Pages

ಅಧ್ಯಾಯ - ೧೮ [18]

 
श्रीमद्भगवद्गीता
ಶ್ರೀಮದ್ಭಗವದ್ಗೀತಾ
अष्टादशोऽध्यायः
ಅಷ್ಟಾದಶೋಧ್ಯಾಯಃ
मोक्षसन्न्यासयोगः
ಮೋಕ್ಷಸನ್ನ್ಯಾಸಯೊಗಃ
 
18-01
अर्जुन  उवाच
संन्यासस्य महाबाहो   तत्त्वमिच्छामि वेदितुम् ।
त्यागस्य च हृषीकेश   पृथक्केशिनिषूदन ॥ १८-१
ಅರ್ಜುನ ಉವಾಚ
ಸಂನ್ಯಾಸಸ್ಯ ಮಹಾಬಾಹೋ    ತತ್ತ್ವಮಿಚ್ಛಾಮಿ ವೇದಿತುಮ್
ತ್ಯಾಗಸ್ಯ ಚ ಹೃಷೀಕೇಶ    ಪೃಥಕ್ಕೇಶಿನಿಷೂದನ 18.1
 
18-02
श्रीभगवानुवाच
काम्यानां कर्मणां न्यासं   संन्यासं कवयो विदुः ।
सर्वकर्मफलत्यागं   प्राहुस्त्यागं विचक्षणाः ॥ १८-२
ಶ್ರೀ ಭಗವಾನುವಾಚ
ಕಾಮ್ಯಾನಾಂ ಕರ್ಮಣಾಂ ನ್ಯಾಸಂ    ಸಂನ್ಯಾಸಂ ಕವಯೋ ವಿದುಃ
ಸರ್ವಕರ್ಮಫಲತ್ಯಾಗಂ    ಪ್ರಾಹುಸ್ತ್ಯಾಗಂ ವಿಚಕ್ಷಣಾಃ 18.2
 
18-03
त्याज्यं दोषवदित्येके   कर्म प्राहुर्मनीषिणः ।
यज्ञदानतपःकर्म   न त्याज्यमिति चापरे ॥ १८-३
ತ್ಯಾಜ್ಯಂ ದೋಷವದಿತ್ಯೇಕೇ    ಕರ್ಮ ಪ್ರಾಹುರ್ಮನೀಷಿಣಃ
ಯಜ್ಞದಾನತಪಃಕರ್ಮ    ನ ತ್ಯಾಜ್ಯಮಿತಿ ಚಾಪರೇ 18.3
 
18-04
निश्चयं श्रृणु मे तत्र   त्यागे भरतसत्तम ।
त्यागो हि पुरुषव्याघ्र   त्रिविधः संप्रकीर्तितः ॥ १८-४
ನಿಶ್ಚಯಂ ಶ್ರೃಣು ಮೇ ತತ್ರ    ತ್ಯಾಗೇ ಭರತಸತ್ತಮ
ತ್ಯಾಗೋ ಹಿ ಪುರುಷವ್ಯಾಘ್ರ    ತ್ರಿವಿಧಃ ಸಂಪ್ರಕೀರ್ತಿತಃ 18.4
 
18-05
यज्ञदानतपःकर्म   न त्याज्यं कार्यमेव तत् ।
यज्ञो दानं तपश्चैव   पावनानि मनीषिणाम् ॥ १८-५
ಯಜ್ಞದಾನತಪಃಕರ್ಮ    ನ ತ್ಯಾಜ್ಯಂ ಕಾರ್ಯಮೇವ ತತ್
ಯಜ್ಞೋ ದಾನಂ ತಪಶ್ಚೈವ    ಪಾವನಾನಿ ಮನೀಷಿಣಾಮ್ 18.5
 
18-06
एतान्यपि तु कर्माणि   सङ्गं त्यक्त्वा फलानि च ।
कर्तव्यानीति मे पार्थ   निश्चितं मतमुत्तमम् ॥ १८-६
ಏತಾನ್ಯಪಿ ತು ಕರ್ಮಾಣಿ    ಸಙ್ಗಂ ತ್ಯಕ್ತ್ವಾ ಫಲಾನಿ ಚ
ಕರ್ತವ್ಯಾನೀತಿ ಮೇ ಪಾರ್ಥ    ನಿಶ್ಚಿತಂ ಮತಮುತ್ತಮಮ್ 18.6
 
18-07
नियतस्य तु संन्यासः   कर्मणो नोपपद्यते ।
मोहात्तस्य परित्यागः   तामसः परिकीर्तितः ॥ १८-७
ನಿಯತಸ್ಯ ತು ಸಂನ್ಯಾಸಃ    ಕರ್ಮಣೋ ನೋಪಪದ್ಯತೇ
ಮೋಹಾತ್ತಸ್ಯ ಪರಿತ್ಯಾಗಃ   ತಾಮಸಃ ಪರಿಕೀರ್ತಿತಃ 18.7
 
18-08
दुःखमित्येव यत्कर्म   कायक्लेशभयात्त्यजेत् ।
स कृत्वा राजसं त्यागं   नैव त्यागफलं लभेत् ॥ १८-८
ದುಃಖಮಿತ್ಯೇವ ಯತ್ಕರ್ಮ    ಕಾಯಕ್ಲೇಶಭಯಾತ್ತ್ಯಜೇತ್
ಸ ಕೃತ್ವಾ ರಾಜಸಂ ತ್ಯಾಗಂ    ನೈವ ತ್ಯಾಗಫಲಂ ಲಭೇತ್ 18.8
 
18-09
कार्यमित्येव यत्कर्म   नियतं क्रियतेऽर्जुन ।
सङ्गं त्यक्त्वा फलं चैव   स त्यागः सात्त्विको मतः ॥ १८-९
ಕಾರ್ಯಮಿತ್ಯೇವ ಯತ್ಕರ್ಮ    ನಿಯತಂ ಕ್ರಿಯತೇರ್ಜುನ
ಸಙ್ಗಂ ತ್ಯಕ್ತ್ವಾ ಫಲಂ ಚೈವ    ಸ ತ್ಯಾಗಃ ಸಾತ್ತ್ವಿಕೋ ಮತಃ 18.9
 
18-10
न द्वेष्ट्यकुशलं कर्म   कुशले नानुषज्जते ।
त्यागी सत्त्वसमाविष्टो   मेधावी छिन्नसंशयः ॥ १८-१०
ನ ದ್ವೇಷ್ಟ್ಯಕುಶಲಂ ಕರ್ಮ    ಕುಶಲೇ ನಾನುಷಜ್ಜತೇ
ತ್ಯಾಗೀ ಸತ್ತ್ವಸಮಾವಿಷ್ಟೋ    ಮೇಧಾವೀ ಛಿನ್ನಸಂಶಯಃ 18.10
 
18-11
न हि देहभृता शक्यं   त्यक्तुं कर्माण्यशेषतः ।
यस्तु कर्मफलत्यागी   स त्यागीत्यभिधीयते ॥ १८-११
ನ ಹಿ ದೇಹಭೃತಾ ಶಕ್ಯಂ    ತ್ಯಕ್ತುಂ ಕರ್ಮಾಣ್ಯಶೇಷತಃ
ಯಸ್ತು ಕರ್ಮಫಲತ್ಯಾಗೀ    ಸ ತ್ಯಾಗೀತ್ಯಭಿಧೀಯತೇ 18.11
 
18-12
अनिष्टमिष्टं मिश्रं च   त्रिविधं कर्मणः फलम् ।
भवत्यत्यागिनां प्रेत्य   न तु संन्यासिनां क्वचित् ॥ १८-१२
ಅನಿಷ್ಟಮಿಷ್ಟಂ ಮಿಶ್ರಂ ಚ    ತ್ರಿವಿಧಂ ಕರ್ಮಣಃ ಫಲಮ್
ಭವತ್ಯತ್ಯಾಗಿನಾಂ ಪ್ರೇತ್ಯ    ನ ತು ಸಂನ್ಯಾಸಿನಾಂ ಕ್ವಚಿತ್ 18.12
 
18-13
पञ्चैतानि महाबाहो   कारणानि निबोध मे ।
सांख्ये कृतान्ते प्रोक्तानि   सिद्धये सर्वकर्मणाम् ॥ १८-१३
ಪಞ್ಚೈತಾನಿ ಮಹಾಬಾಹೋ    ಕಾರಣಾನಿ ನಿಬೋಧ ಮೇ
ಸಾಂಖ್ಯೇ ಕೃತಾನ್ತೇ ಪ್ರೋಕ್ತಾನಿ    ಸಿದ್ಧಯೇ ಸರ್ವಕರ್ಮಣಾಮ್ 18.13
 
18-14
अधिष्ठानं तथा कर्ता   करणं च पृथग्विधम् ।
विविधाश्च पृथक्चेष्टा   दैवं चैवात्र पञ्चमम् ॥ १८-१४
ಅಧಿಷ್ಠಾನಂ ತಥಾ ಕರ್ತಾ    ಕರಣಂ ಚ ಪೃಥಗ್ವಿಧಮ್
ವಿವಿಧಾಶ್ಚ ಪೃಥಕ್ಚೇಷ್ಟಾ    ದೈವಂ ಚೈವಾತ್ರ ಪಞ್ಚಮಮ್ 18.14
 
18-15
शरीरवाङ्मनोभिर्यत्   कर्म प्रारभते नरः ।
न्याय्यं वा विपरीतं वा   पञ्चैते तस्य हेतवः ॥ १८-१५
ಶರೀರವಾಙ್ಮನೋಭಿರ್ಯತ್   ಕರ್ಮ ಪ್ರಾರಭತೇ ನರಃ
ನ್ಯಾಯ್ಯಂ ವಾ ವಿಪರೀತಂ ವಾ    ಪಞ್ಚೈತೇ ತಸ್ಯ ಹೇತವಃ 18.15

18-16
तत्रैवं सति कर्तारम्   आत्मानं केवलं तु यः ।
पश्यत्यकृतबुद्धित्वात्   न स पश्यति दुर्मतिः ॥ १८-१६
ತತ್ರೈವಂ ಸತಿ ಕರ್ತಾರಮ್   ಆತ್ಮಾನಂ ಕೇವಲಂ ತು ಯಃ
ಪಶ್ಯತ್ಯಕೃತಬುದ್ಧಿತ್ವಾತ್   ನ ಸ ಪಶ್ಯತಿ ದುರ್ಮತಿಃ 18.16
 
18-17
यस्य नाहंकृतो भावो   बुद्धिर्यस्य न लिप्यते ।
हत्वापि स इमाँल्लोकान्   न हन्ति न निबध्यते ॥ १८-१७
ಯಸ್ಯ ನಾಹಂಕೃತೋ ಭಾವೋ    ಬುದ್ಧಿರ್ಯಸ್ಯ ನ ಲಿಪ್ಯತೇ
ಹತ್ವಾಪಿ ಸ ಇಮಾಲ್ಲೋಕಾನ್   ನ ಹನ್ತಿ ನ ನಿಬಧ್ಯತೇ 18.17
 
18-18
ज्ञानं ज्ञेयं परिज्ञाता   त्रिविधा कर्मचोदना ।
करणं कर्म कर्तेति   त्रिविधः कर्मसंग्रहः ॥ १८-१८
ಜ್ಞಾನಂ ಜ್ಞೇಯಂ ಪರಿಜ್ಞಾತಾ    ತ್ರಿವಿಧಾ ಕರ್ಮಚೋದನಾ
ಕರಣಂ ಕರ್ಮ ಕರ್ತೇತಿ    ತ್ರಿವಿಧಃ ಕರ್ಮಸಂಗ್ರಹಃ 18.18
 
