರುದ್ಧ್ವಾ  ಪ್ರಾಣಾಯಾಮ - ಪರಾಯಣಾಃ.
 
 ಕೆಲವರು ಹೊರಹೋಗುವ ಪ್ರಾಣವಾಯುವನ್ನು ಒಳಬರುವ ಅಪಾನವಾಯುವಿನಲ್ಲಿ ಹೋಮ ಮಾಡುತ್ತಾರೆ (ಅರ್ಪಿಸುತ್ತಾರೆ). ಮತ್ತೆ ಕೆಲವರು ಒಳಬರುವ ಅಪಾನವಾಯುವನ್ನು ಹೊರಹೋಗುವ ಪ್ರಾಣವಾಯುವಿನಲ್ಲಿ ಅರ್ಪಿಸುತ್ತಾರೆ. ಇನ್ನು ಕೆಲವರು ಪ್ರಾಣ ಮತ್ತು ಅಪಾನಗಳ ಗತಿಯನ್ನು ತಡೆಹಿಡಿದು (ನಿಲ್ಲಿಸಿ) ಕುಂಬಕವೆಂಬ ಪ್ರಾಣಾಯಾಮವನ್ನು ಮಾಡುತ್ತಾರೆ.
 
ಉಸಿರಾಟದ ಕ್ರಿಯೆಯ ಮೇಲೆ ಹತೋಟಿ ಸಾಧಿಸುವುದೇ ಒಂದು ದೊಡ್ಡ ತಪಸ್ಸು ಅಥವಾ ಯಜ್ಞ. ಉಸಿರನ್ನು ಒಳಗೆಳೆದುಕೊಳ್ಳುವುದು (ಪೂರಕ), ಹೊರಹಾಕುವುದು (ರೇಚಕ) ಮತ್ತು ಅದನ್ನು ತಡೆಹಿಡಿಯುವುದು (ಕುಂಭಕ) ಇವನ್ನು ಮಾಡುವ ಮೂಲಕ ಯೋಗಿಗಳು ತಮ್ಮ ಪ್ರಾಣಶಕ್ತಿಯನ್ನು ನಿಯಂತ್ರಿಸುತ್ತಾರೆ. ಈ ರೀತಿಯ ಪ್ರಾಣಾಯಾಮದ ಸಾಧನೆಯು ಮನಸ್ಸನ್ನು ಶಾಂತಗೊಳಿಸಿ, ಇಂದ್ರಿಯಗಳನ್ನು ಹೊರಗಿನ ವಿಷಯಗಳಿಂದ ಹಿಂತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
 
ದೇಹದಲ್ಲಿ ಮೇಲ್ಮುಖವಾಗಿ ಚಲಿಸುವ ಉಸಿರು (ಹೊರಹೋಗುವ ಉಸಿರು) ಅಥವಾ ಮೂಲಾಧಾರದಿಂದ ಊರ್ದ್ವಮುಖವಾಗಿ ಸಹಸ್ರಾರದತ್ತ ಹರಿಯುವ ಜೀವ ಶಕ್ತಿ ಪ್ರಾಣ.
ದೇಹದಲ್ಲಿ ಕೆಳಮುಖವಾಗಿ ಚಲಿಸುವ ಉಸಿರು (ಒಳಬರುವ ಉಸಿರು) ಅಥವಾ ಮೇಲಿನಿಂದ ಕೆಳಗೆ ಹರಿಯುವ ಶಕ್ತಿ ಅಪಾನ.
ಈ ಎರಡು ಶಕ್ತಿಗಳನ್ನು ಹೃದಯದಲ್ಲಿ ಸ್ಥಗಿತಗೊಳಿಸುವುದು ಅಥವಾ ಉಸಿರನ್ನು ಒಳಗೆ ಅಥವಾ ಹೊರಗೆ ತಡೆಹಿಡಿಯುವುದು ಕುಂಭಕ.
ಇದು ಪ್ರಾಣಾಯಾಮ ಪರಾಯಣರು ಮಾಡುವ ಯಜ್ಞ. ಇದರಿಂದ ಏಕಾಗ್ರತೆ, ಆರೋಗ್ಯ ಮತ್ತು ಆಯಸ್ಸು ಕೂಡ ಹೆಚ್ಚುತ್ತದೆ. ನಮ್ಮ ಮನಸ್ಸು ಮತ್ತು ದೇಹದ ನಡುವೆ ಉಸಿರು (ಪ್ರಾಣ) ಒಂದು ಸೇತುವೆಯಂತೆ ಕೆಲಸ ಮಾಡುತ್ತದೆ. ಉಸಿರು ಚಂಚಲವಾದರೆ ಮನಸ್ಸು ಚಂಚಲವಾಗುತ್ತದೆ. ಉಸಿರನ್ನು ಪ್ರಾಣಾಯಾಮದ ಮೂಲಕ ನಿಯಂತ್ರಿಸಿದರೆ ಮನಸ್ಸನ್ನು ಸುಲಭವಾಗಿ ಹತೋಟಿಗೆ ತರಬಹುದು.
[ವಿವರಣೆ :  ಪತಾಂಜಲಿ ಯೋಗಸೂತ್ರದ ಐದನೇ ಅಧ್ಯಾಯದಲ್ಲಿದೆ.]
 
