श्रीमद्भगवद्गीता
ಶ್ರೀಮದ್ಭಗವದ್ಗೀತಾ
अष्टादशोऽध्यायः
ಅಷ್ಟಾದಶೋಧ್ಯಾಯಃ
मोक्षसन्न्यासयोगः
ಮೋಕ್ಷಸನ್ನ್ಯಾಸಯೊಗಃ
अर्जुन उवाच
संन्यासस्य महाबाहो तत्त्वमिच्छामि वेदितुम् ।
त्यागस्य च हृषीकेश पृथक्केशिनिषूदन ॥ १८-१
ಅರ್ಜುನ ಉವಾಚ
ಸಂನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ 18.1
ಸನ್ನ್ಯಾಸಸ್ಯ ಮಹಾಬಾಹೋ ತತ್ತ್ವಮ್ ಇಚ್ಛಾಮಿ ವೇದಿತುಮ್
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿ-ನಿಷೂದನ
ಅರ್ಜುನನು
ಹೇಳಿದನು
ಬಲಿಷ್ಠ
ತೋಳುಗಳುಳ್ಳ ಮಹಾಬಾಹುವೇ! ಇಂದ್ರಿಯಗಳ ನಿಯಂತ್ರಕನಾದ ಹೃಷೀಕೇಶನೇ! ಕೇಶಿ ಎಂಬ ರಾಕ್ಷಸನನ್ನು ಮರ್ದಿಸಿದ
ಕೇಶಿನಿಷೂದನನೇ! ಸನ್ನ್ಯಾಸ ಮತ್ತು ತ್ಯಾಗ ಇವೆರಡರ
ನಿಜವಾದ ರಹಸ್ಯ ಅಥವಾ
ತತ್ತ್ವವನ್ನು
ಹಾಗೂ ಅವುಗಳ ನಡುವಿರುವ ವ್ಯತ್ಯಾಸವನ್ನು ನಾನು ಪ್ರತ್ಯೇಕವಾಗಿ ವಿವರವಾಗಿ ತಿಳಿಯಲು ಬಯಸುತ್ತೇನೆ.
ಹಿಂದಿನ ಅಧ್ಯಾಯಗಳಲ್ಲಿ ಸಂನ್ಯಾಸ ಮತ್ತು ತ್ಯಾಗ ಇವೆರಡರ
ಬಗ್ಗೆಯೂ ಅಲ್ಲಲ್ಲಿ ಪ್ರಸ್ತಾಪಿಸಲಾಗಿತ್ತು. ಸನಾತನ ಧರ್ಮದಲ್ಲಿ ಕರ್ಮವನ್ನು ಬಿಡುವುದು (ಕರ್ಮ ಸಂನ್ಯಾಸ)
ಶ್ರೇಷ್ಠವೇ ಅಥವಾ ಕರ್ಮವನ್ನು ಮಾಡುತ್ತಾ ಅದರ ಫಲವನ್ನು ಬಿಡುವುದು (ಕರ್ಮ ಫಲ ತ್ಯಾಗ) ಶ್ರೇಷ್ಠವೇ
ಎಂಬ ಗೊಂದಲವಿದೆ. ಈ ಮೂಲಭೂತ ಸಂಶಯವನ್ನು ನಿವಾರಿಸಿಕೊಳ್ಳಲು ಈ ಪ್ರಶ್ನೆ ನಾಂದಿಯಾಗಿದೆ.
ಹೃಷೀಕೇಶ – ‘ಹೃಷೀಕ’ ಎಂದರೆ ಇಂದ್ರಿಯಗಳು, 'ಈಶ' ಎಂದರೆ ಒಡೆಯ.
ಕೇಶಿನಿಷೂದನ - ಕುದುರೆಯ ರೂಪದಲ್ಲಿ ಬಂದು ಕಂಟಕನಾಗಿದ್ದ 'ಕೇಶಿ' ಎಂಬ ಮಹಾರಾಕ್ಷಸನನ್ನು ಕೊಂದವನು.
18-02
श्रीभगवानुवाचकाम्यानां कर्मणां न्यासं संन्यासं कवयो विदुः ।
सर्वकर्मफलत्यागं प्राहुस्त्यागं विचक्षणाः ॥ १८-२
ಶ್ರೀ ಭಗವಾನುವಾಚ
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ
18.2
ಶ್ರೀ-ಭಗವಾನ್ ಉವಾಚ
ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸನ್ನ್ಯಾಸಮ್ ಕವಯಃ ವಿದುಃ
ಸರ್ವ-ಕರ್ಮ-ಫಲ-ತ್ಯಾಗಮ್ ಪ್ರಾಹುಃ ತ್ಯಾಗಮ್ ವಿಚಕ್ಷಣಾಃ
ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸನ್ನ್ಯಾಸಮ್ ಕವಯಃ ವಿದುಃ
ಸರ್ವ-ಕರ್ಮ-ಫಲ-ತ್ಯಾಗಮ್ ಪ್ರಾಹುಃ ತ್ಯಾಗಮ್ ವಿಚಕ್ಷಣಾಃ
ಶ್ರೀ
ಭಗವಂತನು ಹೀಗೆ ಹೇಳಿದನು
ಐಹಿಕ ಹಾಗೂ ಸ್ವಾರ್ಥದ ಸುಖಕ್ಕಾಗಿ ಮತ್ತು ಭೋಗಗಳ ಇಚ್ಛೆಯಿಂದ ಭೌತಿಕ ಆಸೆಗಳ ಈಡೇರಿಕೆಗಾಗಿ ಮಾಡುವ ಕರ್ಮಗಳನ್ನು (ಕಾಮ್ಯ ಕರ್ಮಗಳನ್ನು) ಸಂಪೂರ್ಣವಾಗಿ ಬಿಟ್ಟುಬಿಡುವುದೇ 'ಸನ್ಯಾಸ' ಎಂದು ಜ್ಞಾನಿಗಳು ತಿಳಿದಿದ್ದಾರೆ. ಮತ್ತು ಮಾಡುವ ಎಲ್ಲಾ ಕರ್ಮಗಳ ಫಲಗಳನ್ನು ಭಗವಂತನಿಗೆ ಅರ್ಪಿಸುವುದನ್ನು ಅಥವಾ ಫಲದ ಮೇಲಿನ ಆಸೆಯನ್ನು ಬಿಟ್ಟು ಬಿಡುವುದನ್ನು ವಿವೇಚನಾಶೀಲರಾದ ಬುದ್ಧಿವಂತರು 'ತ್ಯಾಗ' ಎಂದು ಕರೆಯುತ್ತಾರೆ.
ಐಹಿಕ ಹಾಗೂ ಸ್ವಾರ್ಥದ ಸುಖಕ್ಕಾಗಿ ಮತ್ತು ಭೋಗಗಳ ಇಚ್ಛೆಯಿಂದ ಭೌತಿಕ ಆಸೆಗಳ ಈಡೇರಿಕೆಗಾಗಿ ಮಾಡುವ ಕರ್ಮಗಳನ್ನು (ಕಾಮ್ಯ ಕರ್ಮಗಳನ್ನು) ಸಂಪೂರ್ಣವಾಗಿ ಬಿಟ್ಟುಬಿಡುವುದೇ 'ಸನ್ಯಾಸ' ಎಂದು ಜ್ಞಾನಿಗಳು ತಿಳಿದಿದ್ದಾರೆ. ಮತ್ತು ಮಾಡುವ ಎಲ್ಲಾ ಕರ್ಮಗಳ ಫಲಗಳನ್ನು ಭಗವಂತನಿಗೆ ಅರ್ಪಿಸುವುದನ್ನು ಅಥವಾ ಫಲದ ಮೇಲಿನ ಆಸೆಯನ್ನು ಬಿಟ್ಟು ಬಿಡುವುದನ್ನು ವಿವೇಚನಾಶೀಲರಾದ ಬುದ್ಧಿವಂತರು 'ತ್ಯಾಗ' ಎಂದು ಕರೆಯುತ್ತಾರೆ.
ಈ ಶ್ಲೋಕದಲ್ಲಿ ಆಧ್ಯಾತ್ಮಿಕ ಜೀವನದ ಎರಡು ಮುಖ್ಯ
ಪರಿಕಲ್ಪನೆಗಳಾದ 'ಸನ್ಯಾಸ'
(Renunciation) ಮತ್ತು 'ತ್ಯಾಗ'
(Detachment) ಇವುಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು
ಜ್ಞಾನಿಗಳ ದೃಷ್ಟಿಕೋನದಲ್ಲಿ ವಿವರಿಸಲಾಗಿದೆ.
ಕಾಮ್ಯಾನಾಂ ಕರ್ಮಣಾಂ ನ್ಯಾಸಂ (ಸನ್ಯಾಸ): ನಮ್ಮ ಶಾಸ್ತ್ರಗಳಲ್ಲಿ ಕರ್ಮಗಳನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ 'ಕಾಮ್ಯ
ಕರ್ಮ' ಎಂದರೆ ಕೇವಲ ಸ್ವರ್ಗ ಪ್ರಾಪ್ತಿ, ಧನ ಲಾಭ, ಕೀರ್ತಿ ಮುಂತಾದ ವೈಯಕ್ತಿಕ ಆಸೆಗಳಿಗಾಗಿ ಅಥವಾ ವೈಯಕ್ತಿಕ ಸುಖಕ್ಕಾಗಿ ಮಾಡುವ ಕೆಲಸಗಳು.
ಇಂತಹ ಸ್ವಾರ್ಥ ಪ್ರೇರಿತ ಕೆಲಸಗಳನ್ನು ಪೂರ್ಣವಾಗಿ ತ್ಯಜಿಸುವುದು ಅಥವಾ
ಅಂತ ಸಕಾಮ ಕರ್ಮಗಳನ್ನು ಮಾಡದೆ ಇರುವುದನ್ನೇ ಸನ್ಯಾಸ ಎಂದು ಒಂದು ವರ್ಗದ ಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಸರ್ವಕರ್ಮಫಲತ್ಯಾಗಂ (ತ್ಯಾಗ): ಮತ್ತೊಂದು ವರ್ಗದ ಬುದ್ಧಿವಂತರು
(ವಿಚಕ್ಷಣಾಃ) ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕಿಂತ, ಕೆಲಸದ ಫಲದ ಮೇಲಿನ ಹಕ್ಕನ್ನುಅಥವಾ ಕರ್ಮದ
ಫಲವನ್ನು ಬಿಡುವುದು ಮುಖ್ಯ ಮತ್ತು ಶ್ರೇಷ್ಠಎನ್ನುತ್ತಾರೆ. ಇದು ಸನ್ಯಾಸಕ್ಕಿಂತ ಹೆಚ್ಚು ಪ್ರಾಯೋಗಿಕ
ಮತ್ತು ಶ್ರೇಷ್ಠವಾದುದು. ನಾವು ಸಮಾಜದಲ್ಲಿ ಬದುಕುತ್ತಿರುವಾಗ ಕರ್ಮ ಮಾಡದೇ ಇರಲು ಸಾಧ್ಯವಿಲ್ಲ. ಆದ್ದರಿಂದ
ನಿತ್ಯಕರ್ಮಗಳು (ದೈನಂದಿನ ಕರ್ತವ್ಯಗಳು), ನಿಯತ ಕರ್ಮಗಳು (ಉದ್ಯೋಗ, ಕುಟುಂಬ ನಿರ್ವಹಣೆ, ಸಮಾಜ ಸೇವೆ,
ಇತ್ಯಾದಿ) ಮತ್ತು ನೈಮಿತ್ತಿಕ ಕರ್ಮಗಳನ್ನು (ವಿಶೇಷ ಸಂದರ್ಭದ ಕರ್ತವ್ಯಗಳು) ಮಾಡುತ್ತಾ, ಅದರ ಫಲ
ಭಗವಂತನಿಗೆ ಅರ್ಪಿತ ಎಂದು ಭಾವಿಸಿ ಫಲದ ಆಸೆಯನ್ನು ಬಿಟ್ಟು ಬಿಡುವುದೇ ನಿಜವಾದ ತ್ಯಾಗ.
ನಿತ್ಯ ಕರ್ಮ: (ಆಚಾರಕ್ಕೆ ಸಂಬದಿಸಿದ್ದು)
ಯಾವುದೇ ಫಲದ ಅಪೇಕ್ಷೆಯಿಲ್ಲದೆ ದಿನಾಲೂ ಮಾಡಬೇಕಾದ ಕರ್ತವ್ಯಗಳು. ಇವುಗಳನ್ನು ಮಾಡದಿದ್ದರೆ 'ಪ್ರತ್ಯವಾಯ ದೋಷ' (ಪಾಪ) ಬರುತ್ತದೆ, ಮಾಡಿದರೆ ವಿಶೇಷ ಪುಣ್ಯ ಸಿಗದೇ ಇದ್ದರೂ ಮನಸ್ಸು ಮತ್ತು ಶರೀರ ಶುದ್ಧಿಯಾಗುತ್ತದೆ. ಉದಾಹರಣೆಗೆ ಸ್ನಾನ, ಸಂಧ್ಯಾವಂದನೆ, ಪೂಜೆ, ಇತ್ಯಾದಿ.
ಯಾವುದೇ ಫಲದ ಅಪೇಕ್ಷೆಯಿಲ್ಲದೆ ದಿನಾಲೂ ಮಾಡಬೇಕಾದ ಕರ್ತವ್ಯಗಳು. ಇವುಗಳನ್ನು ಮಾಡದಿದ್ದರೆ 'ಪ್ರತ್ಯವಾಯ ದೋಷ' (ಪಾಪ) ಬರುತ್ತದೆ, ಮಾಡಿದರೆ ವಿಶೇಷ ಪುಣ್ಯ ಸಿಗದೇ ಇದ್ದರೂ ಮನಸ್ಸು ಮತ್ತು ಶರೀರ ಶುದ್ಧಿಯಾಗುತ್ತದೆ. ಉದಾಹರಣೆಗೆ ಸ್ನಾನ, ಸಂಧ್ಯಾವಂದನೆ, ಪೂಜೆ, ಇತ್ಯಾದಿ.
ನೈಮಿತ್ತಿಕ
ಕರ್ಮ: (ನಿರ್ದಿಷ್ಟ ಕಾರಣಕ್ಕೆ,
ವಿಶೇಷ ಸಂದರ್ಭದಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ)
'ನಿಮಿತ್ತ' ಎಂದರೆ ಕಾರಣ. ಒಂದು ನಿರ್ದಿಷ್ಟ ಕಾರಣ ಅಥವಾ ಸಂದರ್ಭ ಎದುರಾದಾಗ
ಮಾತ್ರ ಇವುಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ಮಗು ಜನಿಸಿದಾಗ ಮಾಡುವ ಜಾತಕರ್ಮ, ಪಿತೃಗಳು ನಿವಾರಣೆಯಾದ
ತಿಥಿಯಂದು ಮಾಡುವ ಶ್ರಾದ್ಧ ಕಾರ್ಯಗಳು, ಹಬ್ಬ, ಇತ್ಯಾದಿ.
ನಿಯತ ಕರ್ಮ: (ಜೀವನಾವಶ್ಯಕವಾದ ಕರ್ಮ) (Prescribed / Bounden Duties)
ಒಬ್ಬ ವ್ಯಕ್ತಿಯ ಯೋಗ್ಯತೆ, ವರ್ಣ (ವೃತ್ತಿ), ಸಮಾಜದಲ್ಲಿನ ಸ್ಥಾನ, ಆಶ್ರಮಕ್ಕೆ (ಜೀವನದ ಹಂತಕ್ಕೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಖಂಡಿತವಾಗಿಯೂ ಮಾಡಲೇಬೇಕು ಎಂದು ನಿಯೋಜಿಸಿರುವ ಕರ್ತವ್ಯಗಳು. ನಿಯತ ಕರ್ಮವು ವ್ಯಕ್ತಿಯ ವೃತ್ತಿ ಮತ್ತು ಸಾಮಾಜಿಕ ಕರ್ತವ್ಯಗಳನ್ನೂ ಒಳಗೊಂಡಿರುತ್ತದೆ, ಉದಾಹರಣೆಗೆ ಉದ್ಯೋಗ, ಅಡುಗೆ ಮಾಡುವುದು, ಕುಟುಂಬ ನಿರ್ವಹಣೆ, ಸಮಾಜ ಸೇವೆ, ಸೈನಿಕನಿಗೆ ಯುದ್ಧ ಮಾಡುವುದು, ಇತ್ಯಾದಿ. ಇದನ್ನು "ಸ್ವಧರ್ಮ" ಎಂದೂ ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಯ ಯೋಗ್ಯತೆ, ವರ್ಣ (ವೃತ್ತಿ), ಸಮಾಜದಲ್ಲಿನ ಸ್ಥಾನ, ಆಶ್ರಮಕ್ಕೆ (ಜೀವನದ ಹಂತಕ್ಕೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಖಂಡಿತವಾಗಿಯೂ ಮಾಡಲೇಬೇಕು ಎಂದು ನಿಯೋಜಿಸಿರುವ ಕರ್ತವ್ಯಗಳು. ನಿಯತ ಕರ್ಮವು ವ್ಯಕ್ತಿಯ ವೃತ್ತಿ ಮತ್ತು ಸಾಮಾಜಿಕ ಕರ್ತವ್ಯಗಳನ್ನೂ ಒಳಗೊಂಡಿರುತ್ತದೆ, ಉದಾಹರಣೆಗೆ ಉದ್ಯೋಗ, ಅಡುಗೆ ಮಾಡುವುದು, ಕುಟುಂಬ ನಿರ್ವಹಣೆ, ಸಮಾಜ ಸೇವೆ, ಸೈನಿಕನಿಗೆ ಯುದ್ಧ ಮಾಡುವುದು, ಇತ್ಯಾದಿ. ಇದನ್ನು "ಸ್ವಧರ್ಮ" ಎಂದೂ ಕರೆಯಲಾಗುತ್ತದೆ.
18-03
त्याज्यं दोषवदित्येके कर्म प्राहुर्मनीषिणः ।
यज्ञदानतपःकर्म न त्याज्यमिति चापरे ॥ १८-३
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ 18.3
ತ್ಯಾಜ್ಯಮ್ ದೋಷ-ವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ
ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ
त्याज्यं दोषवदित्येके कर्म प्राहुर्मनीषिणः ।
यज्ञदानतपःकर्म न त्याज्यमिति चापरे ॥ १८-३
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ 18.3
ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ
ಕೆಲವು ವಿದ್ವಾಂಸರು (ಸಾಂಖ್ಯ ಯೋಗಿಗಳು) ಎಲ್ಲಾ ಕರ್ಮಗಳೂ ದೋಷಯುಕ್ತವಾಗಿವೆ (ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸ್ವಲ್ಪಮಟ್ಟಿನ
ದೋಷ ಅಥವಾ ಬಂಧನ ಇದ್ದೇ ಇರುತ್ತದೆ), ಆದ್ದರಿಂದ ಕರ್ಮಗಳನ್ನೇ ಸಂಪೂರ್ಣವಾಗಿ ಬಿಟ್ಟುಬಿಡಬೇಕು ಎಂದು
ಹೇಳುತ್ತಾರೆ.
ಆದರೆ ಇತರ ಕೆಲವು ಜ್ಞಾನಿಗಳು ಯಜ್ಞ, ದಾನ ಮತ್ತು ತಪಸ್ಸುಗಳಂತಹ ಸತ್ಕರ್ಮಗಳನ್ನು ಎಂದಿಗೂ ಬಿಡಬಾರದು ಎಂದು ಅಭಿಪ್ರಾಯಪಡುತ್ತಾರೆ.
ಆದರೆ ಇತರ ಕೆಲವು ಜ್ಞಾನಿಗಳು ಯಜ್ಞ, ದಾನ ಮತ್ತು ತಪಸ್ಸುಗಳಂತಹ ಸತ್ಕರ್ಮಗಳನ್ನು ಎಂದಿಗೂ ಬಿಡಬಾರದು ಎಂದು ಅಭಿಪ್ರಾಯಪಡುತ್ತಾರೆ.
ಸನ್ಯಾಸ ಮತ್ತು ತ್ಯಾಗದ
ಆಚರಣೆಯ ಬಗ್ಗೆ ಸಮಾಜದಲ್ಲಿ ಇರುವ ಗೊಂದಲವನ್ನು ಇಲ್ಲಿ ಸೂಚಿಸಲಾಗಿದೆ.
ಮೊದಲನೇ ವಾದ (ಕರ್ಮ
ಸನ್ಯಾಸ ಮಾರ್ಗ): ಲೌಕಿಕ ಜಗತ್ತಿನಲ್ಲಿ ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸ್ವಲ್ಪವಾದರೂ ಹಿಂಸೆ, ಸ್ವಾರ್ಥ ಅಥವಾ ಅಹಂಕಾರದ
ದೋಷಗಳು ಅಡಗಿರುತ್ತವೆ (ಉದಾಹರಣೆಗೆ: ಕೃಷಿ ಮಾಡುವಾಗ ಕ್ರಿಮಿಕೀಟಗಳು ಸಾಯುತ್ತವೆ, ಉಸಿರಾಡುವಾಗ
ಸೂಕ್ಷ್ಮಜೀವಿಗಳು ಸಾಯುತ್ತವೆ). ಇಂತಹ ದೋಷಗಳು ಕರ್ಮಬಂಧನಕ್ಕೆ ಕಾರಣವಾಗುವುದರಿಂದ ಜ್ಞಾನದ ಹಾದಿಯಲ್ಲಿದ್ದು ಮುಕ್ತಿ ಬಯಸುವವರು ಎಲ್ಲಾ ಕರ್ಮಗಳನ್ನು ಬಿಟ್ಟುಬಿಡಬೇಕು ಎಂಬುದು ಕರ್ಮ ಮೀಮಾಂಸಕರು ಅಥವಾ ಸಾಂಖ್ಯ
ಯೋಗಿಗಳ ವಾದ.
ಎರಡನೇ ವಾದ (ಕರ್ಮಯೋಗ
ಮಾರ್ಗ): ಯಜ್ಞ (ದೇವತಾರಾಧನೆ/ ಪೂಜೆ/ ಕರ್ತವ್ಯ/ ಸಮಾಜ ಸೇವೆ), ದಾನ
(ಸಹಾಯ ಮಾಡುವುದು) ಮತ್ತು ತಪಸ್ಸು (ಆತ್ಮಶುದ್ಧಿ/ ಸ್ವಯಂ
ನಿಯಂತ್ರಣ) ಮನುಷ್ಯನ ಮನಸ್ಸನ್ನು
ಶುದ್ಧೀಕರಿಸಿ ಪವಿತ್ರಗೊಳಿಸುತ್ತವೆ. ಇಂತಹ ಸತ್ಕರ್ಮಗಳನ್ನು ಬಿಟ್ಟರೆ ಸಮಾಜದ ವ್ಯವಸ್ಥೆ ಕೆಡುತ್ತದೆ ಮತ್ತು
ವ್ಯಕ್ತಿಯ ಪ್ರಗತಿಯೂ ನಿಲ್ಲುತ್ತದೆ. ಆದ್ದರಿಂದ ಇಂತಹ
ಒಳ್ಳೆಯ ಕೆಲಸಗಳನ್ನು ಬಿಡಬಾರದು ಎಂಬುದು
ಕೆಲವು ಜ್ಞಾನಿಗಳ ವಾದ.
निश्चयं श्रृणु मे तत्र त्यागे भरतसत्तम ।
त्यागो हि पुरुषव्याघ्र त्रिविधः संप्रकीर्तितः ॥ १८-४
ನಿಶ್ಚಯಂ ಶ್ರೃಣು ಮೇ ತತ್ರ ತ್ಯಾಗೇ ಭರತಸತ್ತಮ
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ 18.4
ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತ-ಸತ್ತಮ
ತ್ಯಾಗಃ ಹಿ ಪುರುಷ-ವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ
ತ್ಯಾಗಃ ಹಿ ಪುರುಷ-ವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ
ಹೇ ಭರತವಂಶ
ಶ್ರೇಷ್ಠನಾದ ಅರ್ಜುನನೇ! ಆ ತ್ಯಾಗದ ವಿಷಯದಲ್ಲಿ ನನ್ನ ಅಂತಿಮವಾದ ನಿಶ್ಚಿತ ನಿರ್ಧಾರವನ್ನು ಕೇಳು.
ಪುರುಷಶ್ರೇಷ್ಠನೇ! (ಶಾಸ್ತ್ರಗಳಲ್ಲಿ) ತ್ಯಾಗವನ್ನು ಮೂರು ವಿಧಗಳಾಗಿ (ಸಾತ್ವಿಕ,
ರಾಜಸಿಕ ಮತ್ತು ತಾಮಸಿಕ ಎಂದು) ವಿಂಗಡಿಸಲಾಗಿದೆ.
ಹಿಂದಿನ ಶ್ಲೋಕಗಳಲ್ಲಿ ಪ್ರಸ್ತಾಪಿಸಲಾದ "ತ್ಯಾಗ" ಮತ್ತು
"ಸನ್ಯಾಸ"ದ ಬಗೆಗಿನ ಸಮಾಜದಲ್ಲಿರುವ ಭಿನ್ನಾಭಿಪ್ರಾಯ ಗೊಂದಲಗಳಿಗೆ ಅಂತಿಮ ಹಾಗೂ ನಿಶ್ಚಿತವಾದ
ತೀರ್ಪಿನ ವಿವರಣೆ ಇಲ್ಲಿಂದ ಶುರುವಾಗುತ್ತಿದೆ.
ಸನ್ಯಾಸ ಮತ್ತು ತ್ಯಾಗದ ವಿಚಾರದಲ್ಲಿ ಲೌಕಿಕ ಜಗತ್ತಿನ
ಪಂಡಿತರಲ್ಲಿ ಸಾವಿರಾರು ಅಭಿಪ್ರಾಯಗಳಿರಬಹುದು. ಆದರೆ
ಎಲ್ಲಾ ಸತ್ಯಗಳನ್ನು ತಿಳಿದುಕೊಂಡ ಜ್ಞಾನಿಗಳ ತೀರ್ಪೇ ಅಂತಿಮ. ತ್ಯಾಗ ಎಂದರೆ ಎಲ್ಲವನ್ನೂ ಬಿಟ್ಟು
ಕಾಡಿಗೆ ಓಡುವುದಲ್ಲ, ಜನರಿಗೆ ಕಷ್ಟ ಬಂದಾಗ ಅಥವಾ ಜವಾಬ್ದಾರಿಗಳು ಹೆಚ್ಚಾದಾಗ ಕೆಲವರು
"ನನಗೆ ಇದೆಲ್ಲ ಬೇಡ, ನಾನು ಎಲ್ಲವನ್ನೂ ತ್ಯಜಿಸಿ ಎಲ್ಲಾದರೂ ಹೊರಟುಹೋಗುತ್ತೇನೆ" ಎಂದು
ತೆಪ್ಪಗಾಗುತ್ತಾರೆ. ಆದರೆ ನಮ್ಮ ಧರ್ಮದಲ್ಲಿ ಇಂತಹ ಪಲಾಯನವಾದಕ್ಕೆ ಮನ್ನಣೆಯಿಲ್ಲ ಮತ್ತು ಅದನ್ನು
ಒಪ್ಪುವುದೂ ಇಲ್ಲ. ಬದುಕಿನ ರಂಗದಲ್ಲಿ ನಿಂತು, ಸ್ವಾರ್ಥವನ್ನು ತ್ಯಜಿಸಿ ಕೆಲಸ ಮಾಡುವುದೇ ನಿಜವಾದ
ಆಧ್ಯಾತ್ಮಿಕತೆ. ಮತ್ತು ಕೇವಲ ಕರ್ಮಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು
ಕೂಡಾ ತ್ಯಾಗವಲ್ಲ. ನಾವು ಮಾಡುವ ತ್ಯಾಗದ ಹಿಂದೆ ಇರುವ ಮಾನಸಿಕ ಭಾವನೆ
ಅತ್ಯಂತ ಮುಖ್ಯ. ಮನುಷ್ಯನ ಸ್ವಭಾವಕ್ಕೆ ತಕ್ಕಂತೆ ಮತ್ತು ಮಾನಸಿಕ ಗುಣಗಳ ಆಧಾರದ ಮೇಲೆ ಆ ತ್ಯಾಗವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.
ಕರ್ಮದ ಹಿಂದಿರುವ ಮಾನಸಿಕ ಸ್ಥಿತಿ ಮತ್ತು ಗುಣಗಳ (ಸತ್ತ್ವ, ರಜಸ್ಸು,
ತಮಸ್ಸು) ಆಧಾರದ ಮೇಲೆ ಆ ತ್ಯಾಗವು ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ನಿರ್ಧಾರವಾಗುತ್ತದೆ. ಆದ್ದರಿಂದ
ತ್ಯಾಗದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ.
यज्ञदानतपःकर्म न त्याज्यं कार्यमेव तत् ।
यज्ञो दानं तपश्चैव पावनानि मनीषिणाम् ॥ १८-५
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ 18.5
ಯಜ್ಞಃ ದಾನಮ್ ತಪಃ ಚ ಏವ ಪಾವನಾನಿ ಮನೀಷಿಣಾಮ್
ಮನುಷ್ಯನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ
ಉನ್ನತಿಗೆ ಏರಲು ತಮ್ಮ ಲೌಕಿಕ ಜೀವನದಲ್ಲಿ ಯಾವ ಮೂರು ಶ್ರೇಷ್ಠ ಕರ್ಮಗಳನ್ನು ಎಂದಿಗೂ ತ್ಯಜಿಸಬಾರದು
ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.
ಕೆಲವು ವಿದ್ವಾಂಸರು
ಜಗತ್ತಿನ ಎಲ್ಲಾ ಕರ್ಮಗಳೂ ದೋಷಯುಕ್ತ ಮತ್ತು ಬಂಧನಕ್ಕೆ ಕಾರಣ ಎಂದು ಭಾವಿಸಿ, ಕರ್ಮವನ್ನೇ ಬಿಟ್ಟು ಬಿಡಬೇಕು ಎಂದು ವಾದಿಸುತ್ತಾರೆ. ಆದರೆ ಸಮಾಜದ
ಕಲ್ಯಾಣಕ್ಕಾಗಿ ಮತ್ತು ವ್ಯಕ್ತಿಯ ಆತ್ಮಶುದ್ಧಿ
ಹಾಗೂ ಆತ್ಮೋದ್ಧಾರಕ್ಕಾಗಿ ಮಾಡುವ ಮೂರು ಶ್ರೇಷ್ಠ ಕರ್ಮಗಳಾದ ಯಜ್ಞ, ದಾನ ಮತ್ತು ತಪಸ್ಸುಗಳು ಮನುಷ್ಯನನ್ನು ಬಂಧಿಸುವುದಿಲ್ಲ, ಬದಲಿಗೆ ಅವು ಅವರ ಅಹಂಕಾರ ಮತ್ತು ಮನಸ್ಸಿನಲ್ಲಿರುವ ಕಲ್ಮಷಗಳನ್ನು
ತೊಳೆದು ಅವರನ್ನು ಶುದ್ಧೀಕರಿಸಿ ಮತ್ತಷ್ಟು
ಪವಿತ್ರಗೊಳಿಸುತ್ತವೆ. ಈ ಮೂರು ಕಾರ್ಯಗಳು ಸಾಮಾನ್ಯ ಜನರಿಗಷ್ಟೇ ಅಲ್ಲದೆ
ಜ್ಞಾನದ ಹಾದಿಯಲ್ಲಿರುವ ದೊಡ್ಡ ವಿದ್ವಾಂಸರಿಗೂ ಆತ್ಮಶುದ್ಧಿಯನ್ನು ನೀಡುತ್ತವೆ. ಈ ಕರ್ಮಗಳನ್ನು ನಿಲ್ಲಿಸಿದರೆ ಮನುಷ್ಯನ
ಪತನವಾಗುತ್ತದೆ. ಆದ್ದರಿಂದ ಇವುಗಳನ್ನು ನಿರಂತರವಾಗಿ ಆಚರಿಸುತ್ತಿರಬೇಕು.