18-19
ज्ञानं कर्म च कर्ता च   त्रिधैव गुणभेदतः ।
प्रोच्यते गुणसंख्याने   यथावच्छृणु तान्यपि ॥ १८-१९
ಜ್ಞಾನಂ ಕರ್ಮ ಚ ಕರ್ತಾ ಚ    ತ್ರಿಧೈವ ಗುಣಭೇದತಃ
ಪ್ರೋಚ್ಯತೇ ಗುಣಸಂಖ್ಯಾನೇ    ಯಥಾವಚ್ಛೃಣು ತಾನ್ಯಪಿ 18.19
 
18-20
सर्वभूतेषु येनैकं   भावमव्ययमीक्षते ।
अविभक्तं विभक्तेषु   तज्ज्ञानं विद्धि सात्त्विकम् ॥ १८-२०
ಸರ್ವಭೂತೇಷು ಯೇನೈಕಂ    ಭಾವಮವ್ಯಯಮೀಕ್ಷತೇ
ಅವಿಭಕ್ತಂ ವಿಭಕ್ತೇಷು    ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ 18.20
 
18-21
पृथक्त्वेन तु यज्ज्ञानं   नानाभावान्पृथग्विधान् ।
वेत्ति सर्वेषु भूतेषु   तज्ज्ञानं विद्धि राजसम् ॥ १८-२१
ಪೃಥಕ್ತ್ವೇನ ತು ಯಜ್ ಜ್ಞಾನಂ    ನಾನಾಭಾವಾನ್ಪೃಥಗ್ವಿಧಾನ್
ವೇತ್ತಿ ಸರ್ವೇಷು ಭೂತೇಷು    ತಜ್ ಜ್ಞಾನಂ ನಂ ವಿದ್ಧಿ ರಾಜಸಮ್ 18.21
 ಯಾವ ಜ್ಞಾನವು ಎಲ್ಲಾ ಜೀವಿಗಳಲ್ಲಿರುವ ಆತ್ಮಗಳನ್ನು ಬೇರೆ ಬೇರೆ ಮತ್ತು ಅವರ ಸ್ವಭಾವಗಳು ಭಿನ್ನ ಭಿನ್ನ ಎಂದು ಭೇದಭಾವದಿಂದ ನೋಡುತ್ತದೆಯೋ, ಆ ಭೇದಭಾವದ ಅರಿವನ್ನು "ರಾಜಸಿಕ ಜ್ಞಾನ" ಎಂದು ಕರೆಯಲಾಗುತ್ತದೆ.
 
ಶ್ಲೋಕವು ರಾಜಸ ಗುಣದಿಂದ ಕೂಡಿದ ಮನುಷ್ಯನ ಬುದ್ಧಿ ಮತ್ತು ಜ್ಞಾನದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ವಿವರಿಸುತ್ತದೆ.
 
ಭೇದ ದೃಷ್ಟಿ ಮತ್ತು ಬುದ್ಧಿ:
ರಾಜಸಿಕ ಜ್ಞಾನದ ಮುಖ್ಯ ಲಕ್ಷಣವೇ 'ಪೃಥಕ್ತ್ವ' ಅಂದರೆ ಭೇದ ಭಾವ. ಇಂತಹ ಜ್ಞಾನವುಳ್ಳವರು ಹೊರಗಿನ ರೂಪ, ಜಾತಿ, ಬಣ್ಣ, ಅಂತಸ್ತು ಮತ್ತು ಶರೀರವನ್ನು ಮಾತ್ರ ನೋಡಿ ಎಲ್ಲರನ್ನೂ ಬೇರೆ ಬೇರೆ ಎಂದು ಭಾವಿಸುತ್ತಾರೆ. ರಜೋಗುಣದ ಪ್ರಭಾವಕ್ಕೆ ಒಳಗಾದ ಬುದ್ಧಿಯು ಸೃಷ್ಟಿಯ ಮೂಲ ಸೂತ್ರವಾದ 'ಏಕತೆ'ಯನ್ನು ಗ್ರಹಿಸುವುದಿಲ್ಲ. ವ್ಯಾವಹಾರಿಕ ಲೋಕದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗಿಂತ ಭಿನ್ನವಾಗಿ ಕಾಣುವುದು ಸಹಜ. ರಾಜಸಿಕ ಜ್ಞಾನವುಳ್ಳವರು ಬಡವ-ಶ್ರೀಮಂತ, ಒಡೆಯ-ಸೇವಕ ಎಂಬ ವ್ಯತ್ಯಾಸಗಳನ್ನು ಮಾತ್ರ ಗ್ರಹಿಸ ಬಲ್ಲರು. ಒಬ್ಬ ವ್ಯಕ್ತಿ ಕೋಪದಲ್ಲಿದ್ದರೆ ಅಥವಾ ತಪ್ಪು ಮಾಡುತ್ತಿದ್ದರೆ, ಅವನ ಮೂಲ ಸ್ವರೂಪ ಪವಿತ್ರವಾದುದು ಎಂಬುದನ್ನು ಮರೆತು, ಅವನನ್ನು ಕೇವಲ ಒಬ್ಬ ಕೆಟ್ಟ ವ್ಯಕ್ತಿಯನ್ನಾಗಿ ಮಾತ್ರ ನೋಡುತ್ತಾರೆ. ಆಧ್ಯಾತ್ಮಿಕವಾಗಿ ಎಲ್ಲರಲ್ಲೂ ನೆಲೆಸಿರುವ ಆತ್ಮ ಒಂದೇ ಆಗಿದ್ದರೂ, ರಾಜಸಿಕ ಜ್ಞಾನವು ಕೇವಲ ಇಂದ್ರಿಯಗಳ ಮತ್ತು ಮನಸ್ಸಿನ ಮಟ್ಟದಲ್ಲೇ ನಿಂತುಬಿಡುವುದರಿಂದ ಜಗತ್ತಿನ ಮೂಲ ಸತ್ಯವನ್ನು ಗ್ರಹಿಸಲು ವಿಫಲವಾಗುತ್ತದೆ. ಮತ್ತು ಅದು ಕೇವಲ ಬಣ್ಣ, ಜಾತಿ, ಧರ್ಮ, ಲಿಂಗ ಅಥವಾ ರಾಷ್ಟ್ರೀಯತೆಯ ಆಧಾರದ ಮೇಲೆ ಮನುಷ್ಯರನ್ನು ಸದಾ ವಿಭಜಿಸಿ ನೋಡುವಷ್ಟೇ ಶಕ್ತವಾಗಿದೆ.

ದೇಹವೇ ಆತ್ಮ ಎಂಬ ಭ್ರಮೆ:
ರಾಜಸಿಕ ಜ್ಞಾನವುಳ್ಳವರು ಭೌತಿಕ ದೇಹವೇ ಸರ್ವಸ್ವ ಎಂದು ನಂಬುತ್ತಾರೆ. ದೇಹ ನಾಶವಾದರೆ ಎಲ್ಲವೂ ಮುಗಿಯಿತು ಅಂದುಕೊಳ್ಳುತ್ತಾರೆ. ಆದ್ದರಿಂದ ಅವರು ಕೇವಲ ಲೌಕಿಕ ಸುಖ ಮತ್ತು ಭೋಗಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ.

ಸ್ವಾರ್ಥ ಮತ್ತು ಅಹಂಕಾರದ ಪ್ರಭಾವ: 
ರಾಜಸ ಜ್ಞಾನ ಉಳ್ಳವರು "ನಾನು ಬೇರೆ, ಅವರು ಬೇರೆ", "ನನ್ನ ದೇಶ, ನನ್ನ ಧರ್ಮ, ನನ್ನ ಜಾತಿ ಶ್ರೇಷ್ಠ" ಎಂಬ ಭಿನ್ನ ಭಾವನೆಯನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಕಂಡುಬರುವ "ನಾವು ಮತ್ತು ಅವರು" ಅಥವಾ "ನನ್ನದು ಮತ್ತು ನಿನ್ನದು" ಎಂಬ ಅಹಂಕಾರದ ಭಾವನೆಗೆ ಈ ರಾಜಸಿಕ ಜ್ಞಾನವೇ ಮೂಲ ಕಾರಣ. ಇವರಿಗೆ ಎಲ್ಲರಲ್ಲೂ ಇರುವ ಚೈತನ್ಯ ಒಂದೇ ಎಂಬ ಅರಿವಿರುವುದಿಲ್ಲ. ಯಾವಾಗ ಮನುಷ್ಯನಲ್ಲಿ "ನಾನು ಮತ್ತು ನನ್ನವರು ಬೇರೆ, ಉಳಿದವರು ಬೇರೆ" ಎಂಬ ಭಾವನೆ ಮೂಡುತ್ತದೆಯೋ, ಅಲ್ಲಿ ಸ್ವಾರ್ಥ, ಸ್ಪರ್ಧೆ, ಅಸೂಯೆ, ಕ್ರೋಧ ಮತ್ತು ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ. ರಾಜಸಿಕ ಜ್ಞಾನವು ಲೌಕಿಕ ಜಗತ್ತಿನಲ್ಲಿ ಯಶಸ್ಸು ತರಬಹುದು, ಉದಾಹರಣೆಗೆ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ರಾಜಕೀಯದಲ್ಲಿ ಜನರ ಸಮರ್ಥನೆ ಇತ್ಯಾದಿ, ಆದರೆ ಆಧ್ಯಾತ್ಮಿಕ ಉನ್ನತಿಗೆ ಇದು ಮಾರಕ. ಜಗತ್ತಿನಲ್ಲಿ ನಡೆಯುವ ಜನಾಂಗೀಯ ದ್ವೇಷ, ಯುದ್ಧಗಳು, ಮೇಲು-ಕೀಳು ಎಂಬ ತಾರತಮ್ಯಗಳೆಲ್ಲವೂ ಈ ರಾಜಸಿಕ ಜ್ಞಾನದ ಪ್ರಭಾವದಿಂದಲೇ ಉಂಟಾಗುತ್ತವೆ.

ದೇವತಾರಾಧನೆಯಲ್ಲೂ ಭೇದ
ಆಧ್ಯಾತ್ಮಿಕ ಸಾಧನೆಯಲ್ಲೂ ರಾಜಸಿಕ ಬುದ್ಧಿಯವರು ಭಗವಂತನನ್ನು ಅಖಂಡವಾಗಿ ಕಾಣದೆ, ಗ್ರಹಚಾರಗಳಿಗೆ ಅಥವಾ ತಕ್ಷಣದ ಫಲಕ್ಕಾಗಿ ಬೇರೆ ಬೇರೆ ದೇವತೆಗಳನ್ನು ಅವರಲ್ಲಿ ಪರಸ್ಪರ ಸಂಬಂಧವಿಲ್ಲದಂತೆ ಪೂಜಿಸುತ್ತಾರೆ. ಇವೆಲ್ಲದರಲ್ಲೂ ಅಡಗಿರುವ ಶಕ್ತಿ ಸರ್ವವ್ಯಾಪಿಯಾದ ಒಬ್ಬನೇ ಪರಮಾತ್ಮನದ್ದು ಎಂಬ ಅರಿವು ಇವರಿಗೆ ಕಡಿಮೆ. 
ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಪರಮಾತ್ಮನ ಎಚ್ಚರದಿಂದ ಮಾಡಿದರೆ ಆ ಪೂಜೆಯು ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆ ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ ರಾಜಸವಾಗುತ್ತದೆ.

ಲೌಕಿಕ ದೃಷ್ಟಿಕೋನ: 
ಇವರ ದೃಷ್ಟಿ ಕೇವಲ ಭೌತಿಕ ಜಗತ್ತಿಗೆ ಸೀಮಿತವಾಗಿರುತ್ತದೆ. ಪ್ರಕೃತಿಯ ವೈವಿಧ್ಯತೆಯನ್ನು ಕಂಡು ಭ್ರಮೆಗೊಳಗಾಗುವ ಇವರು, ಆ ವೈವಿಧ್ಯತೆಯ ಹಿಂದಿರುವ ಪರಮ ಸತ್ಯವನ್ನು ಗ್ರಹಿಸಲು ಆಸಕ್ತರಾಗಿರುತ್ತಾರೆ.
 