ಪರಾಯಣ = ನಿರತನಾಗಿರುವುದು, ತತ್ಪರನಾಗಿರುವುದು, ಅದನ್ನೇ ಮುಖ್ಯವಾಗಿ ನಂಬಿಕೊಂಡಿರುವುದು ಅಥವಾ ಯಾವುದೋ ಒಂದರಲ್ಲಿ ಸಂಪೂರ್ಣವಾಗಿ ಮುಳುಗಿರುವುದು.
ಪಾರಾಯಣ = ಗ್ರಂಥಗಳನ್ನು ಅಥವಾ ಪುಸ್ತಕಗಳನ್ನು ಮೊದಲಿನಿಂದ ಕೊನೆಯವರೆಗೆ ಶ್ರದ್ಧೆಯಿಂದ ಓದುವುದು ಅಥವಾ ಪಠಿಸುವುದು.
 
04-30
अपरे नियताहाराः   प्राणान्प्राणेषु जुह्वति ।
सर्वेऽप्येते यज्ञविदः   यज्ञक्षपितकल्मषाः ॥ ४-३०
ಅಪರೇ ನಿಯತಾಹಾರಾಃ    ಪ್ರಾಣಾನ್ಪ್ರಾಣೇಷು ಜುಹ್ವತಿ
ಸರ್ವೇಪ್ಯೇತೇ ಯಜ್ಞವಿದಃ   ಯಜ್ಞಕ್ಷಪಿತಕಲ್ಮಷಾಃ 4.30
ಅಪರೇ  ನಿಯತಾಹಾರಾಃ  ಪ್ರಾಣಾನ್  ಪ್ರಾಣೇಷು  ಜುಹ್ವತಿ
ಸರ್ವೇ  ಅಪಿ  ಏತೇ  ಯಜ್ಞವಿದಃ  ಯಜ್ಞ-ಕ್ಷಪಿತ-ಕಲ್ಮಷಾಃ
 
ಕೆಲವರು ನಿಯಮಿತವಾದ ಆಹಾರ ಸೇವನೆ ಮಾಡಿ ಪ್ರಾಣ ಮತ್ತು ಅಪಾನದ ಗತಿಯನ್ನು ನಿಯಂತ್ರಿಸಿ ಪ್ರಾಣಗಳನ್ನು ಪ್ರಾಣಗಳಲ್ಲಿಯೇ ಯಜ್ಞ ಮಾಡುತ್ತಾರೆ.
ಈ ತರದ ಸಾಧಕರು ಸಾಮಾನ್ಯವಾಗಿ ಯಜ್ಞಗಳನ್ನು ತಿಳಿದವರೂ ಮತ್ತು ಯಜ್ಞಗಳ ಮೂಲಕ ಪಾಪಗಳನ್ನು ನಾಶಮಾಡುವವರೂ ಆಗಿರುತ್ತಾರೆ.
 