ಯಜ್ಞ (Sacrifice/Duty): ಯಜ್ಞ ಎಂದರೆ ಕೇವಲ ಹೋಮ-ಹವನ
ಅಥವಾ ಹೋಮಕುಂಡದಲ್ಲಿ ತುಪ್ಪ ಹಾಕುವುದು ಮಾತ್ರವಲ್ಲ. ನಿಸ್ವಾರ್ಥ
ಭಾವನೆಯಿಂದ ಸಮಾಜದ, ಪರಿಸರದ ಅಥವಾ ಪ್ರಕೃತಿಯ ಸಮತೋಲನ ಮತ್ತು ಒಳಿತಿಗಾಗಿ
ಮಾಡುವ ಯಾವುದೇ ಸೇವೆ ಅಥವಾ ಕರ್ತವ್ಯವೇ ಯಜ್ಞ (ಉದಾಹರಣೆಗೆ: ಗಿಡ ನೆಡುವುದು, ಪರಿಸರ ರಕ್ಷಣೆ, ಸಮಾಜ
ಸೇವೆ).
ದಾನ
(Charity): ತನಗಾಗಿ ಮಾತ್ರ ಬದುಕದೆ ತನ್ನ ಬಳಿ ಇರುವ ಜ್ಞಾನ, ಸಂಪತ್ತು,
ಆಹಾರ ಅಥವಾ ಸಮಯವನ್ನು ಕಷ್ಟದಲ್ಲಿರುವವರಿಗೆ ಅಥವಾ ಅಗತ್ಯವಿರುವವರಿಗೆ ಮತ್ತು ಯೋಗ್ಯರಾದವರಿಗೆ ಯಾವುದೇ
ಪ್ರತಿಫಲಾಪೇಕ್ಷೆಯಿಲ್ಲದೆ ಧರ್ಮಬುದ್ಧಿಯಿಂದ ಹಂಚುವುದು ದಾನ. ಇದು ಮನುಷ್ಯನಲ್ಲಿರುವ ಲೋಭ (ದುರಾಶೆ) ಮತ್ತು ಮಮಕಾರವನ್ನು (ನನ್ನದು ಎಂಬ
ಭಾವನೆ) ಕಡಿಮೆ ಮಾಡುತ್ತದೆ. ಅಹಂಕಾರವನ್ನು
ಕರಗಿಸುತ್ತದೆ.
ತಪಸ್ಸು
(Austerity/Self-discipline): ಶಿಸ್ತಿನ
ಜೀವನ ನಡೆಸುವುದು. ಶರೀರ, ಮನಸ್ಸು ಮತ್ತು ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು
ಧರ್ಮದ ಮಾರ್ಗದಲ್ಲಿ ಮತ್ತು ತನ್ನ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯುವುದು
ತಪಸ್ಸು. ಸತ್ಯವನ್ನು ಮಾತನಾಡುವುದು, ಕಷ್ಟದ ಸಂದರ್ಭಗಳಲ್ಲೂ ಧೃತಿಗೆಡದೆ
ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಕೊಂಡು ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವುದು
ತಪಸ್ಸಿನ ವಿವಿಧ ರೂಪಗಳು. ಇದು ಮನುಷ್ಯನಿಗೆ ಆಂತರಿಕ ಶಕ್ತಿಯನ್ನು
ನೀಡುತ್ತದೆ.
ಪಾವನ ಶಕ್ತಿ: ನಾವೆಲ್ಲರೂ ಪ್ರತಿದಿನ ಪ್ರಕೃತಿಯಿಂದ, ಸಮಾಜದಿಂದ ಅನೇಕ ವಸ್ತುಗಳನ್ನು ಪಡೆದುಕೊಳ್ಳುತ್ತೇವೆ.
ಆ ಋಣವನ್ನು ತೀರಿಸಲು ಮತ್ತು ನಮ್ಮ ಮನಸ್ಸಿನ ಸ್ವಾರ್ಥವನ್ನು ತೊಡೆದು ಹಾಕಲು ಯಜ್ಞ, ದಾನ, ತಪಸ್ಸುಗಳಿಗಿಂತ
ಮಿಗಿಲಾದ ಸಾಧನವಿಲ್ಲ.
ಮನಸ್ಸಿನ ಸಾಬೂನು: ಹೇಗೆ ದೇಹದ ಕೊಳೆಯನ್ನು ತೊಳೆಯಲು ಸ್ನಾನಕ್ಕೆ ಸಾಬೂನು
ಬೇಕೋ, ಹಾಗೆ ಯಜ್ಞ, ದಾನ ಮತ್ತು ತಪಸ್ಸುಗಳು ದಿನನಿತ್ಯದ ಬದುಕಿನಲ್ಲಿ
ಮನಸ್ಸಿಗೆ ಅಂಟುವ ಕಾಮ, ಕ್ರೋಧ, ಲೋಭ, ಅಹಂಕಾರ, ಈ ಮನಸ್ಸಿನ ಆಂತರಿಕ ಕೊಳಕನ್ನು ತೊಳೆಯಲು ಈ ಮೂರು
ಕರ್ಮಗಳು ಸಾಬೂನಿನಂತೆ ಕೆಲಸ ಮಾಡುತ್ತವೆ.
एतान्यपि तु कर्माणि सङ्गं त्यक्त्वा फलानि च ।
कर्तव्यानीति मे पार्थ निश्चितं मतमुत्तमम् ॥ १८-६
ಏತಾನ್ಯಪಿ ತು ಕರ್ಮಾಣಿ ಸಙ್ಗಂ ತ್ಯಕ್ತ್ವಾ ಫಲಾನಿ ಚ
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ 18.6
ಏತಾನಿ ಅಪಿ ತು ಕರ್ಮಾಣಿ ಸಂಗಮ್ ತ್ಯಕ್ತ್ವಾ ಫಲಾನಿ ಚ
ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಮ್
ಹಿಂದಿನ ಶ್ಲೋಕದಲ್ಲಿ ಹೇಳಿದ ಯಜ್ಞ, ದಾನ ಮತ್ತು ತಪಸ್ಸುಗಳನ್ನು
ಯಾವ
ಭಾವನೆಯಿಂದ ಮತ್ತು ಹೇಗೆ ಮಾಡಬೇಕು ಎಂಬುದನ್ನು
ಈ ಶ್ಲೋಕದಲ್ಲಿ ತಿಳಿಸಲಾಗಿದೆ.
ಒಳ್ಳೆಯ ಕರ್ಮಗಳಾದ ಯಜ್ಞ, ದಾನ ಮತ್ತು ತಪಸ್ಸುಗಳನ್ನು
ಮಾಡುವುದರಿಂದ ಪುಣ್ಯ ಬರುತ್ತದೆ ಮತ್ತು ಮನಸ್ಸು ಶುದ್ಧಿಯಾಗುತ್ತದೆ ನಿಜ. ಆದರೆ, "ನಾನು ಈ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇನೆ" ಎಂಬ ಅಹಂಕಾರ
ಅಥವಾ "ಇದರಿಂದ ನನಗೆ ಕೀರ್ತಿ ಸಿಗಲಿ, ಸ್ವರ್ಗ ಸಿಗಲಿ " ಎಂಬ ಫಲದ ಆಸೆ ಇದ್ದರೆ, ಆ ಪುಣ್ಯ
ಕರ್ಮಗಳೂ ಸಹ ಮನುಷ್ಯನನ್ನು ಸಂಸಾರ ಬಂಧನಕ್ಕೆ ತಳ್ಳುತ್ತವೆ. ಆದುದರಿಂದ ಒಳ್ಳೆಯ ಕರ್ಮಗಳನ್ನೂ ಸಹ 'ನಾನು ಮಾಡುತ್ತಿದ್ದೇನೆ' ಎಂಬ ಅಹಂಕಾರವಿಲ್ಲದೆ (ಸಂಗಂ ತ್ಯಕ್ತ್ವಾ) ಮತ್ತು 'ಇದರಿಂದ ನನಗೆ ಲಾಭವಾಗಬೇಕು'
ಎಂಬ ಯಾವುದೇ ಲೌಕಿಕ ಅಥವಾ ಪಾರಲೌಕಿಕ ಸ್ವಾರ್ಥ ಅಥವಾ ಫಲಾಪೇಕ್ಷೆ ಇಲ್ಲದೆ
(ಫಲಾನಿ ಚ), ಇದು ಕೇವಲ ನನ್ನ ಕರ್ತವ್ಯ ಎಂದು ಮಾಡಬೇಕು.
ಕರ್ಮವು ಮನುಷ್ಯನನ್ನು ಬಂಧಿಸುವುದಿಲ್ಲ, ಕರ್ಮದ ಹಿಂದಿರುವ ಸ್ವಾರ್ಥದ
ಆಸೆ ಮತ್ತು ಅಹಂಕಾರ ಮಾತ್ರ ಬಂಧಿಸುತ್ತದೆ. ಕರ್ಮ ಮಾಡುವುದು ದೇಹದ ಧರ್ಮ,
ಫಲದ ಆಸೆ ಬಿಡುವುದು ಮನಸ್ಸಿನ ಧರ್ಮ. ಇವೆರಡೂ ಸೇರಿದಾಗ ಯಾವುದೇ ಕರ್ಮವೂ ಬಂಧನವಾಗದೆ ಮುಕ್ತಿಗೆ ಕಾರಣವಾಗುತ್ತದೆ.
ಆದುದರಿಂದ ಕರ್ಮಬಂಧನದಿಂದ ಮುಕ್ತಿ ಪಡೆಯಲು ಕರ್ಮವನ್ನು ಬಿಡುವುದಲ್ಲ, ಕರ್ಮದ ಹಿಂದಿರುವ ಎರಡು ವಿಷಯಗಳಾದ
ಸಂಗ
ತ್ಯಾಗ ಮತ್ತು ಫಲ ತ್ಯಾಗ
ಮಾಡ ಬೇಕು.
नियतस्य तु संन्यासः कर्मणो नोपपद्यते ।
मोहात्तस्य परित्यागः तामसः परिकीर्तितः ॥ १८-७
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ
ಮೋಹಾತ್ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ 18.7
ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ
ಹಿಂದೆ 4ನೇ ಶ್ಲೋಕದಲ್ಲಿ ತ್ಯಾಗದಲ್ಲಿ ಮೂರು ಪ್ರಕಾರಗಳಿವೆ
ಎಂದು ತಿಳಿಸಲಾಗಿತ್ತು. ಅದರಲ್ಲಿ ಮೊದಲನೆಯದಾದ ತಾಮಸ ತ್ಯಾಗ ಎಂದರೇನು
ಎಂಬುದನ್ನು ಇಲ್ಲಿ ಹೇಳಲಾಗಿದೆ.
ಪ್ರತಿಯೊಬ್ಬ ಮನುಷ್ಯನಿಗೂ ಸಮಾಜದಲ್ಲಿ, ಕುಟುಂಬದಲ್ಲಿ
ಮತ್ತು ತನಗಾಗಿ ತನ್ನ ಸ್ವಭಾವಕ್ಕೆ ತಕ್ಕಂತೆ ಮಾಡಲೇಬೇಕಾದ ಕೆಲವು ಕರ್ತವ್ಯಗಳು (ನಿಯತ ಕರ್ಮಗಳು)
ಇರುತ್ತವೆ. (ಉದಾಹರಣೆಗೆ: ತಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ಅವರ ಲಾಲನೆ ಪೋಷಣೆ ಮಾಡುವುದು, ಅವರಿಗೆ
ವಿದ್ಯಾಭ್ಯಾಸ ಕೊಡಿಸುವುದು, ಪೋಷಕರ ಮುದಿ ವಯಸ್ಸಿನಲ್ಲಿ ಅವರ ಸೇವೆ ಮಾಡುವುದು, ಉದ್ಯೋಗ ಮಾಡುವುದು,
ಸಮಾಜಕ್ಕೆ ಒಳಿತನ್ನು ಮಾಡುವುದು, ಇತ್ಯಾದಿ). ಆದರೆ, ಕೆಲವರು ಒಂದೇ ಸೋಮಾರಿತನದಿಂದಲೋ, ಅಥವಾ ಅಜ್ಞಾನ
ಮತ್ತು ತಪ್ಪು ತಿಳುವಳಿಕೆಯಿಂದಲೋ ತಮ್ಮ ಕರ್ತವ್ಯಗಳನ್ನೇ ಬಿಟ್ಟುಬಿಡುತ್ತಾರೆ, ಅಷ್ಟೇ ಅಲ್ಲದೆ ತಾವು
ದೊಡ್ಡ 'ತ್ಯಾಗಿಗಳು' ಎಂದು ಭಾವಿಸುತ್ತಾರೆ. ಇದನ್ನು ಶ್ರೇಷ್ಠ ತ್ಯಾಗ ಎನ್ನಲಾಗುವುದಿಲ್ಲ. ಇಂತಹ
ತ್ಯಾಗಕ್ಕೆ ಯಾವುದೇ ಆಧ್ಯಾತ್ಮಿಕ ಮೌಲ್ಯವಿರುವುದಿಲ್ಲ. ಅಂತಹ ತ್ಯಾಗವು ತಮೋಗುಣದಿಂದ (ಅಜ್ಞಾನದಿಂದ)
ಹುಟ್ಟಿದ್ದಾಗಿದ್ದು, ಅದನ್ನು ಕೀಳುಮಟ್ಟದ 'ತಾಮಸ ತ್ಯಾಗ' ಎನ್ನಲಾಗುತ್ತದೆ.
दुःखमित्येव यत्कर्म कायक्लेशभयात्त्यजेत् ।
स कृत्वा राजसं त्यागं नैव त्यागफलं लभेत् ॥ १८-८
ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ 18.8
ಸಃ ಕೃತ್ವಾ ರಾಜಸಮ್ ತ್ಯಾಗಮ್ ನ ಏವ ತ್ಯಾಗ-ಫಲಮ್ ಲಭೇತ್
ಯಾವ ಕರ್ಮವಾದರೂ ಅದು ಕಷ್ಟಕರವಾದುದು ಅಥವಾ ದುಃಖದಾಯಕ ಎಂದು ಭಾವಿಸಿ, ಶಾರೀರಿಕ
ಶ್ರಮ ಮತ್ತು ಕಷ್ಟಕ್ಕೆ ಹೆದರಿ ಆ ಕರ್ಮಗಳನ್ನು ಬಿಟ್ಟುಬಿಟ್ಟರೆ, ಅಂತಹ ತ್ಯಾಗವನ್ನು 'ರಾಜಸಿಕ
ತ್ಯಾಗ' ಎನ್ನಲಾಗುತ್ತದೆ. ಇಂತಹ ತ್ಯಾಗ ಮಾಡಿದವರಿಗೆ ಆ ತ್ಯಾಗದ ನಿಜವಾದ ಆಧ್ಯಾತ್ಮಿಕ ಫಲ (ಆಧ್ಯಾತ್ಮಿಕ ಉನ್ನತಿ, ಮಾನಸಿಕ ಶಾಂತಿ
ಅಥವಾ ಮುಕ್ತಿ) ಎಂದಿಗೂ ಸಿಗುವುದಿಲ್ಲ.
ಈ ಶ್ಲೋಕದಲ್ಲಿ 'ರಾಜಸಿಕ
ತ್ಯಾಗ' ಎಂದರೇನು ಎಂಬುದನ್ನು ವಿವರಿಸಲಾಗಿದೆ.
ಕೆಲವರಿಗೆ ತಮ್ಮ ಕರ್ತವ್ಯ ಯಾವುದು ಎಂದು ಚೆನ್ನಾಗಿ
ತಿಳಿದಿರುತ್ತದೆ (ಉದಾಹರಣೆಗೆ: ವಿದ್ಯಾರ್ಥಿಗೆ ಓದುವುದು, ಉದ್ಯೋಗಿಗೆ ಕಛೇರಿಯ ಕೆಲಸ ಮಾಡುವುದು,
ತಂದೆ-ತಾಯಿಗೆ ಮಕ್ಕಳನ್ನು ಸಾಕುವುದು). ಆದರೆ ಆ ಕೆಲಸ ಮಾಡಲು ದೈಹಿಕವಾಗಿ ತುಂಬಾ ಶ್ರಮಪಡಬೇಕು, ಸುಖ-ಸೌಕರ್ಯಗಳನ್ನು
ಬಿಡಬೇಕು, ಅಥವಾ ಅದರಿಂದ ತಮಗೆ ತೊಂದರೆಯಾಗುತ್ತದೆ ಎಂದು ತಿಳಿದಾಗ, ಅವರು ಆ ಕಷ್ಟಕ್ಕೆ ಹೆದರಿ ಕೆಲಸವನ್ನೇ
ನಿಲ್ಲಿಸಿಬಿಡುತ್ತಾರೆ. ಈ ರೀತಿ ಸ್ವಾರ್ಥ ಮತ್ತು ಶಾರೀರಿಕ ಸುಖದ ಹಂಬಲದಿಂದ ಅಂದರೆ ರಜೋಗುಣದಿಂದ
ಕರ್ತವ್ಯಗಳನ್ನು ತ್ಯಜಿಸುವುದು ರಾಜಸಿಕ ತ್ಯಾಗವಾಗಿದೆ. ಇದು ಜ್ಞಾನದಿಂದ ಬಂದ ತ್ಯಾಗವಲ್ಲ.
ಇದು ಕೇವಲ ಸುಖಲೋಲುಪತೆ ಮತ್ತು ದೈಹಿಕ ಕಷ್ಟದಿಂದ ತಪ್ಪಿಸಿಕೊಳ್ಳುವ ಸೋಮಾರಿತನ ಮತ್ತು ಸ್ವಾರ್ಥದ
ಸ್ವಭಾವ. ಇಂತವರಿಗೆ ತಮ್ಮ ಶರೀರದ ಸುಖವೇ ಮುಖ್ಯವಾಗಿರುತ್ತದೆ. ಇಂತಹ ತ್ಯಾಗದಿಂದ ಮನುಷ್ಯನಿಗೆ ಮನಃಶುದ್ಧಿ,
ಆಧ್ಯಾತ್ಮಿಕ ಶಾಂತಿ, ಯಶಸ್ಸು ಅಥವಾ ಮೋಕ್ಷ ಇದು ಯಾವುದೂ ಸಿಗುವುದಿಲ್ಲ.
ಕಷ್ಟಗಳಿಗೆ ಹೆದರಿ ಜವಾಬ್ದಾರಿ ವಹಿಸಿಕೊಳ್ಳದೆ ಇರುವುದು
ಮತ್ತು ಕರ್ತವ್ಯಗಳನ್ನು ಮಾಡದೆ ಇರುವುದು ತ್ಯಾಗ ಅಲ್ಲ. ಶಾಸ್ತ್ರಗಳ ಪ್ರಕಾರ, ಕರ್ಮವನ್ನು ತ್ಯಜಿಸುವುದರ
ನಿಜವಾದ ಉದ್ದೇಶ ಮನಸ್ಸಿನ ಶುದ್ಧಿ ಮತ್ತು ಶಾಂತಿ, ಇವು ತ್ಯಾಗದ ಪುಣ್ಯಫಲ. ಆದರೆ ಕಷ್ಟಕ್ಕೆ ಹೆದರಿ
ಓಡಿಹೋದವನ ಮನಸ್ಸಿನಲ್ಲಿ ಆ ಕೆಲಸದ ಫಲಿತಾಂಶ ಅಥವಾ ಫಲದ ಮೇಲಿನ ಆಸೆ ಹಾಗೇ ಇರುತ್ತದೆ, ಕೇವಲ ದೈಹಿಕವಾಗಿ
ಮಾತ್ರ ಅವನು ಕೆಲಸ ನಿಲ್ಲಿಸಿರುತ್ತಾನೆ. ಹಾಗಾಗಿ ಅವನಿಗೆ ತ್ಯಾಗದ ಪುಣ್ಯಫಲ ಸಿಗುವುದಿಲ್ಲ.
कार्यमित्येव यत्कर्म नियतं क्रियतेऽर्जुन ।
सङ्गं त्यक्त्वा फलं चैव स त्यागः सात्त्विको मतः ॥ १८-९
ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ
ಸಙ್ಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ 18.9
ಸಂಗಮ್ ತ್ಯಕ್ತ್ವಾ ಫಲಮ್ ಚ ಏವ ಸಃ ತ್ಯಾಗಃ ಸಾತ್ತ್ವಿಕಃ ಮತಃ
ಅರ್ಜುನ,
ಮಾಡಲೇಬೇಕಾದ, ಶಾಸ್ತ್ರವಿಹಿತವಾದ ನಿತ್ಯ ಕರ್ತವ್ಯಗಳನ್ನು (ನಿಯತ ಕರ್ಮಗಳನ್ನು) "ಇದು ನನ್ನ
ಕರ್ತವ್ಯ, ಮತ್ತು ಇದು ನಾನು ಮಾಡಲೇಬೇಕಾದ ಕೆಲಸ" ಎಂಬ ಭಾವನೆಯಿಂದ ಮತ್ತು ಶ್ರದ್ಧೆಯಿಂದ ಮಾಡುತ್ತಾ,
ಆ ಕರ್ಮದ ಕರ್ತೃತ್ವದ ಅಹಂಕಾರವನ್ನು (ಮಮಕಾರ ಮತ್ತು ಹೆಮ್ಮೆಯನ್ನು) ಮತ್ತು ಅದರ ಫಲದ ಮೇಲಿನ ಆಪೇಕ್ಷೆ ಮತ್ತು ಆಸೆಯನ್ನು ಸಂಪೂರ್ಣವಾಗಿ
ತೊರೆಯುವುದಕ್ಕೆ "ಸಾತ್ತ್ವಿಕ ತ್ಯಾಗ" ಎಂದು ಕರೆಯಲಾಗುತ್ತದೆ
ಹಿಂದಿನ ಎರಡು ಶ್ಲೋಕಗಳಲ್ಲಿ ಸೋಮಾರಿತನದಿಂದ ಕರ್ತವ್ಯ
ಬಿಡುವುದು ತಾಮಸಿಕ ತ್ಯಾಗ ಮತ್ತು ಕಷ್ಟಕ್ಕೆ ಹೆದರಿ ಕರ್ತವ್ಯ ಬಿಡುವುದು ರಾಜಸಿಕ ತ್ಯಾಗ, ಮತ್ತು
ಇವೆರಡೂ ತಪ್ಪು ಎಂದು ಹೇಳಿ; ಈ ಶ್ಲೋಕದಲ್ಲಿ ಮನುಷ್ಯನ ಆಧ್ಯಾತ್ಮಿಕ ಉನ್ನತಿಗೆ ಕಾರಣವಾಗುವ ನಿಜವಾದ
ಅತ್ಯುನ್ನತ ಮತ್ತು ಶ್ರೇಷ್ಠ ತ್ಯಾಗ ಸಾತ್ತ್ವಿಕ ತ್ಯಾಗ ಎಂದು ತಿಳಿಸಿ ಅದರ ಲಕ್ಷಣಗಳನ್ನು
ವಿವರಿಸಲಾಗಿದೆ.
ನಿಜವಾದ ಸಾತ್ತ್ವಿಕ ತ್ಯಾಗ ಎಂದರೆ ಕೆಲಸದಿಂದ ಓಡಿಹೋಗುವುದು
ಅಥವಾ ಕೆಲಸ ಮಾಡದೆ ಸುಮ್ಮಗೆ ಕೂರುವುದಲ್ಲ; ಸಮಾಜದಲ್ಲಿದ್ದುಕೊಂಡು, ತನ್ನ ಪಾಲಿನ ಜವಾಬ್ದಾರಿಗಳನ್ನು
ಜಗತ್ತಿನ ಕಲ್ಯಾಣಕ್ಕಾಗಿ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸುವುದು. ಆದರೆ
ಆ ಕೆಲಸ ಮಾಡುವಾಗ "ನಾನು ಈ ಕೆಲಸ ಮಾಡುತ್ತಿದ್ದೇನೆ, ನಾನೇ ಶ್ರೇಷ್ಠ" ಎಂಬ ಅಹಂಕಾರ ಇರಬಾರದು
ಮತ್ತು "ಇದರಿಂದ ನನಗೇನು ಲಾಭ, ಯಾವ ಕೀರ್ತಿ ಅಥವಾ ಪ್ರತಿಫಲ ಸಿಗಬಹುದು?" ಎಂಬ ಸ್ವಾರ್ಥ
ಇರಬಾರದು. ಕರ್ಮ ನಿರತರಾಗಿದ್ದೂ ಮಾನಸಿಕವಾಗಿ ಮುಕ್ತರಾಗಿರುವುದೇ ಸಾತ್ತ್ವಿಕ ತ್ಯಾಗ. ಇಲ್ಲಿ ಕರ್ಮದ
ತ್ಯಾಗವಿಲ್ಲ, ಬದಲಿಗೆ ಕರ್ಮದ ಹಿಂದಿರುವ ಸ್ವಾರ್ಥದ ತ್ಯಾಗವಿರುತ್ತದೆ. ಯಾವಾಗ ಒಬ್ಬ ವ್ಯಕ್ತಿಯು
ನಿಸ್ಸ್ವಾರ್ಥಿಯಾಗಿ ಕೇವಲ ಸಮಾಜದ ಒಳಿತಿಗಾಗಿ ತನ್ನ ಕರ್ತವ್ಯವನ್ನು ಮಾಡುತ್ತಾನೋ, ಆತನ ಕರ್ಮವೇ ಪೂಜೆಯಾಗುತ್ತದೆ
ಮತ್ತು ಅದುವೇ ನಿಜವಾದ ಸಾತ್ತ್ವಿಕ ತ್ಯಾಗ.
ನಿಯತ ಕರ್ಮ: (ಜೀವನಾವಶ್ಯಕವಾದ ಕರ್ಮ) (Prescribed / Bounden Duties)
ಒಬ್ಬ ವ್ಯಕ್ತಿಯ ಯೋಗ್ಯತೆ, ವರ್ಣ (ವೃತ್ತಿ), ಸಮಾಜದಲ್ಲಿನ ಸ್ಥಾನ, ಆಶ್ರಮಕ್ಕೆ (ಜೀವನದ ಹಂತಕ್ಕೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಖಂಡಿತವಾಗಿಯೂ ಮಾಡಲೇಬೇಕು ಎಂದು ನಿಯೋಜಿಸಿರುವ ಕರ್ತವ್ಯಗಳು. ನಿಯತ ಕರ್ಮವು ವ್ಯಕ್ತಿಯ ವೃತ್ತಿ ಮತ್ತು ಸಾಮಾಜಿಕ ಕರ್ತವ್ಯಗಳನ್ನೂ ಒಳಗೊಂಡಿರುತ್ತದೆ, ಉದಾಹರಣೆಗೆ ಉದ್ಯೋಗ, ಅಡುಗೆ ಮಾಡುವುದು, ಕುಟುಂಬ ನಿರ್ವಹಣೆ, ಸಮಾಜ ಸೇವೆ, ಸೈನಿಕನಿಗೆ ಯುದ್ಧ ಮಾಡುವುದು, ಇತ್ಯಾದಿ. ಇದನ್ನು "ಸ್ವಧರ್ಮ" ಎಂದೂ ಕರೆಯಲಾಗುತ್ತದೆ.
ಒಬ್ಬ ವ್ಯಕ್ತಿಯ ಯೋಗ್ಯತೆ, ವರ್ಣ (ವೃತ್ತಿ), ಸಮಾಜದಲ್ಲಿನ ಸ್ಥಾನ, ಆಶ್ರಮಕ್ಕೆ (ಜೀವನದ ಹಂತಕ್ಕೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ) ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಖಂಡಿತವಾಗಿಯೂ ಮಾಡಲೇಬೇಕು ಎಂದು ನಿಯೋಜಿಸಿರುವ ಕರ್ತವ್ಯಗಳು. ನಿಯತ ಕರ್ಮವು ವ್ಯಕ್ತಿಯ ವೃತ್ತಿ ಮತ್ತು ಸಾಮಾಜಿಕ ಕರ್ತವ್ಯಗಳನ್ನೂ ಒಳಗೊಂಡಿರುತ್ತದೆ, ಉದಾಹರಣೆಗೆ ಉದ್ಯೋಗ, ಅಡುಗೆ ಮಾಡುವುದು, ಕುಟುಂಬ ನಿರ್ವಹಣೆ, ಸಮಾಜ ಸೇವೆ, ಸೈನಿಕನಿಗೆ ಯುದ್ಧ ಮಾಡುವುದು, ಇತ್ಯಾದಿ. ಇದನ್ನು "ಸ್ವಧರ್ಮ" ಎಂದೂ ಕರೆಯಲಾಗುತ್ತದೆ.
ಕರ್ತೃತ್ವ = ಒಂದು ಕೃತಿ, ರಚನೆ ಅಥವಾ ಕೆಲಸ ಮಾಡಿದ ವ್ಯಕ್ತಿಯ ಹೊಣೆಗಾರಿಕೆ ಮತ್ತು ಮಾಲೀಕತ್ವ.
न द्वेष्ट्यकुशलं कर्म कुशले नानुषज्जते ।
त्यागी सत्त्वसमाविष्टो मेधावी छिन्नसंशयः ॥ १८-१०
ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ 18.10
ತ್ಯಾಗೀ ಸತ್ತ್ವ-ಸಮಾವಿಷ್ಟಃ ಮೇಧಾವೀ ಛಿನ್ನ-ಸಂಶಯಃ
ಯಾರು ತನಗೆ ಅಪ್ರಿಯವಾದ ಅಥವಾ ಕಷ್ಟಕರವಾದ
ಕೆಲಸ ಎದುರಾದಾಗ ಅದನ್ನು ದ್ವೇಷಿಸುವುದಿಲ್ಲವೊ; ಹಾಗೆಯೇ ಪ್ರಿಯವಾದ ಅಥವಾ ಸುಖದಾಯಕವಾದ ಕೆಲಸ ಬಂದಾಗ ಅದಕ್ಕೆ ಅಂಟಿಕೊಳ್ಳುವುದಿಲ್ಲವೊ
(ಅತಿಯಾಗಿ ಆಸಕ್ತನಾಗುವುದಿಲ್ಲವೊ); ಅಂತಹ ಶುದ್ಧ ಸತ್ತ್ವಗುಣದಿಂದ ತುಂಬಿದವನೂ, ಸ್ಥಿರ ಬುದ್ಧಿಯುಳ್ಳವನೂ
ಮತ್ತು ಎಲ್ಲಾ ಸಂಶಯಗಳನ್ನು ನಿವಾರಿಸಿಕೊಂಡವನೂ ಆದವನು ನಿಜವಾದ ಸಾತ್ವಿಕ ತ್ಯಾಗಿಯಾಗಿರುತ್ತಾನೆ.