ರಾಜಸಿಕ ಜ್ಞಾನವು ಮನುಷ್ಯನನ್ನು ಬಂಧನದಲ್ಲಿಡುತ್ತದೆ. ಇದು ಸತ್ಯವನ್ನು ಭಾಗಶಃ ಮಾತ್ರ ಗ್ರಹಿಸಬಲ್ಲದು. ಆಧ್ಯಾತ್ಮಿಕ ಉನ್ನತಿಗಾಗಿ ಮನುಷ್ಯನು ಈ ರಾಜಸಿಕ ಭೇದಭಾವದ ದೃಷ್ಟಿಯನ್ನು ದಾಟಿ, ಎಲ್ಲರಲ್ಲೂ ಏಕತೆಯನ್ನು ಕಾಣುವ ಸಾತ್ತ್ವಿಕ ಜ್ಞಾನದ ಕಡೆಗೆ ಸಾಗಬೇಕು ಎಂಬುದೇ ಈ ಶ್ಲೋಕದ ಮುಖ್ಯ ಸಂದೇಶ.

18-22
यत्तु कृत्स्नवदेकस्मिन्   कार्ये सक्तमहैतुकम् ।
अतत्त्वार्थवदल्पं च   तत्तामसमुदाहृतम् ॥ १८-२२
ಯತ್ತು ಕೃತ್ಸ್ನವದೇಕಸ್ಮಿನ್   ಕಾರ್ಯೇ ಸಕ್ತಮಹೈತುಕಮ್
ಅತತ್ತ್ವಾರ್ಥವದಲ್ಪಂ ಚ    ತತ್ತಾಮಸಮುದಾಹೃತಮ್ 18.22
 ಆದರೆ ಯಾವ ಜ್ಞಾನವು ಯಾವುದೋ ಒಂದು ಸಣ್ಣ ಕಾರ್ಯವನ್ನು ಅಥವಾ ನಶ್ವರವಾದ ಒಂದು ಭೌತಿಕ ವಸ್ತು ಅಥವಾ ಶರೀರವನ್ನೇ ಸರ್ವಸ್ವ ಎಂದು ಕುರುಡಾಗಿ ನಂಬಿ ಅದಕ್ಕೇ ಅಂಟಿಕೊಂಡಿರುತ್ತದೆಯೋ, ಯಾವುದು ಯಾವುದೇ ತರ್ಕ ಅಥವಾ ವಾಸ್ತವಿಕ ಸತ್ಯದ ಆಧಾರವಿಲ್ಲದ್ದೋ ಮತ್ತು ಅತ್ಯಂತ ಸಂಕುಚಿತ ಅಥವಾ ತುಚ್ಛವಾದದ್ದೋ, ಅದನ್ನು ತಾಮಸಿಕ ಜ್ಞಾನವೆಂದು ಕರೆಯಲಾಗುತ್ತದೆ
 
ಈ ಶ್ಲೋಕದಲ್ಲಿ ಅಜ್ಞಾನದ ಪರಮಾವಧಿಯಾದ ತಾಮಸಿಕ ಜ್ಞಾನದ ಸ್ವರೂಪವನ್ನು ವಿವರಿಸಲಾಗಿದೆ.
 
ಕೃತ್ಸ್ನವದೇಕಸ್ಮಿನ್ ಕಾರ್ಯೇ (ಕೃತ್ಸ್ನ-ವತ್  ಏಕಸ್ಮಿನ್  ಕಾರ್ಯೇ)
(ಒಂದನ್ನೇ ಸರ್ವಸ್ವ ಎಂದು ತಿಳಿಯುವುದು):
ತಾಮಸಿಕ ಜ್ಞಾನದ ಮುಖ್ಯ ಲಕ್ಷಣವೆಂದರೆ ಅತಿ ದೊಡ್ಡ ಸತ್ಯವನ್ನು ಕಡೆಗಣಿಸಿ, ಒಂದು ಸಣ್ಣ ವಿಷಯಕ್ಕೆ ಅತಿಯಾಗಿ ಅಂಟಿಕೊಳ್ಳುವುದು. ತನ್ನ ದೇಹವೇ ತಾನು, ಈ ನಾಶವಾಗುವ ಶರೀರವೇ ಆತ್ಮ ಎಂದು ನಂಬುವುದು. ಯಾವುದೋ ಒಂದು ಸಣ್ಣ ಮೂಢನಂಬಿಕೆಯನ್ನು ಹಿಡಿದು, ಕೇವಲ ಒಂದು ಸಣ್ಣ ಆಚರಣೆಯೇ ಪರಮ ಧರ್ಮ ಎಂದು ವಾದಿಸುವುದು ಅಥವಾ ತನ್ನ ಮನೆ, ತನ್ನ ಸ್ವಾರ್ಥವೇ ಜಗತ್ತು ಎಂದು ಬದುಕುವುದು ತಾಮಸಿಕತೆಯಾಗಿದೆ.
 
ಅಹೇತುಕಮ್ (ಕಾರಣರಹಿತವಾದದ್ದು):
ಈ ಜ್ಞಾನಕ್ಕೆ ಯಾವುದೇ ಸರಿಯಾದ ಕಾರಣ, ವೈಜ್ಞಾನಿಕ ಅಥವಾ ತಾರ್ಕಿಕ ಆಧಾರವಿರುವುದಿಲ್ಲ. "ನಾನು ಹೇಳಿದ್ದೇ ಸರಿ, ಯಾಕೆಂದರೆ ನಾನು ಹಾಗೆ ನಂಬುತ್ತೇನೆ" ಎಂಬ ಕುರುಡು ಹಠ ಇದರ ಹಿಂದೆ ಇರುತ್ತದೆ. ಇಲ್ಲಿ ವಿವೇಚನೆಗೆ ಜಾಗವಿರುವುದಿಲ್ಲ.
 
ಅತತ್ತ್ವಾರ್ಥವತ್ (ಅತತ್ತ್ವ-ಅರ್ಥ-ವತ್)(ವಾಸ್ತವಕ್ಕೆ ದೂರವಾದದ್ದು):
ಇದು ಸತ್ಯಕ್ಕೆ ವಿರುದ್ಧವಾದದ್ದು. ಹಗ್ಗವನ್ನು ನೋಡಿ ಹಾವು ಎಂದು ಹೆದರಿ ಓಡುವುದು ಹೇಗೆ ತಪ್ಪು ಜ್ಞಾನವೋ, ಹಾಗೆಯೇ ತಾತ್ಕಾಲಿಕ ಭೌತಿಕ ಸುಖಗಳೇ ಶಾಶ್ವತ ಎಂದು ನಂಬುವುದು ಅತತ್ತ್ವಾರ್ಥ ಜ್ಞಾನ. ಕೇವಲ ಕುರುಡು ನಂಬಿಕೆ, ಪೂರ್ವಗ್ರಹ ಅಥವಾ ಸೋಮಾರಿತನದಿಂದ ಇವರು ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳುತ್ತಾರೆ. ಸತ್ಯ ಏನೆಂದು ತಿಳಿಯುವ ಆಸಕ್ತಿಯೂ ಇವರಿಗೆ ಇರುವುದಿಲ್ಲ.
 
ಅಲ್ಪಮ್ (ಅತ್ಯಂತ ಕೀಳುಮಟ್ಟದ್ದು):
ಇದು ಅತ್ಯಂತ ಕಿರಿದಾದ ತಿಳುವಳಿಕೆ. ಈ ಜ್ಞಾನವು ಮನುಷ್ಯನ ಮನಸ್ಸನ್ನು ವಿಶಾಲಗೊಳಿಸುವ ಬದಲಾಗಿ ಅತ್ಯಂತ ಕಿರಿದಾಗಿಸುತ್ತದೆ. ಇದು ಮನುಷ್ಯನನ್ನು ಪ್ರಾಣಿ ಸಹಜ ಗುಣಗಳಾದ ತಿನ್ನುವುದು, ಮಲಗುವುದು, ಭಯಪಡುವುದು ಇಂತಹ ಪ್ರಾಥಮಿಕ ಪ್ರಾಣಿಗಳ ಸ್ವಭಾವಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಇಂತಹ ಜ್ಞಾನದಿಂದ ಯಾರಿಗೂ ಒಳಿತಾಗುವುದಿಲ್ಲ.
 
ಮನುಷ್ಯನ ಬುದ್ಧಿಯು ತಮೋಗುಣದಿಂದ ಆವೃತವಾದಾಗ, ಅವನಿಗೆ ವಿಶಾಲವಾದ ಜಗತ್ತು ಅಥವಾ ಪರಮಾತ್ಮನ ಅಸ್ತಿತ್ವದ ಬಗ್ಗೆ ತಿಳುವಳಿಕೆ ಇರುವುದಿಲ್ಲ. ತಾಮಸಿಕ ಬುದ್ಧಿಯ ವ್ಯಕ್ತಿಯು ಅತ್ಯಂತ ಸಂಕಚಿತ ಮನೋಭಾವದವನಾಗಿರುತ್ತಾನೆ. ಅವನು ಕಣ್ಣಿಗೆ ಕಾಣುವ ಭೌತಿಕ ಶರೀರ ಅಥವಾ ಯಾವುದೋ ಒಂದು ಸಣ್ಣ ವಸ್ತುವನ್ನೇ "ಇದೇ ಜಗತ್ತಿನ ಸರ್ವಸ್ವ, ಇದರ ಆಚೆಗೆ ಏನೂ ಇಲ್ಲ" ಎಂದು ಬಲವಾಗಿ ನಂಬಿ ಕುಳಿತಿರುತ್ತಾನೆ. ಉದಾಹರಣೆಗೆ, ಕೇವಲ ತನ್ನ ಶರೀರದ ಸುಖ ಭೋಗಗಳೇ ಜೀವನದ ಪರಮ ಗುರಿ ಎಂದು ಬದುಕುವುದು ತಾಮಸಿಕ ಜ್ಞಾನ. ಈ ರೀತಿಯ ಕುರುಡು ನಂಬಿಕೆ, ಸಂಕುಚಿತ ಮನೋಭಾವ ಮತ್ತು ಯಾವುದೇ ವೈಜ್ಞಾನಿಕ, ತಾರ್ಕಿಕ (Logical), ತರ್ಕಬದ್ಧ (Rational) ಅಥವಾ ಆಧ್ಯಾತ್ಮಿಕ ಹಿನ್ನೆಲೆ ಇಲ್ಲದ ಜ್ಞಾನವೇ ತಾಮಸಿಕ ಜ್ಞಾನ. ಇದು ಮನುಷ್ಯನನ್ನು ಅಂಧಕಾರ ಮತ್ತು ಮೂಢನಂಬಿಕೆಯಲ್ಲಿ ಮುಳುಗಿಸುತ್ತದೆ.
ಇಂದಿನ ಸಮಾಜದಲ್ಲಿ ಕಂಡು ಬರುವ ಸಾಮಾನ್ಯ ಕುರುಡು ನಂಬಿಕೆಗಳು, ‘ಜಿಹಾದ್’ ಅಂದರೆ ತುಂಬಾ ಪುಣ್ಯದ ಕಾರ್ಯ ಎಂಬ ಸಿದ್ಧಾಂತ, ಭಯೋತ್ಪಾದನೆ (ತಮ್ಮ ಸಿದ್ಧಾಂತವೇ ಶ್ರೇಷ್ಠ ಎಂಬ ಭ್ರಮೆ), ಕೇವಲ ಹಣ ಗಳಿಸುವುದು, ತಿನ್ನುವುದು, ಮಲಗುವುದು ಮತ್ತು ದೈಹಿಕ ಸುಖದ ಬೆನ್ನಟ್ಟಿ ಮದ್ಯ, ಮಾದಕ ದ್ರವ್ಯ ಇತ್ಯಾದಿಗಳ ದಾಸರಾಗಿ, ಅದೇ ಜೀವನದ ಪರಮ ಗುರಿ ಅಂದುಕೊಂಡು  ಜೀವಮಾನವನ್ನು ವ್ಯರ್ಥ ಮಾಡಿಕೊಳ್ಳುವುದು — ಇವೆಲ್ಲವೂ ತಾಮಸಿಕ ಜ್ಞಾನದ ಪ್ರತ್ಯಕ್ಷ ಉದಾಹರಣೆಗಳಾಗಿವೆ.
 