ಇಲ್ಲಿ ನಿಯಮಿತವಾದ ಆಹಾರ ಸೇವನೆ ಅಂದರೆ - ನಾಲಿಗೆಯ ರುಚಿಗೆ ವಿಪರೀತ ಆಹಾರ ಸೇವನೆ ಮಾಡದೆ, ದೇಹದ ಪೋಷಣೆಗೆ ಅಗತ್ಯವಿರುವಷ್ಟೆ ತಿನ್ನುವುದು, ಮತ್ತು ಉಪ್ಪು, ಹುಳಿ, ಖಾರಗಳನ್ನು ಕಡಿಮೆ ಮಾಡಿ ಸಾತ್ವಿಕ ಆಹಾರ ಸೇವಿಸುವುದು ಅಂತ.
ಇದರಿಂದ ಇಂದ್ರಿಯಗಳಿಗೆ ಅನವಶ್ಯಕ ವಿಷಯಗಳ ಆಕರ್ಷಣೆ ಕಡಿಮೆಯಾಗುತ್ತದೆ, ಮತ್ತು ಇದರ ಪರಿಣಾಮ ಮನಸ್ಸಿನ ಮೇಲೆ ಆಗುತ್ತದೆ. ಈ ರೀತಿ ಆಹಾರ ನಿಯಂತ್ರಣದ ಮೂಲಕ ಮಾಡುವ ಸಾಧನೆ ಒಂದು ಯಜ್ಞ.
ಇನ್ನೊಂದು ವಿಧವಾದ ಯಜ್ಞಕ್ಕೆ "ಪ್ರಾಣಾನ್ ಪ್ರಾಣೇಷು ಜಹ್ವತಿ" ಎಂದು ಹೇಳಿದ್ದಾರೆ. ಅಂದರೆ ಪ್ರಾಣಗಳಲ್ಲಿ ಪ್ರಾಣವನ್ನು ಅರ್ಪಿಸಿ ಯಜ್ಞ ಮಾಡುವುದು. ಕೆಲವರು ಇದನ್ನೆ ಇಂದ್ರಿಯಗಳಲ್ಲಿ ಇಂದ್ರಿಯವನ್ನು ಯಜ್ಞ ಮಾಡುವುದು ಅಂತಲೂ ಹೇಳುತ್ತಾರೆ.
ಇಲ್ಲಿ ಇಂದ್ರಿಯಗಳು ಎನ್ನುವಾಗ, ಇಂದ್ರಿಯಾಭಿಮಾನಿ ದೇವತೆಗಳು ಎಂದು ತಿಳಿಯ ಬೇಕು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಂದು ಅಭಿಮಾನಿ ದೇವತೆ ಇದೆ. ಈ ದೇವತೆಗಳು ಕೆಲಸ ಮಾಡುವುದಕ್ಕೆ ನಿಯಮಿತ ಶಿಷ್ಟಾಚಾರ ಅಥವಾ ನಿಯಮಾವಳಿಯ ಪಾಲನೆ ಮಾಡುತ್ತವೆ, ಇದನ್ನು ಇಂಗ್ಲಿಷಿನಲ್ಲಿ protocol ಅನ್ನುತ್ತಾರೆ.
ನೀವು ಯಾವುದಾದರೂ ಒಂದು ಕಾರ್ಯಾಲಯಕ್ಕೆ ಹೋಗಿ ಒಂದು ಕೆಲಸ ಮಾಡಿಸ ಬೇಕಾದರೆ, ಆ ಕಾರ್ಯಾಲಯದ ನಿಯಮಾವಳಿ (protocol) ಅಂದರೆ ಅಲ್ಲಿ ಯಾರ್ಯಾರು ಯಾವ್ಯಾವುದಕ್ಕೆ ಹೊಣೆ ಮತ್ತು ಅಲ್ಲಿಯ ಕಾರ್ಯವಿಧಾನ ನಿಯಮಗಳು ಏನು ಎಂದು ಗೊತ್ತಿದ್ದರೆ, ನಿಮಗೆ ಯಾವ ಕೆಲಸಕ್ಕೆ ಯಾರನ್ನು ಹೇಗೆ  ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳ ಬಹುದು ಎಂದು ಗೊತ್ತಾಗುತ್ತದೆ. ಹಾಗೇನೇ ಇಲ್ಲಿಯೂ ಕೂಡ.
 