ಈ ಶ್ಲೋಕದಲ್ಲಿ ಸಾತ್ವಿಕ ತ್ಯಾಗವನ್ನು ಮಾಡುವ ವ್ಯಕ್ತಿಯ
ಅಂದರೆ ಸಾತ್ವಿಕ ತ್ಯಾಗಿಯ ಲಕ್ಷಣಗಳನ್ನು ವಿವರಿಸಲಾಗಿದೆ.
ಒಬ್ಬ ಸಾಮಾನ್ಯ ವ್ಯಕ್ತಿಯು ತನಗೆ ಇಷ್ಟವಾದ ಕೆಲಸ
(ಕುಶಲ ಕರ್ಮ) ಸಿಕ್ಕರೆ ಸಂತೋಷಪಡುತ್ತಾನೆ ಮತ್ತು ಕಷ್ಟದ ಅಥವಾ ತಮಗೆ ಇಷ್ಟವಿಲ್ಲದ ಕೆಲಸ (ಅಕುಶಲ
ಕರ್ಮ) ಎದುರಾದಾಗ ಬೇಸರ ಮಾಡಿಕೊಳ್ಳುತ್ತಾನೆ ಮತ್ತು ಕೋಪಿಸಿಕೊಳ್ಳುತ್ತಾನೆ ಅಥವಾ ಅದರಿಂದ ದೂರ ಓಡುತ್ತಾನೆ.
ಆದರೆ ಸಾತ್ತ್ವಿಕ ತ್ಯಾಗಿಯಾದವನು ಈ ಎರಡು ದ್ವಂದ್ವಗಳಿಂದ ಮುಕ್ತನಾಗಿರುತ್ತಾನೆ. ಅವನಿಗೆ ಕರ್ಮಗಳ
ಬಗ್ಗೆ ರಾಗ-ದ್ವೇಷಗಳು ಇರುವುದಿಲ್ಲ. ತನಗೆ ಇಷ್ಟವಿಲ್ಲದ ಅಥವಾ ಕಠಿಣವಾದ ಕೆಲಸ ಎದುರಾದಾಗ ಅವನು ಅದರಿಂದ
ದೂರ ಓಡಿಹೋಗುವುದಿಲ್ಲ. ಹಾಗೆಯೇ, ತನಗೆ ಇಷ್ಟವಾದ ಅಥವಾ ಸುಲಭವಾದ ಕೆಲಸ ಸಿಕ್ಕಾಗ ಅತಿಯಾಗಿ ಸಂಭ್ರಮಿಸುವುದಿಲ್ಲ.
ಅವನು ಕರ್ಮವನ್ನು 'ಇಷ್ಟ-ಕಷ್ಟ'ಗಳ ಆಧಾರದ ಮೇಲೆ ಅಳೆಯದೆ, ಕೇವಲ 'ಕರ್ತವ್ಯ'ದ ದೃಷ್ಟಿಯಿಂದ ನೋಡುತ್ತಾನೆ.
ಅವನ ಮನಸ್ಸು ಸತ್ತ್ವಗುಣದಲ್ಲಿ ಸ್ಥಿರವಾಗಿರುವುದರಿಂದ, ಯಾವುದೇ ಪರಿಸ್ಥಿತಿಯಲ್ಲೂ ಯಾವುದೇ ಕೆಲಸವನ್ನಾದರೂ
ಸಮಚಿತ್ತದಿಂದ ಮಾಡುತ್ತಾನೆ. ಏಕೆಂದರೆ ಅವನ ಬುದ್ಧಿ ಸ್ಪಷ್ಟವಾಗಿದೆ ಮತ್ತು ಅವನಿಗೆ ಯಾವುದೇ ಗೊಂದಲಗಳಿಲ್ಲ.
ಕೆಲಸದ ಕಷ್ಟ-ಸುಖಗಳನ್ನು ನೋಡದೆ, ಪರಿಸ್ಥಿತಿಗೆ ತಕ್ಕಂತೆ
ತನ್ನ ಪಾಲಿನ ಕರ್ತವ್ಯವನ್ನು ದ್ವೇಷ ಅಥವಾ ಮೋಹವಿಲ್ಲದೆ ಮಾಡುವುದೇ ಸಾತ್ವಿಕ ತ್ಯಾಗಿಯ ಸಾತ್ವಿಕ ಜೀವನದ
ಪರಮ ಗುರಿ.
ಅಕುಶಲ ಕರ್ಮ:
ಅಕುಶಲ ಕರ್ಮ ಎಂದರೆ ಕಷ್ಟಕರ (ಶಾರೀರಿಕವಾಗಿ ತುಂಬ ಶ್ರಮ ಪಡಬೇಕಾದ ಅಥವಾ ಕಠಿಣವಾದ),
ಕಷ್ಟದಾಯಕ (ತುಂಬಾ ತೊಂದರೆ, ನೋವು, ಮಾನಸಿಕ
ಒತ್ತಡ
ಅಥವಾ ದುಃಖವನ್ನುಂಟು ಮಾಡುವ), ತಕ್ಷಣಕ್ಕೆ ಯಾವುದೇ ಲಾಭ ತರದ, ಸಮಾಜದ ದೃಷ್ಟಿಯಲ್ಲಿ ಸಾಧಾರಣ ಎನಿಸಿಕೊಂಡು
ಯಾವುದೇ ಗೌರವ ತರದ ಅಥವಾ ತನಗೆ ಇಷ್ಟವಿಲ್ಲದ ಕೆಲಸಗಳು (ಉದಾಹರಣೆಗೆ: ರೋಗಿಯ ಸೇವೆ ಮಾಡುವುದು, ಕಠಿಣ
ಪರಿಸ್ಥಿತಿಗಳಲ್ಲಿ ಕರ್ತವ್ಯ ನಿಭಾಯಿಸುವುದು, ಸೋಲು ಎದುರಾದಾಗ ಜವಾಬ್ದಾರಿ ಹೊರುವುದು ಇತ್ಯಾದಿ).
ಕುಶಲ ಕರ್ಮ:
'ಕುಶಲ ಕರ್ಮ' ಎಂದರೆ ಸುಲಭವಾಗಿರುವ, ಕೀರ್ತಿ ತರುವ, ದೈಹಿಕ ಸುಖ ಕೊಡುವ ಕೆಲಸಗಳು.
ಕಷ್ಟಕರ (Difficult / Challenging) = ಮಾಡುವುದಕ್ಕೆ ತುಂಬಾ ಶ್ರಮಪಡಬೇಕಾದ ಅಥವಾ ತುಂಬಾ
ಕಠಿಣವಾದ ಕೆಲಸ ಅಥವಾ ವಿಷಯ.
ಕಷ್ಟದಾಯಕ (Painful / Troublesome / Suffering) = ನಮಗೆ ಮಾನಸಿಕ ಒತ್ತಡ, ದುಃಖ, ತೊಂದರೆ ಅಥವಾ ನೋವನ್ನು ನೀಡುವ ಪರಿಸ್ಥಿತಿ
ಅಥವಾ ಘಟನೆ.
न हि देहभृता शक्यं त्यक्तुं कर्माण्यशेषतः ।
यस्तु कर्मफलत्यागी स त्यागीत्यभिधीयते ॥ १८-११
ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ 18.11
ಯಃ ತು ಕರ್ಮ-ಫಲ-ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ
ನ = ಎಂದಿಗೂ ಇಲ್ಲ (ಸಾಧ್ಯವಿಲ್ಲ) + ಹಿ = ಖಂಡಿತವಾಗಿಯೂ + ದೇಹ-ಭೃತಾ = ಶರೀರವನ್ನು ಧರಿಸಿದವನಿಂದ (ಮಾನವನಿಂದ) + ಶಕ್ಯಂ = ಸಾಧ್ಯ + ತ್ಯಕ್ತುಂ = ತ್ಯಜಿಸಲು / ಬಿಡಲು + ಕರ್ಮಾಣಿ = ಕರ್ಮಗಳನ್ನು (ಕೆಲಸಗಳನ್ನು) + ಅಶೇಷತಃ = ಸಂಪೂರ್ಣವಾಗಿ, ಪೂರ್ಣ ಪ್ರಮಾಣದಲ್ಲಿ
= ಆದರೆ ಯಾರು + ದೇಹವನ್ನು ಧರಿಸಿರುವ ಯಾವುದೇ ಜೀವಿಯು ಕರ್ಮಗಳನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವೇ
ಇಲ್ಲ. ಆದ್ದರಿಂದ, ಯಾರು ತಾನು ಮಾಡುವ ಕೆಲಸಗಳ ಪ್ರತಿಫಲದ ಆಸೆಯನ್ನು (ಸ್ವಾರ್ಥವನ್ನು) ತ್ಯಜಿಸುತ್ತಾರೋ,
ಅವರನ್ನೇ ನಿಜವಾದ ‘ತ್ಯಾಗಿ’ ಎಂದು ಕರೆಯಲಾಗುತ್ತದೆ.
ನ ಹಿ ದೇಹ-ಭೃತಾ ಶಕ್ಯಂ ತ್ಯಕ್ತುಂ ಕರ್ಮಾಣಿ ಅಶೇಷತಃ:
[ದೇಹವನ್ನು ಧರಿಸಿರುವ
ಯಾವುದೇ ಜೀವಿಯು ಕರ್ಮಗಳನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವೇ ಇಲ್ಲ]
ದೇಹಭೃತ್ (ದೇಹಧಾರಿ) ಎಂದರೆ ದೇಹವನ್ನು ಹೊತ್ತಿರುವವನು. ಆತ್ಮಕ್ಕೆ ಯಾವುದೇ ಕರ್ಮವಿಲ್ಲ,
ಆದರೆ ಆತ್ಮವು ದೇಹಭೃತ್ ಆದಾಗ ಅಂದರೆ ದೇಹವನ್ನು ಧರಿಸಿದಾಗ ಪ್ರಕೃತಿಯ ಸತ್ತ್ವ, ರಜಸ್, ತಮಸ್ ತ್ರಿಗುಣಗಳಿಗೆ
ಒಳಪಟ್ಟು ಕರ್ಮ ಮಾಡುವುದು ಅನಿವಾರ್ಯವಾಗುತ್ತದೆ. ಹಸಿವಾದಾಗ ಉಣ್ಣಬೇಕು, ದಣಿದಾಗ ನಿದ್ರಿಸಬೇಕು.
ಕಣ್ಣು ತೆರೆದಾಗ ಜಗತ್ತನ್ನು ನೋಡಲೇಬೇಕು ಮನಸ್ಸು ಏನಾದರೂ ಯೋಚಿಸುತ್ತಲೇ ಇರುತ್ತದೆ. ಈ ಯಾವುದೇ ಕ್ರಿಯೆಗಳೂ
ಕರ್ಮದಿಂದ ಹೊರತಾಗಿಲ್ಲ; ಯೋಚಿಸುವುದು ಕೂಡಾ ಮಾನಸಿಕ ಕರ್ಮವೇ ಆಗಿದೆ. ಸಂಪೂರ್ಣ ನಿಷ್ಕರ್ಮ ಸ್ಥಿತಿ (ಶೂನ್ಯ ಕೆಲಸ) ಬದುಕಿರುವಾಗ ಅಸಾಧ್ಯ. ಅಂದಮೇಲೆ, "ನಾನು ಯಾವ ಕೆಲಸವನ್ನೂ ಮಾಡದೆ ಸನ್ಯಾಸಿ ಅಥವಾ ತ್ಯಾಗಿಯಾಗುತ್ತೇನೆ"
ಎಂದುಕೊಳ್ಳುವುದು ಕೇವಲ ಭ್ರಮೆ. ಮತ್ತು ಸನ್ಯಾಸ ಅಥವಾ
ತ್ಯಾಗದ ಹೆಸರಿನಲ್ಲಿ ಕರ್ತವ್ಯಗಳಿಂದ ತಪ್ಪಿಸಿಕೊಳ್ಳುವುದು ಮೂರ್ಖತನ ಎನಿಸಿಕೊಳ್ಳುತ್ತದೆ.
ಯಃ ತು ಕರ್ಮ-ಫಲ-ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ:
[ಆದ್ದರಿಂದ, ಯಾರು ತಾನು ಮಾಡುವ
ಕೆಲಸಗಳ ಪ್ರತಿಫಲದ ಆಸೆಯನ್ನು ತ್ಯಜಿಸುತ್ತಾರೋ, ಅವರನ್ನೇ ನಿಜವಾದ ‘ತ್ಯಾಗಿ’ ಎಂದು ಕರೆಯಲಾಗುತ್ತದೆ]
ಕರ್ಮಗಳನ್ನು ಮಾಡದೆ ಇರಲು ಸಾಧ್ಯವಿಲ್ಲ, ಅಂದ ಮೇಲೆ ಕರ್ಮದ ಬಂಧನದಿಂದ ಮುಕ್ತಿ ಪಡೆಯುವುದು ಹೇಗೆ, ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಅದರ ಪರಿಹಾರವೇ 'ಕರ್ಮಫಲ ತ್ಯಾಗ'. ಕರ್ಮಫಲತ್ಯಾಗೀ ಅಂದರೆ ಫಲವನ್ನು ಬಿಡುವವನು ಅಂತ. ಇಲ್ಲಿ ಫಲ ತ್ಯಾಗ ಎಂದರೆ ಜವಾಬ್ದಾರಿಯಿಲ್ಲದೆ ಕೆಲಸ ಮಾಡುವುದಲ್ಲ. ಬದಲಿಗೆ, ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಶಾಸ್ತ್ರವಿಹಿತ ಕರ್ತವ್ಯ ಕರ್ಮಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಮಾಡಿ, ಅದರಿಂದ ಬರುವ ಲಾಭ-ನಷ್ಟ, ಜಯ-ಅಪಜಯ, ಯಶಸ್ಸು ಅಥವಾ ಅಪಕೀರ್ತಿಯನ್ನು ಸಮಭಾವದಿಂದ ಸ್ವೀಕರಿಸುವುದು ಮತ್ತು ಫಲಿತಾಂಶವನ್ನು ಪ್ರಕೃತಿಗೆ ಬಿಟ್ಟುಬಿಡುವುದು ಅಥವಾ ಸಮಾಜಕ್ಕೆ ಅರ್ಪಿಸುವುದು. ಯಾರು ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯಪ್ರಜ್ಞೆಯಿಂದ ಬದುಕುತ್ತಾರೋ, ಅವರು ಸಂಸಾರದಲ್ಲಿದ್ದರೂ ಮುಕ್ತರೇ ಆಗಿರುತ್ತಾರೆ.
ಕರ್ಮಗಳನ್ನು ಮಾಡದೆ ಇರಲು ಸಾಧ್ಯವಿಲ್ಲ, ಅಂದ ಮೇಲೆ ಕರ್ಮದ ಬಂಧನದಿಂದ ಮುಕ್ತಿ ಪಡೆಯುವುದು ಹೇಗೆ, ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಅದರ ಪರಿಹಾರವೇ 'ಕರ್ಮಫಲ ತ್ಯಾಗ'. ಕರ್ಮಫಲತ್ಯಾಗೀ ಅಂದರೆ ಫಲವನ್ನು ಬಿಡುವವನು ಅಂತ. ಇಲ್ಲಿ ಫಲ ತ್ಯಾಗ ಎಂದರೆ ಜವಾಬ್ದಾರಿಯಿಲ್ಲದೆ ಕೆಲಸ ಮಾಡುವುದಲ್ಲ. ಬದಲಿಗೆ, ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಶಾಸ್ತ್ರವಿಹಿತ ಕರ್ತವ್ಯ ಕರ್ಮಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಮಾಡಿ, ಅದರಿಂದ ಬರುವ ಲಾಭ-ನಷ್ಟ, ಜಯ-ಅಪಜಯ, ಯಶಸ್ಸು ಅಥವಾ ಅಪಕೀರ್ತಿಯನ್ನು ಸಮಭಾವದಿಂದ ಸ್ವೀಕರಿಸುವುದು ಮತ್ತು ಫಲಿತಾಂಶವನ್ನು ಪ್ರಕೃತಿಗೆ ಬಿಟ್ಟುಬಿಡುವುದು ಅಥವಾ ಸಮಾಜಕ್ಕೆ ಅರ್ಪಿಸುವುದು. ಯಾರು ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯಪ್ರಜ್ಞೆಯಿಂದ ಬದುಕುತ್ತಾರೋ, ಅವರು ಸಂಸಾರದಲ್ಲಿದ್ದರೂ ಮುಕ್ತರೇ ಆಗಿರುತ್ತಾರೆ.
ಅನೇಕ ಜನರು ಆಧ್ಯಾತ್ಮಿಕತೆ, ಸನ್ಯಾಸ ಅಥವಾ ತ್ಯಾಗ
ಎಂದರೆ ಎಲ್ಲ ಕೆಲಸ-ಕಾರ್ಯಗಳನ್ನು ಬಿಟ್ಟು ಸುಮ್ಮನೆ ಕುಳಿತುಕೊಳ್ಳುವುದು ಎಂದು ತಪ್ಪು ತಿಳಿಯುತ್ತಾರೆ.
ಈ ಶ್ಲೋಕ ಆ ಭ್ರಮೆಯನ್ನು ನಿವಾರಿಸುತ್ತಿದೆ. ಮನುಷ್ಯನಿಗೆ ದೇಹವಿರುವವರೆಗೂ ಅವರು ಕರ್ಮ ಮಾಡಲೇಬೇಕು.
ಕಣ್ಣು ಮುಚ್ಚಿ ಕುಳಿತರೂ ಕೂಡಾ ಉಸಿರಾಡುವುದು, ಊಟ ಮಾಡುವುದು, ಮಲಗುವುದು, ಆಲೋಚನೆ ಮಾಡುವುದು ಇವೆಲ್ಲವೂ
ಕರ್ಮಗಳೇ (ಕೆಲಸಗಳೇ) ಆಗಿವೆ, ಮತ್ತು ಜೀವಂತವಾಗಿರುವವರೆಗೂ ಈ ಶಾರೀರಿಕ ಕರ್ಮಗಳನ್ನು ಯಾರೂ ನಿಲ್ಲಿಸಲು
ಸಾಧ್ಯವಿಲ್ಲ. ಆದುದರಿಂದ ಕೆಲಸವನ್ನು ಬಿಡುವುದಲ್ಲ, ಬದಲಿಗೆ ಕೆಲಸದ ಮೇಲಿನ ಮಾಲೀಕತ್ವದ ಭಾವನೆ, ಮತ್ತು ಅದರ
ಫಲದ ಮೇಲಿನ ಹಕ್ಕು ಮತ್ತು ಆಸೆಯನ್ನು ಬಿಡುವುದೇ ಜಾಣತನ. ಮತ್ತು ಇದೇ ನಿಜವಾದ ತ್ಯಾಗ. ಹೀಗೆ ಕರ್ಮದ
ಫಲವನ್ನು ಸಮಾಜಕ್ಕೆ ಅರ್ಪಿಸಿ, ಕೇವಲ ನಿಮಿತ್ತ ಮಾತ್ರ ಇದು ತನ್ನ ಕರ್ತವ್ಯ ಎಂದು ಕೆಲಸ ಮಾಡುವವನೇ
ನಿಜವಾದ ತ್ಯಾಗಿ.
ನಿಷಿದ್ಧ ಕರ್ಮ
ನಿಷಿದ್ಧ ಕರ್ಮ ಎಂದರೆ ಮಾಡಬಾರದಾದ ಅಥವಾ ನಿಷೇಧಿಸಲ್ಪಟ್ಟ ಕಾರ್ಯಗಳು ಎಂದರ್ಥ.
ಯಾವ ಕೆಲಸಗಳನ್ನು ಮಾಡುವುದರಿಂದ ಸಮಾಜಕ್ಕೆ, ವ್ಯಕ್ತಿಗೆ ಅಥವಾ ಇತರ ಜೀವಿಗಳಿಗೆ ತೊಂದರೆಯಾಗುತ್ತದೆಯೋ
ಮತ್ತು ಧರ್ಮದ ನಿಯಮಗಳಿಗೆ ವಿರುದ್ಧವಾಗಿದೆಯೋ, ಅವುಗಳನ್ನು 'ನಿಷಿದ್ಧ ಕರ್ಮ' ಅಥವಾ 'ವಿಕರ್ಮ'
ಎಂದು ಕರೆಯಲಾಗುತ್ತದೆ.
ಉದಾಹರಣೆಗೆ ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಜೀವಹಿಂಸೆ ಮಾಡುವುದು, ಇತರರಿಗೆ ದ್ರೋಹ
ಬಗೆಯುವುದು, ಇತ್ಯಾದಿ.
ಕಾಮ್ಯ ಕರ್ಮ
ಕಾಮ್ಯ ಕರ್ಮ ಎಂದರೆ ಯಾವುದೇ ಒಂದು ನಿರ್ದಿಷ್ಟ
ಆಸೆ, ವೈಯಕ್ತಿಕ ಬಯಕೆ, ಫಲದ ನಿರೀಕ್ಷೆಯೊಂದಿಗೆ ಅಥವಾ ಲೌಕಿಕ ಸುಖವನ್ನು ಪಡೆಯಲು
ಮಾಡುವ
ಕಾರ್ಯಗಳು.
ಉದಾಹರಣೆಗೆ ಸಂಪತ್ತಿನ ವೃದ್ಧಿಗಾಗಿ ಅಥವಾ ವ್ಯವಹಾರದಲ್ಲಿ ಯಶಸ್ಸಿಗಾಗಿ ಮಾಡುವ ಮಂತ್ರ ಪಠಣ,
ಪೂಜೆ, ಯಾಗ ಮತ್ತು ವಿಶೇಷ ಹೋಮಗಳು; ಸ್ವರ್ಗ ಅಥವಾ ಉನ್ನತ ಲೋಕಗಳನ್ನು ಪಡೆಯುವ ಉದ್ದೇಶದಿಂದ ಮಾಡುವ
ಪುಣ್ಯ ಕಾರ್ಯಗಳು; ಒಳ್ಳೆಯ ಆರೋಗ್ಯ ಅಥವಾ ದೀರ್ಘಾಯುಷ್ಯಕ್ಕಾಗಿ ಮಾಡುವ ಉಪವಾಸ ಅಥವಾ ವಿಶೇಷ ವ್ರತಗಳು,
ಇತ್ಯಾದಿ.
ನಿಷ್ಕಾಮ ಕರ್ಮ (ನಿಷ್ಕಾಮ್ಯ ಕರ್ಮ)
ನಿಷ್ಕಾಮ ಕರ್ಮ ಎಂದರೆ ಯಾವುದೇ ಫಲ ಅಥವಾ ಪ್ರತಿಫಲದ
ಆಲೋಚನೆ ಮತ್ತು
ಅಪೇಕ್ಷೆಯಿಲ್ಲದೆ ಕೇವಲ ಜಗತ್ತಿನ
ಒಳಿತಿಗಾಗಿ ಅಥವಾ ಕರ್ತವ್ಯ ಭಾವದಿಂದ ಮಾಡುವ ನಿಸ್ವಾರ್ಥ ಕಾರ್ಯಗಳು.
अनिष्टमिष्टं मिश्रं च त्रिविधं कर्मणः फलम् ।
भवत्यत्यागिनां प्रेत्य न तु संन्यासिनां क्वचित् ॥ १८-१२
ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್
ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ 18.12
ಅನಿಷ್ಟಮ್ ಇಷ್ಟಮ್ ಮಿಶ್ರಮ್ ಚ ತ್ರಿವಿಧಮ್ ಕರ್ಮಣಃ ಫಲಮ್
ಭವತಿ ಅತ್ಯಾಗಿನಾಮ್ ಪ್ರೇತ್ಯ ನ ತು ಸನ್ಯಾಸಿನಾಮ್ ಕ್ವಚಿತ್
ಅನಿಷ್ಟಮ್ = ಇಷ್ಟವಿಲ್ಲದ್ದು (ನರಕ, ದುಃಖ ಅಥವಾ ಕೀಳು ಜನ್ಮ), ಇಷ್ಟಮ್ = ಇಷ್ಟವಾದದ್ದು (ಸ್ವರ್ಗ, ಸುಖ ಅಥವಾ ಉತ್ತಮ ಜನ್ಮ), ಮಿಶ್ರಂ ಚ = ಇವೆರಡರ ಮಿಶ್ರಣವೂ (ಸುಖ-ದುಃಖಗಳುಳ್ಳ ಮನುಷ್ಯ ಜನ್ಮ), ತ್ರಿವಿಧಮ್ = ಮೂರು ಬಗೆಯಾದ, ಕರ್ಮಣಃ = ಕರ್ಮದ, ಫಲಮ್ = ಫಲವು
ಭವತಿ = ಉಂಟಾಗುತ್ತದೆ, ಅತ್ಯಾಗಿನಾಮ್ = ಕರ್ಮದ ಫಲವನ್ನು ತ್ಯಜಿಸದವರಿಗೆ (ಆಸೆಯುಳ್ಳವರಿಗೆ, ಸ್ವಾರ್ಥಿಗಳಿಗೆ), ಪ್ರೇತ್ಯ = ಮರಣದ ನಂತರ (ಪರಲೋಕದಲ್ಲಿ), ನ = ಆಗುವುದಿಲ್ಲ, ತು = ಆದರೆ, ಸನ್ಯಾಸಿನಾಮ್ = ಸನ್ಯಾಸಿಗಳಿಗೆ / ಕರ್ಮಫಲ ತ್ಯಾಗಿಗಳಿಗೆ, ಕ್ವಚಿತ್ = ಎಂದಿಗೂ / ಯಾವುದೇ ಕಾಲದಲ್ಲೂ
ಮನುಷ್ಯನು ಈ ಜಗತ್ತಿನಲ್ಲಿ
ಬದುಕಿರುವಾಗ ಮಾಡುವ ಪ್ರತಿಯೊಂದು ಸ್ವಾರ್ಥಪೂರಿತ ಕೆಲಸವೂ ಒಂದು ಬೀಜದಂತೆ. ಅದು ಮುಂದೊಂದು ದಿನ ಫಲ
ನೀಡಲೇಬೇಕು. ಆ ಫಲಗಳು ಮೂರು ವಿಧ:
ಅನಿಷ್ಟ (ಕೆಟ್ಟ
ಫಲ) (Unpleasant/Bad): ಇದು ಅಧರ್ಮದ ಹಾದಿಯಲ್ಲಿ ನಡೆದು, ಇತರರಿಗೆ ಕಷ್ಟ ಕೊಟ್ಟು, ಪಾಪದ ಕೆಲಸಗಳನ್ನು ಮಾಡುವುದರಿಂದ
ಸಿಗುವ ಫಲ. ಇದರ ಪರಿಣಾಮವಾಗಿ ಮನುಷ್ಯನು ಮರಣಾನಂತರ ನರಕ ಯಾತನೆ ಅನುಭವಿಸಬೇಕಾಗುತ್ತದೆ ಅಥವಾ ಪ್ರಾಣಿ-ಪಕ್ಷಿಗಳಂತಹ
ಕೀಳು ಜನ್ಮ ಪಡೆಯಬೇಕಾಗುತ್ತದೆ.
ಇಷ್ಟ (ಒಳ್ಳೆಯ ಫಲ)
(Pleasant/Good): ಇದು ಸತ್ತ್ವಗುಣ ಮತ್ತು ದಾನ-ಧರ್ಮ, ಯಜ್ಞದಂತಹ ಪುಣ್ಯದ ಕೆಲಸಗಳನ್ನು ಮಾಡುವುದರಿಂದ ಸಿಗುವ ಫಲ. ಇದರಿಂದ ಸ್ವರ್ಗ ಸುಖ ಸಿಗಬಹುದು ಅಥವಾ ಭೂಮಿಯಲ್ಲಿ ಶ್ರೀಮಂತ,
ಸುಸಂಸ್ಕೃತ ಕುಟುಂಬದಲ್ಲಿ ಜನ್ಮ ಸಿಗಬಹುದು. ಆದರೆ ನೆನಪಿರಲಿ, ಒಂದು ವೇಳೆ ಸ್ವರ್ಗ ಪ್ರಾಪ್ತಿಯಾದರೂ,
ಪುಣ್ಯ ಮುಗಿದ ಮೇಲೆ ಮತ್ತೆ ಭೂಮಿಯಲ್ಲಿ ಜನ್ಮ ತಾಳ ಬೇಕಾಗುತ್ತದೆ.
ಮಿಶ್ರ (ಮಿಶ್ರಿತ
ಫಲ) (Mixed): ಇದು ರಜೋಗುಣದ ಪ್ರಭಾವದಿಂದ, ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಒಟ್ಟಿಗೆ ಮಾಡುವುದರಿಂದ ಸಿಗುವ ಫಲ. ಇದರಿಂದ ಜೀವಿಯು ಮತ್ತೆ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟುತ್ತಾನೆ. ಇಲ್ಲಿ ಸುಖ ಮತ್ತು ದುಃಖ ಎರಡೂ ಮಿಶ್ರಿತವಾಗಿ ಇರುತ್ತವೆ.
ಯಾರು ತಾವು ಮಾಡುವ
ಕೆಲಸಗಳಿಗೆ ನಾನೇ ಕರ್ತೃ (ನಾನೇ ಮಾಡಿದ್ದು) ಎಂದು ಭಾವಿಸುತ್ತಾರೋ ಮತ್ತು ಅದರ ಲಾಭವನ್ನು ಬಯಸುತ್ತಾರೋ,
ಅವರು ಈ ಮೂರು ಫಲಗಳನ್ನು ಅನುಭವಿಸಲು ಮತ್ತೆ ಮತ್ತೆ ಹುಟ್ಟಿ ಬರಲೇಬೇಕು. ಆದರೆ, ಯಾರು ತಮ್ಮ ಕರ್ಮಗಳನ್ನು
ಅದು ತಮ್ಮ ಕರ್ತವ್ಯ ಎಂದು ಭಾವಿಸಿ, ಫಲವನ್ನು ಆಶಿಸದೆ ಮಾಡುತ್ತಾರೋ (ಸನ್ಯಾಸಿ/ ತ್ಯಾಗಿಗಳು), ಅವರ
ಕರ್ಮಗಳು ಭಸ್ಮವಾಗುತ್ತವೆ. ಅವರಿಗೆ ಯಾವುದೇ ಪುಣ್ಯ-ಪಾಪಗಳು ಅಂಟದ ಕಾರಣ ಅವರು ಜನ್ಮ-ಮರಣಗಳ ಚಕ್ರದಿಂದ
ಮುಕ್ತರಾಗಿ ಮೋಕ್ಷವನ್ನು ಹೊಂದುತ್ತಾರೆ.