ತಾರ್ಕಿಕ (Logical) ಎಂದರೆ ನಿಯಮಗಳು ಮತ್ತು ವ್ಯವಸ್ಥಿತ ವಾದಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರುವುದು.
ತರ್ಕಬದ್ಧ (Rational) ಎಂದರೆ ಲಭ್ಯವಿರುವ ಮಾಹಿತಿ, ಮೌಲ್ಯಗಳು ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ಅತ್ಯಂತ ಸೂಕ್ತವಾದ ಮತ್ತು ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಳ್ಳುವುದು.
 
ತಾಮಸಿಕ ಜ್ಞಾನದ ಪ್ರಮುಖ ಲಕ್ಷಣಗಳು:
ದೇಹಾತ್ಮ ಬುದ್ಧಿ: ಈ ಜ್ಞಾನ ಹೊಂದಿದವರು 'ನಾನೇ ಈ ದೇಹ' ಎಂದು ನಂಬಿರುತ್ತಾರೆ. ಶರೀರದ ಸುಖ, ಉಣ್ಣುವುದು, ತಿನ್ನುವುದು, ಮಲಗುವುದು ಮತ್ತು ಪ್ರಾಣಿಗಳಂತೆ ಬದುಕುವುದೇ ಜೀವನದ ಅಂತಿಮ ಗುರಿ ಎಂದು ಭಾವಿಸುತ್ತಾರೆ.
ಅಹೇತುಕಮ್ (ಕಾರಣರಹಿತ): ಇವರ ನಂಬಿಕೆಗಳಿಗೆ ಯಾವುದೇ ಸರಿಯಾದ ತರ್ಕ, ವೈಜ್ಞಾನಿಕ, ಅಥವಾ ಶಾಸ್ತ್ರದ ಆಧಾರ ಇರುವುದಿಲ್ಲ. ಕೇವಲ ಕುರುಡು ಮೂಢನಂಬಿಕೆಗಳಿಗೆ ಅಂಟಿಕೊಂಡಿರುತ್ತಾರೆ ಮತ್ತು ಪೂರ್ವಾಗ್ರಹ ಪೀಡಿತ ಆಲೋಚನೆಗಳೇ ಇದಕ್ಕೆ ಮೂಲ.
ಅತತ್ತ್ವಾರ್ಥವತ್ (ಸತ್ಯಕ್ಕೆ ದೂರವಾದದ್ದು): ಇದು ವಸ್ತುವಿನ ನೈಜ ಸ್ವರೂಪವನ್ನು ಗ್ರಹಿಸುವುದಿಲ್ಲ. ಉದಾಹರಣೆಗೆ, ಕೇವಲ ಮಣ್ಣಿನ ಬೊಂಬೆಯನ್ನೇ ದೇವರು ಎಂದು ನಂಬಿ, ಅದರ ಹಿಂದಿರುವ ಸರ್ವವ್ಯಾಪಿ ದೈವೀ ಶಕ್ತಿಯನ್ನು ನಿರಾಕರಿಸುವುದು ಅಥವಾ ಕೇವಲ ಈ ಭೌತಿಕ ದೇಹವೇ ತಾನು ಎಂದು ನಂಬಿ ಆತ್ಮ ತತ್ವವನ್ನು ಮರೆಯುವುದು.
ಸಂಕುಚಿತ ದೃಷ್ಟಿಕೋನ (ಅಲ್ಪಮ್): ತಮಗೆ ತಿಳಿದಿರುವುದೇ ಅಂತಿಮ ಸತ್ಯ, ಬೇರೆ ಯಾವುದೇ ವಿಚಾರಗಳು ಸರಿಯಲ್ಲ ಎಂಬ ಹಠಮಾರಿ ಧೋರಣೆ ಇವರದು. ಉದಾಹರಣೆಗೆ, ತೀವ್ರ ಧರ್ಮಾಂಧತೆ ಅಥವಾ ಮತಾಂಧತೆ ಕೂಡ ತಾಮಸಿಕ ಜ್ಞಾನದ ಲಕ್ಷಣವೇ ಆಗಿದೆ.

18-23
नियतं सङ्गरहितम्   अरागद्वेषतः कृतम् ।
अफलप्रेप्सुना कर्म   यत्तत्सात्त्विकमुच्यते ॥ १८-२३
ನಿಯತಂ ಸಙ್ಗರಹಿತಮ್   ಅರಾಗದ್ವೇಷತಃ ಕೃತಮ್
ಅಫಲಪ್ರೇಪ್ಸುನಾ ಕರ್ಮ    ಯತ್ತತ್ಸಾತ್ತ್ವಿಕಮುಚ್ಯತೇ 18.23
 ಶಾಸ್ತ್ರಗಳಿಗೆ ಅನುಗುಣವಾಗಿ, ಕರ್ತವ್ಯವೆಂದು ನಿಯೋಜಿತವಾದ ಕರ್ತೃತ್ವದ ಅಹಂಕಾರ ಮತ್ತು ಆಸಕ್ತಿಯಿಲ್ಲದೆ, ಯಾವುದೇ ರೀತಿಯ ರಾಗ-ದ್ವೇಷಗಳಿಗೆ (ಅತಿಯಾದ ಇಷ್ಟ ಅಥವಾ ದ್ವೇಷ) ಒಳಗಾಗದೆ, ಹಾಗೂ ಫಲಾಪೇಕ್ಷೆಯನ್ನು ಬಯಸದೆ ಮಾಡುವ ಕರ್ಮವನ್ನು ಸಾತ್ತ್ವಿಕ ಕರ್ಮ ಎಂದು ಹೇಳಲಾಗುತ್ತದೆ.
 
ಶ್ಲೋಕದಲ್ಲಿ ಸಾತ್ತ್ವಿಕ ಕರ್ಮದ ಪ್ರಮುಖ ನಾಲ್ಕು ಅರ್ಹತೆಗಳು ಅಥವಾ ಲಕ್ಷಣಗಳು ಏನು ಎಂದು ತಿಳಿಸಲಾಗಿದೆ:
 
ನಿಯತಂ (ನಿಯಮಬದ್ಧ/ ಶಾಸ್ತ್ರೋಕ್ತ/ ಶಾಸ್ತ್ರಸಮ್ಮತ ಕರ್ತವ್ಯ):
ಅಂದರೆ ಸಮಾಜಕ್ಕೆ ಮತ್ತು ತನಗೆ ಒಳಿತನ್ನು ಉಂಟುಮಾಡುವ, ಧರ್ಮಗ್ರಂಥಗಳ ನಿಯಮಗಳ ಪ್ರಕಾರ ನಮಗೆ ನಿಯೋಜಿಸಲಾದ ನಮ್ಮ ಸ್ವಭಾವಕ್ಕೆ ತಕ್ಕುದಾದ ಕರ್ತವ್ಯ ಕರ್ಮಗಳು.
 
ಸಂಗರಹಿತಮ್ (ಆಸಕ್ತಿ ರಹಿತ):
"ಈ ಕೆಲಸವನ್ನು ನಾನೇ ಮಾಡಿದೆ, ಇದರ ಯಶಸ್ಸು ಕೇವಲ ನನ್ನಿಂದಲೇ ಆಯಿತು, ಇದರಿಂದ ಬರುವ ಗೌರವ ನನಗೇ ಸಿಗಬೇಕು” ಎಂಬ ಅಹಂಕಾರವಿಲ್ಲದೆ ಕೆಲಸ ಮಾಡುವುದು. ಕರ್ಮದೊಂದಿಗೆ ಮಾನಸಿಕವಾಗಿ ಅತಿಯಾಗಿ ಅಂಟಿಕೊಳ್ಳದಿರುವುದು ಸಾತ್ತ್ವಿಕತೆಯ ಲಕ್ಷಣ.
 
ಅರಾಗ-ದ್ವೇಷತಃ ಕೃತಮ್ (ರಾಗ-ದ್ವೇಷಗಳಿಲ್ಲದೆ ಮಾಡುವುದು):
ಕೇವಲ ತನಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡುವುದು (ರಾಗ), ತನಗೆ ಇಷ್ಟವಿಲ್ಲದ, ಕಷ್ಟವಾದ ಅಥವಾ ಅನಿಷ್ಟವಾದ ಕೆಲಸವನ್ನು ತಿರಸ್ಕರಿಸುವುದು ಅಥವಾ ಯಾರ ಮೇಲೋ ಇರುವ ಸಿಟ್ಟು, ಅಸೂಯೆ, ಮತ್ತು ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾಡುವ ಕೆಲಸ (ದ್ವೇಷ). ಪರಿಸ್ಥಿತಿಗೆ ತಕ್ಕಂತೆ ಎದುರಾಗುವ ಕರ್ತವ್ಯವನ್ನು ಯಾವುದೇ ರಾಗ (ಮೋಹ) ಅಥವಾ ದ್ವೇಷವಿಲ್ಲದೆ ಸಮಚಿತ್ತದಿಂದ ಮಾಡುವುದೇ ಸಾತ್ತ್ವಿಕತೆ. ಸಾತ್ತ್ವಿಕ ಕರ್ಮವು ರಾಗ ದ್ವೇಷ ಎಂಬ ಎರಡು ವಿಕಾರಗಳಿಂದ ಮುಕ್ತವಾಗಿರುತ್ತದೆ. ಕರ್ತವ್ಯದ ದೃಷ್ಟಿಯಿಂದ ಎಲ್ಲವನ್ನೂ ಸಮಾನವಾಗಿ ಕಂಡು ಅದನ್ನು ಕೇವಲ "ಮಾಡಬೇಕಾದ ಧರ್ಮ" ಎಂಬ ಭಾವದಿಂದ ಮಾಡಲಾಗುತ್ತದೆ.
 
ಅಫಲಪ್ರೇಪ್ಸುನಾ (ಫಲಾಪೇಕ್ಷೆ ಇಲ್ಲದಿರುವುದು):
ಇದು ಭಗವದ್ಗೀತೆಯ ಮುಖ್ಯ ಸಿದ್ಧಾಂತವಾದ 'ನಿಷ್ಕಾಮ ಕರ್ಮ'ವನ್ನು ಜ್ಞಾಪಿಸುತ್ತದೆ. ಕೆಲಸದ ಫಲಿತಾಂಶದ ಮೇಲೆ ಕಣ್ಣಿಟ್ಟು ಕೆಲಸ ಮಾಡಬಾರದು. ಫಲದ ಮೇಲಿನ ಆಸೆಯನ್ನು ಬಿಟ್ಟು ಕೇವಲ ಕರ್ತವ್ಯ ಬುದ್ಧಿಯಿಂದ ಕೆಲಸ ಮಾಡಿದಾಗ ಮಾತ್ರ ಮನಸ್ಸಿಗೆ ನಿಜವಾದ ಶಾಂತಿ ಸಿಗುತ್ತದೆ ಮತ್ತು ಆ ಕರ್ಮವು ಸಾತ್ತ್ವಿಕವಾಗುತ್ತದೆ. ಫಲದ ಮೇಲಿನ ಹಕ್ಕನ್ನು ತ್ಯಜಿಸುವುದು ಎಂದರೆ ಬೇಜವಾಬ್ದಾರಿತನವಲ್ಲ. ಫಲಿತಾಂಶ ಏನೇ ಬರಲಿ ಜಯ ಅಥವಾ ಅಪಜಯ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ.
 