ಈ ಶ್ಲೋಕದಲ್ಲಿ ಆಹಾರ ಸಂಯಮ, ಇಂದ್ರಿಯ ನಿಗ್ರಹ ಮತ್ತು ಪ್ರಾಣಾಯಾಮದ ಆಧ್ಯಾತ್ಮಿಕ ಮಹತ್ವವನ್ನು ತಿಳಿಸಲಾಗಿದೆ. ಯಾರು ತಮ್ಮ ಆಹಾರ ಪದ್ಧತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೋ, ಅವರಿಗೆ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಗೆ ತರುವುದು ಸುಲಭವಾಗುತ್ತದೆ. ಇಂತಹ ಸಾಧಕರು ತಮ್ಮ ಇಂದ್ರಿಯ ಶಕ್ತಿಯನ್ನು ವ್ಯರ್ಥವಾಗಿ ಬಾಹ್ಯ ಲೌಕಿಕ ಪ್ರಪಂಚಕ್ಕೆ ಹರಿಯಬಿಡದೆ, ಒಳಗಣ್ಣಿನ ಸಾಧನೆಗಾಗಿ (ಪ್ರಾಣಾಗ್ನಿಯಲ್ಲಿ) ವಿನಿಯೋಗಿಸುತ್ತಾರೆ. ಪ್ರಾಣಾಯಾಮ ಮತ್ತು ಹಠಯೋಗದ ಅತ್ಯುನ್ನತ ಸ್ಥಿತಿಯಾದ 'ಕುಂಭಕ' ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ಸಾಧಕರು ಪ್ರಾಣ ಮತ್ತು ಅಪಾನ ವಾಯುಗಳನ್ನು ಒಂದರಲ್ಲೊಂದು ಲಯಗೊಳಿಸಿ, ಇಂದ್ರಿಯಗಳನ್ನು ಸಂಪೂರ್ಣವಾಗಿ ಅಂತರ್ಮುಖಿಯಾಗಿಸುತ್ತಾರೆ.
ಮುಖ್ಯವಾಗಿ, ಇಲ್ಲಿಯವರೆಗೆ 25ನೇ ಶ್ಲೋಕದಿಂದ 30ನೇ ಶ್ಲೋಕದವರೆಗೆ ವಿವರಿಸಿದ ದ್ರವ್ಯಯಜ್ಞ, ತಪೋಯಜ್ಞ, ಸ್ವಾಧ್ಯಾಯಯಜ್ಞ ಮತ್ತು ಪ್ರಾಣಾಯಾಮ ಯಜ್ಞಗಳನ್ನು ಮಾಡುವ ಎಲ್ಲರನ್ನೂ 'ಯಜ್ಞವಿದಃ' ಅಂದರೆ ಯಜ್ಞವನ್ನು ಬಲ್ಲವರು ಎಂದು ಸಂಬೋಧಿಸಿ ಗೌರವಿಸಲಾಗಿದೆ. ಏಕೆಂದರೆ ಇವರೆಲ್ಲರ ಅಂತಿಮ ಗುರಿ ಒಂದೇ — ಅದು ಆಂತರಿಕ ಶುದ್ಧಿ. ಯಾವ ವ್ಯಕ್ತಿ ಯಾವುದೇ ಯಜ್ಞವನ್ನಾದರೂ ಅಂದರೆ ದ್ರವ್ಯ, ತಪಸ್ಸು, ಯೋಗ ಅಥವಾ ಜ್ಞಾನ ಯಜ್ಞಗಳನ್ನು ನಿಸ್ವಾರ್ಥ ಭಾವದಿಂದ ಮಾಡುತ್ತಾನೋ, ಆತನ ಅಂತರಂಗವು ಪರಿಶುದ್ಧವಾಗುತ್ತದೆ.