पञ्चैतानि महाबाहो कारणानि निबोध मे ।
सांख्ये कृतान्ते प्रोक्तानि सिद्धये सर्वकर्मणाम् ॥ १८-१३
ಪಞ್ಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ
ಸಾಂಖ್ಯೇ ಕೃತಾನ್ತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ 18.13
ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್
ಮಹಾಬಾಹೋ
ಅರ್ಜುನನೇ, ಎಲ್ಲಾ ಕರ್ಮಗಳು ಸಿದ್ಧಿಯಾಗಲು (ಅಂದರೆ ಕೆಲಸಗಳು ನೆರವೇರಲು) ಬೇಕಾಗುವ ಐದು ಕಾರಣಗಳಿವೆ
ಎಂದು ಕರ್ಮಗಳ ಮುಕ್ತಾಯವನ್ನು ತಿಳಿಸುವ ಸಾಂಖ್ಯ ಶಾಸ್ತ್ರದಲ್ಲಿ (ವೇದಾಂತದಲ್ಲಿ) ಹೇಳಲಾಗಿದೆ. ಅವುಗಳನ್ನು
ನೀನು ನನ್ನಿಂದ ಸ್ಪಷ್ಟವಾಗಿ ತಿಳಿದುಕೊ.
ಮನುಷ್ಯನು ಸಾಮಾನ್ಯವಾಗಿ ಯಾವುದಾದರೂ ಒಂದು ಕೆಲಸ
ಯಶಸ್ವಿಯಾದರೆ "ಅದನ್ನು ನಾನೇ ಮಾಡಿದೆ" ಎಂದು ಅಹಂಕಾರ ಪಡುತ್ತಾನೆ, ಆದರೆ ಯಾವುದೇ ಒಂದು
ಕೆಲಸವನ್ನು ಯಶಸ್ವಿಯಾಗಿ ಮುಗಿಸಲು ಕೇವಲ ಅವನೊಬ್ಬನೇ ಕಾರಣನಲ್ಲ. ವೇದಾಂತ ಅಥವಾ ಸಾಂಖ್ಯ ತತ್ತ್ವಶಾಸ್ತ್ರದ
ಪ್ರಕಾರ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯ ಹಿಂದೆಯೂ ಐದು ಪ್ರಮುಖ ಕಾರಣಗಳು
(ಪ್ರಕೃತಿಯ ಶಕ್ತಿಗಳು ಅಥವಾ ನಿಯಮಗಳು) ಅಡಗಿರುತ್ತವೆ. ಮನುಷ್ಯನ ಪ್ರಯತ್ನವು ಆ ಐದು ಕಾರಣಗಳಲ್ಲಿ
ಕೇವಲ ಒಂದು ಭಾಗವಷ್ಟೇ.
ಈ ಸತ್ಯವನ್ನು ಅರಿತವನು "ನಾನೇ ಎಲ್ಲವನ್ನೂ
ಮಾಡುತ್ತಿದ್ದೇನೆ" ಎಂಬ ಕರ್ತೃತ್ವ ಭಾವನೆಯಿಂದ (ಅಹಂಕಾರದಿಂದ) ಮುಕ್ತನಾಗುತ್ತಾನೆ.
ಈ ಶ್ಲೋಕದ ಮೂಲಕ, ಎಲ್ಲಾ ಕರ್ಮಗಳು ಸಿದ್ಧಿಯಾಗಲು ಬೇಕಾಗುವ ಐದು ಕಾರಣಗಳ
ಹಿನ್ನೆಲೆಯನ್ನು ತಿಳಿಸುವುದಕ್ಕೆ ಮುಂಚೆ, ಅದಕ್ಕೆ ಒಂದು ಪೀಠಿಕೆ ಹಾಕಲಾಗಿದೆ.
अधिष्ठानं तथा कर्ता करणं च पृथग्विधम् ।
विविधाश्च पृथक्चेष्टा दैवं चैवात्र पञ्चमम् ॥ १८-१४
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್
ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಞ್ಚಮಮ್ 18.14
ಅಧಿಷ್ಠಾನಮ್ ತಥಾ ಕರ್ತಾ ಕರಣಮ್ ಚ ಪೃಥಕ್ ವಿಧಮ್
ವಿವಿಧಾಃ ಚ ಪೃಥಕ್ ಚೇಷ್ಟಾಃ ದೈವಮ್ ಚ ಏವ ಅತ್ರ ಪಂಚಮಮ್
ಯಾವುದೇ ಒಂದು ಕರ್ಮವು ನೆರವೇರಲು ಬೇಕಾದ ಐದು ಕಾರಣಗಳೆಂದರೆ— 1. ಅಧಿಷ್ಠಾನ (ಶರೀರ),
2. ಕರ್ತಾ (ಜೀವಾತ್ಮ/
ಮಾಡುವವನು), 3. ಪೃಥಗ್ವಿಧ ಕರಣ (ವಿವಿಧ ಇಂದ್ರಿಯಗಳು/ಸಾದನಗಳು), 4. ವಿವಿಧ ಚೇಷ್ಟಾ (ಬೇರೆ ಬೇರೆ
ಪ್ರಯತ್ನಗಳು) ಮತ್ತು ಐದನೆಯದಾಗಿ ಪ್ರಮುಖವಾದ ಕಾರಣ ದೈವ (ಪರಮಾತ್ಮ ಅಥವಾ ಪ್ರಕೃತಿಯ ನಿಯಮ/ಪ್ರಾರಬ್ಧ).
ನಾವು ಮಾಡುವ ಪ್ರತಿಯೊಂದು ಸಣ್ಣ ಅಥವಾ ದೊಡ್ಡ ಕೆಲಸದ ಹಿಂದೆ ಈ
ಐದು ಕಾರಣ/ ಘಟಕಗಳು ಒಟ್ಟಾಗಿ ಕೆಲಸ ಮಾಡುತ್ತವೆ:
1. ಅಧಿಷ್ಠಾನ (ದೇಹ
ಅಥವಾ ಆಧಾರ) (The Field/Body): ಯಾವುದೇ ಕೆಲಸ ಮಾಡಲು ನಮಗೆ ಒಂದು ಮಾಧ್ಯಮ ಅಥವಾ ಆಧಾರ ಬೇಕು. ಅಂದರೆ ಶರೀರ ಮತ್ತು ಆ ಕೆಲಸಕ್ಕೆ ಬೇಕಾದ ಸ್ಥಳ, ಪರಿಸರಗಳು. ಮನುಷ್ಯನಿಗೆ ಅವನ ಶರೀರವೇ ಅಧಿಷ್ಠಾನ. ಶರೀರವಿಲ್ಲದೆ ಜೀವಾತ್ಮನು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಇಚ್ಛೆ, ದ್ವೇಷ, ಸುಖ, ದುಃಖಗಳೆಲ್ಲವೂ ಈ ಶರೀರದಲ್ಲೇ ವ್ಯಕ್ತವಾಗುತ್ತವೆ. ಯಾವುದೇ ಕೆಲಸ
ನಡೆಯುವ ಸ್ಥಳ ಅಥವಾ ಪರಿಸರವೂ ಇದರ ಅಡಿಯಲ್ಲೇ ಬರುತ್ತದೆ.
2. ಕರ್ತಾ (ಮಾಡುವವನು) (The Doer): ಕೆಲಸವನ್ನು ಮಾಡುವವನು. ಅಜ್ಞಾನದಿಂದಾಗಿ ಶರೀರದೊಂದಿಗೆ
ತನ್ನನ್ನು ತಾನು ಗುರುತಿಸಿಕೊಂಡು, "ನಾನು ಮಾಡುತ್ತಿದ್ದೇನೆ" ಎಂದು ಭಾವಿಸುವ ಜೀವಾತ್ಮ
ಅಥವಾ ಅಹಂಕಾರ ಬುದ್ಧಿ ಇಲ್ಲಿ ಕರ್ತೃ. ಇಚ್ಛಾಶಕ್ತಿ
ಅಥವಾ ಸಂಕಲ್ಪ ಮಾಡುವವನೇ ಕರ್ತೃ. ಜೀವಾತ್ಮನ ಚೇತನವಿಲ್ಲದೆ ಜಡವಾದ ಶರೀರ ಏನನ್ನೂ ಮಾಡಲಾರದು.
3. ಕರಣ (ಇಂದ್ರಿಯಗಳು ಮತ್ತು ಸಾಧನಗಳು) (The Instruments): ಕೆಲಸ ಮಾಡಲು
ಬೇಕಾದ ಪರಿಕರಗಳು ಅಥವಾ ಉಪಕರಣಗಳು. ನಮ್ಮ ದೇಹದ ಒಳಗೆ ಮತ್ತು ಹೊರಗೆ ಇರುವ
ಸಾಧನಗಳು ಇವು. ಮನುಷ್ಯನಿಗೆ ಅವನ
ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ), ಕರ್ಮೇಂದ್ರಿಯಗಳು
(ಕೈ, ಕಾಲು, ವಾಕ್, ಗುದದ್ವಾರ ಮತ್ತು ಜನನೇಂದ್ರಿಯ) ಹಾಗೂ ಅಂತರಂಗದ ಮನಸ್ಸು ಮತ್ತು
ಬುದ್ಧಿ (ಅಂತಃಕರಣ) ಇವುಗಳೇ ಕರಣಗಳು.
ಇವುಗಳಿಲ್ಲದೆ ಕರ್ತೃವು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.
4. ಚೇಷ್ಟಾ (ಪ್ರಯತ್ನಗಳು) (The Effort/Endeavor): ಕೇವಲ ಶರೀರ ಮತ್ತು ಇಂದ್ರಿಯಗಳಿದ್ದರೆ
ಸಾಲದು, ಕೆಲಸ ಪೂರ್ಣಗೊಳ್ಳಲು ಶಾರೀರಿಕವಾಗಿ ಮತ್ತು ಮಾನಸಿಕವಾಗಿ
ಪ್ರಯತ್ನ, ಚಟುವಟಿಕೆ
ಅಥವಾ ಪ್ರಾಣಶಕ್ತಿಯ ಚಲನೆ ಇರಬೇಕು. ಇಂದ್ರಿಯಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಪ್ರಾಣಶಕ್ತಿ
ಮತ್ತು ದೈಹಿಕ-ಮಾನಸಿಕ ಶ್ರಮವೇ ಚೇಷ್ಟಾ. ಉಸಿರಾಟ, ರಕ್ತಚಲನೆಯಿಂದ
ಹಿಡಿದು ನಾವು ಉದ್ದೇಶಪೂರ್ವಕವಾಗಿ ಮಾಡುವ ಎಲ್ಲಾ ದೈಹಿಕ ಮತ್ತು ಮಾನಸಿಕ ಶ್ರಮಗಳು ಈ ಚೇಷ್ಟೆಗಳ ಅಡಿಗೆ
ಬರುತ್ತವೆ.
5. ದೈವ (ದೈವೇಚ್ಛೆ
ಅಥವಾ ಪ್ರಾರಬ್ಧ) (The Divine Grace / Destiny): ಇದು ಎಲ್ಲದಕ್ಕಿಂತ ಮುಖ್ಯವಾದ ಐದನೇ ಘಟಕ. ನಮ್ಮೊಳಗಿರುವ ಪರಮಾತ್ಮನ ಒಪ್ಪಿಗೆ
(ಚೇತನ ಶಕ್ತಿ), ಪ್ರಕೃತಿಯ ಅದೃಶ್ಯ ನಿಯಮಗಳು ಅಥವಾ ನಮ್ಮ ಪೂರ್ವಜನ್ಮದ ಪ್ರಾರಬ್ಧ ಕರ್ಮಗಳನ್ನು 'ದೈವ'
ಎನ್ನಲಾಗುತ್ತದೆ. ನಾವು ಮೊದಲ ನಾಲ್ಕು ಘಟಕಗಳನ್ನು ಸರಿಯಾಗಿ ಬಳಸಿದರೂ, ಈ ಐದನೇ ಘಟಕವಾದ 'ದೈವ' ಅಥವಾ
ದೈವೀ ಅನುಗ್ರಹದ ಬೆಂಬಲವಿಲ್ಲದಿದ್ದರೆ ಕರ್ಮವು ಯಶಸ್ವಿಯಾಗುವುದಿಲ್ಲ. ಇದನ್ನೇ ನಾವು ಸಾಮಾನ್ಯ ಭಾಷೆಯಲ್ಲಿ 'ಅದೃಷ್ಟ' ಅಥವಾ 'ದೈವೇಚ್ಛೆ' ಎನ್ನುವುದು.
शरीरवाङ्मनोभिर्यत् कर्म प्रारभते नरः ।
न्याय्यं वा विपरीतं वा पञ्चैते तस्य हेतवः ॥ १८-१५
ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ
ನ್ಯಾಯ್ಯಂ ವಾ ವಿಪರೀತಂ ವಾ ಪಞ್ಚೈತೇ ತಸ್ಯ ಹೇತವಃ 18.15
ಶರೀರ ವಾಕ್ ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ
ನ್ಯಾಯ್ಯಮ್ ವಾ ವಿಪರೀತಮ್ ವಾ ಪಂಚ ಏತೇ ತಸ್ಯ ಹೇತವಃ
ಶರೀರ-ವಾಕ್-ಮನೋಭಿಃ = ಶರೀರ, ವಾಣಿ (ಮಾತು) ಮತ್ತು ಮನಸ್ಸುಗಳಿಂದ, ಯತ್ ಕರ್ಮ = ಯಾವ ಕರ್ಮವನ್ನು (ಕೆಲಸವನ್ನು), ಪ್ರಾರಭತೇ = ಆರಂಭಿಸುತ್ತಾನೋ (ಮಾಡುತ್ತಾನೋ), ನರಃ = ಮನುಷ್ಯನು,
ನ್ಯಾಯ್ಯಂ ವಾ = ಧರ್ಮಸಮ್ಮತವಾದ (ನ್ಯಾಯಯುತವಾದ), ವಿಪರೀತಂ ವಾ = ಅಥವಾ ಅದಕ್ಕೆ ವಿರುದ್ಧವಾದ (ಅನ್ಯಾಯದ/ಅಧರ್ಮದ), ಏತೇ ಪಂಚ = ಈ ಐದೂ, ತಸ್ಯ = ಅದಕ್ಕೆ, ಹೇತವಃ = ಕಾರಣಗಳಾಗಿವೆ
ಮನುಷ್ಯನು ತನ್ನ ಶರೀರ, ಮಾತು ಅಥವಾ ಮನಸ್ಸಿನ ಮೂಲಕ ನ್ಯಾಯಸಮ್ಮತವಾದ (ಒಳ್ಳೆಯ)
ಅಥವಾ ಅನ್ಯಾಯದ (ಕೆಟ್ಟ) ಯಾವುದೇ ಕೆಲಸವನ್ನು ಮಾಡಿದರೂ, ಆ ಎಲ್ಲಾ ಕೆಲಸಗಳು ಸಿದ್ಧಿಯಾಗಲು ಅಥವಾ
ಘಟಿಸಲು ಹಿಂದಿನ ಶ್ಲೋಕದಲ್ಲಿ ಉಲ್ಲೇಖಿಸಲಾದ ಆ ಐದು ಅಂಶಗಳೇ ಮೂಲ ಕಾರಣಗಳಾಗಿವೆ.
ಮೂರು ವಿಧದ ಕರ್ಮಗಳು
(ತ್ರಿಕರಣಗಳು):
ಮನುಷ್ಯನು ಮಾಡುವ
ಕರ್ಮಗಳನ್ನು ಅವು ನಡೆಯುವ ಮಾಧ್ಯಮದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
(ವೇದಾಂತದಲ್ಲಿ ಇದನ್ನು
'ತ್ರಿಕರಣಗಳು' ಎಂದು ಕರೆಯಲಾಗುತ್ತದೆ. ನಮ್ಮ ಕೃತಿ, ಮಾತು ಮತ್ತು ಆಲೋಚನೆ ಮೂರೂ ಕರ್ಮದ ವ್ಯಾಪ್ತಿಗೆ
ಬರುತ್ತವೆ).
1. ಕಾಯಿಕ ಕರ್ಮ
(ದೇಹ): ಕೈ, ಕಾಲು ಮುಂತಾದ ದೈಹಿಕ ಅಂಗಗಳಿಂದ ಮಾಡುವ ಕೆಲಸಗಳು. ಉದಾಹರಣೆಗೆ ಓಡುವುದು, ವಸ್ತುಗಳನ್ನು
ಎತ್ತುವುದು, ಯಾರಿಗಾದರೂ ದೈಹಿಕವಾಗಿ ಸಹಾಯ ಮಾಡುವುದು, ಹೊಡೆಯುವುದು ಅಥವಾ ಹಿಂಸಿಸುವುದು, ಇತ್ಯಾದಿ.
2. ವಾಚಿಕ ಕರ್ಮ
(ಮಾತು): ಬಾಯಿಂದ ಮಾತನಾಡುವ ಕ್ರಿಯೆ. ಉದಾಹರಣೆಗೆ ಸತ್ಯ ಅಥವಾ ಸುಳ್ಳು ಹೇಳುವುದು, ನಿಂದಿಸುವುದು,
ಬೈಯುವುದು, ದೇವರ ನಾಮಸ್ಮರಣೆ ಮಾಡುವುದು, ಮಂತ್ರ ಪಠಿಸುವುದು ಇತ್ಯಾದಿ.
3. ಮಾನಸಿಕ ಕರ್ಮ
(ಮನಸ್ಸು): ಮನಸ್ಸಿನಲ್ಲಿ ಯೋಚಿಸುವ ಪ್ರಕ್ರಿಯೆ / ಆಲೋಚನೆಗಳು. ಉದಾಹರಣೆಗೆ ಒಳ್ಳೆಯದನ್ನು ಬಯಸುವುದು,
ಧ್ಯಾನ ಮಾಡುವುದು, ಅಥವಾ ಅಸೂಯೆ ಪಡುವುದು, ಕೆಟ್ಟ ಯೋಚನೆ ಮಾಡುವುದು, ಕ್ರೋಧ ಅಥವಾ ದ್ವೇಷ ಸಾಧಿಸುವುದು,
ಇತ್ಯಾದಿ. ವೇದಾಂತದ ಪ್ರಕಾರ ಕೇವಲ ಆಲೋಚನೆ ಮಾಡುವುದೂ ಸಹ ಒಂದು ಕರ್ಮವೇ ಆಗಿದೆ.
ಕರ್ಮದ ವಿಧಗಳು:
ನಾವು ಮಾಡುವ ಕರ್ಮಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ:
(ನ್ಯಾಯ್ಯಂ ವಾ ವಿಪರೀತಂ
ವಾ ಅಂದರೆ ಒಳ್ಳೆಯದು ಮತ್ತು ಕೆಟ್ಟದ್ದು ಅಂತ)
1. ನ್ಯಾಯ್ಯಮ್:
ಶಾಸ್ತ್ರಸಮ್ಮತವಾದ, ಧರ್ಮಯುಕ್ತವಾದ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸಗಳು.
2. ವಿಪರೀತಮ್: ಶಾಸ್ತ್ರವಿರುದ್ಧವಾದ,
ಧರ್ಮಕ್ಕೆ ವಿರುದ್ಧವಾದ, ಅನ್ಯಾಯದ ಮತ್ತು ಇತರರಿಗೆ ತೊಂದರೆ ಕೊಡುವ ಕೆಟ್ಟ ಕೆಲಸಗಳು.
ಶಾಸ್ತ್ರಗಳಲ್ಲಿ ಹೇಳಿರುವ, ಸಮಾಜಕ್ಕೆ ಮತ್ತು ತನಗೆ
ಒಳ್ಳೆಯದನ್ನು ಮಾಡುವ ಕೆಲಸಗಳು 'ನ್ಯಾಯ್ಯ' (ಧರ್ಮ). ಶಾಸ್ತ್ರ ನಿಷೇಧಿಸಿರುವ, ಇತರರಿಗೆ ನೋವುಂಟುಮಾಡುವ
ಕೆಲಸಗಳು 'ವಿಪರೀತ' (ಅಧರ್ಮ).
ನೀವು ಪುಣ್ಯದ ಕೆಲಸ ಮಾಡಿ ಅಥವಾ ಪಾಪದ ಕೆಲಸ ಮಾಡಿ,
ಅವೆಲ್ಲವೂ ನೆರವೇರಲು ಆ ಐದು ಕಾರಣ / ಘಟಕಗಳಾದ ಅಧಿಷ್ಠಾನ, ಕರ್ತಾ, ಕರಣ, ಚೇಷ್ಟಾ, ಮತ್ತು ದೈವ ಇವುಗಳ
ಸಹಕಾರ ಇರಲೇಬೇಕು.
18-16
तत्रैवं सति कर्तारम् आत्मानं केवलं तु यः ।
पश्यत्यकृतबुद्धित्वात् न स पश्यति दुर्मतिः ॥ १८-१६
ತತ್ರೈವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ
ಪಶ್ಯತ್ಯಕೃತಬುದ್ಧಿತ್ವಾತ್ ನ ಸ ಪಶ್ಯತಿ ದುರ್ಮತಿಃ 18.16
ತತ್ರ ಏವಂ ಸತಿ ಕರ್ತಾರಮ್ ಆತ್ಮಾನಮ್ ಕೇವಲಮ್ ತು ಯಃ
तत्रैवं सति कर्तारम् आत्मानं केवलं तु यः ।
पश्यत्यकृतबुद्धित्वात् न स पश्यति दुर्मतिः ॥ १८-१६
ತತ್ರೈವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ
ಪಶ್ಯತ್ಯಕೃತಬುದ್ಧಿತ್ವಾತ್ ನ ಸ ಪಶ್ಯತಿ ದುರ್ಮತಿಃ 18.16
ಪಶ್ಯತಿ ಅಕೃತ ಬುದ್ಧಿತ್ವಾತ್ ನ ಸಃ ಪಶ್ಯತಿ ದುರ್ಮತಿಃ
ತತ್ರ = ಅಲ್ಲಿ / ಆ ವಿಷಯದಲ್ಲಿ, ಏವಂ = ಈ ರೀತಿ, ಸತಿ = ಇದ್ದರೂ ಸಹ, [ತತ್ರ ಏವಂ ಸತಿ = ಹೀಗಿರುವಾಗ (ಹಿಂದಿನ ಶ್ಲೋಕದಲ್ಲಿ ಹೇಳಲಾದ ಐದು ಕಾರಣಗಳು ಇರುವಾಗ)], ಕರ್ತಾರಮ್ = ಕರ್ತೃವನ್ನಾಗಿ / ಕೆಲಸ ಮಾಡುವವನು, ಆತ್ಮಾನಮ್ = ತನ್ನನ್ನು / ಶುದ್ಧ ಆತ್ಮನನ್ನು, ಕೇವಲಮ್ = ಕೇವಲ / ತಾನೊಬ್ಬನೇ / ಮಾತ್ರವೇ, ತು = ಆದರೆ, ಯಃ = ಯಾರು,
= ನೋಡುತ್ತಾನೋ / ತಿಳಿಯುತ್ತಾನೋ, ಹೀಗಿದ್ದರೂ (ಯಾವುದೇ ಒಂದು ಕರ್ಮವು ನಡೆಯಲು ಐದು
ಕಾರಣಗಳಿದ್ದರೂ) ಸಹ, ಯಾರು ತಮ್ಮ ಅಶುದ್ಧವಾದ ಹಾಗೂ ಸಂಸ್ಕಾರವಿಲ್ಲದ ಬುದ್ಧಿಯ ಕಾರಣದಿಂದ 'ತಾನೊಬ್ಬನೇ ಅಂದರೆ ಶುದ್ಧ ಆತ್ಮನೇ ಈ ಕಾರ್ಯವನ್ನು ಮಾಡಿದವನು'
ಎಂದು ತನ್ನನ್ನು ಮಾತ್ರ ಕರ್ತೃ ಎಂದು ಭಾವಿಸುತ್ತಾರೋ, ಅಂತಹ ವಿಕೃತ ಬುದ್ಧಿಯುಳ್ಳ ಅಜ್ಞಾನಿಗಳು ಸತ್ಯವನ್ನು
ಎಂದಿಗೂ ಗ್ರಹಿಸಲಾರರು.
ಅಕೃತಬುದ್ಧಿತ್ವ (ಪರಿಶುದ್ಧವಲ್ಲದ
ಬುದ್ಧಿ):
ಆಧ್ಯಾತ್ಮಿಕ ಜ್ಞಾನ ಮತ್ತು ಶಾಸ್ತ್ರಗಳ ಜ್ಞಾನವಿಲ್ಲದ,
ಆತ್ಮಾವಲೋಕನ ಮಾಡಿಕೊಳ್ಳದೆ ಆತ್ಮ ಮತ್ತು ಅನಾತ್ಮದ ನಡುವಿನ ವ್ಯತ್ಯಾಸವನ್ನು ತಿಳಿಯದ ಹಾಗೂ ಗುರುಹಿರಿಯರ
ಮಾರ್ಗದರ್ಶನವಿಲ್ಲದ ಬುದ್ಧಿಯೇ 'ಅಕೃತಬುದ್ಧಿ'. ಇಂತಹ ಬುದ್ಧಿಯು ವಸ್ತುಗಳನ್ನು ಅವುಗಳ ನಿಜ
ಸ್ವರೂಪದಲ್ಲಿ ನೋಡಲು ಬಿಡುವುದಿಲ್ಲ. ಉದಾಹರಣೆಗೆ, ಕನ್ನಡಿಯ ಮೇಲೆ ಧೂಳು ಕುಳಿತಾಗ ಹೇಗೆ ಮುಖ ಸರಿಯಾಗಿ
ಕಾಣಿಸುವುದಿಲ್ಲವೋ, ಹಾಗೆಯೇ ಮನಸ್ಸಿನಲ್ಲಿ ಅಹಂಕಾರ ಮತ್ತು ಅಜ್ಞಾನ ತುಂಬಿದಾಗ ಸತ್ಯ ಕಾಣಿಸುವುದಿಲ್ಲ.
ಇನ್ನೊಂದು ಉದಾಹರಣೆ ಕೆಲವು ಸಲ ರೈಲು ಚಲಿಸುವಾಗ ಕಿಟಕಿಯಿಂದ ಹೊರಗೆ ನೋಡಿದರೆ ಮರಗಳು ಓಡುತ್ತಿರುವಂತೆ
ಕಾಣುತ್ತದೆ, ಆದರೆ ನಿಜವಾಗಿ ಓಡುತ್ತಿರುವುದು ರೈಲು. ಮತ್ತು ಯಾವುದಾದರೊಂದು ನಿಲ್ದಾಣದಲ್ಲಿ ರೈಲು
ನಿಂತಿದ್ದಾಗ ಪಕ್ಕದ ರೈಲು ಚಲಿಸಿದರೆ ತಾವು ಕೂತಿರುವ ರೈಲೇ ಚಲಿಸುತ್ತಿರುವಂತೆ ತಪ್ಪಾಗಿ ಭಾಸವಾಗುವುದು.
ಅದೇ ರೀತಿ, ಪ್ರಕೃತಿಯು ಕೆಲಸ ಮಾಡುತ್ತಿದ್ದರೂ ಮನುಷ್ಯನು ತಾನೇ ಮಾಡುತ್ತಿರುವುದಾಗಿ ಭಾವಿಸುತ್ತಾನೆ.
ಈ ತಪ್ಪು ಗ್ರಹಿಕೆ ಮತ್ತು ಭ್ರಮೆಯೇ ದುಃಖಕ್ಕೆ ಮೂಲ ಕಾರಣ.
ದುರ್ಮತಿ (ವಿಕೃತ ಬುದ್ಧಿ):
ಅಹಂಕಾರದಿಂದ ಮತ್ತು ಅಜ್ಞಾನದಿಂದ ಮನುಷ್ಯನು ತಾನೇ
ಸರ್ವಸ್ವ, ತನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂದು ಭಾವಿಸುತ್ತಾನೆ. ಇಂತವರನ್ನು 'ದುರ್ಮತಿ'
(ಮೂರ್ಖ ಅಥವಾ ಕುಂಠಿತ ಬುದ್ಧಿಯವನು) ಎಂದು ಕರೆಯುತ್ತಾರೆ.
ಕೇವಲಂ ಆತ್ಮಾನಂ (ತನ್ನನ್ನು ಮಾತ್ರ):
ತಾನು ಕೇವಲ ಒಂದು ನಿಮಿತ್ತ ಮಾತ್ರ ಎಂಬುದನ್ನು ಮರೆತು,
ಸಂಪೂರ್ಣ ಯಶಸ್ಸು ಅಥವಾ ವೈಫಲ್ಯಕ್ಕೆ ತಾನೇ ಕಾರಣ ಎಂದು ಮನುಷ್ಯ ಅಂದುಕೊಳ್ಳುತ್ತಾನೆ. ಆದರೆ ಇದು
ಅಜ್ಞಾನ. ವೇದಾಂತದ ಪ್ರಕಾರ ಆತ್ಮನು (ನಮ್ಮ ಒಳಗಿರುವ ಚೇತನ)
ಕೇವಲ
ಸಾಕ್ಷಿ. ಅವನು ಯಾವುದೇ ಕರ್ಮವನ್ನು ಮಾಡುವುದಿಲ್ಲ ಮತ್ತು
ಯಾವುದಕ್ಕೂ ಲಿಪ್ತನಾಗುವುದಿಲ್ಲ. ಕರ್ಮಗಳೆಲ್ಲವೂ ಪ್ರಕೃತಿಯ ನಿಯಮ ಹಾಗೂ ಶರೀರ-ಮನಸ್ಸು-ಇಂದ್ರಿಯಗಳ
ಮೂಲಕ ನಡೆಯುತ್ತವೆ. ಇದನ್ನು ಅರಿತುಕೊಳ್ಳುವುದೇ ನಿಜವಾದ ಜ್ಞಾನ
ಇಲ್ಲಿ ಒಂದು ಮುಖ್ಯವಾದ ಪ್ರಶ್ನೆ ಏಳಬಹುದು—"ನಾವು
ಮಾಡುವ ಕೆಟ್ಟ ಕೆಲಸಕ್ಕೂ ಕೂಡಾ ಪರಮಾತ್ಮ/ಪ್ರಕೃತಿ ನಿಯಮ ಕಾರಣವೇ ಅಥವಾ ಸಹಕಾರ ನೀಡುತ್ತದೆಯೇ?"
ಅಂತ.