ಒಂದು ಕಾರ್ಯವು ಸಾತ್ತ್ವಿಕವಾಗಬೇಕಾದರೆ ಅದು ಕೇವಲ ಒಳ್ಳೆಯ ಕೆಲಸವಾಗಿದ್ದರೆ ಸಾಲದು, ಅದನ್ನು ಮಾಡುವವನ ಮಾನಸಿಕ ಸ್ಥಿತಿಯೂ ಮುಖ್ಯ ಮತ್ತು ಅವನ ಮನಸ್ಸು ಶುದ್ಧವಾಗಿರಬೇಕು. ಸಾತ್ತ್ವಿಕ ಕರ್ಮ ಮಾಡುವವನು ತನಗಾಗಿ ಏನನ್ನೂ ಬಯಸುವುದಿಲ್ಲ. "ಇದು ನನ್ನ ಕರ್ತವ್ಯ, ಇದನ್ನು ನಾನು ಮಾಡಲೇಬೇಕು" ಎಂಬ ಜವಾಬ್ದಾರಿಯಿಂದ ಕೆಲಸ ಮಾಡುತ್ತಾನೆ. ಆ ಕೆಲಸವನ್ನು ಮಾಡುವಾಗ ಅವನಿಗೆ ಯಾವುದೇ ಅಹಂಕಾರವಾಗಲಿ, ಹೊಗಳಿಕೆ-ತೆಗಳಿಕೆಯ ಕಡೆ ಗಮನವಾಗಲಿ ಇರುವುದಿಲ್ಲ. ಅವನು ಯಾರ ಮೇಲಿನ ದ್ವೇಷದಿಂದಾಗಲಿ ಅಥವಾ ವೈಯಕ್ತಿಕ ಲಾಭದ ಮೋಹದಿಂದಾಗಲಿ ಕರ್ಮದಲ್ಲಿ ತೊಡಗುವುದಿಲ್ಲ. ಕೇವಲ ಕರ್ತವ್ಯ ಪ್ರಜ್ಞೆಯಿಂದ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾರ ಮೇಲೆಯೂ ದ್ವೇಷ ಸಾಧಿಸದೆ ಅಥವಾ ಯಾರಿಗೂ ಪ್ರದರ್ಶನ ಮಾಡದೆ ಮಾಡುವ ಕೆಲಸವೇ ಸಾತ್ತ್ವಿಕ ಕರ್ಮ. ಇದು ಮನುಷ್ಯನನ್ನು ಕರ್ಮದ ಬಂಧನದಿಂದ ಮುಕ್ತಗೊಳಿಸಿ ಆಧ್ಯಾತ್ಮಿಕ ಉನ್ನತಿಗೆ ದಾರಿ ಮಾಡಿಕೊಡುತ್ತದೆ.

18-24
यत्तु कामेप्सुना कर्म   साहङ्कारेण वा पुनः ।
क्रियते बहुलायासं   तद्राजसमुदाहृतम् ॥ १८-२४
ಯತ್ತು ಕಾಮೇಪ್ಸುನಾ ಕರ್ಮ    ಸಾಹಙ್ಕಾರೇಣ ವಾ ಪುನಃ
ಕ್ರಿಯತೇ ಬಹುಲಾಯಾಸಂ    ತದ್ರಾಜಸಮುದಾಹೃತಮ್ 18.24
 ಆದರೆ, ಯಾವ ಕರ್ಮವು ಭೋಗ-ಭಾಗ್ಯಗಳ ಆಸೆಯಿಂದ ಅಥವಾ ಸ್ವಾರ್ಥದ ಪ್ರತಿಫಲಾಪೇಕ್ಷೆಯಿಂದ, "ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ" ಎಂಬ ಅಹಂಕಾರದಿಂದ ಮತ್ತು ಅತಿಯಾದ ದೈಹಿಕ ಹಾಗೂ ಮಾನಸಿಕ ಆಯಾಸ ಶ್ರಮದಿಂದ ಮಾಡಲ್ಪಡುತ್ತದೆಯೋ, ಅಂತಹ ಕರ್ಮವನ್ನು ರಾಜಸಿಕ ಕರ್ಮ ಎಂದು ಕರೆಯಲಾಗುತ್ತದೆ.
 
ಈ ಶ್ಲೋಕವು ರಾಜಸಿಕ ಕರ್ಮದ ಮೂರು ಪ್ರಮುಖ ಲಕ್ಷಣಗಳನ್ನು ತಿಳಿಸುತ್ತದೆ:
 
ಕಾಮೇಪ್ಸುನಾ (ಫಲಾಪೇಕ್ಷೆ/ಸ್ವಾರ್ಥ):
ರಾಜಸ ಕರ್ಮದ ಹಿಂದೆ ತೀವ್ರವಾದ ಸ್ವಾರ್ಥ ಅಡಗಿರುತ್ತದೆ. ರಾಜಸಿಕ ಪ್ರವೃತ್ತಿಯ ವ್ಯಕ್ತಿಯು ಯಾವುದೇ ಕೆಲಸವನ್ನು ನಿಸ್ವಾರ್ಥವಾಗಿ ಮಾಡುವುದಿಲ್ಲ. ರಾಜಸಿಕ ಕರ್ಮ ಮಾಡುವವನಿಗೆ ಕರ್ತವ್ಯಕ್ಕಿಂತ ಹೆಚ್ಚಾಗಿ ಆ ಕೆಲಸದಿಂದ ಸಿಗುವ ಲಾಭವೇ ಮುಖ್ಯವಾಗಿರುತ್ತದೆ. ತನಗೆ ಇದರಿಂದ ಏನು ಸಿಗುತ್ತದೆ? ಎಷ್ಟು ದುಡ್ಡು ಬರುತ್ತದೆ? ಎಷ್ಟು ಹೆಸರು ಬರುತ್ತದೆ? ಎಂಬುದೇ ಅವನ ಮೊದಲ ಆಲೋಚನೆ ಆಗಿರುತ್ತದೆ. ಕೀರ್ತಿ, ಹಣ, ಅಧಿಕಾರ, ಸಮಾಜದಲ್ಲಿ ಗೌರವದಂತಹ ಲೌಕಿಕ ಬಯಕೆಗಳೇ ಇವರನ್ನು ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ, ಅಥವಾ ಸ್ವರ್ಗದ ಭೋಗಗಳಿಗಾಗಿ ಮಾತ್ರ ಅವನು ಕರ್ಮದಲ್ಲಿ ತೊಡಗುತ್ತಾನೆ. ಮತ್ತು ಫಲ ಸಿಗದಿದ್ದರೆ ತೀವ್ರ ನಿರಾಶೆ ಹೊಂದುತ್ತಾರೆ.
 
ಸಾಹಂಕಾರೇಣ (ಅಹಂಕಾರದಿಂದ ಕೂಡಿರುವುದು):
ಇಂತಹ ವ್ಯಕ್ತಿಗಳಲ್ಲಿ ತಾವೇ ಎಲ್ಲದಕ್ಕೂ ಕರ್ತೃ ಎಂಬ ಭಾವನೆ, ಮತ್ತು "ನನ್ನನ್ನು ಬಿಟ್ಟರೆ ಈ ಕೆಲಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ನಾನೇ ಶ್ರೇಷ್ಠ" ಎಂಬ ಅಹಂಭಾವ ತುಂಬಿರುತ್ತದೆ, "ಇದು ನನ್ನಿಂದಲೇ ಸಾಧ್ಯವಾಯಿತು" ಎಂಬ ಹೆಮ್ಮೆ ಎದ್ದು ಕಾಣುತ್ತದೆ. ಕೆಲಸ ಯಶಸ್ವಿಯಾದರೆ ತಮ್ಮನ್ನು ತಾವೇ ಅತಿಯಾಗಿ ಹೊಗಳಿಕೊಳ್ಳುತ್ತಾರೆ, ವಿಫಲವಾದರೆ ಬೇರೆಯವರನ್ನು ದೂಷಿಸುತ್ತಾರೆ ಮತ್ತು ಇತರರನ್ನು ಕೀಳಾಗಿ ಕಾಣುತ್ತಾರೆ. "ನಾನು" ಮತ್ತು "ನನ್ನದು" ಎಂಬ ಭಾವನೆ ಇವರಲ್ಲಿ ತೀವ್ರವಾಗಿರುತ್ತದೆ. ಇವರು ಸಮಾಜದಲ್ಲಿ ತಮ್ಮ ಪ್ರಭಾವ ಮತ್ತು ಅಂತಸ್ತನ್ನು ತೋರಿಸಿಕೊಳ್ಳಲು ಧರ್ಮದ ಕೆಲಸಗಳನ್ನು ಕೂಡ ಪ್ರದರ್ಶನಕ್ಕಾಗಿ ಮಾಡುತ್ತಾರೆ.
 
ಬಹುಲಾಯಾಸಮ್ (ಅತಿಯಾದ ಆಯಾಸ/ಶ್ರಮ):
ರಾಜಸಿಕ ಕರ್ಮವು ತೀವ್ರವಾದ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಇವರ ಕೆಲಸದಲ್ಲಿ ಫಲಿತಾಂಶದ ಬಗ್ಗೆ ಅತಿಯಾದ ಆಸೆ, ಅಹಂಕಾರ ಮತ್ತು ಆತಂಕ ಇರುವುದರಿಂದ, ಇವರು ತಮಗೇ ತಿಳಿಯದಂತೆ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಫಲ ಸಿಗದಿದ್ದರೆ ಏನಾಗಬಹುದು ಎಂಬ ಭಯ ಮತ್ತು ಸಿಕ್ಕರೆ ಉಂಟಾಗುವ ಅತಿಯಾದ ಕಾತರ — ಇವೆರಡರ ನಡುವೆ ಸಿಲುಕಿ ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಒತ್ತಡಕ್ಕೊಳಗಾಗಿ ಅತಿಯಾಗಿ ದಣಿಯುತ್ತಾರೆ. ಹಗಲಿರುಳು ಕಷ್ಟಪಟ್ಟರೂ ಹಾಗೂ ಎಷ್ಟೋ ಯಶಸ್ಸು ಗಳಿಸಿದರೂ ಮನಸ್ಸಿನಲ್ಲಿ ಸದಾ ಆತಂಕ, ಭಯ ಮತ್ತು ಅಶಾಂತಿ ಮನೆಮಾಡಿರುತ್ತದೆ.
 
ಈ ಶ್ಲೋಕದ ಮುಖ್ಯ ಭಾವವೇನೆಂದರೆ, ಮನುಷ್ಯನು ಸ್ವಾರ್ಥ ಮತ್ತು ತೋರ್ಪಡಿಕೆಗಾಗಿ ಮಾಡುವ ಕೆಲಸಗಳು ರಾಜಸ ಗುಣಕ್ಕೆ ಸೇರುತ್ತವೆ. ಇಲ್ಲಿ ಕರ್ತವ್ಯದ ಭಾವನೆಗಿಂತ "ನಾನು ಮಾಡುತ್ತಿದ್ದೇನೆ" ಎಂಬ ಅಹಂಕಾರ ಮತ್ತು "ನನಗೆ ಇದರ ಲಾಭ ಸಿಗಬೇಕು" ಎಂಬ ಲೋಭ ಹೆಚ್ಚಾಗಿರುತ್ತದೆ. ಅಂತಹ ಕೆಲಸಗಳು ಮನಸ್ಸಿಗೆ ನೆಮ್ಮದಿ ಕೊಡುವ ಬದಲಿಗೆ ತೀವ್ರ ಉದ್ವೇಗ ಮತ್ತು ದಣಿವಿಗೆ ಕಾರಣವಾಗುತ್ತವೆ.
 