04-31
यज्ञशिष्टामृतभुजः   यान्ति ब्रह्म सनातनम् ।
नायं लोकोऽस्त्ययज्ञस्य   कुतो़ऽन्यः कुरुसत्तम ॥ ४-३ १
ಯಜ್ಞಶಿಷ್ಟಾಮೃತಭುಜಃ   ಯಾನ್ತಿ ಬ್ರಹ್ಮ ಸನಾತನಮ್
ನಾಯಂ ಲೋಕೋಸ್ತ್ಯಯಜ್ಞಸ್ಯ   ಕುತೊನ್ಯಃ ಕುರುಸತ್ತಮ 4.31
 
04-32
एवं बहुविधा यज्ञाः   वितता ब्रह्मणो मुखे ।
कर्मजान्विद्धि तान्सर्वान्   एवं ज्ञात्वा विमोक्ष्यसे ॥ ४-३ २
ಏವಂ ಬಹುವಿಧಾ ಯಜ್ಞಾಃ   ವಿತತಾ ಬ್ರಹ್ಮಣೋ ಮುಖೇ
ಕರ್ಮಜಾನ್ವಿದ್ಧಿ ತಾನ್ಸರ್ವಾನ್   ಏವಂ ಜ್ಞಾತ್ವಾ ವಿಮೋಕ್ಷ್ಯಸೇ 4.32
 
04-33
श्रेयान्द्रव्यमयाद्यज्ञात्   ज्ञानयज्ञः परन्तप ।
सर्वं कर्माखिलं पार्थ   ज्ञाने परिसमाप्यते ॥ ४-३ ३
ಶ್ರೇಯಾನ್ದ್ರವ್ಯಮಯಾದ್ಯಜ್ಞಾತ್   ಜ್ಞಾನಯಜ್ಞಃ ಪರನ್ತಪ
ಸರ್ವಂ ಕರ್ಮಾಖಿಲಂ ಪಾರ್ಥ   ಜ್ಞಾನೇ ಪರಿಸಮಾಪ್ಯತೇ 4.33
 
04-34
तद्विद्धि प्रणिपातेन   परिप्रश्नेन सेवया ।
उपदेक्ष्यन्ति ते ज्ञानं   ज्ञानिनस्तत्त्वदर्शिनः ॥ ४-३ ४
ತದ್ವಿದ್ಧಿ ಪ್ರಣಿಪಾತೇನ    ಪರಿಪ್ರಶ್ನೇನ ಸೇವಯಾ
ಉಪದೇಕ್ಷ್ಯನ್ತಿ ತೇ ಜ್ಞಾನಂ    ಜ್ಞಾನಿನಸ್ತತ್ತ್ವದರ್ಶಿನಃ 4.34
 
04-35
यज्ज्ञात्वा न पुनर्मोहम्   एवं यास्यसि पाण्डव ।
येन भूतान्यशेषेण   द्रक्ष्यस्यात्मन्यथो मयि ॥ ४-३ ५
ಯಜ್-ಜ್ಞಾತ್ವಾ ನ ಪುನರ್ಮೋಹಮ್   ಏವಂ ಯಾಸ್ಯಸಿ ಪಾಣ್ಡವ
ಯೇನ ಭೂತಾನ್ಯಶೇಷೇಣ    ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ 4.35
 
04-36
अपि चेदसि पापेभ्यः   सर्वेभ्यः पापकृत्तमः ।
सर्वं ज्ञानप्लवेनैव   वृजिनं सन्तरिष्यसि ॥ ४-३ ६
ಅಪಿ ಚೇದಸಿ ಪಾಪೇಭ್ಯಃ    ಸರ್ವೇಭ್ಯಃ ಪಾಪಕೃತ್ತಮಃ
ಸರ್ವಂ ಜ್ಞಾನಪ್ಲವೇನೈವ    ವೃಜಿನಂ ಸನ್ತರಿಷ್ಯಸಿ 4.36
 