ಇದಕ್ಕೆ ಉತ್ತರವೇನೆಂದರೆ, ಒಂದು ವಾಹನದಲ್ಲಿ ಇಂಧನ ಅಥವಾ ಪೆಟ್ರೋಲ್ ವಾಹನದ ಚಲಾವಣೆಗೆ ಬೇಕಾದ ಶಕ್ತಿ ಒದಗಿಸುತ್ತದೆ. ಆ ವಾಹನದಲ್ಲಿ ಒಂದು ಒಳ್ಳೆಯ ಚಾಲಕನು ಪ್ರಯಾಣಿಕರನ್ನು ಅವರಿಗೆ ಹೋಗಬೇಕಾದ ಇನ್ನೊಂದು ಜಾಗಕ್ಕೆ ಒಯ್ಯ ಬಹುದು. ಆದರೆ ಇನ್ನೊಬ್ಬ ಕೆಟ್ಟ ಚಾಲಕನು ವಾಹನವನ್ನು ಅಪಘಾತಕೀಡುಮಾಡಿ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಬಹುದು. ಕೆಟ್ಟ ಚಾಲಕನು ವಾಹನವನ್ನು ಅಪಘಾತಕ್ಕೀಡು ಮಾಡುವಾಗ ಇಂಧನವು, ಇಲ್ಲಿ ಈ ಚಾಲಕನು ಕೆಟ್ಟ ಕೆಲಸ ಮಾಡುತ್ತಿದ್ದಾನೆ ಎಂದು, ವಾಹನಕ್ಕೆ ಶಕ್ತಿ ಒದಗಿಸದೆ ಇರುವುದಿಲ್ಲ. ವಾಹನವನ್ನು ಸುರಕ್ಷಿತವಾಗಿ ಚಲಿಸುವುದು ಅಥವಾ ಅಪಘಾತ ಮಾಡಿಕೊಳ್ಳುವುದು ಚಾಲಕನ ಸ್ವಭಾವ ಮತ್ತುನಿರ್ಧಾರಕ್ಕೆ ಬಿಟ್ಟಿದ್ದು. ಅದೇ ರೀತಿ, ಪರಮಾತ್ಮನು ನಮಗೆ ಶರೀರ, ಇಂದ್ರಿಯಗಳು, ಪ್ರಾಣಶಕ್ತಿ (ಚೇಷ್ಟಾ) ಮತ್ತು ಕರ್ಮದ ನಿಯಮವನ್ನು (ದೈವ) ಒದಗಿಸಿದ್ದಾನೆ. ಅದನ್ನು ಒಳ್ಳೆಯದಕ್ಕೆ ಬಳಸುತ್ತೇವೋ ಅಥವಾ ಕೆಟ್ಟದಕ್ಕೋ ಎಂಬ ಆಯ್ಕೆ (free will) ನಮ್ಮದಾಗಿರುತ್ತದೆ.
ಇದಕ್ಕೆ ಉತ್ತರವೇನೆಂದರೆ, ಒಂದು ವಾಹನದಲ್ಲಿ ಇಂಧನ ಅಥವಾ ಪೆಟ್ರೋಲ್ ವಾಹನದ ಚಲಾವಣೆಗೆ ಬೇಕಾದ ಶಕ್ತಿ ಒದಗಿಸುತ್ತದೆ. ಆ ವಾಹನದಲ್ಲಿ ಒಂದು ಒಳ್ಳೆಯ ಚಾಲಕನು ಪ್ರಯಾಣಿಕರನ್ನು ಅವರಿಗೆ ಹೋಗಬೇಕಾದ ಇನ್ನೊಂದು ಜಾಗಕ್ಕೆ ಒಯ್ಯ ಬಹುದು. ಆದರೆ ಇನ್ನೊಬ್ಬ ಕೆಟ್ಟ ಚಾಲಕನು ವಾಹನವನ್ನು ಅಪಘಾತಕೀಡುಮಾಡಿ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಬಹುದು. ಕೆಟ್ಟ ಚಾಲಕನು ವಾಹನವನ್ನು ಅಪಘಾತಕ್ಕೀಡು ಮಾಡುವಾಗ ಇಂಧನವು, ಇಲ್ಲಿ ಈ ಚಾಲಕನು ಕೆಟ್ಟ ಕೆಲಸ ಮಾಡುತ್ತಿದ್ದಾನೆ ಎಂದು, ವಾಹನಕ್ಕೆ ಶಕ್ತಿ ಒದಗಿಸದೆ ಇರುವುದಿಲ್ಲ. ವಾಹನವನ್ನು ಸುರಕ್ಷಿತವಾಗಿ ಚಲಿಸುವುದು ಅಥವಾ ಅಪಘಾತ ಮಾಡಿಕೊಳ್ಳುವುದು ಚಾಲಕನ ಸ್ವಭಾವ ಮತ್ತುನಿರ್ಧಾರಕ್ಕೆ ಬಿಟ್ಟಿದ್ದು. ಅದೇ ರೀತಿ, ಪರಮಾತ್ಮನು ನಮಗೆ ಶರೀರ, ಇಂದ್ರಿಯಗಳು, ಪ್ರಾಣಶಕ್ತಿ (ಚೇಷ್ಟಾ) ಮತ್ತು ಕರ್ಮದ ನಿಯಮವನ್ನು (ದೈವ) ಒದಗಿಸಿದ್ದಾನೆ. ಅದನ್ನು ಒಳ್ಳೆಯದಕ್ಕೆ ಬಳಸುತ್ತೇವೋ ಅಥವಾ ಕೆಟ್ಟದಕ್ಕೋ ಎಂಬ ಆಯ್ಕೆ (free will) ನಮ್ಮದಾಗಿರುತ್ತದೆ.
ಈ ಶ್ಲೋಕದ ಆಳವಾದ ಸಂದೇಶವೇನೆಂದರೆ, ಮನುಷ್ಯನು ತಾನು
"ಕರ್ತೃ" (ನಾನೇ ಮಾಡಿದ್ದು) ಎಂಬ ಅಹಂಕಾರವನ್ನು ಬಿಟ್ಟಾಗ ಮಾತ್ರ ಕರ್ಮಫಲದ ಬಂಧನದಿಂದ
ಮುಕ್ತನಾಗಬಲ್ಲ. ಅಹಂಕಾರ ಮುಕ್ತನಾದವನಿಗೆ ಸೋಲು-ಗೆಲುವುಗಳು ಸಮನಾಗಿ ಕಾಣಿಸುತ್ತವೆ.
यस्य नाहंकृतो भावो बुद्धिर्यस्य न लिप्यते ।
हत्वापि स इमाँल्लोकान् न हन्ति न निबध्यते ॥ १८-१७
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ
ಹತ್ವಾಪಿ ಸ ಇಮಾಲ್ಲೋಕಾನ್ ನ ಹನ್ತಿ ನ ನಿಬಧ್ಯತೇ 18.17
ಹತ್ವಾ ಅಪಿ ಸಃ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ
ಯಸ್ಯ = ಯಾರಿಗೆ, ನ = ಇಲ್ಲವೋ, ಅಹಂಕೃತಃ = "ನಾನೇ ಮಾಡುತ್ತಿದ್ದೇನೆ" ಎಂಬ / ಅಹಂಕಾರದ, ಭಾವಃ = ಭಾವನೆ, ಬುದ್ಧಿಃ = ಬುದ್ಧಿಯು, ಯಸ್ಯ = ಯಾರ ನ-ಲಿಪ್ಯತೇ = ಅಂಟಿಕೊಳ್ಳುವುದಿಲ್ಲವೋ,
= ಕೊಂದರೂ ಸಹ, ಯಾರಲ್ಲಿ "ನಾನೇ ಮಾಡುತ್ತಿದ್ದೇನೆ" ಎಂಬ ಅಹಂಕಾರದ ಭಾವನೆ ಇರುವುದಿಲ್ಲವೋ ಮತ್ತು ಯಾರ
ಬುದ್ಧಿಯು ಲೌಕಿಕ ಕರ್ಮದ ಫಲಗಳಿಗೆ ಅಥವಾ ಆಸೆ-ಆಕಾಂಕ್ಷೆಗಳಿಗೆ ಅಂಟಿಕೊಳ್ಳುವುದಿಲ್ಲವೋ, ಅಂತಹ ಜ್ಞಾನಿಯು
ಈ ಲೋಕದ ದೃಷ್ಟಿಯಲ್ಲಿ ಈ ಲೋಕದ ಸಮಸ್ತ ಜೀವಿಗಳನ್ನು ಕೊಂದರೂ ಸಹ, ಅವನು ಯಾರನ್ನೂ ಕೊಂದಂತೆ ಆಗುವುದಿಲ್ಲ
ಮತ್ತು ಆ ಕರ್ಮದ ಪಾಪ-ಪುಣ್ಯಗಳಿಂದ ಅವನು ಬಂಧಿತನಾಗುವುದಿಲ್ಲ.
ನಾಹಂಕೃತೋ ಭಾವಃ (ಅಹಂಕಾರವಿಲ್ಲದ ಸ್ಥಿತಿ):
ಪ್ರಕೃತಿಯ ಗುಣಗಳು ಮತ್ತು ಐದು ಕಾರಣ
/ ಘಟಕಗಳಾದ ಅಧಿಷ್ಠಾನ, ಕರ್ತಾ, ಕರಣ, ಚೇಷ್ಟಾ, ಮತ್ತು ದೈವ ಇವುಗಳ ಸಹಕಾರದಿಂದ ಕೆಲಸಗಳು ನಡೆಯುತ್ತಿವೆಯೇ ಹೊರತು "ನನ್ನಿಂದಲ್ಲ" ಎಂದು ಅರಿಯುವುದೇ ಅಹಂಕಾರರಹಿತ
ಸ್ಥಿತಿ. ಲೌಕಿಕ ಜಗತ್ತಿನಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ನಾವೇ ಕಾರಣ ಎಂದುಕೊಳ್ಳುವುದು
ಅಹಂಕಾರ. ಆದರೆ ಜ್ಞಾನಿಯಾದವನು ತಾನು ಕೇವಲ ನಿಮಿತ್ತ ಮಾತ್ರ, ಪ್ರಕೃತಿಯೇ ತನ್ನ ಇಂದ್ರಿಯಗಳ ಮೂಲಕ
ಕೆಲಸ ಮಾಡುತ್ತಿದೆ ಮತ್ತು ತಾನು ಕೇವಲ ಸಾಕ್ಷಿ ಎಂದು ತಿಳಿಯುತ್ತಾನೆ. ಅಹಂಕಾರವಿಲ್ಲದ ಜಾಗದಲ್ಲಿ
ಪಾಪ-ಪುಣ್ಯಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಬುದ್ಧಿ ನ ಲಿಪ್ಯತೇ (ಅನಾಸಕ್ತ ಬುದ್ಧಿ):
ಕೆಲಸ ಮಾಡುವಾಗ ಸಿಗುವ ಯಶಸ್ಸು ಅಥವಾ ಅಪಜಯ ಅಥವಾ ಅಪಕೀರ್ತಿ, ಲಾಭ ಅಥವಾ ನಷ್ಟ, ಸುಖ ಅಥವಾ ದುಃಖ ಇವೆಲ್ಲದರಲ್ಲೂ ತಲ್ಲಣಗೊಳ್ಳದೆ,
ಸಮಚಿತ್ತದಲ್ಲಿರುವ ಬುದ್ಧಿ ಇದಾಗಿದೆ. ಇದರ ಅರ್ಥ ಬುದ್ಧಿಯು ಕರ್ಮದ ಫಲಗಳಿಗೆ ಅಂಟಿಕೊಳ್ಳದಿರುವುದು,
ಮತ್ತು ಕರ್ಮಬಂಧನದಲ್ಲಿ ಸಿಕ್ಕಿಹಾಕಿಕೊಳ್ಳದೆ ಇರುವುದು.
ಹತ್ವಾಪಿ ಸ ಇಮಾಂಲ್ಲೋಕಾನ್ (ಲೋಕವನ್ನೇ ಕೊಂದರೂ):
ಈ ವಾಕ್ಯವನ್ನು ಅಕ್ಷರಶಃ ಶಬ್ದಕೋಶ ಅಥವಾ ನಿಘಂಟಿನ ಆಧಾರದ ಮೇಲೆ
ಅರ್ಥೈಸಬಾರದು. ಮೇಲ್ನೋಟಕ್ಕೆ ಈ ಶ್ಲೋಕವು ಹಿಂಸೆಯನ್ನು ಸಮರ್ಥಿಸುವಂತೆ ಕಂಡರೂ, ಇದರ ಆಂತರ್ಯ ಬೇರೆಯೇ
ಆಗಿದೆ. ಇದು ಕರ್ಮ ಸಿದ್ಧಾಂತದ ತತ್ವವನ್ನು ವಿವರಿಸಲು ಬಳಸಿದ ತೀವ್ರವಾದ
ಉಪಮೆ (simile). ಅಹಂಕಾರವಿಲ್ಲದ ಜ್ಞಾನಿಯು ಎಂದಿಗೂ ವೈಯಕ್ತಿಕ ಸ್ವಾರ್ಥಕ್ಕಾಗಿ ಯಾರನ್ನೂ ಕೊಲ್ಲುವುದಿಲ್ಲ.
ಆದರೆ ಧರ್ಮದ ರಕ್ಷಣೆಗಾಗಿ ಅನಿವಾರ್ಯವಾಗಿ ಸ್ವಾರ್ಥರಹಿತ ಕರ್ತವ್ಯ ಪಾಲನೆ ಮಾಡುತ್ತಿರುವಾಗ ಭೌತಿಕವಾಗಿ ಅಲ್ಲಿ ಸಾವು ಸಂಭವಿಸಿದರೂ ಆಧ್ಯಾತ್ಮಿಕವಾಗಿ ಅವನು ಆ ಕರ್ಮದ ಬಂಧನಕ್ಕೆ
ಒಳಗಾಗುವುದಿಲ್ಲ ಎಂಬುದು ಇದರ ಆಳವಾದ ತಾತ್ಪರ್ಯ.
ಕರ್ಮದ ಬಂಧನವು ನಾವು ಮಾಡುವ ಬಾಹ್ಯ ಕ್ರಿಯೆಯಿಂದ
ಬರುವುದಿಲ್ಲ, ಬದಲಿಗೆ ಆ ಕ್ರಿಯೆಯ ಹಿಂದೆ ಇರುವ ನಮ್ಮ 'ಅಹಂಕಾರ' (ego)
ಮತ್ತು 'ಸ್ವಾರ್ಥ'
(attachment) ದಿಂದ ಬರುತ್ತದೆ. ಯಾವ ವ್ಯಕ್ತಿಯು ತನ್ನನ್ನು
ತಾನು ಕೇವಲ ದೇಹ ಅಥವಾ ಮನಸ್ಸು ಎಂದು ಭಾವಿಸದೆ, ತಾನು 'ಆತ್ಮ' ಎಂದು ಅರಿತುಕೊಳ್ಳುತ್ತಾನೋ, ಅವನಿಗೆ
ಅಹಂಕಾರವಿರುವುದಿಲ್ಲ. ಅಂತಹ ವ್ಯಕ್ತಿಯು ತನ್ನ ಸ್ವಾರ್ಥ, ಅಹಂಕಾರ ಮತ್ತು ಆಸೆಗಳನ್ನು ಸಂಪೂರ್ಣವಾಗಿ
ತೊರೆದು, ಇದು ಕೇವಲ ತನ್ನ ಕರ್ತವ್ಯ ಮತ್ತು ಇದು ಪ್ರಕೃತಿಯ ನಿಯಮದಂತೆ ನಡೆಯುತ್ತಿದೆ ಎಂಬ ಭಾವನೆಯಿಂದ
ಕರ್ಮವನ್ನು ಮಾಡಿದಾಗ, ಆ ಕರ್ಮದ ಯಶಸ್ಸು, ಅಪಕೀರ್ತಿ ಅಥವಾ ಹೊಣೆ ಅವನಿಗೆ ತಟ್ಟುವುದಿಲ್ಲ. ಉದಾಹರಣೆಗೆ,
ಒಬ್ಬ ನ್ಯಾಯಾಧೀಶನು ಅಪರಾಧಿಗೆ ಮರಣದಂಡನೆ ವಿಧಿಸಿದಾಗ ಅಥವಾ ಒಬ್ಬ ಸೈನಿಕನು ದೇಶ ರಕ್ಷಣೆಗಾಗಿ ಶತ್ರುವನ್ನು
ಕೊಂದಾಗ ಅವರಿಗೆ ವೈಯಕ್ತಿಕ ದ್ವೇಷವಿರುವುದಿಲ್ಲ. ಅವರು ಕೇವಲ ತಮ್ಮ ಕರ್ತವ್ಯವನ್ನು ಧರ್ಮ ರಕ್ಷಣೆಗಾಗಿ
ನಿಭಾಯಿಸುತ್ತಿರುತ್ತಾರೆ. ಆದ್ದರಿಂದ ಅವರಿಗೆ ಕೊಲೆಯ ಪಾಪ ತಟ್ಟುವುದಿಲ್ಲ.
ज्ञानं ज्ञेयं परिज्ञाता त्रिविधा कर्मचोदना ।
करणं कर्म कर्तेति त्रिविधः कर्मसंग्रहः ॥ १८-१८
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ 18.18
ಜ್ಞಾನಮ್ ಜ್ಞೇಯಮ್ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ
ಕರಣಮ್ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ
ಜ್ಞಾನಮ್ = ಜ್ಞಾನ (ತಿಳುವಳಿಕೆ), ಜ್ಞೇಯಮ್ = ಜ್ಞೇಯ (ತಿಳಿದುಕೊಳ್ಳಬೇಕಾದ ವಸ್ತು ಅಥವಾ ವಿಷಯ ಅಥವಾ ಗುರಿ), ಪರಿಜ್ಞಾತಾ = ಪರಿಜ್ಞಾತ (ತಿಳಿಯುವವನು, ಜೀವಾತ್ಮ ಅಥವಾ ಜ್ಞಾನಿ), ತ್ರಿವಿಧಾ = ಮೂರು ವಿಧಗಳು, ಕರ್ಮಚೋದನಾ = ಕರ್ಮಕ್ಕೆ ಪ್ರೇರಣೆ ನೀಡುವ ಶಕ್ತಿ (ಕೆಲಸ ಮಾಡಲು ಪ್ರೋತ್ಸಾಹಿಸುವ ಶಕ್ತಿ)
ಕರಣಮ್ = ಕರಣ (ಕೆಲಸ ಮಾಡಲು ಬಳಸುವ ಉಪಕರಣಗಳು / ಇಂದ್ರಿಯಗಳು ಮತ್ತು ಮನಸ್ಸು), ಕರ್ಮ = ಕರ್ಮ (ಮಾಡುವ ಕೆಲಸ ಅಥವಾ ಕ್ರಿಯೆ), ಕರ್ತಾ = ಕರ್ತೃ (ಕೆಲಸ ಮಾಡುವವನು), ಇತಿ = ಹೀಗೆ, ತ್ರಿವಿಧಃ = ಮೂರು ವಿಧವಾದ, ಕರ್ಮಸಂಗ್ರಹಃ = ಕರ್ಮದ ಆಶ್ರಯ ಅಥವಾ ಘಟಕಗಳು.
ಜ್ಞಾನ (ತಿಳುವಳಿಕೆ), ಜ್ಞೇಯ (ತಿಳಿಯಬೇಕಾದ ವಸ್ತು) ಮತ್ತು ಪರಿಜ್ಞಾತ (ತಿಳಿಯುವವನು)—ಇವು
ಮೂರು ಕರ್ಮಕ್ಕೆ ಪ್ರೇರಣೆ ನೀಡುವ (ಕೆಲಸ ಮಾಡಲು ಪ್ರೋತ್ಸಾಹಿಸುವ) ಅಂಶಗಳಾಗಿವೆ. ಕರಣ (ಸಾಧನ/ಇಂದ್ರಿಯಗಳು),
ಕರ್ಮ (ಕ್ರಿಯೆ) ಮತ್ತು ಕರ್ತೃ (ಮಾಡುವವನು)—ಇವು ಮೂರು ಕರ್ಮದ ಆಶ್ರಯ ಅಥವಾ ಘಟಕಗಳಾಗಿವೆ.
ನಾವು ಮಾಡುವ ಪ್ರತಿಯೊಂದು ಕೆಲಸವೂ ಎರಡು ಹಂತಗಳಲ್ಲಿ
ನಡೆಯುತ್ತದೆ. 1. ಮಾನಸಿಕ
ಹಂತ 2. ಭೌತಿಕ ಹಂತ.
1. ಕರ್ಮಚೋದನಾ (ಕರ್ಮಕ್ಕೆ ಪ್ರೇರಣೆ ನೀಡುವ ಮಾನಸಿಕ ಹಂತ):
ಯಾವುದೇ ಒಂದು ಕೆಲಸವು ಭೌತಿಕವಾಗಿ ನಡೆಯುವ ಮುನ್ನ,
ಅದು ಬುದ್ಧಿ ಮತ್ತು ಮನಸ್ಸಿನ ಮಟ್ಟದಲ್ಲಿ ಹುಟ್ಟಿಕೊಳ್ಳುತ್ತದೆ. ಮತ್ತು ಆ ಕೆಲಸವನ್ನು ಮಾಡುವ ಪ್ರೇರಣೆ
ಸಿಗುವುದಕ್ಕೆ ಮೂರು ಅಂಶಗಳಿರುತ್ತವೆ.
1.1. ಪರಿಜ್ಞಾತಾ (ತಿಳಿಯುವವನು): ಕರ್ಮ ಮಾಡಲು ಇಚ್ಛಿಸುವ ವ್ಯಕ್ತಿ.
1.2. ಜ್ಞೇಯಂ (ತಿಳಿಯಬೇಕಾದ ವಸ್ತು): ತಾನು ಪಡೆಯಬೇಕಾದ ಅಥವಾ ತಿಳಿಯಬೇಕಾದ ಲಕ್ಷ್ಯ ಅಥವಾ ಗುರಿ.
1.3. ಜ್ಞಾನಂ (ತಿಳುವಳಿಕೆ): ಗುರಿ ಮುಟ್ಟಲು ಬೇಕಾದ ಆ ವಸ್ತು ಯಾವುದು, ಮತ್ತು ಅದನ್ನು ಹೇಗೆ ಪಡೆಯಬೇಕು ಎಂಬ ಜ್ಞಾನ.
ಉದಾಹರಣೆಗೆ, ಹಸಿವಾದಾಗ ಅನ್ನ ತಿಂದರೆ ಹಸಿವು ನೀಗುತ್ತದೆ ಎನ್ನುವ ತಿಳುವಳಿಕೆ
ಜ್ಞಾನ, ಅನ್ನ
ಊಟ ಮಾಡ ಬೇಕು ಎನ್ನುವುದು ಜ್ಞೇಯ, ಹಸಿದಿರುವ ವ್ಯಕ್ತಿ ಪರಿಜ್ಞಾತಾ.
2. ಕರ್ಮಸಂಗ್ರಹಃ (ಕರ್ಮವು ಭೌತಿಕವಾಗಿ ರೂಪಗೊಳ್ಳುವ
ಹಂತ):
ಪ್ರೇರಣೆ ಸಿಕ್ಕ
ನಂತರ ಆ ಕರ್ಮವು ವಾಸ್ತವದಲ್ಲಿ ನಡೆಯಲು ಮೂರು ಅಂಶಗಳಿರುತ್ತವೆ:
2.1. ಕರ್ತಾ (ಮಾಡುವವನು): ತಾನು ಕೆಲಸ
ಮಾಡುತ್ತಿದ್ದೇನೆ ಎಂಬ ಅಹಂಕಾರ ಹೊಂದಿದ ಶರೀರಧಾರಿ.
2.2. ಕರಣಮ್ (ಉಪಕರಣಗಳು): ಕೆಲಸ ಮಾಡಲು ಬಳಸುವ ಜ್ಞಾನೇಂದ್ರಿಯಗಳು,
ಕರ್ಮೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ.
2.3. ಕರ್ಮ (ಕ್ರಿಯೆ): ಇಂದ್ರಿಯಗಳ ಮೂಲಕ ವಾಸ್ತವವಾಗಿ
ಮಾಡುವ ದೈಹಿಕ ಅಥವಾ ಮಾನಸಿಕ ಪ್ರಕ್ರಿಯೆ.
ತ್ರಿಪುಟಿ (Triads): ಭಾರತೀಯ ದರ್ಶನ ಶಾಸ್ತ್ರದಲ್ಲಿ ಇವುಗಳನ್ನು "ತ್ರಿಪುಟಿ" ಎನ್ನಲಾಗುತ್ತದೆ.
ಜ್ಞಾನ-ಜ್ಞೇಯ-ಜ್ಞಾತಾ ಎಂಬುದು ಜ್ಞಾನದ ತ್ರಿಪುಟಿ; ಕರಣ-ಕರ್ಮ-ಕರ್ತೃ ಎಂಬುದು ಕ್ರಿಯೆಯ ತ್ರಿಪುಟಿ.
ಈ ಆರು ಅಂಶಗಳು ಸೇರದೆ ಜಗತ್ತಿನಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ಕೆಲಸ ನಡೆಯಲು ಸಾಧ್ಯವೇ ಇಲ್ಲ.
ज्ञानं कर्म च कर्ता च त्रिधैव गुणभेदतः ।
प्रोच्यते गुणसंख्याने यथावच्छृणु तान्यपि ॥ १८-१९
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ 18.19
ಜ್ಞಾನಮ್ ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣಭೇದತಃ
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ
ಜ್ಞಾನಮ್ = ಜ್ಞಾನ (ತಿಳುವಳಿಕೆ), ಕರ್ಮ = ಕರ್ಮ (ಮಾಡುವ ಕೆಲಸ), ಚ = ಮತ್ತು,
ಕರ್ತಾ = ಕರ್ತೃ (ಕೆಲಸ ಮಾಡುವವನು), ಚ = ಸಹ, ತ್ರಿಧಾ = ಮೂರು ವಿಧವಾಗಿ, ಏವ = ಖಂಡಿತವಾಗಿಯೂ / ಮಾತ್ರವೇ, ಗುಣಭೇದತಃ = ಸತ್ತ್ವ, ರಜಸ್ ಮತ್ತು ತಮಸ್ಸು ಈ ಮೂರು ಗುಣಗಳ ವ್ಯತ್ಯಾಸಕ್ಕನುಗುಣವಾಗಿ
ಪ್ರೋಚ್ಯತೇ = ಹೇಳಲ್ಪಟ್ಟಿದೆ, ಗುಣಸಂಖ್ಯಾನೇ = ಗುಣಗಳನ್ನು ವಿಶ್ಲೇಷಿಸುವ ಶಾಸ್ತ್ರದಲ್ಲಿ (ಸಾಂಖ್ಯಶಾಸ್ತ್ರದಲ್ಲಿ), ಯಥಾವತ್ = ಇದ್ದಕ್ಕಿದ್ದಂತೆ / ವಿವರವಾಗಿ, ಶೃಣು = ಕೇಳು, ತಾನಿ = ಅವುಗಳನ್ನು, ಅಪಿ = ಕೂಡ
ಗುಣಗಳನ್ನು ವಿಶ್ಲೇಷಿಸುವ ಸಾಂಖ್ಯಶಾಸ್ತ್ರದಲ್ಲಿ ಜ್ಞಾನ, ಕರ್ಮ ಮತ್ತು ಕರ್ತೃ ಇವುಗಳು ಪ್ರಕೃತಿಯ
ಮೂರು ಗುಣಗಳಿಗೆ (ಸತ್ತ್ವ, ರಜಸ್, ತಮಸ್ಸು) ಅನುಗುಣವಾಗಿ ಮೂರು ವಿಧಗಳಾಗಿವೆ
ಎಂದು ಹೇಳಲಾಗಿದೆ. ಅವುಗಳನ್ನು ಕೂಡ ನೀನು ನನ್ನಿಂದ ವಿವರವಾಗಿ ಕೇಳು.
ಇದರ ಹಿಂದಿನ 18ನೇ ಶ್ಲೋಕದಲ್ಲಿ ಜ್ಞಾನ, ಕರ್ಮ ಮತ್ತು
ಕರ್ತೃಗಳು ಹೇಗೆ ಯಾವುದೇ ಕೆಲಸಕ್ಕೆ ಆಧಾರ ಎಂಬುದನ್ನು ವಿವರಿಸಲಾಗಿತ್ತು. ಈ ಶ್ಲೋಕದಲ್ಲಿ ಅವುಗಳು
ಪ್ರಕೃತಿಯ ತ್ರಿಗುಣಗಳಾದ ಸತ್ತ್ವ, ರಜಸ್ಸು, ತಮಸ್ಸು ಇವುಗಳಿಗೆ ಅನುಗುಣವಾಗಿ ಹೇಗೆ ಮೂರು ವಿಧಗಳಾಗಿ
ವಿಂಗಡಿಸಲ್ಪಡುತ್ತವೆ ಎಂಬುದನ್ನು ವಿವರಿಸಲು ಪೀಠಿಕೆ ಹಾಕಲಾಗಿದೆ.
ಗುಣಸಂಖ್ಯಾನೇ (ಸಾಂಖ್ಯ ಶಾಸ್ತ್ರ): ಇಲ್ಲಿ ಉಲ್ಲೇಖಿಸಿರುವ ' ಗುಣಸಂಖ್ಯಾನೇ' ಎಂದರೆ ಕಪಿಲ ಮಹರ್ಷಿಗಳು ಪ್ರತಿಪಾದಿಸಿದ
ಸಾಂಖ್ಯ ದರ್ಶನ (ಶಾಸ್ತ್ರ).
ಸಾಂಖ್ಯ ಎಂದರೆ ಸಂಖ್ಯೆ ಅಥವಾ ವ್ಯವಸ್ಥಿತ ವಿಶ್ಲೇಷಣೆ. ಪ್ರಕೃತಿಯ ಗುಣಗಳನ್ನು ಮತ್ತು ತತ್ವಗಳನ್ನು
ಅತ್ಯಂತ ತರ್ಕಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಶಾಸ್ತ್ರ ಇದಾಗಿದೆ. ಈ ಶಾಸ್ತ್ರವು
ಭೌತಿಕ ಜಗತ್ತಿನ ವಸ್ತುಗಳನ್ನು ಗುಣಗಳ ಆಧಾರದ ಮೇಲೆ ವರ್ಗೀಕರಿಸುತ್ತದೆ.
ಜಗತ್ತಿನಲ್ಲಿ ಯಾವುದೇ ಕೆಲಸ ನಡೆಯಬೇಕಾದರೂ ಮುಖ್ಯವಾಗಿ
ಮೂರು ಅಂಶಗಳು ಬೇಕು: ಜ್ಞಾನ (ತಿಳುವಳಿಕೆ), ಕರ್ಮ (ಕೆಲಸ) ಮತ್ತು ಕರ್ತಾ (ಕೆಲಸ ಮಾಡುವವನು). ಈ
ಮೂರು ಅಂಶಗಳು ಎಲ್ಲರಿಗೂ ಒಂದೇ ಸಮನಾಗಿ ಇರುವುದಿಲ್ಲ, ಮತ್ತು ಮನುಷ್ಯರೆಲ್ಲರೂ
ಒಂದೇ ತರಹದ ಜ್ಞಾನವನ್ನು ಹೊಂದಿರುವುದಿಲ್ಲ, ಒಂದೇ ರೀತಿ ಕೆಲಸ ಮಾಡುವುದಿಲ್ಲ ಮತ್ತು ಎಲ್ಲರ ಸ್ವಭಾವವೂ
ಒಂದೇ ಆಗಿರುವುದಿಲ್ಲ. ಇದಕ್ಕೆ ಕಾರಣ ಪ್ರಕೃತಿಯ ಈ ಮೂರು ಗುಣಗಳಾದ ಸತ್ತ್ವಗುಣ (ಶುದ್ಧತೆ, ಶಾಂತಿ
ಮತ್ತು ಜ್ಞಾನ), ರಜೋಗುಣ (ಆಸೆ, ಕ್ರೋಧ ಮತ್ತು ಅತಿಯಾದ ಶ್ರಮ), ಮತ್ತು ತಮೋಗುಣ (ಅಜ್ಞಾನ, ಸೋಮರಿತನ
ಮತ್ತು ಭ್ರಮೆ). ಈ ತ್ರಿಗುಣಗಳ ಪ್ರಭಾವದಿಂದ ಹಿಂದೆ ಹೇಳಿದ ಮೂರು ಅಂಶಗಳಾದ ಜ್ಞಾನ, ಕರ್ಮ ಮತ್ತು ಕರ್ತಾ ಇವುಗಳು ಬೇರೆ ಬೇರೆಯಾಗಿ ರೂಪಾಂತರಗೊಳ್ಳುತ್ತವೆ ಎನ್ನುವುದನ್ನು
ವಿವರಿಸುವುದಕ್ಕೆ ಈ ಶ್ಲೋಕ ಪೀಠಿಕೆ ಹಾಕುತ್ತಿದೆ.