ರಾಜಸಿಕ ಕರ್ಮದ ಹಿಂದೆ ಯಾವಾಗಲೂ ತೀವ್ರವಾದ ಸ್ವಾರ್ಥ, ಭೌತಿಕ ಲಾಭದ ಹಂಬಲ, ಹೆಸರು, ಕೀರ್ತಿ ಮತ್ತು ಪ್ರದರ್ಶನ ಬುದ್ಧಿ ಇರುತ್ತದೆ. ಇಂತಹ ಕೆಲಸವನ್ನು ಮಾಡುವ ವ್ಯಕ್ತಿಯು "ನನಗೆ ಇದರ ಪ್ರತಿಯಾಗಿ ಏನು ಸಿಗುತ್ತದೆ?" ಎಂಬ ಫಲದ ಆಸೆಯಿಂದಲೇ ಕೆಲಸಕ್ಕೆ ಕೈಹಾಕುತ್ತಾನೆ. ಅಲ್ಲದೆ, ಅವನಲ್ಲಿ "ನಾನೇ ಈ ಕೆಲಸವನ್ನು ಸಾಧಿಸುತ್ತಿದ್ದೇನೆ, ನನಗಿಂತ ಶ್ರೇಷ್ಠರು ಯಾರೂ ಇಲ್ಲ" ಎಂಬ ಅಹಂಕಾರ ತುಂಬಿರುತ್ತದೆ. ಫಲದ ಮೇಲಿನ ಅತಿಯಾದ ವ್ಯಾಮೋಹ ಮತ್ತು ಅಹಂಕಾರದ ಕಾರಣದಿಂದಾಗಿ, ಆ ಕೆಲಸವು ಅವನಿಗೆ ಅತ್ಯಂತ ಕಷ್ಟಕರವಾಗಿ ಪರಿಣಮಿಸುತ್ತದೆ. ಆ ಕೆಲಸದ ಯಶಸ್ಸು ಅಥವಾ ಅಪಜಯದ ಚಿಂತೆಯಲ್ಲೇ ಅವನು ಅಪಾರವಾದ ಮಾನಸಿಕ ಮತ್ತು ದೈಹಿಕ ಆಯಾಸಕ್ಕೆ ಒಳಗಾಗುತ್ತಾನೆ.

18-25
अनुबन्धं क्षयं हिंसाम्   अनपेक्ष्य च पौरुषम् ।
मोहादारभ्यते कर्म   यत्तत्तामसमुच्यते ॥ १८-२५
ಅನುಬನ್ಧಂ ಕ್ಷಯಂ ಹಿಂಸಾಮ್   ಅನಪೇಕ್ಷ್ಯ ಚ ಪೌರುಷಮ್
ಮೋಹಾದಾರಭ್ಯತೇ ಕರ್ಮ    ಯತ್ತತ್ತಾಮಸಮುಚ್ಯತೇ 18.25
 
18-26
मुक्तसङ्गोऽनहंवादी   धृत्युत्साहसमन्वितः ।
सिद्ध्यसिद्ध्योर्निर्विकारः   कर्ता सात्त्विक उच्यते ॥ १८-२६
ಮುಕ್ತಸಙ್ಗೋನಹಂವಾದೀ    ಧೃತ್ಯುತ್ಸಾಹಸಮನ್ವಿತಃ
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ    ಕರ್ತಾ ಸಾತ್ತ್ವಿಕ ಉಚ್ಯತೇ 18.26
 
18-27
रागी कर्मफलप्रेप्सुः   लुब्धो हिंसात्मकोऽशुचिः ।
हर्षशोकान्वितः कर्ता   राजसः परिकीर्तितः ॥ १८-२७
ರಾಗೀ ಕರ್ಮಫಲಪ್ರೇಪ್ಸುಃ   ಲುಬ್ಧೋ ಹಿಂಸಾತ್ಮಕೋಶುಚಿಃ
ಹರ್ಷಶೋಕಾನ್ವಿತಃ ಕರ್ತಾ    ರಾಜಸಃ ಪರಿಕೀರ್ತಿತಃ 18.27
 
18-28
अयुक्तः प्राकृतः स्तब्धः   शठो नैष्कृतिकोऽलसः ।
विषादी दीर्घसूत्री च   कर्ता तामस उच्यते ॥ १८-२ ८
ಅಯುಕ್ತಃ ಪ್ರಾಕೃತಃ ಸ್ತಬ್ಧಃ    ಶಠೋ ನೈಷ್ಕೃತಿಕೋಲಸಃ
ವಿಷಾದೀ ದೀರ್ಘಸೂತ್ರೀ ಚ    ಕರ್ತಾ ತಾಮಸ ಉಚ್ಯತೇ 18.28
 
18-29
बुद्धेर्भेदं धृतेश्चैव   गुणतस्त्रिविधं श्रृणु ।
प्रोच्यमानमशेषेण   पृथक्त्वेन धनञ्जय ॥ १८-२ ९
ಬುದ್ಧೇರ್ಭೇದಂ ಧೃತೇಶ್ಚೈವ    ಗುಣತಸ್ತ್ರಿವಿಧಂ ಶ್ರೃಣು
ಪ್ರೋಚ್ಯಮಾನಮಶೇಷೇಣ    ಪೃಥಕ್ತ್ವೇನ ಧನಞ್ಜಯ 18.29
 
18-30
प्रवृत्तिं च निवृत्तिं च   कार्याकार्ये भयाभये ।
बन्धं मोक्षं च या वेत्ति   बुद्धिः सा पार्थ सात्त्विकी ॥ १८-३०
ಪ್ರವೃತ್ತಿಂ ಚ ನಿವೃತ್ತಿಂ ಚ    ಕಾರ್ಯಾಕಾರ್ಯೇ ಭಯಾಭಯೇ
ಬನ್ಧಂ ಮೋಕ್ಷಂ ಚ ಯಾ ವೇತ್ತಿ    ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ 18.30

18-31
यया धर्ममधर्मं च   कार्यं चाकार्यमेव च ।
अयथावत्प्रजानाति   बुद्धिः सा पार्थ राजसी ॥ १८-३ १
ಯಯಾ ಧರ್ಮಮಧರ್ಮಂ ಚ    ಕಾರ್ಯಂ ಚಾಕಾರ್ಯಮೇವ ಚ
ಅಯಥಾವತ್ಪ್ರಜಾನಾತಿ    ಬುದ್ಧಿಃ ಸಾ ಪಾರ್ಥ ರಾಜಸೀ 18.31
 
18-32
अधर्मं धर्ममिति या   मन्यते तमसाऽवृता ।
सर्वार्थान्विपरीतांश्च   बुद्धिः सा पार्थ तामसी ॥ १८-३ २
ಅಧರ್ಮಂ ಧರ್ಮಮಿತಿ ಯಾ    ಮನ್ಯತೇ ತಮಸಾವೃತಾ
ಸರ್ವಾರ್ಥಾನ್ವಿಪರೀತಾಂಶ್ಚ    ಬುದ್ಧಿಃ ಸಾ ಪಾರ್ಥ ತಾಮಸೀ 18.32
 
18-33
धृत्या यया धारयते   मनःप्राणेन्द्रियक्रियाः ।
योगेनाव्यभिचारिण्या   धृतिः सा पार्थ सात्त्विकी ॥ १८-३ ३
ಧೃತ್ಯಾ ಯಯಾ ಧಾರಯತೇ    ಮನಃಪ್ರಾಣೇನ್ದ್ರಿಯಕ್ರಿಯಾಃ
ಯೋಗೇನಾವ್ಯಭಿಚಾರಿಣ್ಯಾ    ಧೃತಿಃ ಸಾ ಪಾರ್ಥ ಸಾತ್ತ್ವಿಕೀ 18.33
 
18-34
यया तु धर्मकामार्थान्   धृत्या धारयतेऽर्जुन ।
प्रसङ्गेन फलाकाङ्क्षी   धृतिः सा पार्थ राजसी ॥ १८-३ ४
ಯಯಾ ತು ಧರ್ಮಕಾಮಾರ್ಥಾನ್    ಧೃತ್ಯಾ ಧಾರಯತೇರ್ಜುನ
ಪ್ರಸಙ್ಗೇನ ಫಲಾಕಾಙ್ಕ್ಷೀ    ಧೃತಿಃ ಸಾ ಪಾರ್ಥ ರಾಜಸೀ 18.34
 
18-35
यया स्वप्नं भयं शोकं   विषादं मदमेव च ।
न विमुञ्चति दुर्मेधा   धृतिः सा पार्थ तामसी ॥ १८-३ ५
ಯಯಾ ಸ್ವಪ್ನಂ ಭಯಂ ಶೋಕಂ    ವಿಷಾದಂ ಮದಮೇವ ಚ
ನ ವಿಮುಞ್ಚತಿ ದುರ್ಮೇಧಾ    ಧೃತಿಃ ಸಾ ಪಾರ್ಥ ತಾಮಸೀ 18.35
 
18-36
सुखं त्विदानीं त्रिविधं   श्रृणु मे भरतर्षभ ।
अभ्यासाद्रमते यत्र   दुःखान्तं च निगच्छति ॥ १८-३ ६
ಸುಖಂ ತ್ವಿದಾನೀಂ ತ್ರಿವಿಧಂ    ಶ್ರೃಣು ಮೇ ಭರತರ್ಷಭ
ಅಭ್ಯಾಸಾದ್ರಮತೇ ಯತ್ರ    ದುಃಖಾನ್ತಂ ಚ ನಿಗಚ್ಛತಿ 18.36
 
18-37
यत्तदग्रे विषमिव   परिणामेऽमृतोपमम् ।
तत्सुखं सात्त्विकं प्रोक्तम्   आत्मबुद्धिप्रसादजम् ॥ १८-३ ७
ಯತ್ತದಗ್ರೇ ವಿಷಮಿವ    ಪರಿಣಾಮೇಮೃತೋಪಮಮ್
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್   ಆತ್ಮಬುದ್ಧಿಪ್ರಸಾದಜಮ್ 18.37
 
18-38
विषयेन्द्रियसंयोगात्   यत्तदग्रेऽमृतोपमम् ।
परिणामे विषमिव   तत्सुखं राजसं स्मृतम् ॥ १८-३ ८
ವಿಷಯೇನ್ದ್ರಿಯಸಂಯೋಗಾತ್   ಯತ್ತದಗ್ರೇಮೃತೋಪಮಮ್
ಪರಿಣಾಮೇ ವಿಷಮಿವ    ತತ್ಸುಖಂ ರಾಜಸಂ ಸ್ಮೃತಮ್ 18.38
 
18-39
यदग्रे चानुबन्धे च   सुखं मोहनमात्मनः ।
निद्रालस्यप्रमादोत्थं   तत्तामसमुदाहृतम् ॥ १८-३ ९
ಯದಗ್ರೇ ಚಾನುಬನ್ಧೇ ಚ    ಸುಖಂ ಮೋಹನಮಾತ್ಮನಃ
ನಿದ್ರಾಲಸ್ಯಪ್ರಮಾದೋತ್ಥಂ    ತತ್ತಾಮಸಮುದಾಹೃತಮ್ 18.39
 