04-37
यथैधांसि समिद्धोऽग्निः   भस्मसात्कुरुतेऽर्जुन ।
ज्ञानाग्निः सर्वकर्माणि   भस्मसात्कुरुते तथा ॥ ४-३ ७
ಯಥೈಧಾಂಸಿ ಸಮಿದ್ಧೋಗ್ನಿಃ   ರ್ಭಸ್ಮಸಾತ್ಕುರುತೇರ್ಜುನ
ಜ್ಞಾನಾಗ್ನಿಃ ಸರ್ವಕರ್ಮಾಣಿ    ಭಸ್ಮಸಾತ್ಕುರುತೇ ತಥಾ 4.37
 
04-38
न हि ज्ञानेन सदृशं   पवित्रमिह विद्यते ।
तत्स्वयं योगसंसिद्धः   कालेनात्मनि विन्दति ॥ ४-३ ८
ನ ಹಿ ಜ್ಞಾನೇನ ಸದೃಶಂ    ಪವಿತ್ರಮಿಹ ವಿದ್ಯತೇ
ತತ್ಸ್ವಯಂ ಯೋಗಸಂಸಿದ್ಧಃ    ಕಾಲೇನಾತ್ಮನಿ ವಿನ್ದತಿ 4.38
 
04-39
श्रद्धावाँल्लभते ज्ञानं   तत्परः संयतेन्द्रियः ।
ज्ञानं लब्ध्वा परां शान्तिम्   अचिरेणाधिगच्छति ॥ ४-३ ९
ಶ್ರದ್ಧಾವಾಲ್ಲಭತೇ ಜ್ಞಾನಂ    ತತ್ಪರಃ ಸಂಯತೇನ್ದ್ರಿಯಃ
ಜ್ಞಾನಂ ಲಬ್ಧ್ವಾ ಪರಾಂ ಶಾನ್ತಿಮ್   ಅಚಿರೇಣಾಧಿಗಚ್ಛತಿ 4.39
 
04-40
अज्ञश्चाश्रद्दधानश्च   संशयात्मा विनश्यति ।
नायं लोकोऽस्ति न परः   न सुखं संशयात्मनः ॥ ४- ४ ०
ಅಜ್ಞಶ್ಚಾಶ್ರದ್ದಧಾನಶ್ಚ    ಸಂಶಯಾತ್ಮಾ ವಿನಶ್ಯತಿ
ನಾಯಂ ಲೋಕೋಸ್ತಿ ನ ಪರಃ    ನ ಸುಖಂ ಸಂಶಯಾತ್ಮನಃ 4.40

04-41
योगसंन्यस्तकर्माणं   ज्ञानसंछिन्नसंशयम् ।
आत्मवन्तं न कर्माणि   निबध्नन्ति धनञ्जय ॥ ४- ४ १
ಯೋಗಸಂನ್ಯಸ್ತಕರ್ಮಾಣಂ    ಜ್ಞಾನಸಂಛಿನ್ನಸಂಶಯಮ್
ಆತ್ಮವನ್ತಂ ನ ಕರ್ಮಾಣಿ    ನಿಬಧ್ನನ್ತಿ ಧನಞ್ಜಯ 4.41
 
04-42
तस्मादज्ञानसंभूतं   हृत्स्थं ज्ञानासिनाऽत्मनः ।
छित्त्वैनं संशयं योगम्   आतिष्ठोत्तिष्ठ भारत ॥ ४- ४ २
ತಸ್ಮಾದಜ್ಞಾನಸಂಭೂತಂ    ಹೃತ್ಸ್ಥಂ ಜ್ಞಾನಾಸಿನಾತ್ಮನಃ
ಛಿತ್ತ್ವೈನಂ ಸಂಶಯಂ ಯೋಗಮ್   ಆತಿಷ್ಠೋತ್ತಿಷ್ಠ ಭಾರತ 4.42
 
 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे ज्ञानकर्मसन्न्यासयोगो नाम तृतीयोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಜ್ಞಾನಕರ್ಮ ಸಂನ್ಯಾಸಯೋಗೊ ನಾಮ ತೃತೀಯೊಧ್ಯಾಯಃ

No comments:

Post a Comment