सर्वभूतेषु येनैकं भावमव्ययमीक्षते ।
अविभक्तं विभक्तेषु तज्ज्ञानं विद्धि सात्त्विकम् ॥ १८-२०
ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ 18.20
ಅವಿಭಕ್ತಮ್ ವಿಭಕ್ತೇಷು ತತ್ ಜ್ಞಾನಮ್ ವಿದ್ಧಿ ಸಾತ್ತ್ವಿಕಮ್
ಸರ್ವಭೂತೇಷು = ಎಲ್ಲಾ ಜೀವಿಗಳಲ್ಲಿ (ಮನುಷ್ಯರು, ಪ್ರಾಣಿಗಳು, ಸಸ್ಯಗಳು ಇತ್ಯಾದಿ), ಯೇನ = ಯಾವ ಜ್ಞಾನದಿಂದ (ತಿಳುವಳಿಕೆಯಿಂದ), ಏಕಮ್ = ಒಂದೇ ಆದ, ಭಾವಮ್ = ಸತ್ಯವನ್ನು / ಪರಮಾತ್ಮ ಭಾವವನ್ನು, ಅವ್ಯಯಮ್ = ನಾಶರಹಿತವಾದುದನ್ನು, ಈಕ್ಷತೇ = ನೋಡುತ್ತಾನೋ
ಯಾವ ಜ್ಞಾನದ ಮೂಲಕ ಮನುಷ್ಯನು ಹೊರನೋಟಕ್ಕೆ ವಿಭಿನ್ನವಾಗಿ ಮತ್ತು ಬೇರೆ ಬೇರೆಯಾಗಿ
ಕಾಣುವ ಎಲ್ಲಾ ಜೀವರಾಶಿಗಳಲ್ಲಿಯೂ ನಾಶರಹಿತವಾದ ಮತ್ತು ಅವಿಭಾಜ್ಯವಾದ ಒಂದೇ ಒಂದು ಪರಮಾತ್ಮ ತತ್ವವನ್ನು
(ಆತ್ಮವನ್ನು) ಕಾಣುತ್ತಾನೋ, ಆ ಜ್ಞಾನವೇ 'ಸಾತ್ತ್ವಿಕ ಜ್ಞಾನ'.
ಈ ಶ್ಲೋಕವು 'ಸಾತ್ತ್ವಿಕ
ಜ್ಞಾನ' ಅಥವಾ ಸಾತ್ತ್ವಿಕ ತಿಳುವಳಿಕೆ ಎಂದರೇನು ಎಂಬುದನ್ನು
ತಿಳಿಸುತ್ತದೆ.
ಅವಿಭಕ್ತಂ ವಿಭಕ್ತೇಷು (ವಿಭಿನ್ನತೆಯಲ್ಲೂ ಏಕತೆ):
ಪ್ರಕೃತಿಯ ನಿಯಮದಂತೆ ಶರೀರಗಳು ಭಿನ್ನವಾಗಿವೆ (ವಿಭಕ್ತ).
ಆದರೆ ಆ ಶರೀರಗಳ ಸೂತ್ರಧಾರನಾದ ಆತ್ಮನು ಮಾತ್ರ ಎಲ್ಲದರಲ್ಲೂ ಒಂದೇ ಆಗಿದ್ದಾನೆ (ಅವಿಭಕ್ತ).
ಈ ಸತ್ಯವನ್ನು ಅರಿಯುವುದೇ ನಿಜವಾದ ಸಾತ್ತ್ವಿಕ ಜ್ಞಾನ. ಉದಾಹರಣೆಗೆ, ಮಡಕೆಗಳು ಬೇರೆ ಬೇರೆ ಆಕಾರದಲ್ಲಿದ್ದರೂ ಅವೆಲ್ಲವೂ
ಒಂದೇ ಮಣ್ಣಿನಿಂದ ಮಾಡಲ್ಪಟ್ಟಿರುವಂತೆ, ಜೀವಿಗಳು ಭಿನ್ನ ಭಿನ್ನವಾಗಿದ್ದರೂ ಅವುಗಳೊಳಗಿರುವ ಚೈತನ್ಯ ಅಥವಾ
ಪ್ರಾಣಶಕ್ತಿ ಒಂದೇ ಎಂದು ಗ್ರಹಿಸುವುದೇ ಸಾತ್ತ್ವಿಕ ದೃಷ್ಟಿಕೋನ. ಇದನ್ನೆ ಇನ್ನೊಂದು ದ್ರಷ್ಟಿಕೋನದಿಂದ
ಗಮನಿಸಿದರೆ ಆಕಾಶವು (space) ಎಲ್ಲಾ ಮಡಕೆಗಳ ಒಳಗೂ ಹೊರಗೂ ಒಂದೇ ಆಗಿ ಹರಡಿರುವಂತೆ, ಪರಮಾತ್ಮನು
ಎಲ್ಲಾ ಜೀವಿಗಳಲ್ಲೂ ವಿಭಾಗವಾಗದೇ ಅಖಂಡವಾಗಿ ತುಂಬಿದ್ದಾನೆ ಎಂಬ ತಿಳುವಳಿಕೆ ಸಾತ್ತ್ವಿಕ
ಜ್ಞಾನ.
ಏಕಂ ಭಾವಮ್ ಅವ್ಯಯಮ್ (ನಾಶರಹಿತ
ತತ್ವ ಮತ್ತು ಏಕತ್ವದ ದರ್ಶನ):
'ಅನೇಕತ್ವದಲ್ಲಿ ಏಕತ್ವ'ವನ್ನು ಕಾಣುವುದು. ಭೌತಿಕವಾಗಿ
ಜಗತ್ತು ನಮಗೆ ವೈವಿಧ್ಯತೆಯಿಂದ ಕೂಡಿರುವಂತೆ ಕಂಡರೂ, ಆಧ್ಯಾತ್ಮಿಕವಾಗಿ ಎಲ್ಲದರ ಮೂಲವೂ ಒಂದೇ ಆಗಿದೆ.
ಈ ಅವ್ಯಯ (ನಾಶವಿಲ್ಲದ) ತತ್ತ್ವವೇ ಪರಮಾತ್ಮ. ದೇಹಕ್ಕೆ ಹುಟ್ಟು ಮತ್ತು ಸಾವು ಇದೆ, ಆದರೆ ಅದರ ಒಳಗಿರುವ
ಆತ್ಮನಿಗೆ ಸಾವು ಇಲ್ಲ. ಅವ್ಯಯ
ಎಂದರೆ ದೇಹ ನಾಶವಾದರೂ ನಾಶವಾಗದ ಆತ್ಮ ತತ್ವ. ಸಾತ್ತ್ವಿಕ ಜ್ಞಾನಿಯು ಕೇವಲ ನಾಶವಾಗುವ ದೇಹವನ್ನು
ನೋಡದೆ ದೇಹದ ಒಳಗಿರುವ ನಾಶರಹಿತ ತತ್ವವನ್ನು ಗುರುತಿಸುತ್ತಾನೆ.
ಈ ಜಗತ್ತಿನಲ್ಲಿ ಕೋಟ್ಯಂತರ ಜೀವಿಗಳಿವೆ — ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಮತ್ತು ಸಸ್ಯಗಳು. ಇವೆಲ್ಲವೂ ಹೊರನೋಟಕ್ಕೆ ರೂಪ, ಗಾತ್ರ, ಬಣ್ಣ, ಜಾತಿ,
ಮತ್ತು ಸ್ವಭಾವದಲ್ಲಿ ಪರಸ್ಪರ ಭಿನ್ನವಾಗಿ ಕಾಣಿಸುತ್ತವೆ. ಮನುಷ್ಯರಲ್ಲಿಯೂ
ರೂಪ, ಬಣ್ಣ, ಜಾತಿ, ಮತ, ಸ್ವಭಾವ, ಭಾಷೆ ಎಲ್ಲವೂ ವಿಭಿನ್ನ, ಮತ್ತು ಬಡವ ಶ್ರೀಮಂತ ಎನ್ನುವ ಭೇದಭಾವಗಳು ಇವೆ. ಈ ಹೊರಗಿನ ವೈವಿಧ್ಯತೆಯನ್ನು
ನೋಡಿ ಮೋಹಗೊಳ್ಳದೆ ಅಥವಾ ಭ್ರಮೆಗೊಳಗಾಗದೆ, ಎಲ್ಲರ ದೇಹದ ಒಳಗಿರುವ ಪ್ರಾಣಶಕ್ತಿ ಅಥವಾ ಆತ್ಮ ಒಂದೇ ಪರಮಾತ್ಮನ ಅಂಶ ಎಂದು ಗ್ರಹಿಸುವುದೇ ಸಾತ್ತ್ವಿಕ ಜ್ಞಾನ.
ಉದಾಹರಣೆಗೆ, ಚಿನ್ನದಿಂದ ಮಾಡಿದ ನೂರಾರು ಆಭರಣಗಳ ಆಕಾರ ಮತ್ತು
ಹೆಸರು ಬೇರೆ ಬೇರೆಯಾಗಿದ್ದರೂ, ಅದರಲ್ಲಿರುವ ಮೂಲವಸ್ತು 'ಚಿನ್ನ' ಒಂದೇ ಆಗಿರುತ್ತದೆ. ಅದೇ ರೀತಿ,
ಭೌತಿಕ ದೇಹಗಳು ಭಿನ್ನವಾಗಿದ್ದರೂ ಎಲ್ಲದರಲ್ಲೂ ನೆಲೆಸಿರುವ ಚೈತನ್ಯ ಒಂದೇ ಎಂದು ತಿಳಿಯುವುದೇ ನಿಜವಾದ
ಸಾತ್ತ್ವಿಕ ದೃಷ್ಟಿಕೋನವಾಗಿದೆ. ಸಾತ್ತ್ವಿಕ ಜ್ಞಾನವನ್ನು ಹೊಂದಿದ ಜ್ಞಾನಿಯು
ಎಲ್ಲಾ ಜೀವಿಗಳಲ್ಲಿಯೂ ಏಕತೆಯನ್ನು ಕಾಣುವುದರಿಂದ ಎಲ್ಲರನ್ನೂ ಪ್ರೀತಿಸುತ್ತಾನೆ ಮತ್ತು ಗೌರವಿಸುತ್ತಾನೆ.
ಇನ್ನೊಂದು ಉದಾಹರಣೆ, ಸಮುದ್ರದ
ಅಲೆಗಳು ಬೇರೆ ಬೇರೆಯಾಗಿ ಕಂಡರೂ ಮೂಲತಃ ಅವೆಲ್ಲವೂ ಒಂದೇ ಸಮುದ್ರದ ನೀರು. ಸಾತ್ತ್ವಿಕ ಜ್ಞಾನದ ದೃಷ್ಟಿಯೂ
ಹೀಗೆಯೇ; ಅದು ಬಾಹ್ಯ ರೂಪವನ್ನು ನೋಡದೆ ಆಂತರಿಕ ಸತ್ಯವನ್ನು ಗ್ರಹಿಸುತ್ತದೆ.
ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸೆ, ದ್ವೇಷ
ಮತ್ತು ತಾರತಮ್ಯಗಳಿಗೆ ಮೂಲ ಕಾರಣ ಸಾತ್ತ್ವಿಕ ಜ್ಞಾನದ ಕೊರತೆ. ಸಾತ್ತ್ವಿಕ ಜ್ಞಾನ ಉಂಟಾದಾಗ ಮನುಷ್ಯನಲ್ಲಿ
ದ್ವೇಷ, ಅಸೂಯೆ, ಕ್ರೋಧಗಳು ನಾಶವಾಗುತ್ತವೆ, ಏಕೆಂದರೆ ಎದುರಿಗಿರುವ ವ್ಯಕ್ತಿಯೂ ತನ್ನಂತೆಯೇ ಭಗವಂತನ
ಅಂಶ ಎಂದು ಅರಿತಾಗ ದ್ವೇಷ ಮಾಯವಾಗಿ ಭಾಂದವ್ಯ ಪ್ರಕಟವಾಗುತ್ತದೆ. ನಾವೆಲ್ಲರೂ ಮೂಲತಃ ಒಂದೇ ಎಂಬ ಸಾತ್ತ್ವಿಕ
ಜ್ಞಾನ ಮೂಡಿದಾಗ ಮಾತ್ರ ಜಗತ್ತಿನಲ್ಲಿ ನೈಜ ಪ್ರೀತಿ, ಕರುಣೆ ಮತ್ತು ವಿಶ್ವಬಂಧುತ್ವ ಮೂಡಲು ಸಾಧ್ಯ.
ಇದುವೇ ಮೋಕ್ಷಕ್ಕೆ ದಾರಿ ಮಾಡಿ ಕೊಡುವ ಜ್ಞಾನ.
पृथक्त्वेन तु यज्ज्ञानं नानाभावान्पृथग्विधान् ।
वेत्ति सर्वेषु भूतेषु तज्ज्ञानं विद्धि राजसम् ॥ १८-२१
ಪೃಥಕ್ತ್ವೇನ ತು ಯಜ್ ಜ್ಞಾನಂ ನಾನಾಭಾವಾನ್ಪೃಥಗ್ವಿಧಾನ್
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ನಂ ವಿದ್ಧಿ ರಾಜಸಮ್ 18.21
ಪೃಥಕ್ತ್ವೇನ = ಬೇರೆ ಬೇರೆ ಎಂಬ ಭಾವದಿಂದ (ಪ್ರತ್ಯೇಕವಾಗಿ), ತು = ಆದರೆ, ಯತ್ = ಯಾವ, ಜ್ಞಾನಮ್ = ಜ್ಞಾನವು, ನಾನಾಭಾವಾನ್ = ಅನೇಕ ರೀತಿಯ ಅಸ್ತಿತ್ವಗಳನ್ನು (ಜೀವಾತ್ಮಗಳನ್ನು), ಪೃಥಕ್ ವಿಧಾನ್ = ಬೇರೆ ಬೇರೆ ವಿಧದ
ಯಾವ ಜ್ಞಾನವು ಎಲ್ಲಾ ಜೀವಿಗಳಲ್ಲಿರುವ
ಆತ್ಮಗಳನ್ನು ಬೇರೆ ಬೇರೆ ಮತ್ತು ಅವರ ಸ್ವಭಾವಗಳು ಭಿನ್ನ ಭಿನ್ನ ಎಂದು ಭೇದಭಾವದಿಂದ
ನೋಡುತ್ತದೆಯೋ, ಆ ಭೇದಭಾವದ ಅರಿವನ್ನು "ರಾಜಸಿಕ ಜ್ಞಾನ" ಎಂದು ಕರೆಯಲಾಗುತ್ತದೆ.
ಈ ಶ್ಲೋಕವು ರಾಜಸ ಗುಣದಿಂದ ಕೂಡಿದ ಮನುಷ್ಯನ ಬುದ್ಧಿ ಮತ್ತು ಜ್ಞಾನದ
ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ವಿವರಿಸುತ್ತದೆ.
ಭೇದ ದೃಷ್ಟಿ ಮತ್ತು ಬುದ್ಧಿ:
ರಾಜಸಿಕ ಜ್ಞಾನದ ಮುಖ್ಯ ಲಕ್ಷಣವೇ 'ಪೃಥಕ್ತ್ವ' ಅಂದರೆ
ಭೇದ ಭಾವ. ಇಂತಹ ಜ್ಞಾನವುಳ್ಳವರು ಹೊರಗಿನ ರೂಪ, ಜಾತಿ, ಬಣ್ಣ, ಅಂತಸ್ತು ಮತ್ತು ಶರೀರವನ್ನು ಮಾತ್ರ ನೋಡಿ ಎಲ್ಲರನ್ನೂ ಬೇರೆ
ಬೇರೆ ಎಂದು ಭಾವಿಸುತ್ತಾರೆ. ರಜೋಗುಣದ ಪ್ರಭಾವಕ್ಕೆ ಒಳಗಾದ
ಬುದ್ಧಿಯು ಸೃಷ್ಟಿಯ ಮೂಲ ಸೂತ್ರವಾದ 'ಏಕತೆ'ಯನ್ನು ಗ್ರಹಿಸುವುದಿಲ್ಲ. ವ್ಯಾವಹಾರಿಕ ಲೋಕದಲ್ಲಿ ಒಬ್ಬ
ವ್ಯಕ್ತಿ ಮತ್ತೊಬ್ಬ ವ್ಯಕ್ತಿಗಿಂತ ಭಿನ್ನವಾಗಿ ಕಾಣುವುದು ಸಹಜ. ರಾಜಸಿಕ ಜ್ಞಾನವುಳ್ಳವರು ಬಡವ-ಶ್ರೀಮಂತ,
ಒಡೆಯ-ಸೇವಕ ಎಂಬ ವ್ಯತ್ಯಾಸಗಳನ್ನು ಮಾತ್ರ ಗ್ರಹಿಸ ಬಲ್ಲರು. ಒಬ್ಬ ವ್ಯಕ್ತಿ ಕೋಪದಲ್ಲಿದ್ದರೆ ಅಥವಾ
ತಪ್ಪು ಮಾಡುತ್ತಿದ್ದರೆ, ಅವನ ಮೂಲ ಸ್ವರೂಪ ಪವಿತ್ರವಾದುದು ಎಂಬುದನ್ನು ಮರೆತು, ಅವನನ್ನು ಕೇವಲ ಒಬ್ಬ
ಕೆಟ್ಟ ವ್ಯಕ್ತಿಯನ್ನಾಗಿ ಮಾತ್ರ ನೋಡುತ್ತಾರೆ. ಆಧ್ಯಾತ್ಮಿಕವಾಗಿ ಎಲ್ಲರಲ್ಲೂ ನೆಲೆಸಿರುವ ಆತ್ಮ ಒಂದೇ
ಆಗಿದ್ದರೂ, ರಾಜಸಿಕ ಜ್ಞಾನವು ಕೇವಲ ಇಂದ್ರಿಯಗಳ ಮತ್ತು ಮನಸ್ಸಿನ ಮಟ್ಟದಲ್ಲೇ ನಿಂತುಬಿಡುವುದರಿಂದ
ಜಗತ್ತಿನ ಮೂಲ ಸತ್ಯವನ್ನು ಗ್ರಹಿಸಲು ವಿಫಲವಾಗುತ್ತದೆ. ಮತ್ತು ಅದು ಕೇವಲ ಬಣ್ಣ, ಜಾತಿ, ಧರ್ಮ, ಲಿಂಗ
ಅಥವಾ ರಾಷ್ಟ್ರೀಯತೆಯ ಆಧಾರದ ಮೇಲೆ ಮನುಷ್ಯರನ್ನು ಸದಾ ವಿಭಜಿಸಿ ನೋಡುವಷ್ಟೇ ಶಕ್ತವಾಗಿದೆ.
ದೇಹವೇ ಆತ್ಮ ಎಂಬ ಭ್ರಮೆ:
ರಾಜಸಿಕ ಜ್ಞಾನವುಳ್ಳವರು ಭೌತಿಕ ದೇಹವೇ ಸರ್ವಸ್ವ
ಎಂದು ನಂಬುತ್ತಾರೆ. ದೇಹ ನಾಶವಾದರೆ ಎಲ್ಲವೂ ಮುಗಿಯಿತು ಅಂದುಕೊಳ್ಳುತ್ತಾರೆ. ಆದ್ದರಿಂದ ಅವರು ಕೇವಲ
ಲೌಕಿಕ ಸುಖ ಮತ್ತು ಭೋಗಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ.
ಸ್ವಾರ್ಥ ಮತ್ತು ಅಹಂಕಾರದ ಪ್ರಭಾವ:
ರಾಜಸ ಜ್ಞಾನ ಉಳ್ಳವರು "ನಾನು
ಬೇರೆ, ಅವರು ಬೇರೆ", "ನನ್ನ ದೇಶ, ನನ್ನ ಧರ್ಮ, ನನ್ನ ಜಾತಿ ಶ್ರೇಷ್ಠ" ಎಂಬ ಭಿನ್ನ
ಭಾವನೆಯನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಕಂಡುಬರುವ "ನಾವು
ಮತ್ತು ಅವರು" ಅಥವಾ "ನನ್ನದು ಮತ್ತು ನಿನ್ನದು" ಎಂಬ ಅಹಂಕಾರದ ಭಾವನೆಗೆ ಈ ರಾಜಸಿಕ
ಜ್ಞಾನವೇ ಮೂಲ ಕಾರಣ. ಇವರಿಗೆ ಎಲ್ಲರಲ್ಲೂ
ಇರುವ ಚೈತನ್ಯ ಒಂದೇ ಎಂಬ ಅರಿವಿರುವುದಿಲ್ಲ. ಯಾವಾಗ ಮನುಷ್ಯನಲ್ಲಿ "ನಾನು ಮತ್ತು ನನ್ನವರು ಬೇರೆ, ಉಳಿದವರು ಬೇರೆ"
ಎಂಬ ಭಾವನೆ ಮೂಡುತ್ತದೆಯೋ, ಅಲ್ಲಿ ಸ್ವಾರ್ಥ, ಸ್ಪರ್ಧೆ, ಅಸೂಯೆ, ಕ್ರೋಧ ಮತ್ತು ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ.
ರಾಜಸಿಕ ಜ್ಞಾನವು ಲೌಕಿಕ ಜಗತ್ತಿನಲ್ಲಿ ಯಶಸ್ಸು ತರಬಹುದು, ಉದಾಹರಣೆಗೆ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ
ಬಡ್ತಿ, ರಾಜಕೀಯದಲ್ಲಿ ಜನರ ಸಮರ್ಥನೆ ಇತ್ಯಾದಿ, ಆದರೆ ಆಧ್ಯಾತ್ಮಿಕ ಉನ್ನತಿಗೆ ಇದು ಮಾರಕ. ಜಗತ್ತಿನಲ್ಲಿ
ನಡೆಯುವ ಜನಾಂಗೀಯ ದ್ವೇಷ, ಯುದ್ಧಗಳು, ಮೇಲು-ಕೀಳು ಎಂಬ ತಾರತಮ್ಯಗಳೆಲ್ಲವೂ ಈ ರಾಜಸಿಕ ಜ್ಞಾನದ ಪ್ರಭಾವದಿಂದಲೇ
ಉಂಟಾಗುತ್ತವೆ.
ದೇವತಾರಾಧನೆಯಲ್ಲೂ ಭೇದ:
ಆಧ್ಯಾತ್ಮಿಕ ಸಾಧನೆಯಲ್ಲೂ ರಾಜಸಿಕ ಬುದ್ಧಿಯವರು ಭಗವಂತನನ್ನು ಅಖಂಡವಾಗಿ ಕಾಣದೆ,
ಗ್ರಹಚಾರಗಳಿಗೆ ಅಥವಾ ತಕ್ಷಣದ ಫಲಕ್ಕಾಗಿ ಬೇರೆ ಬೇರೆ ದೇವತೆಗಳನ್ನು ಅವರಲ್ಲಿ ಪರಸ್ಪರ ಸಂಬಂಧವಿಲ್ಲದಂತೆ
ಪೂಜಿಸುತ್ತಾರೆ. ಇವೆಲ್ಲದರಲ್ಲೂ ಅಡಗಿರುವ
ಶಕ್ತಿ ಸರ್ವವ್ಯಾಪಿಯಾದ ಒಬ್ಬನೇ ಪರಮಾತ್ಮನದ್ದು ಎಂಬ ಅರಿವು ಇವರಿಗೆ ಕಡಿಮೆ.
ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಪರಮಾತ್ಮನ
ಎಚ್ಚರದಿಂದ ಮಾಡಿದರೆ ಆ ಪೂಜೆಯು ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆ
ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ ರಾಜಸವಾಗುತ್ತದೆ.
ಲೌಕಿಕ ದೃಷ್ಟಿಕೋನ:
ಇವರ ದೃಷ್ಟಿ ಕೇವಲ ಭೌತಿಕ ಜಗತ್ತಿಗೆ
ಸೀಮಿತವಾಗಿರುತ್ತದೆ. ಪ್ರಕೃತಿಯ ವೈವಿಧ್ಯತೆಯನ್ನು ಕಂಡು ಭ್ರಮೆಗೊಳಗಾಗುವ ಇವರು, ಆ ವೈವಿಧ್ಯತೆಯ
ಹಿಂದಿರುವ ಪರಮ ಸತ್ಯವನ್ನು ಗ್ರಹಿಸಲು ಆಸಕ್ತರಾಗಿರುತ್ತಾರೆ.
ರಾಜಸಿಕ ಜ್ಞಾನವು ಮನುಷ್ಯನನ್ನು ಬಂಧನದಲ್ಲಿಡುತ್ತದೆ.
ಇದು ಸತ್ಯವನ್ನು ಭಾಗಶಃ ಮಾತ್ರ ಗ್ರಹಿಸಬಲ್ಲದು. ಆಧ್ಯಾತ್ಮಿಕ ಉನ್ನತಿಗಾಗಿ ಮನುಷ್ಯನು ಈ ರಾಜಸಿಕ
ಭೇದಭಾವದ ದೃಷ್ಟಿಯನ್ನು ದಾಟಿ, ಎಲ್ಲರಲ್ಲೂ ಏಕತೆಯನ್ನು ಕಾಣುವ ಸಾತ್ತ್ವಿಕ ಜ್ಞಾನದ ಕಡೆಗೆ ಸಾಗಬೇಕು
ಎಂಬುದೇ ಈ ಶ್ಲೋಕದ ಮುಖ್ಯ ಸಂದೇಶ.
यत्तु कृत्स्नवदेकस्मिन् कार्ये सक्तमहैतुकम् ।
अतत्त्वार्थवदल्पं च तत्तामसमुदाहृतम् ॥ १८-२२
ಯತ್ತು ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್
ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಮ್ 18.22
ಅತತ್ತ್ವ-ಅರ್ಥ-ವತ್ ಅಲ್ಪಮ್ ಚ ತತ್ ತಾಮಸಮ್ ಉದಾಹೃತಮ್
ಯತ್ ತು = ಆದರೆ ಯಾವ ಜ್ಞಾನವು, ಕೃತ್ಸ್ನವತ್ = ಅದೇ ಸರ್ವಸ್ವ ಎಂಬಂತೆ, ಏಕಸ್ಮಿನ್ ಕಾರ್ಯೇ = ಕೇವಲ ಒಂದು ಸಣ್ಣ ಕೆಲಸದಲ್ಲಿ ಅಥವಾ ಭೌತಿಕ ಶರೀರ ಅಥವಾ ವಸ್ತುವಿನಲ್ಲಿ, ಸಕ್ತಮ್ = ಅತಿಯಾಗಿ ಆಸಕ್ತವಾಗಿದೆಯೋ (ಅಂಟಿಕೊಂಡಿದೆಯೋ), ಅಹೇತುಕಮ್ = ಯಾವುದೇ ಸರಿಯಾದ ಕಾರಣ ಅಥವಾ ಆಧಾರವಿಲ್ಲದ್ದೋ
ಅತತ್ತ್ವ-ಅರ್ಥ-ವತ್ = ಸತ್ಯದ ಆಧಾರವಿಲ್ಲದ್ದೋ (ಭ್ರಮೆಯಿಂದ ಕೂಡಿದ್ದೋ), ಅಲ್ಪಂ ಚ = ಮತ್ತು ಅತ್ಯಂತ ತುಚ್ಛವಾದುದೋ (ಸಂಕುಚಿತವಾದುದೋ), ತತ್ = ಆ (ಜ್ಞಾನವನ್ನು), ತಾಮಸಮ್ = ತಾಮಸಿಕ ಎಂದು, ಉದಾಹೃತಮ್ = ಕರೆಯಲಾಗುತ್ತದೆ (ಹೇಳಲಾಗಿದೆ)
ಆದರೆ ಯಾವ ಜ್ಞಾನವು ಯಾವುದೋ ಒಂದು ಸಣ್ಣ ಕಾರ್ಯವನ್ನು ಅಥವಾ ನಶ್ವರವಾದ ಒಂದು ಭೌತಿಕ
ವಸ್ತು ಅಥವಾ ಶರೀರವನ್ನೇ ಸರ್ವಸ್ವ ಎಂದು ಕುರುಡಾಗಿ ನಂಬಿ ಅದಕ್ಕೇ ಅಂಟಿಕೊಂಡಿರುತ್ತದೆಯೋ, ಯಾವುದು ಯಾವುದೇ
ತರ್ಕ ಅಥವಾ ವಾಸ್ತವಿಕ ಸತ್ಯದ ಆಧಾರವಿಲ್ಲದ್ದೋ ಮತ್ತು ಅತ್ಯಂತ ಸಂಕುಚಿತ ಅಥವಾ ತುಚ್ಛವಾದದ್ದೋ, ಅದನ್ನು
ತಾಮಸಿಕ ಜ್ಞಾನವೆಂದು ಕರೆಯಲಾಗುತ್ತದೆ
ಈ ಶ್ಲೋಕದಲ್ಲಿ ಅಜ್ಞಾನದ ಪರಮಾವಧಿಯಾದ ತಾಮಸಿಕ ಜ್ಞಾನದ ಸ್ವರೂಪವನ್ನು
ವಿವರಿಸಲಾಗಿದೆ.