18-40
न तदस्ति पृथिव्यां वा   दिवि देवेषु वा पुनः ।
सत्त्वं प्रकृतिजैर्मुक्तं   यदेभिः स्यात्त्रिभिर्गुणैः ॥ १८- ४ ०
ನ ತದಸ್ತಿ ಪೃಥಿವ್ಯಾಂ ವಾ    ದಿವಿ ದೇವೇಷು ವಾ ಪುನಃ
ಸತ್ತ್ವಂ ಪ್ರಕೃತಿಜೈರ್ಮುಕ್ತಂ    ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ 18.40
 
18-41
ब्राह्मणक्षत्रियविशां   शूद्राणां च परंतप ।
कर्माणि प्रविभक्तानि   स्वभावप्रभवैर्गुणैः ॥ १८- ४ १
ಬ್ರಾಹ್ಮಣಕ್ಷತ್ರಿಯವಿಶಾಂ    ಶೂದ್ರಾಣಾಂ ಚ ಪರಂತಪ
ಕರ್ಮಾಣಿ ಪ್ರವಿಭಕ್ತಾನಿ    ಸ್ವಭಾವಪ್ರಭವೈರ್ಗುಣೈಃ 18.41
 
18-42
शमो दमस्तपः शौचं   क्षान्तिरार्जवमेव च ।
ज्ञानं विज्ञानमास्तिक्यं   ब्रह्मकर्म स्वभावजम् ॥ १८- ४ २
ಶಮೋ ದಮಸ್ತಪಃ ಶೌಚಂ    ಕ್ಷಾನ್ತಿರಾರ್ಜವಮೇವ ಚ
ಜ್ಞಾನಂ ವಿಜ್ಞಾನಮಾಸ್ತಿಕ್ಯಂ    ಬ್ರಹ್ಮಕರ್ಮ ಸ್ವಭಾವಜಮ್ 18.42
 
18-43
शौर्यं तेजो धृतिर्दाक्ष्यं   युद्धे चाप्यपलायनम् ।
दानमीश्वरभावश्च   क्षात्रं कर्म स्वभावजम् ॥ १८- ४ ३
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ    ಯುದ್ಧೇ ಚಾಪ್ಯಪಲಾಯನಮ್
ದಾನಮೀಶ್ವರಭಾವಶ್ಚ    ಕ್ಷಾತ್ರಂ ಕರ್ಮ ಸ್ವಭಾವಜಮ್ 18.43
 
18-44
कृषिगौरक्ष्यवाणिज्यं   वैश्यकर्म स्वभावजम् ।
परिचर्यात्मकं कर्म   शूद्रस्यापि स्वभावजम् ॥ १८- ४ ४
ಕೃಷಿಗೌರಕ್ಷ್ಯವಾಣಿಜ್ಯಂ    ವೈಶ್ಯಕರ್ಮ ಸ್ವಭಾವಜಮ್
ಪರಿಚರ್ಯಾತ್ಮಕಂ ಕರ್ಮ    ಶೂದ್ರಸ್ಯಾಪಿ ಸ್ವಭಾವಜಮ್ 18.44
 
18-45
स्वे स्वे कर्मण्यभिरतः   संसिद्धिं लभते नरः ।
स्वकर्मनिरतः सिद्धिम्   यथा विन्दति तच्छृणु ॥ १८- ४ ५
ಸ್ವೇ ಸ್ವೇ ಕರ್ಮಣ್ಯಭಿರತಃ    ಸಂಸಿದ್ಧಿಂ ಲಭತೇ ನರಃ
ಸ್ವಕರ್ಮನಿರತಃ ಸಿದ್ಧಿಂ    ಯಥಾ ವಿನ್ದತಿ ತಚ್ಛೃಣು 18.45

18-46
यतः प्रवृत्तिर्भूतानां   येन सर्वमिदं ततम् ।
स्वकर्मणा तमभ्यर्च्य   सिद्धिं विन्दति मानवः ॥ १८- ४ ६
ಯತಃ ಪ್ರವೃತ್ತಿರ್ಭೂತಾನಾಂ    ಯೇನ ಸರ್ವಮಿದಂ ತತಮ್
ಸ್ವಕರ್ಮಣಾ ತಮಭ್ಯರ್ಚ್ಯ    ಸಿದ್ಧಿಂ ವಿನ್ದತಿ ಮಾನವಃ 18.46
 
18-47
श्रेयान्स्वधर्मो विगुणः   परधर्मात्स्वनुष्ठितात् ।
स्वभावनियतं कर्म   कुर्वन्नाप्नोति किल्बिषम् ॥ १८- ४ ७
ಶ್ರೇಯಾನ್ಸ್ವಧರ್ಮೋ ವಿಗುಣಃ    ಪರಧರ್ಮಾತ್ಸ್ವನುಷ್ಠಿತಾತ್
ಸ್ವಭಾವನಿಯತಂ ಕರ್ಮ    ಕುರ್ವನ್ನಾಪ್ನೋತಿ ಕಿಲ್ಬಿಷಮ್ 18.47
 
18-48
सहजं कर्म कौन्तेय   सदोषमपि न त्यजेत् ।
सर्वारम्भा हि दोषेण   धूमेनाग्निरिवावृताः ॥ १८- ४ ८
ಸಹಜಂ ಕರ್ಮ ಕೌನ್ತೇಯ    ಸದೋಷಮಪಿ ನ ತ್ಯಜೇತ್
ಸರ್ವಾರಮ್ಭಾ ಹಿ ದೋಷೇಣ    ಧೂಮೇನಾಗ್ನಿರಿವಾವೃತಾಃ 18.48
 
18-49
असक्तबुद्धिः सर्वत्र   जितात्मा विगतस्पृहः ।
नैष्कर्म्यसिद्धिं परमां   संन्यासेनाधिगच्छति ॥ १८- ४ ९
ಅಸಕ್ತಬುದ್ಧಿಃ ಸರ್ವತ್ರ    ಜಿತಾತ್ಮಾ ವಿಗತಸ್ಪೃಹಃ
ನೈಷ್ಕರ್ಮ್ಯಸಿದ್ಧಿಂ ಪರಮಾಂ    ಸಂನ್ಯಾಸೇನಾಧಿಗಚ್ಛತಿ 18.49
 
18-50
सिद्धिं प्राप्तो यथा ब्रह्म   तथाप्नोति निबोध मे ।
समासेनैव कौन्तेय   निष्ठा ज्ञानस्य या परा ॥ १८- ५०
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ    ತಥಾಪ್ನೋತಿ ನಿಬೋಧ ಮೇ
ಸಮಾಸೇನೈವ ಕೌನ್ತೇಯ    ನಿಷ್ಠಾ ಜ್ಞಾನಸ್ಯ ಯಾ ಪರಾ 18.50
 
18-51
बुद्ध्या विशुद्धया युक्तो   धृत्याऽत्मानं नियम्य च ।
शब्दादीन् विषयांस्त्यक्त्वा   रागद्वेषौ व्युदस्य च ॥ १८- ५१
ಬುದ್ಧ್ಯಾ ವಿಶುದ್ಧಯಾ ಯುಕ್ತೋ    ಧೃತ್ಯಾತ್ಮಾನಂ ನಿಯಮ್ಯ ಚ
ಶಬ್ದಾದೀನ್ ವಿಷಯಾಂಸ್ತ್ಯಕ್ತ್ವಾ    ರಾಗದ್ವೇಷೌ ವ್ಯುದಸ್ಯ ಚ 18.51
 
18-52
विविक्तसेवी लघ्वाशी   यतवाक्कायमानसः ।
ध्यानयोगपरो नित्यं   वैराग्यं समुपाश्रितः ॥ १८- ५२
ವಿವಿಕ್ತಸೇವೀ ಲಘ್ವಾಶೀ    ಯತವಾಕ್ಕಾಯಮಾನಸಃ
ಧ್ಯಾನಯೋಗಪರೋ ನಿತ್ಯಂ    ವೈರಾಗ್ಯಂ ಸಮುಪಾಶ್ರಿತಃ 18.52
 
18-53
अहङ्कारं बलं दर्पं   कामं क्रोधं परिग्रहम् ।
विमुच्य निर्ममः शान्तो   ब्रह्मभूयाय कल्पते ॥ १८- ५३
ಅಹಙ್ಕಾರಂ ಬಲಂ ದರ್ಪಂ    ಕಾಮಂ ಕ್ರೋಧಂ ಪರಿಗ್ರಹಮ್
ವಿಮುಚ್ಯ ನಿರ್ಮಮಃ ಶಾನ್ತೋ    ಬ್ರಹ್ಮಭೂಯಾಯ ಕಲ್ಪತೇ 18.53
 
18-54
ब्रह्मभूतः प्रसन्नात्मा   न शोचति न काङ्क्षति ।
समः सर्वेषु भूतेषु   मद्भक्तिं लभते पराम् ॥ १८- ५४
ಬ್ರಹ್ಮಭೂತಃ ಪ್ರಸನ್ನಾತ್ಮಾ    ನ ಶೋಚತಿ ನ ಕಾಙ್ಕ್ಷತಿ
ಸಮಃ ಸರ್ವೇಷು ಭೂತೇಷು    ಮದ್ಭಕ್ತಿಂ ಲಭತೇ ಪರಾಮ್ 18.54
 
18-55
भक्त्या मामभिजानाति   यावान्यश्चास्मि तत्त्वतः ।
ततो मां तत्त्वतो ज्ञात्वा   विशते तदनन्तरम् ॥ १८- ५५
ಭಕ್ತ್ಯಾ ಮಾಮಭಿಜಾನಾತಿ    ಯಾವಾನ್ಯಶ್ಚಾಸ್ಮಿ ತತ್ತ್ವತಃ
ತತೋ ಮಾಂ ತತ್ತ್ವತೋ ಜ್ಞಾತ್ವಾ    ವಿಶತೇ ತದನನ್ತರಮ್ 18.55
 
18-56
सर्वकर्माण्यपि सदा   कुर्वाणो मद्व्यपाश्रयः ।
मत्प्रसादादवाप्नोति   शाश्वतं पदमव्ययम् ॥ १८- ५६
ಸರ್ವಕರ್ಮಾಣ್ಯಪಿ ಸದಾ    ಕುರ್ವಾಣೋ ಮದ್ವ್ಯಪಾಶ್ರಯಃ
ಮತ್ಪ್ರಸಾದಾದವಾಪ್ನೋತಿ    ಶಾಶ್ವತಂ ಪದಮವ್ಯಯಮ್ 18.56
 
18-57
चेतसा सर्वकर्माणि   मयि संन्यस्य मत्परः ।
बुद्धियोगमुपाश्रित्य   मच्चित्तः सततं भव ॥ १८- ५७
ಚೇತಸಾ ಸರ್ವಕರ್ಮಾಣಿ    ಮಯಿ ಸಂನ್ಯಸ್ಯ ಮತ್ಪರಃ
ಬುದ್ಧಿಯೋಗಮುಪಾಶ್ರಿತ್ಯ    ಮಚ್ಚಿತ್ತಃ ಸತತಂ ಭವ 18.57
 
18-58
मच्चित्तः सर्वदुर्गाणि   मत्प्रसादात्तरिष्यसि ।
अथ चेत्त्वमहङ्कारात्   न श्रोष्यसि विनङ्क्ष्यसि ॥ १८- ५८
ಮಚ್ಚಿತ್ತಃ ಸರ್ವದುರ್ಗಾಣಿ    ಮತ್ಪ್ರಸಾದಾತ್ತರಿಷ್ಯಸಿ
ಅಥ ಚೇತ್ತ್ವಮಹಙ್ಕಾರಾತ್   ನ ಶ್ರೋಷ್ಯಸಿ ವಿನಙ್ಕ್ಷ್ಯಸಿ 18.58
 