ಕೃತ್ಸ್ನ-ವತ್ ಏಕಸ್ಮಿನ್
ಕಾರ್ಯೇ (ಒಂದನ್ನೇ ಸರ್ವಸ್ವ ಎಂದು ತಿಳಿಯುವುದು):
ತಾಮಸಿಕ ಜ್ಞಾನದ ಮುಖ್ಯ ಲಕ್ಷಣವೆಂದರೆ ಅತಿ
ದೊಡ್ಡ ಸತ್ಯವನ್ನು ಕಡೆಗಣಿಸಿ, ಒಂದು ಸಣ್ಣ ವಿಷಯಕ್ಕೆ ಅತಿಯಾಗಿ ಅಂಟಿಕೊಳ್ಳುವುದು. ತನ್ನ ದೇಹವೇ
ತಾನು, ಈ ನಾಶವಾಗುವ ಶರೀರವೇ ಆತ್ಮ ಎಂದು ನಂಬುವುದು. ಯಾವುದೋ ಒಂದು ಸಣ್ಣ ಮೂಢನಂಬಿಕೆಯನ್ನು ಹಿಡಿದು, ಕೇವಲ ಒಂದು ಸಣ್ಣ ಆಚರಣೆಯೇ ಪರಮ ಧರ್ಮ ಎಂದು ವಾದಿಸುವುದು
ಅಥವಾ ತನ್ನ ಮನೆ, ತನ್ನ ಸ್ವಾರ್ಥವೇ ಜಗತ್ತು ಎಂದು ಬದುಕುವುದು ತಾಮಸಿಕತೆಯಾಗಿದೆ.
ಅಹೇತುಕಮ್ (ಕಾರಣರಹಿತವಾದದ್ದು):
ಈ ಜ್ಞಾನಕ್ಕೆ ಯಾವುದೇ
ಸರಿಯಾದ ಕಾರಣ, ವೈಜ್ಞಾನಿಕ ಅಥವಾ ತಾರ್ಕಿಕ ಆಧಾರವಿರುವುದಿಲ್ಲ.
"ನಾನು ಹೇಳಿದ್ದೇ ಸರಿ, ಯಾಕೆಂದರೆ ನಾನು ಹಾಗೆ ನಂಬುತ್ತೇನೆ" ಎಂಬ ಕುರುಡು ಹಠ ಇದರ ಹಿಂದೆ
ಇರುತ್ತದೆ. ಇಲ್ಲಿ ವಿವೇಚನೆಗೆ ಜಾಗವಿರುವುದಿಲ್ಲ.
ಅತತ್ತ್ವ-ಅರ್ಥ-ವತ್ (ವಾಸ್ತವಕ್ಕೆ ದೂರವಾದದ್ದು):
ಇದು ಸತ್ಯಕ್ಕೆ ವಿರುದ್ಧವಾದದ್ದು.
ಹಗ್ಗವನ್ನು ನೋಡಿ ಹಾವು ಎಂದು ಹೆದರಿ ಓಡುವುದು ಹೇಗೆ ತಪ್ಪು ಜ್ಞಾನವೋ,
ಹಾಗೆಯೇ ತಾತ್ಕಾಲಿಕ ಭೌತಿಕ ಸುಖಗಳೇ ಶಾಶ್ವತ ಎಂದು ನಂಬುವುದು ಅತತ್ತ್ವಾರ್ಥ ಜ್ಞಾನ. ಕೇವಲ ಕುರುಡು ನಂಬಿಕೆ, ಪೂರ್ವಗ್ರಹ ಅಥವಾ ಸೋಮಾರಿತನದಿಂದ ಇವರು ಒಂದು ಸಿದ್ಧಾಂತಕ್ಕೆ
ಅಂಟಿಕೊಳ್ಳುತ್ತಾರೆ. ಸತ್ಯ ಏನೆಂದು ತಿಳಿಯುವ ಆಸಕ್ತಿಯೂ ಇವರಿಗೆ ಇರುವುದಿಲ್ಲ.
ಅಲ್ಪಮ್ (ಅತ್ಯಂತ ಕೀಳುಮಟ್ಟದ್ದು):
ಇದು ಅತ್ಯಂತ ಕಿರಿದಾದ
ತಿಳುವಳಿಕೆ. ಈ ಜ್ಞಾನವು ಮನುಷ್ಯನ ಮನಸ್ಸನ್ನು ವಿಶಾಲಗೊಳಿಸುವ
ಬದಲಾಗಿ ಅತ್ಯಂತ ಕಿರಿದಾಗಿಸುತ್ತದೆ. ಇದು ಮನುಷ್ಯನನ್ನು ಪ್ರಾಣಿ ಸಹಜ ಗುಣಗಳಾದ ತಿನ್ನುವುದು, ಮಲಗುವುದು,
ಭಯಪಡುವುದು ಇಂತಹ ಪ್ರಾಥಮಿಕ
ಪ್ರಾಣಿಗಳ ಸ್ವಭಾವಕ್ಕೆ ಮಾತ್ರ ಸೀಮಿತಗೊಳಿಸುತ್ತದೆ. ಇಂತಹ ಜ್ಞಾನದಿಂದ ಯಾರಿಗೂ
ಒಳಿತಾಗುವುದಿಲ್ಲ.
ಮನುಷ್ಯನ ಬುದ್ಧಿಯು ತಮೋಗುಣದಿಂದ ಆವೃತವಾದಾಗ, ಅವನಿಗೆ
ವಿಶಾಲವಾದ ಜಗತ್ತು ಅಥವಾ ಪರಮಾತ್ಮನ ಅಸ್ತಿತ್ವದ ಬಗ್ಗೆ ತಿಳುವಳಿಕೆ ಇರುವುದಿಲ್ಲ. ತಾಮಸಿಕ ಬುದ್ಧಿಯ
ವ್ಯಕ್ತಿಯು ಅತ್ಯಂತ ಸಂಕಚಿತ ಮನೋಭಾವದವನಾಗಿರುತ್ತಾನೆ. ಅವನು ಕಣ್ಣಿಗೆ ಕಾಣುವ ಭೌತಿಕ ಶರೀರ ಅಥವಾ
ಯಾವುದೋ ಒಂದು ಸಣ್ಣ ವಸ್ತುವನ್ನೇ "ಇದೇ ಜಗತ್ತಿನ ಸರ್ವಸ್ವ, ಇದರ ಆಚೆಗೆ ಏನೂ ಇಲ್ಲ"
ಎಂದು ಬಲವಾಗಿ ನಂಬಿ ಕುಳಿತಿರುತ್ತಾನೆ. ಉದಾಹರಣೆಗೆ, ಕೇವಲ ತನ್ನ ಶರೀರದ ಸುಖ ಭೋಗಗಳೇ ಜೀವನದ ಪರಮ
ಗುರಿ ಎಂದು ಬದುಕುವುದು ತಾಮಸಿಕ ಜ್ಞಾನ. ಈ ರೀತಿಯ ಕುರುಡು ನಂಬಿಕೆ, ಸಂಕುಚಿತ ಮನೋಭಾವ ಮತ್ತು ಯಾವುದೇ
ವೈಜ್ಞಾನಿಕ, ತಾರ್ಕಿಕ (Logical), ತರ್ಕಬದ್ಧ (Rational) ಅಥವಾ ಆಧ್ಯಾತ್ಮಿಕ ಹಿನ್ನೆಲೆ ಇಲ್ಲದ
ಜ್ಞಾನವೇ ತಾಮಸಿಕ ಜ್ಞಾನ. ಇದು ಮನುಷ್ಯನನ್ನು ಅಂಧಕಾರ ಮತ್ತು ಮೂಢನಂಬಿಕೆಯಲ್ಲಿ ಮುಳುಗಿಸುತ್ತದೆ.
ಇಂದಿನ ಸಮಾಜದಲ್ಲಿ ಕಂಡು ಬರುವ ಸಾಮಾನ್ಯ ಕುರುಡು
ನಂಬಿಕೆಗಳು, ‘ಜಿಹಾದ್’ ಅಂದರೆ ತುಂಬಾ ಪುಣ್ಯದ ಕಾರ್ಯ ಎಂಬ ಸಿದ್ಧಾಂತ, ಭಯೋತ್ಪಾದನೆ (ತಮ್ಮ ಸಿದ್ಧಾಂತವೇ
ಶ್ರೇಷ್ಠ ಎಂಬ ಭ್ರಮೆ), ಕೇವಲ ಹಣ ಗಳಿಸುವುದು, ತಿನ್ನುವುದು, ಮಲಗುವುದು ಮತ್ತು ದೈಹಿಕ ಸುಖದ ಬೆನ್ನಟ್ಟಿ
ಮದ್ಯ, ಮಾದಕ ದ್ರವ್ಯ ಇತ್ಯಾದಿಗಳ ದಾಸರಾಗಿ, ಅದೇ ಜೀವನದ ಪರಮ ಗುರಿ ಅಂದುಕೊಂಡು ಜೀವಮಾನವನ್ನು ವ್ಯರ್ಥ ಮಾಡಿಕೊಳ್ಳುವುದು — ಇವೆಲ್ಲವೂ ತಾಮಸಿಕ
ಜ್ಞಾನದ ಪ್ರತ್ಯಕ್ಷ ಉದಾಹರಣೆಗಳಾಗಿವೆ.
ತಾರ್ಕಿಕ (Logical) ಎಂದರೆ ನಿಯಮಗಳು ಮತ್ತು ವ್ಯವಸ್ಥಿತ ವಾದಗಳ ಆಧಾರದ ಮೇಲೆ ತೀರ್ಮಾನಕ್ಕೆ
ಬರುವುದು.
ತರ್ಕಬದ್ಧ (Rational) ಎಂದರೆ ಲಭ್ಯವಿರುವ ಮಾಹಿತಿ, ಮೌಲ್ಯಗಳು ಮತ್ತು ಪರಿಸ್ಥಿತಿಯನ್ನು
ಪರಿಗಣಿಸಿ ಅತ್ಯಂತ ಸೂಕ್ತವಾದ ಮತ್ತು ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಳ್ಳುವುದು.
ತಾಮಸಿಕ ಜ್ಞಾನದ ಪ್ರಮುಖ ಲಕ್ಷಣಗಳು:
ದೇಹಾತ್ಮ
ಬುದ್ಧಿ: ಈ ಜ್ಞಾನ ಹೊಂದಿದವರು 'ನಾನೇ
ಈ ದೇಹ' ಎಂದು ನಂಬಿರುತ್ತಾರೆ. ಶರೀರದ ಸುಖ, ಉಣ್ಣುವುದು, ತಿನ್ನುವುದು, ಮಲಗುವುದು ಮತ್ತು ಪ್ರಾಣಿಗಳಂತೆ
ಬದುಕುವುದೇ ಜೀವನದ ಅಂತಿಮ ಗುರಿ ಎಂದು ಭಾವಿಸುತ್ತಾರೆ.
ಅಹೇತುಕಮ್ (ಕಾರಣರಹಿತ): ಇವರ ನಂಬಿಕೆಗಳಿಗೆ ಯಾವುದೇ ಸರಿಯಾದ ತರ್ಕ, ವೈಜ್ಞಾನಿಕ, ಅಥವಾ ಶಾಸ್ತ್ರದ ಆಧಾರ ಇರುವುದಿಲ್ಲ. ಕೇವಲ ಕುರುಡು ಮೂಢನಂಬಿಕೆಗಳಿಗೆ ಅಂಟಿಕೊಂಡಿರುತ್ತಾರೆ
ಮತ್ತು ಪೂರ್ವಾಗ್ರಹ ಪೀಡಿತ ಆಲೋಚನೆಗಳೇ ಇದಕ್ಕೆ ಮೂಲ.
ಅತತ್ತ್ವಾರ್ಥವತ್ (ಸತ್ಯಕ್ಕೆ ದೂರವಾದದ್ದು): ಇದು ವಸ್ತುವಿನ
ನೈಜ ಸ್ವರೂಪವನ್ನು ಗ್ರಹಿಸುವುದಿಲ್ಲ. ಉದಾಹರಣೆಗೆ, ಕೇವಲ ಮಣ್ಣಿನ ಬೊಂಬೆಯನ್ನೇ ದೇವರು ಎಂದು ನಂಬಿ,
ಅದರ ಹಿಂದಿರುವ ಸರ್ವವ್ಯಾಪಿ ದೈವೀ ಶಕ್ತಿಯನ್ನು ನಿರಾಕರಿಸುವುದು ಅಥವಾ ಕೇವಲ ಈ ಭೌತಿಕ ದೇಹವೇ ತಾನು
ಎಂದು ನಂಬಿ ಆತ್ಮ ತತ್ವವನ್ನು ಮರೆಯುವುದು.
ಸಂಕುಚಿತ ದೃಷ್ಟಿಕೋನ (ಅಲ್ಪಮ್): ತಮಗೆ ತಿಳಿದಿರುವುದೇ ಅಂತಿಮ ಸತ್ಯ, ಬೇರೆ ಯಾವುದೇ ವಿಚಾರಗಳು ಸರಿಯಲ್ಲ ಎಂಬ ಹಠಮಾರಿ
ಧೋರಣೆ ಇವರದು. ಉದಾಹರಣೆಗೆ, ತೀವ್ರ ಧರ್ಮಾಂಧತೆ ಅಥವಾ ಮತಾಂಧತೆ ಕೂಡ ತಾಮಸಿಕ ಜ್ಞಾನದ ಲಕ್ಷಣವೇ ಆಗಿದೆ.
नियतं सङ्गरहितम् अरागद्वेषतः कृतम् ।
अफलप्रेप्सुना कर्म यत्तत्सात्त्विकमुच्यते ॥ १८-२३
ನಿಯತಂ ಸಙ್ಗರಹಿತಮ್ ಅರಾಗದ್ವೇಷತಃ ಕೃತಮ್
ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ 18.23
ಅಫಲ-ಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ
ಶಾಸ್ತ್ರಗಳಿಗೆ ಅನುಗುಣವಾಗಿ, ಕರ್ತವ್ಯವೆಂದು ನಿಯೋಜಿತವಾದ ಕರ್ತೃತ್ವದ
ಅಹಂಕಾರ ಮತ್ತು ಆಸಕ್ತಿಯಿಲ್ಲದೆ, ಯಾವುದೇ ರೀತಿಯ ರಾಗ-ದ್ವೇಷಗಳಿಗೆ (ಅತಿಯಾದ ಇಷ್ಟ ಅಥವಾ ದ್ವೇಷ)
ಒಳಗಾಗದೆ, ಹಾಗೂ ಫಲಾಪೇಕ್ಷೆಯನ್ನು
ಬಯಸದೆ ಮಾಡುವ ಕರ್ಮವನ್ನು ಸಾತ್ತ್ವಿಕ ಕರ್ಮ ಎಂದು
ಹೇಳಲಾಗುತ್ತದೆ.
ಈ ಶ್ಲೋಕದಲ್ಲಿ
ಸಾತ್ತ್ವಿಕ ಕರ್ಮದ ಪ್ರಮುಖ ನಾಲ್ಕು ಅರ್ಹತೆಗಳು ಅಥವಾ ಲಕ್ಷಣಗಳು ಏನು ಎಂದು ತಿಳಿಸಲಾಗಿದೆ:
ನಿಯತಂ (ನಿಯಮಬದ್ಧ/ ಶಾಸ್ತ್ರೋಕ್ತ/ ಶಾಸ್ತ್ರಸಮ್ಮತ ಕರ್ತವ್ಯ):
ಅಂದರೆ ಸಮಾಜಕ್ಕೆ ಮತ್ತು ತನಗೆ ಒಳಿತನ್ನು ಉಂಟುಮಾಡುವ, ಧರ್ಮಗ್ರಂಥಗಳ ನಿಯಮಗಳ ಪ್ರಕಾರ ನಮಗೆ ನಿಯೋಜಿಸಲಾದ ನಮ್ಮ ಸ್ವಭಾವಕ್ಕೆ ತಕ್ಕುದಾದ ಕರ್ತವ್ಯ ಕರ್ಮಗಳು.
ಸಂಗರಹಿತಮ್ (ಆಸಕ್ತಿ ರಹಿತ):
"ಈ ಕೆಲಸವನ್ನು ನಾನೇ ಮಾಡಿದೆ, ಇದರ ಯಶಸ್ಸು ಕೇವಲ ನನ್ನಿಂದಲೇ ಆಯಿತು, ಇದರಿಂದ ಬರುವ ಗೌರವ ನನಗೇ ಸಿಗಬೇಕು” ಎಂಬ ಅಹಂಕಾರವಿಲ್ಲದೆ ಕೆಲಸ ಮಾಡುವುದು.
ಕರ್ಮದೊಂದಿಗೆ ಮಾನಸಿಕವಾಗಿ ಅತಿಯಾಗಿ ಅಂಟಿಕೊಳ್ಳದಿರುವುದು ಸಾತ್ತ್ವಿಕತೆಯ
ಲಕ್ಷಣ.
ಅರಾಗ-ದ್ವೇಷತಃ ಕೃತಮ್ (ರಾಗ-ದ್ವೇಷಗಳಿಲ್ಲದೆ ಮಾಡುವುದು):
ಕೇವಲ ತನಗೆ ಇಷ್ಟವಾದ
ಕೆಲಸವನ್ನು ಮಾತ್ರ ಮಾಡುವುದು (ರಾಗ), ತನಗೆ ಇಷ್ಟವಿಲ್ಲದ, ಕಷ್ಟವಾದ ಅಥವಾ ಅನಿಷ್ಟವಾದ
ಕೆಲಸವನ್ನು ತಿರಸ್ಕರಿಸುವುದು ಅಥವಾ
ಯಾರ ಮೇಲೋ ಇರುವ ಸಿಟ್ಟು, ಅಸೂಯೆ, ಮತ್ತು ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾಡುವ ಕೆಲಸ (ದ್ವೇಷ). ಪರಿಸ್ಥಿತಿಗೆ ತಕ್ಕಂತೆ ಎದುರಾಗುವ
ಕರ್ತವ್ಯವನ್ನು ಯಾವುದೇ ರಾಗ (ಮೋಹ) ಅಥವಾ ದ್ವೇಷವಿಲ್ಲದೆ ಸಮಚಿತ್ತದಿಂದ ಮಾಡುವುದೇ ಸಾತ್ತ್ವಿಕತೆ.
ಸಾತ್ತ್ವಿಕ ಕರ್ಮವು ರಾಗ ದ್ವೇಷ ಎಂಬ ಎರಡು ವಿಕಾರಗಳಿಂದ ಮುಕ್ತವಾಗಿರುತ್ತದೆ. ಕರ್ತವ್ಯದ ದೃಷ್ಟಿಯಿಂದ ಎಲ್ಲವನ್ನೂ
ಸಮಾನವಾಗಿ ಕಂಡು ಅದನ್ನು ಕೇವಲ "ಮಾಡಬೇಕಾದ ಧರ್ಮ" ಎಂಬ ಭಾವದಿಂದ ಮಾಡಲಾಗುತ್ತದೆ.
ಅಫಲಪ್ರೇಪ್ಸುನಾ (ಫಲಾಪೇಕ್ಷೆ ಇಲ್ಲದಿರುವುದು):
ಇದು ಭಗವದ್ಗೀತೆಯ ಮುಖ್ಯ ಸಿದ್ಧಾಂತವಾದ 'ನಿಷ್ಕಾಮ ಕರ್ಮ'ವನ್ನು
ಜ್ಞಾಪಿಸುತ್ತದೆ. ಕೆಲಸದ ಫಲಿತಾಂಶದ ಮೇಲೆ ಕಣ್ಣಿಟ್ಟು
ಕೆಲಸ ಮಾಡಬಾರದು. ಫಲದ ಮೇಲಿನ ಆಸೆಯನ್ನು ಬಿಟ್ಟು ಕೇವಲ ಕರ್ತವ್ಯ ಬುದ್ಧಿಯಿಂದ ಕೆಲಸ
ಮಾಡಿದಾಗ ಮಾತ್ರ ಮನಸ್ಸಿಗೆ ನಿಜವಾದ ಶಾಂತಿ ಸಿಗುತ್ತದೆ ಮತ್ತು ಆ ಕರ್ಮವು ಸಾತ್ತ್ವಿಕವಾಗುತ್ತದೆ.
ಫಲದ ಮೇಲಿನ ಹಕ್ಕನ್ನು
ತ್ಯಜಿಸುವುದು ಎಂದರೆ ಬೇಜವಾಬ್ದಾರಿತನವಲ್ಲ. ಫಲಿತಾಂಶ ಏನೇ ಬರಲಿ ಜಯ ಅಥವಾ ಅಪಜಯ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ.
ಒಂದು ಕಾರ್ಯವು ಸಾತ್ತ್ವಿಕವಾಗಬೇಕಾದರೆ ಅದು ಕೇವಲ ಒಳ್ಳೆಯ ಕೆಲಸವಾಗಿದ್ದರೆ
ಸಾಲದು, ಅದನ್ನು ಮಾಡುವವನ ಮಾನಸಿಕ ಸ್ಥಿತಿಯೂ ಮುಖ್ಯ ಮತ್ತು ಅವನ ಮನಸ್ಸು ಶುದ್ಧವಾಗಿರಬೇಕು. ಸಾತ್ತ್ವಿಕ
ಕರ್ಮ ಮಾಡುವವನು ತನಗಾಗಿ ಏನನ್ನೂ ಬಯಸುವುದಿಲ್ಲ. "ಇದು ನನ್ನ ಕರ್ತವ್ಯ, ಇದನ್ನು ನಾನು ಮಾಡಲೇಬೇಕು"
ಎಂಬ ಜವಾಬ್ದಾರಿಯಿಂದ ಕೆಲಸ ಮಾಡುತ್ತಾನೆ. ಆ ಕೆಲಸವನ್ನು ಮಾಡುವಾಗ ಅವನಿಗೆ ಯಾವುದೇ ಅಹಂಕಾರವಾಗಲಿ,
ಹೊಗಳಿಕೆ-ತೆಗಳಿಕೆಯ ಕಡೆ ಗಮನವಾಗಲಿ ಇರುವುದಿಲ್ಲ. ಅವನು ಯಾರ ಮೇಲಿನ ದ್ವೇಷದಿಂದಾಗಲಿ ಅಥವಾ ವೈಯಕ್ತಿಕ
ಲಾಭದ ಮೋಹದಿಂದಾಗಲಿ ಕರ್ಮದಲ್ಲಿ ತೊಡಗುವುದಿಲ್ಲ. ಕೇವಲ ಕರ್ತವ್ಯ ಪ್ರಜ್ಞೆಯಿಂದ, ಯಾವುದೇ ಪ್ರತಿಫಲಾಪೇಕ್ಷೆ
ಇಲ್ಲದೆ, ಯಾರ ಮೇಲೆಯೂ ದ್ವೇಷ ಸಾಧಿಸದೆ ಅಥವಾ ಯಾರಿಗೂ ಪ್ರದರ್ಶನ ಮಾಡದೆ ಮಾಡುವ ಕೆಲಸವೇ ಸಾತ್ತ್ವಿಕ
ಕರ್ಮ. ಇದು ಮನುಷ್ಯನನ್ನು ಕರ್ಮದ ಬಂಧನದಿಂದ ಮುಕ್ತಗೊಳಿಸಿ ಆಧ್ಯಾತ್ಮಿಕ ಉನ್ನತಿಗೆ ದಾರಿ ಮಾಡಿಕೊಡುತ್ತದೆ.
यत्तु कामेप्सुना कर्म साहङ्कारेण वा पुनः ।
क्रियते बहुलायासं तद्राजसमुदाहृतम् ॥ १८-२४
ಯತ್ತು ಕಾಮೇಪ್ಸುನಾ ಕರ್ಮ ಸಾಹಙ್ಕಾರೇಣ ವಾ ಪುನಃ
ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ 18.24
ಕ್ರಿಯತೇ ಬಹುಲ-ಆಯಾಸಮ್ ತತ್ ರಾಜಸಮ್ ಉದಾಹೃತಮ್
ಆದರೆ, ಯಾವ ಕರ್ಮವು ಭೋಗ-ಭಾಗ್ಯಗಳ ಆಸೆಯಿಂದ ಅಥವಾ ಸ್ವಾರ್ಥದ ಪ್ರತಿಫಲಾಪೇಕ್ಷೆಯಿಂದ,
"ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ" ಎಂಬ ಅಹಂಕಾರದಿಂದ ಮತ್ತು ಅತಿಯಾದ ದೈಹಿಕ ಹಾಗೂ
ಮಾನಸಿಕ ಆಯಾಸ ಶ್ರಮದಿಂದ ಮಾಡಲ್ಪಡುತ್ತದೆಯೋ, ಅಂತಹ ಕರ್ಮವನ್ನು ರಾಜಸಿಕ ಕರ್ಮ ಎಂದು ಕರೆಯಲಾಗುತ್ತದೆ.
ಈ ಶ್ಲೋಕವು ರಾಜಸಿಕ ಕರ್ಮದ ಮೂರು ಪ್ರಮುಖ ಲಕ್ಷಣಗಳನ್ನು
ತಿಳಿಸುತ್ತದೆ:
ಕಾಮೇಪ್ಸುನಾ (ಫಲಾಪೇಕ್ಷೆ/ಸ್ವಾರ್ಥ):
ರಾಜಸ ಕರ್ಮದ ಹಿಂದೆ
ತೀವ್ರವಾದ ಸ್ವಾರ್ಥ ಅಡಗಿರುತ್ತದೆ. ರಾಜಸಿಕ ಪ್ರವೃತ್ತಿಯ ವ್ಯಕ್ತಿಯು ಯಾವುದೇ ಕೆಲಸವನ್ನು ನಿಸ್ವಾರ್ಥವಾಗಿ
ಮಾಡುವುದಿಲ್ಲ. ರಾಜಸಿಕ ಕರ್ಮ ಮಾಡುವವನಿಗೆ ಕರ್ತವ್ಯಕ್ಕಿಂತ ಹೆಚ್ಚಾಗಿ ಆ ಕೆಲಸದಿಂದ ಸಿಗುವ ಲಾಭವೇ
ಮುಖ್ಯವಾಗಿರುತ್ತದೆ. ತನಗೆ ಇದರಿಂದ ಏನು ಸಿಗುತ್ತದೆ? ಎಷ್ಟು ದುಡ್ಡು ಬರುತ್ತದೆ? ಎಷ್ಟು ಹೆಸರು
ಬರುತ್ತದೆ? ಎಂಬುದೇ ಅವನ ಮೊದಲ ಆಲೋಚನೆ ಆಗಿರುತ್ತದೆ. ಕೀರ್ತಿ, ಹಣ, ಅಧಿಕಾರ, ಸಮಾಜದಲ್ಲಿ ಗೌರವದಂತಹ
ಲೌಕಿಕ ಬಯಕೆಗಳೇ ಇವರನ್ನು ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ, ಅಥವಾ ಸ್ವರ್ಗದ ಭೋಗಗಳಿಗಾಗಿ ಮಾತ್ರ
ಅವನು ಕರ್ಮದಲ್ಲಿ ತೊಡಗುತ್ತಾನೆ. ಮತ್ತು ಫಲ ಸಿಗದಿದ್ದರೆ ತೀವ್ರ ನಿರಾಶೆ ಹೊಂದುತ್ತಾರೆ.
ಸಾಹಂಕಾರೇಣ (ಅಹಂಕಾರದಿಂದ ಕೂಡಿರುವುದು):
ಇಂತಹ ವ್ಯಕ್ತಿಗಳಲ್ಲಿ
ತಾವೇ ಎಲ್ಲದಕ್ಕೂ ಕರ್ತೃ ಎಂಬ ಭಾವನೆ, ಮತ್ತು "ನನ್ನನ್ನು ಬಿಟ್ಟರೆ ಈ ಕೆಲಸ ಮಾಡಲು ಯಾರಿಂದಲೂ
ಸಾಧ್ಯವಿಲ್ಲ, ನಾನೇ ಶ್ರೇಷ್ಠ" ಎಂಬ ಅಹಂಭಾವ ತುಂಬಿರುತ್ತದೆ, "ಇದು ನನ್ನಿಂದಲೇ ಸಾಧ್ಯವಾಯಿತು"
ಎಂಬ ಹೆಮ್ಮೆ ಎದ್ದು ಕಾಣುತ್ತದೆ. ಕೆಲಸ ಯಶಸ್ವಿಯಾದರೆ ತಮ್ಮನ್ನು ತಾವೇ ಅತಿಯಾಗಿ ಹೊಗಳಿಕೊಳ್ಳುತ್ತಾರೆ,
ವಿಫಲವಾದರೆ ಬೇರೆಯವರನ್ನು ದೂಷಿಸುತ್ತಾರೆ ಮತ್ತು ಇತರರನ್ನು ಕೀಳಾಗಿ ಕಾಣುತ್ತಾರೆ. "ನಾನು"
ಮತ್ತು "ನನ್ನದು" ಎಂಬ ಭಾವನೆ ಇವರಲ್ಲಿ ತೀವ್ರವಾಗಿರುತ್ತದೆ. ಇವರು ಸಮಾಜದಲ್ಲಿ ತಮ್ಮ
ಪ್ರಭಾವ ಮತ್ತು ಅಂತಸ್ತನ್ನು ತೋರಿಸಿಕೊಳ್ಳಲು ಧರ್ಮದ ಕೆಲಸಗಳನ್ನು ಕೂಡ ಪ್ರದರ್ಶನಕ್ಕಾಗಿ ಮಾಡುತ್ತಾರೆ.
ಬಹುಲಾಯಾಸಮ್ (ಅತಿಯಾದ ಆಯಾಸ/ಶ್ರಮ):
ರಾಜಸಿಕ ಕರ್ಮವು
ತೀವ್ರವಾದ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಇವರ ಕೆಲಸದಲ್ಲಿ ಫಲಿತಾಂಶದ ಬಗ್ಗೆ ಅತಿಯಾದ ಆಸೆ,
ಅಹಂಕಾರ ಮತ್ತು ಆತಂಕ ಇರುವುದರಿಂದ, ಇವರು ತಮಗೇ ತಿಳಿಯದಂತೆ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ.
ಫಲ ಸಿಗದಿದ್ದರೆ ಏನಾಗಬಹುದು ಎಂಬ ಭಯ ಮತ್ತು ಸಿಕ್ಕರೆ ಉಂಟಾಗುವ ಅತಿಯಾದ ಕಾತರ — ಇವೆರಡರ ನಡುವೆ
ಸಿಲುಕಿ ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಒತ್ತಡಕ್ಕೊಳಗಾಗಿ ಅತಿಯಾಗಿ ದಣಿಯುತ್ತಾರೆ.
ಹಗಲಿರುಳು ಕಷ್ಟಪಟ್ಟರೂ ಹಾಗೂ ಎಷ್ಟೋ ಯಶಸ್ಸು ಗಳಿಸಿದರೂ ಮನಸ್ಸಿನಲ್ಲಿ ಸದಾ ಆತಂಕ, ಭಯ ಮತ್ತು ಅಶಾಂತಿ
ಮನೆಮಾಡಿರುತ್ತದೆ.
ಈ ಶ್ಲೋಕದ ಮುಖ್ಯ ಭಾವವೇನೆಂದರೆ, ಮನುಷ್ಯನು ಸ್ವಾರ್ಥ
ಮತ್ತು ತೋರ್ಪಡಿಕೆಗಾಗಿ ಮಾಡುವ ಕೆಲಸಗಳು ರಾಜಸ ಗುಣಕ್ಕೆ ಸೇರುತ್ತವೆ. ಇಲ್ಲಿ ಕರ್ತವ್ಯದ ಭಾವನೆಗಿಂತ
"ನಾನು ಮಾಡುತ್ತಿದ್ದೇನೆ" ಎಂಬ ಅಹಂಕಾರ ಮತ್ತು "ನನಗೆ ಇದರ ಲಾಭ ಸಿಗಬೇಕು"
ಎಂಬ ಲೋಭ ಹೆಚ್ಚಾಗಿರುತ್ತದೆ. ಅಂತಹ ಕೆಲಸಗಳು ಮನಸ್ಸಿಗೆ ನೆಮ್ಮದಿ ಕೊಡುವ ಬದಲಿಗೆ ತೀವ್ರ ಉದ್ವೇಗ
ಮತ್ತು ದಣಿವಿಗೆ ಕಾರಣವಾಗುತ್ತವೆ.