18-59
यदहङ्कारमाश्रित्य   न योत्स्य इति मन्यसे ।
मिथ्यैष व्यवसायस्ते   प्रकृतिस्त्वां नियोक्ष्यति ॥ १८- ५९
ಯದಹಙ್ಕಾರಮಾಶ್ರಿತ್ಯ    ನ ಯೋತ್ಸ್ಯ ಇತಿ ಮನ್ಯಸೇ
ಮಿಥ್ಯೈಷ ವ್ಯವಸಾಯಸ್ತೇ    ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ 18.59
 
18-60
स्वभावजेन कौन्तेय   निबद्धः स्वेन कर्मणा ।
कर्तुं नेच्छसि यन्मोहात्   करिष्यस्यवशोऽपि तत् ॥ १८- ६०
ಸ್ವಭಾವಜೇನ ಕೌನ್ತೇಯ    ನಿಬದ್ಧಃ ಸ್ವೇನ ಕರ್ಮಣಾ
ಕರ್ತುಂ ನೇಚ್ಛಸಿ ಯನ್ಮೋಹಾತ್   ಕರಿಷ್ಯಸ್ಯವಶೋಪಿ ತತ್ 18.60

18-61
ईश्वरः सर्वभूतानां   हृद्देशेऽर्जुन तिष्ठति ।
भ्रामयन्सर्वभूतानि   यन्त्रारूढानि मायया ॥ १८- ६१
ಈಶ್ವರಃ ಸರ್ವಭೂತಾನಾಂ    ಹೃದ್ದೇಶೇರ್ಜುನ ತಿಷ್ಠತಿ
ಭ್ರಾಮಯನ್ಸರ್ವಭೂತಾನಿ    ಯನ್ತ್ರಾರೂಢಾನಿ ಮಾಯಯಾ 18.61
 
18-62
तमेव शरणं गच्छ   सर्वभावेन भारत ।
तत्प्रसादात्परां शान्तिं   स्थानं प्राप्स्यसि शाश्वतम् ॥ १८- ६२
ತಮೇವ ಶರಣಂ ಗಚ್ಛ    ಸರ್ವಭಾವೇನ ಭಾರತ
ತತ್ಪ್ರಸಾದಾತ್ಪರಾಂ ಶಾನ್ತಿಂ    ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ 18.62
 
18-63
इति ते ज्ञानमाख्यातं   गुह्याद्गुह्यतरं मया ।
विमृश्यैतदशेषेण   यथेच्छसि तथा कुरु ॥ १८- ६३
ಇತಿ ತೇ ಜ್ಞಾನಮಾಖ್ಯಾತಂ    ಗುಹ್ಯಾದ್ಗುಹ್ಯತರಂ ಮಯಾ
 ವಿಮೃಶ್ಯೈತದಶೇಷೇಣ    ಯಥೇಚ್ಛಸಿ ತಥಾ ಕುರು 18.63
 
18-64
सर्वगुह्यतमं भूयः   श्रृणु मे परमं वचः ।
इष्टोऽसि मे दृढमिति   ततो वक्ष्यामि ते हितम् ॥ १८- ६४
ಸರ್ವಗುಹ್ಯತಮಂ ಭೂಯಃ    ಶ್ರೃಣು ಮೇ ಪರಮಂ ವಚಃ
ಇಷ್ಟೋಸಿ ಮೇ ದೃಢಮಿತಿ    ತತೋ ವಕ್ಷ್ಯಾಮಿ ತೇ ಹಿತಮ್ 18.64
 
18-65
मन्मना भव मद्भक्तो   मद्याजी मां नमस्कुरु ।
मामेवैष्यसि सत्यं ते   प्रतिजाने प्रियोऽसि मे ॥ १८- ६५
ಮನ್ಮನಾ ಭವ ಮದ್ಭಕ್ತೋ    ಮದ್ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಸತ್ಯಂ ತೇ    ಪ್ರತಿಜಾನೇ ಪ್ರಿಯೋಸಿ ಮೇ 18.65
 
18-66
सर्वधर्मान्परित्यज्य   मामेकं शरणं व्रज ।
अहं त्वा सर्वपापेभ्यो   मोक्षयिष्यामि मा शुचः ॥ १८- ६६
ಸರ್ವಧರ್ಮಾನ್ಪರಿತ್ಯಜ್ಯ    ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ    ಮೋಕ್ಷಯಿಷ್ಯಾಮಿ ಮಾ ಶುಚಃ 18.66
 
18-67
इदं ते नातपस्काय   नाभक्ताय कदाचन ।
न चाशुश्रूषवे वाच्यं   न च मां योऽभ्यसूयति ॥ १८- ६७
ಇದಂ ತೇ ನಾತಪಸ್ಕಾಯ    ನಾಭಕ್ತಾಯ ಕದಾಚನ
ನ ಚಾಶುಶ್ರೂಷವೇ ವಾಚ್ಯಂ    ನ ಚ ಮಾಂ ಯೋಭ್ಯಸೂಯತಿ 18.67
 
18-68
य इमं परमं गुह्यं   मद्भक्तेष्वभिधास्यति ।
भक्तिं मयि परां कृत्वा   मामेवैष्यत्यसंशयः ॥ १८- ६८
ಯ ಇಮಂ ಪರಮಂ ಗುಹ್ಯಂ    ಮದ್ಭಕ್ತೇಷ್ವಭಿಧಾಸ್ಯತಿ
ಭಕ್ತಿಂ ಮಯಿ ಪರಾಂ ಕೃತ್ವಾ    ಮಾಮೇವೈಷ್ಯತ್ಯಸಂಶಯಃ 18.68
 
18-69
न च तस्मान्मनुष्येषु   कश्चिन्मे प्रियकृत्तमः ।
भविता न च मे तस्मात्   अन्यः प्रियतरो भुवि ॥ १८- ६९
ನ ಚ ತಸ್ಮಾನ್ಮನುಷ್ಯೇಷು    ಕಶ್ಚಿನ್ಮೇ ಪ್ರಿಯಕೃತ್ತಮಃ
ಭವಿತಾ ನ ಚ ಮೇ ತಸ್ಮಾತ್   ಅನ್ಯಃ ಪ್ರಿಯತರೋ ಭುವಿ 18.69
 
18-70
अध्येष्यते च य इमं   धर्म्यं संवादमावयोः ।
ज्ञानयज्ञेन तेनाहम्   इष्टः स्यामिति मे मतिः ॥ १८- ७०
ಅಧ್ಯೇಷ್ಯತೇ ಚ ಯ ಇಮಂ    ಧರ್ಮ್ಯಂ ಸಂವಾದಮಾವಯೋಃ
ಜ್ಞಾನಯಜ್ಞೇನ ತೇನಾಹಮ್   ಇಷ್ಟಃ ಸ್ಯಾಮಿತಿ ಮೇ ಮತಿಃ 18.70
 
18-71
श्रद्धावाननसूयश्च   श्रृणुयादपि यो नरः ।
सोऽपि मुक्तः शुभाँल्लोकान्   प्राप्नुयात्पुण्यकर्मणाम् ॥ १८- ७१
ಶ್ರದ್ಧಾವಾನನಸೂಯಶ್ಚ    ಶ್ರೃಣುಯಾದಪಿ ಯೋ ನರಃ
ಸೋಪಿ ಮುಕ್ತಃ ಶುಭಾಲ್ಲೋಕಾನ್   ಪ್ರಾಪ್ನುಯಾತ್ಪುಣ್ಯಕರ್ಮಣಾಮ್ 18.71
 
18-72
कच्चिदेतच्छ्रुतं पार्थ   त्वयैकाग्रेण चेतसा ।
कच्चिदज्ञानसंमोहः   प्रनष्टस्ते धनञ्जय ॥ १८- ७२
ಕಚ್ಚಿದೇತಚ್ಛ್ರುತಂ ಪಾರ್ಥ    ತ್ವಯೈಕಾಗ್ರೇಣ ಚೇತಸಾ
ಕಚ್ಚಿದಜ್ಞಾನಸಂಮೋಹಃ    ಪ್ರನಷ್ಟಸ್ತೇ ಧನಞ್ಜಯ 18.72
 
18-73
अर्जुन  उवाच
नष्टो मोहः स्मृतिर्लब्धा   त्वत्प्रसादान्मयाच्युत ।
स्थितोऽस्मि गतसन्देहः   करिष्ये वचनं तव ॥ १८- ७३
ಅರ್ಜುನ ಉವಾಚ
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ    ತ್ವತ್ಪ್ರಸಾದಾನ್ಮಯಾಚ್ಯುತ
ಸ್ಥಿತೋಸ್ಮಿ ಗತಸನ್ದೇಹಃ    ಕರಿಷ್ಯೇ ವಚನಂ ತವ 18.73
 
18-74
सञ्जय उवाच
इत्यहं वासुदेवस्य   पार्थस्य च महात्मनः ।
संवादमिममश्रौषम्   अद्भुतं रोमहर्षणम् ॥ १८- ७४
ಸಞ್ಜಯ ಉವಾಚ
ಇತ್ಯಹಂ ವಾಸುದೇವಸ್ಯ    ಪಾರ್ಥಸ್ಯ ಚ ಮಹಾತ್ಮನಃ
ಸಂವಾದಮಿಮಮಶ್ರೌಷಮ್   ಅದ್ಭುತಂ ರೋಮಹರ್ಷಣಮ್ 18.74
 
18-75
व्यासप्रसादाच्छ्रुतवान्   एतद्गुह्यमहं परम् ।
योगं योगेश्वरात्कृष्णात्   साक्षात्कथयतः स्वयम् ॥ १८- ७५
ವ್ಯಾಸಪ್ರಸಾದಾಚ್ಛ್ರುತವಾನ್   ಏತದ್ಗುಹ್ಯಮಹಂ ಪರಮ್
ಯೋಗಂ ಯೋಗೇಶ್ವರಾತ್ಕೃಷ್ಣಾತ್   ಸಾಕ್ಷಾತ್ಕಥಯತಃ ಸ್ವಯಮ್ 18.75
 
18-76
राजन्संस्मृत्य संस्मृत्य   संवादमिममद्भुतम् ।
केशवार्जुनयोः पुण्यं   हृष्यामि च मुहुर्मुहुः ॥ १८- ७६
ರಾಜನ್ಸಂಸ್ಮೃತ್ಯ ಸಂಸ್ಮೃತ್ಯ    ಸಂವಾದಮಿಮಮದ್ಭುತಮ್
ಕೇಶವಾರ್ಜುನಯೋಃ ಪುಣ್ಯಂ    ಹೃಷ್ಯಾಮಿ ಚ ಮುಹುರ್ಮುಹುಃ 18.76
 
18-77
तच्च संस्मृत्य संस्मृत्य   रूपमत्यद्भुतं हरेः ।
विस्मयो मे महान् राजन्   हृष्यामि च पुनः पुनः ॥ १८- ७७
ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ    ರೂಪಮತ್ಯದ್ಭುತಂ ಹರೇಃ
ವಿಸ್ಮಯೋ ಮೇ ಮಹಾನ್ ರಾಜನ್    ಹೃಷ್ಯಾಮಿ ಚ ಪುನಃ ಪುನಃ 18.77
 
18-78
यत्र योगेश्वरः कृष्णो   यत्र पार्थो धनुर्धरः ।
तत्र श्रीर्विजयो भूतिः   ध्रुवा नीतिर्मतिर्मम ॥ १८- ७८
ಯತ್ರ ಯೋಗೇಶ್ವರಃ ಕೃಷ್ಣೋ    ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೋ ಭೂತಿಃ   ರ್ಧ್ರುವಾ ನೀತಿರ್ಮತಿರ್ಮಮ 18.78
 
 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे मोक्षसन्न्यासयोगो नाम अष्टादशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಮೋಕ್ಷಸನ್ನ್ಯಾಸ ಯೊಗೊ ನಾಮ ಅಷ್ಟಾದಶೋಧ್ಯಾಯಃ