ರಾಜಸಿಕ ಕರ್ಮದ ಹಿಂದೆ
ಯಾವಾಗಲೂ ತೀವ್ರವಾದ ಸ್ವಾರ್ಥ, ಭೌತಿಕ ಲಾಭದ ಹಂಬಲ, ಹೆಸರು, ಕೀರ್ತಿ ಮತ್ತು ಪ್ರದರ್ಶನ ಬುದ್ಧಿ ಇರುತ್ತದೆ.
ಇಂತಹ ಕೆಲಸವನ್ನು ಮಾಡುವ ವ್ಯಕ್ತಿಯು "ನನಗೆ ಇದರ ಪ್ರತಿಯಾಗಿ ಏನು ಸಿಗುತ್ತದೆ?" ಎಂಬ
ಫಲದ ಆಸೆಯಿಂದಲೇ ಕೆಲಸಕ್ಕೆ ಕೈಹಾಕುತ್ತಾನೆ. ಅಲ್ಲದೆ, ಅವನಲ್ಲಿ "ನಾನೇ ಈ ಕೆಲಸವನ್ನು ಸಾಧಿಸುತ್ತಿದ್ದೇನೆ,
ನನಗಿಂತ ಶ್ರೇಷ್ಠರು ಯಾರೂ ಇಲ್ಲ" ಎಂಬ ಅಹಂಕಾರ ತುಂಬಿರುತ್ತದೆ. ಫಲದ ಮೇಲಿನ ಅತಿಯಾದ ವ್ಯಾಮೋಹ
ಮತ್ತು ಅಹಂಕಾರದ ಕಾರಣದಿಂದಾಗಿ, ಆ ಕೆಲಸವು ಅವನಿಗೆ ಅತ್ಯಂತ ಕಷ್ಟಕರವಾಗಿ ಪರಿಣಮಿಸುತ್ತದೆ. ಆ ಕೆಲಸದ
ಯಶಸ್ಸು ಅಥವಾ ಅಪಜಯದ ಚಿಂತೆಯಲ್ಲೇ ಅವನು ಅಪಾರವಾದ ಮಾನಸಿಕ ಮತ್ತು ದೈಹಿಕ ಆಯಾಸಕ್ಕೆ ಒಳಗಾಗುತ್ತಾನೆ.
अनुबन्धं क्षयं हिंसाम् अनपेक्ष्य च पौरुषम् ।
मोहादारभ्यते कर्म यत्तत्तामसमुच्यते ॥ १८-२५
ಅನುಬನ್ಧಂ ಕ್ಷಯಂ ಹಿಂಸಾಮ್ ಅನಪೇಕ್ಷ್ಯ ಚ ಪೌರುಷಮ್
ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ 18.25
ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ
ಯಾವ ಕರ್ಮವನ್ನು ಭವಿಷ್ಯದಲ್ಲಿ ಆಗುವ ಪರಿಣಾಮ, ಅದರಿಂದಾಗುವ ಸಮಯ, ಧನ-ಧಾನ್ಯ ಮತ್ತು
ಇತರ ಸಂಪತ್ತು ಅಥವಾ ಶಕ್ತಿಯ ನಷ್ಟ,
ಇತರರಿಗೆ ಉಂಟಾಗುವ ಹಿಂಸೆ
ಮತ್ತು ಆ ಕೆಲಸವನ್ನು ಮಾಡಲು ತನಗಿರುವ ಸಾಮರ್ಥ್ಯ - ಇವು ಯಾವುದನ್ನೂ
ಯೋಚಿಸದೆ, ಕೇವಲ ಅಜ್ಞಾನ, ಭ್ರಮೆ, ಭ್ರಾಂತಿ
ಹಾಗೂ ಮೋಹದಿಂದ ಪ್ರಾರಂಭಿಸಲಾಗುತ್ತದೆಯೋ,
ಅಂತಹ ಕರ್ಮವನ್ನು ತಾಮಸಿಕ
ಕರ್ಮ ಎಂದು ಕರೆಯಲಾಗುತ್ತದೆ.
ಈ ಶ್ಲೋಕದಲ್ಲಿ ತಾಮಸಿಕ ಕರ್ಮದ ಲಕ್ಷಣಗಳ ವಿವರಣೆ ಇದೆ.
1. ಅನುಬಂಧಂ ಅನಪೇಕ್ಷ್ಯ (ಪರಿಣಾಮಗಳನ್ನು ಯೋಚಿಸದಿರುವುದು):
ಈ ಕೆಲಸವನ್ನು ಮಾಡುವುದರಿಂದ ಮುಂದೆ ಏನಾಗಬಹುದು? ಕಾನೂನು ಅಥವಾ
ಧರ್ಮದ ಪ್ರಕಾರ ಇದು ಸರಿಯೇ? ಸಮಾಜಕ್ಕೆ ಇದರಿಂದ ಒಳ್ಳೆಯದಾಗುತ್ತದೆಯೇ
ಅಥವಾ ಕೆಟ್ಟದಾಗುತ್ತದೆಯೇ? ಎಂಬ ಯಾವುದೇ ದೂರದೃಷ್ಟಿ ಇಲ್ಲದಿರುವುದು.
2. ಕ್ಷಯಂ ಅನಪೇಕ್ಷ್ಯ (ಹಾನಿ/ನಷ್ಟವನ್ನು ಲೆಕ್ಕಿಸದಿರುವುದು):
ಈ ಕಾರ್ಯದಿಂದ ತನ್ನ ಹಣ, ಆರೋಗ್ಯ, ಸಮಯ ಮತ್ತು ಶಕ್ತಿ
ಎಷ್ಟು ವ್ಯರ್ಥವಾಗ ಬಹುದು ಎಂಬುದರ ಅರಿವು ಇಲ್ಲದಿರುವುದು.
3. ಹಿಂಸಾಮ್
ಅನಪೇಕ್ಷ್ಯ (ಹಿಂಸೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದು):
ತಮ್ಮ ಸ್ವಾರ್ಥ, ಸಿಟ್ಟು ಅಥವಾ ಮೋಜಿಗಾಗಿ ಮಾಡುವ
ಕೆಲಸದಿಂದ ಇತರ ಪ್ರಾಣಿಗಳಿಗೆ, ಮನುಷ್ಯರಿಗೆ, ಸಮಾಜಕ್ಕೆ ಅಥವಾ ಪರಿಸರಕ್ಕೆ ಎಷ್ಟು ದ್ರೋಹವಾಗುತ್ತದೆ,
ಎಷ್ಟು ನೋವು ಉಂಟಾಗುತ್ತದೆ ಎಂಬುದರ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲದಿರುವುದು ಮತ್ತು ಸಂಪೂರ್ಣವಾಗಿ
ನಿರ್ಲಕ್ಷಿಸುವುದು.
4. ಪೌರುಷಮ್ ಅನಪೇಕ್ಷ್ಯ (ಸ್ವ ಸಾಮರ್ಥ್ಯದ ಅರಿವಿಲ್ಲದಿರುವುದು):
ಒಂದು ಕೆಲಸವನ್ನು ಮಾಡಲು ತನಗೆ ಅರ್ಹತೆ ಇದೆಯೇ, ಅದನ್ನು ಮುಗಿಸುವ
ತಾಕತ್ತು ತನ್ನಲ್ಲಿದೆಯೇ ಎಂದು ಯೋಚಿಸದೆ, ಕೇವಲ ಹಠ, ದುರಹಂಕಾರ, ಅಥವಾ ಭ್ರಮೆಯಿಂದ ಅಸಾಧ್ಯವಾದ ದೊಡ್ಡ ಕೆಲಸಗಳಿಗೆ ಕೈ ಹಾಕಿ ಕೊನೆಗೆ ವಿಫಲರಾಗುವುದು.
5. ಮೋಹಾತ್
ಆರಭ್ಯತೇ (ಅಜ್ಞಾನದಿಂದ ಆರಂಭಿಸುವುದು):
ಎಲ್ಲಾ ಪ್ರಕ್ರಿಯೆಗಳ ಹಿಂದೆ ಕೇವಲ ಭ್ರಮೆ, ತಪ್ಪು
ತಿಳುವಳಿಕೆ, ಮೂರ್ಖತನ ಮತ್ತು ವಿವೇಕಹೀನತೆ ಮಾತ್ರ ಇದ್ದು ತಪ್ಪು ದಾರಿಯನ್ನೇ ಸರಿ ಎಂದು ನಂಬಿ ಕುರುಡಾಗಿ
ಮುನ್ನುಗ್ಗಿ ಪ್ರಾರಂಭಿಸುವ ಕೆಲಸಗಳು.
ತಾಮಸಿಕ ಕರ್ಮದ ಹಿಂದೆ ಯಾವುದೇ ದೂರದೃಷ್ಟಿ, ವಿವೇಕ
ಅಥವಾ ಧರ್ಮದ ಆಲೋಚನೆ ಇರುವುದಿಲ್ಲ. ತಾಮಸಿಕ ಕರ್ಮ ಎಂದರೆ ವಿವೇಕವಿಲ್ಲದೆ ಮತ್ತು ಜವಾಬ್ದಾರಿಯಿಲ್ಲದೆ
ಕೇವಲ ಕುರುಡುತನ, ಹಠ, ಮೂರ್ಖತನ ಅಥವಾ ತಪ್ಪು ತಿಳುವಳಿಕೆಯಿಂದ ಮಾಡುವ ಕೆಲಸಗಳು. ಇಂತಹ ಕೆಲಸ ಮಾಡುವ
ವ್ಯಕ್ತಿಗೆ ದೂರದೃಷ್ಟಿ ಇರುವುದಿಲ್ಲ. ಈ ಗುಣವಿರುವ ವ್ಯಕ್ತಿಯು ಕೇವಲ ತತ್ಕಾಲದ ಸೋಮಾರಿತನ, ಆಲಸ್ಯ,
ಮೌಢ್ಯ ಅಥವಾ ಭ್ರಮೆಗೆ ಒಳಗಾಗಿರುತ್ತಾನೆ. ತಾನು ಮಾಡುತ್ತಿರುವ ಕೆಲಸದಿಂದ ಮುಂದೆ ತನಗೆ ಅಥವಾ ಸಮಾಜಕ್ಕೆ
ಏನು ನಷ್ಟವಾಗಬಹುದು? ಇದರಿಂದ ಯಾರೆಲ್ಲ ಕಷ್ಟ ಅನುಭವಿಸಬಹುದು? ಈ ಕೆಲಸ ಮಾಡಲು ತನ್ನ ಹತ್ತಿರ ಸಾಕಷ್ಟು
ಶಕ್ತಿ ಸಾಮರ್ಥ್ಯ ಇದೆಯೇ ಇಲ್ಲವೇ? ಎಂಬ ಕನಿಷ್ಠ ಜ್ಞಾನವೂ ಇಲ್ಲದೆ, ಮತ್ತು ಯಾವುದೇ ವಿವೇಚನೆ ಅಥವಾ
ಕಾಳಜಿಯೂ ಇಲ್ಲದೆ ಮಾಡುವ ಮೂರ್ಖತನದ ಕೆಲಸವೇ ತಾಮಸಿಕ ಕರ್ಮ. ಇದು ಮನುಷ್ಯನನ್ನು ಕತ್ತಲೆ ಮತ್ತು ಅವನತಿಯ
ಕಡೆಗೆ ತಳ್ಳುತ್ತದೆ. ಇಂತಹ ಕೆಲಸಕ್ಕೆ ಕೈಹಾಕಿದವರು ಕೊನೆಗೆ ತಾನೂ ನಾಶವಾಗಿ ಇತರರ ನಾಶಕ್ಕೂ ಕಾರಣರಾಗುತ್ತಾರೆ.
ಭ್ರಮೆ (Illusion) = ಕಣ್ಣಮುಂದೆ ಇರುವ ಒಂದು ವಸ್ತು ಅಥವಾ ಪ್ರಚೋದನೆಯನ್ನು ತಪ್ಪಾಗಿ
ಗ್ರಹಿಸುವುದು. ಇದು ಕಣ್ಣಿನ ದೃಷ್ಟಿ ದೋಷ, ಬೆಳಕಿನ ವ್ಯತ್ಯಾಸ, ಅಜ್ಞಾನ ಅಥವಾ ತಪ್ಪು ಕಲ್ಪನೆಯಿಂದ
ಉಂಟಾಗ ಬಹುದು. ಉದಾಹರಣೆಗೆ: ಕತ್ತಲೆಯಲ್ಲಿ ಬಿದ್ದಿರುವ ಹಗ್ಗವನ್ನು ನೋಡಿ ಹಾವು
ಎಂದು ಹೆದರುವುದು. ಆದರೆ
ಇಂತ ಭ್ರಮೆ,
ಹತ್ತಿರ ಹೋಗಿ ಸರಿಯಾಗಿ ನೋಡಿದ ತಕ್ಷಣ ಅಥವಾ ಸತ್ಯ ತಿಳಿದ ತಕ್ಷಣ ದೂರವಾಗುತ್ತದೆ.
ಭ್ರಾಂತಿ (Hallucination) = ಕಣ್ಣಮುಂದೆ ಯಾವುದೇ ವಸ್ತು, ವ್ಯಕ್ತಿ ಅಥವಾ ಪ್ರಚೋದನೆ
ಇಲ್ಲದಿದ್ದರೂ, ಅಲ್ಲಿ ಏನೋ ಇದೆ ಎಂದು ಭಾಸವಾಗುವುದು. ಇದು ಯಾವುದೇ ಬಾಹ್ಯ ಪ್ರಚೋದನೆ ಇಲ್ಲದೆ, ಕೇವಲ
ಮನಸ್ಸಿನ ಒಳಗಿನಿಂದ ಸೃಷ್ಟಿಯಾಗುವ ಅನುಭವ. ಇದು ಮಾನಸಿಕ ಒತ್ತಡ, ನಿದ್ರಾಹೀನತೆ ಅಥವಾ ಮಾನಸಿಕ ಅನಾರೋಗ್ಯದಿಂದ
ಉಂಟಾಗ ಬಹುದು. ಇದು ಕೇವಲ ಕಣ್ಣಿಗೆ ಮಾತ್ರವಲ್ಲದೆ ಕಿವಿ, ಮೂಗು ಅಥವಾ ಸ್ಪರ್ಶದ ಮೂಲಕವೂ ಉಂಟಾಗಬಹುದು.
ಉದಾಹರಣೆಗೆ: ಮೈಮೇಲೆ ಏನೋ ಹರಿದಾಡಿದಂತೆ ಅನಿಸುವುದು. ಕೋಣೆಯಲ್ಲಿ ಯಾರೂ ಇಲ್ಲದಿದ್ದರೂ ಯಾರೋ ಮಾತನಾಡಿದ ಸದ್ದು ಕೇಳಿಸುವುದು. ಶೂನ್ಯ
ಪ್ರದೇಶದಲ್ಲಿ ವಿಚಿತ್ರ ಆಕೃತಿಗಳು
ಅಥವಾ ದೆವ್ವಗಳು ಕಂಡಂತೆ ಆಗುವುದು.
ಮೋಹ (Infatuation) = ಅವಿದ್ಯಾ ಅಥವಾ ಅಜ್ಞಾನ. ಸತ್ಯವನ್ನು ತಿಳಿಯದೆ ಆಗುವ ಅಜ್ಞಾನ, ಗೊಂದಲ ಅಥವಾ ದಿಗ್ಭ್ರಾಂತಿ. ಭ್ರಮೆ, ವ್ಯಾಮೋಹ,
ಅಥವಾ ಅತಿಯಾದ ಆಕರ್ಷಣೆ.
ಮೌಢ್ಯ (Stupidity)= ಅಜ್ಞಾನ, ಮೂರ್ಖತನ, ಅಥವಾ ಯಾವುದೇ ಸರಿಯಾದ ವೈಜ್ಞಾನಿಕ ಅಥವಾ
ತಾರ್ಕಿಕ ಆಧಾರವಿಲ್ಲದೆ ಯಾವುದನ್ನಾದರೂ ಕುರುಡಾಗಿ ನಂಬುವುದು.
18-26
मुक्तसङ्गोऽनहंवादी धृत्युत्साहसमन्वितः ।
सिद्ध्यसिद्ध्योर्निर्विकारः कर्ता सात्त्विक उच्यते ॥ १८-२६
ಮುಕ್ತಸಙ್ಗೋನಹಂವಾದೀ ಧೃತ್ಯುತ್ಸಾಹಸಮನ್ವಿತಃ
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ 18.26
मुक्तसङ्गोऽनहंवादी धृत्युत्साहसमन्वितः ।
सिद्ध्यसिद्ध्योर्निर्विकारः कर्ता सात्त्विक उच्यते ॥ १८-२६
ಮುಕ್ತಸಙ್ಗೋನಹಂವಾದೀ ಧೃತ್ಯುತ್ಸಾಹಸಮನ್ವಿತಃ
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ 18.26
ಮುಕ್ತ-ಸಂಗಃ ಅನಹಂ-ವಾದೀ ಧೃತಿ-ಉತ್ಸಾಹ-ಸಮನ್ವಿತಃ
ಸಿದ್ಧಿ-ಅಸಿದ್ಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ
ಮುಕ್ತಸಂಗಃ = ಕರ್ಮದ ಫಲದಲ್ಲಿ ಆಸಕ್ತಿ ಇಲ್ಲದವನು, ಅನಹಮ್-ವಾದೀ = ಅಹಂಕಾರದ ಮಾತುಗಳನ್ನಾಡದವನು (ನಾನೇ ಮಾಡಿದೆ ಎಂಬ ಹೆಮ್ಮೆಯಿಲ್ಲದವನು), ಧೃತಿ-ಉತ್ಸಾಹ-ಸಮನ್ವಿತಃ = ಧೃತಿ (ಧೈರ್ಯ/ತಾಳ್ಮೆ) ಮತ್ತು ಉತ್ಸಾಹಗಳಿಂದ ಕೂಡಿದವನು
ಸಿದ್ಧಿ-ಅಸಿದ್ಧ್ಯೋಃ = ಯಶಸ್ಸು ಮತ್ತು ವೈಫಲ್ಯಗಳಲ್ಲಿ (ಜಯ-ಅಪಜಯಗಳಲ್ಲಿ), ನಿರ್ವಿಕಾರಃ = ಮನಸ್ಸಿನ ವಿಕಾರಗಳಿಗೆ ಒಳಗಾಗದವನು (ಸಮಚಿತ್ತನಾಗಿರುವವನು), ಕರ್ತಾ = ಕೆಲಸ ಮಾಡುವವನು (ಕರ್ತೃ), ಸಾತ್ತ್ವಿಕಃ = ಸಾತ್ತ್ವಿಕ (ಕರ್ತೃ) ಎಂದು, ಉಚ್ಯತೇ = ಹೇಳಲಾಗುತ್ತದೆ
ಯಾರು ಕರ್ಮದ ಫಲದ ಮೇಲಿನ ಆಸಕ್ತಿಯನ್ನು ತೊರೆದಿದ್ದಾನೋ, ಯಾರಿಗೆ "ನಾನೇ
ಈ ಕೆಲಸವನ್ನು ಮಾಡಿದೆ" ಎಂಬ ಅಹಂಕಾರವಿಲ್ಲವೋ, ಯಾರು ದೃಢವಾದ ತಾಳ್ಮೆ ಧೈರ್ಯ ಮತ್ತು ಸದಾ ಉಕ್ಕಿ
ಹರಿಯುವ ಉತ್ಸಾಹದಿಂದ ಕೂಡಿದ್ದಾನೋ ಹಾಗೂ ಕೆಲಸದ ಯಶಸ್ಸು ಅಥವಾ ಅಪಜಯಗಳಲ್ಲಿ ವಿಚಲಿತನಾಗದೆ ಸಮಚಿತ್ತ
ಕಾಯ್ದುಕೊಳ್ಳುತ್ತಾನೋ, ಅಂತಹ ವ್ಯಕ್ತಿಯನ್ನು 'ಸಾತ್ತ್ವಿಕ ಕರ್ತೃ' ಎನ್ನಲಾಗುತ್ತದೆ.
ಒಬ್ಬ ಸಾತ್ತ್ವಿಕ ಗುಣವುಳ್ಳ ಕೆಲಸಗಾರ (ಸಾತ್ತ್ವಿಕ
ಕರ್ತೃ) ಅಂದರೆ ಆದರ್ಶ ವ್ಯಕ್ತಿ ಅಥವಾ ಪರಿಪೂರ್ಣವಾಗಿ ಕೆಲಸ ಮಾಡುವವನ ಮಾನಸಿಕ
ಸ್ಥಿತಿ ಹೇಗಿರಬೇಕು ಎಂಬುದನ್ನು ಈ ಶ್ಲೋಕವು ವಿವರಿಸುತ್ತದೆ.
ಸಾತ್ತ್ವಿಕ ಕರ್ತೃವಿನಲ್ಲಿ ಐದು ಪ್ರಮುಖ ಗುಣಗಳಿವೆ:
1. ಮುಕ್ತಸಂಗಃ (ಬಾಂಧವ್ಯರಹಿತ):
ಇದರರ್ಥ ಕೆಲಸ ಮಾಡದೆ ಇರುವುದು ಅಥವಾ ಕೆಲಸದ ಮೇಲೆ ನಿರ್ಲಕ್ಷ್ಯ
ಹೊಂದುವುದು ಅಂತ ಅಲ್ಲ. ಸಾತ್ತ್ವಿಕ ಕರ್ತೃವು ತನಗೊಪ್ಪಿಸಿದ ಕೆಲಸವನ್ನು ಕೇವಲ ಕರ್ತವ್ಯ ಪ್ರಜ್ಞೆಯಿಂದ,
ಅತ್ಯಂತ ಜವಾಬ್ದಾರಿಯಿಂದ ಮತ್ತು ಶ್ರದ್ಧೆಯಿಂದ ಮಾಡುತ್ತಾನೆ. ಆದರೆ ಆ ಕೆಲಸದಿಂದ ತನಗೇನು ಲಾಭ? ಎಂಬ ಫಲದ ಆಸಕ್ತಿಗೆ ಮತ್ತು ಆಸೆ ಅವನಿಗಿರುವುದಿಲ್ಲ.
2. ಅನಹಂವಾದೀ (ಅಹಂಕಾರವಿಲ್ಲದವನು):
"ನಾನು ಈ ಕೆಲಸವನ್ನು ಅತ್ಯಂತ ಶ್ರೇಷ್ಠವಾಗಿ
ಮಾಡುತ್ತಿದ್ದೇನೆ" ಎಂಬ ಅಹಂಕಾರದ ಪ್ರದರ್ಶನ, "ಈ ಯಶಸ್ಸಿಗೆ
ನಾನೇ ಕಾರಣ" ಎಂದು ಸಾರುವ ಹವ್ಯಾಸ ಅಥವಾ "ನನ್ನಿಂದಲೇ ಈ ಸಂಸ್ಥೆ ಬೆಳೆಯಿತು" ಎಂದು ಕೊಚ್ಚಿಕೊಳ್ಳುವ ಪ್ರವೃತ್ತಿ ಇಲ್ಲದವರು. ಅಂದರೆ ಇವರು ತಾನು ಮಾಡಿದ ಸಾಧನೆಗಳ ಬಗ್ಗೆ ಅಹಂಕಾರ ಪಡುವುದಿಲ್ಲ.
3. ಧೃತಿ (ಧೈರ್ಯ/ತಾಳ್ಮೆ /ಸ್ಥಿರತೆ):
ಯಾವುದೇ ದೊಡ್ಡ ಕೆಲಸವನ್ನು ಕೈಗೆತ್ತಿಕೊಂಡಾಗ ಅಡ್ಡಿ-ಆತಂಕಗಳು
ಬರುವುದು ಸಹಜ. ಅಂತಹ ಯಾವುದೇ ಕಷ್ಟದ ಸಂದರ್ಭಗಳಲ್ಲೂ ಧೈರ್ಯ ಕಳೆದುಕೊಳ್ಳದೆ, ದೃಢವಾಗಿ ನಿಲ್ಲುವ
ತಾಳ್ಮೆ ಇರುವವರು.
4. ಉತ್ಸಾಹ (ಸದಾ ಹುರುಪು):
ಸಾಮಾನ್ಯ ಜನರು ಸಾಮಾನ್ಯವಾಗಿ ಫಲದ ಆಸೆ ಇಲ್ಲದಿದ್ದರೆ
ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಸಾತ್ತ್ವಿಕ ಕರ್ತೃವಿಗೆ ಫಲದ ಆಸೆ ಇಲ್ಲದಿದ್ದರೂ,
ಕೆಲಸದ ಕಡೆಗೆ ಅಪಾರವಾದ ಉತ್ಸಾಹ
ಇರುತ್ತದೆ. ಅನಾಸಕ್ತಿಯಿಂದ ಕೆಲಸ ಮಾಡುವವನಿಗೆ ಉತ್ಸಾಹ ಇರುವುದಿಲ್ಲ ಎನ್ನುವುದು
ತಪ್ಪು ಕಲ್ಪನೆ. ಸಾತ್ತ್ವಿಕ ಕರ್ತೃವು ಸದಾ "ಉತ್ಸಾಹ ಸಮನ್ವಿತಃ" ಅಂದರೆ ಕೆಲಸದ ಆರಂಭದಿಂದ ಮುಕ್ತಾಯದವರೆಗೂ ಸದಾ ಸಕಾರಾತ್ಮಕ ಶಕ್ತಿ ಮತ್ತು ಉತ್ಸಾಹದಿಂದ
ತುಂಬಿರುತ್ತಾನೆ.
ಸಾಮಾನ್ಯವಾಗಿ ಉತ್ಸಾಹ ಇರುವವರಲ್ಲಿ ತಾಳ್ಮೆ ಇರುವುದಿಲ್ಲ,
ತಾಳ್ಮೆ ಇರುವವರಲ್ಲಿ ಕೆಲಸ ಮಾಡುವ ಬಿರುಸು ಅಥವಾ ಉತ್ಸಾಹ ಇರುವುದಿಲ್ಲ. ಆದರೆ ಸಾತ್ತ್ವಿಕ ಕರ್ತೃವಿನಲ್ಲಿ
ಈ ಎರಡೂ ಗುಣಗಳು ಸಮತೋಲನದಲ್ಲಿ ಇರುತ್ತವೆ. ಅವನು ದೀರ್ಘಕಾಲದವರೆಗೆ ದಣಿವರಿಯದೆ ಉತ್ಸಾಹದಿಂದ ಬಿರುಸಾಗಿ
ಕೆಲಸ ಮಾಡಬಲ್ಲನು.
5. ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ (ಸಮದೃಷ್ಟಿ/ಸಮಚಿತ್ತತೆ):
ಸಾತ್ತ್ವಿಕ ಕರ್ತೃವು ಸೋಲು ಮತ್ತು ಗೆಲುವನ್ನು ಸಮಾನವಾಗಿ
ಸ್ವೀಕರಿಸುತ್ತಾನೆ. ಯಶಸ್ಸು ಸಿಕ್ಕಾಗ ಅತಿಯಾಗಿ ಸಂಭ್ರಮಿಸುವುದಿಲ್ಲ, ಅಪಜಯವಾದಾಗ ಕೋಪಗೊಳ್ಳುವುದಿಲ್ಲ
ಅಥವಾ ಅತಿಯಾಗಿ ನೊಂದುಕೊಳ್ಳುವುದಿಲ್ಲ. ಎರಡು ಸಂದರ್ಭದಲ್ಲೂ ಸ್ಥಿತಪ್ರಜ್ಞನಾಗಿರುತ್ತಾನೆ,
ಎರಡನ್ನೂ ಸಮಾನವಾಗಿ ಸ್ವೀಕರಿಸಿ ನೆಮ್ಮದಿಯಿಂದ ಇರುತ್ತಾನೆ. ಇದು ಯೋಗದ ಪರಮ ಸ್ಥಿತಿಯಾಗಿದೆ.
रागी कर्मफलप्रेप्सुः लुब्धो हिंसात्मकोऽशुचिः ।
हर्षशोकान्वितः कर्ता राजसः परिकीर्तितः ॥ १८-२७
ರಾಗೀ ಕರ್ಮಫಲಪ್ರೇಪ್ಸುಃ ಲುಬ್ಧೋ ಹಿಂಸಾತ್ಮಕೋಶುಚಿಃ
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ 18.27
ಹರ್ಷ-ಶೋಕ-ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ
ಯಾವ ಕರ್ತೃವು ಅತಿಯಾದ ಆಸೆಗಳಿಂದ ತುಂಬಿದ್ದಾನೋ, ಕರ್ಮದ ಫಲವನ್ನು ತೀವ್ರವಾಗಿ ಅಪೇಕ್ಷಿಸುವವನೋ,
ದುರಾಶೆ ಹಾಗೂ ಜಿಪುಣತನ ಹೊಂದಿದವನೋ, ತನ್ನ ಸ್ವಾರ್ಥಕ್ಕಾಗಿ ಇತರರನ್ನು ಹಿಂಸಿಸುವ
ಸ್ವಭಾವದವನೋ, ಅಪವಿತ್ರನೋ
(ಶುಚಿತ್ವವಿಲ್ಲದವನೋ) ಮತ್ತು ಜಯ ಬಂದಾಗ ಅತಿಯಾದ ಸಂತೋಷ ಹಾಗೂ ಅಪಜಯ ಬಂದಾಗ ತೀವ್ರ ದುಃಖಕ್ಕೆ ಒಳಗಾಗುತ್ತಾನೋ,
ಅಂತಹವನನ್ನು 'ರಾಜಸಿಕ ಕರ್ತೃ' ಎಂದು ಕರೆಯಲಾಗುತ್ತದೆ.
ಈ ಶ್ಲೋಕದಲ್ಲಿ ರಾಜಸಿಕ ಕರ್ತೃವಿನ ಆರು ಪ್ರಮುಖ ದೋಷಗಳ ಪಟ್ಟಿ ಇದೆ:
1. ರಾಗೀ (ಅತಿಯಾದ ಮೋಹ):
ರಾಜಸಿಕ ಕರ್ತೃವಿಗೆ ಕೆಲಸದ
ಮೇಲಿರುವ ಶ್ರದ್ಧೆಗಿಂತ, ಕೆಲಸ ಮುಗಿದ ಮೇಲೆ ಸಿಗುವ ಹಣ, ಕೀರ್ತಿ, ಯಶಸ್ಸು ಅಥವಾ ಅಧಿಕಾರ ಮತ್ತು ಭೌತಿಕ ವಸ್ತುಗಳ ಮೇಲೆ ಅತಿಯಾದ ಮೋಹವಿರುತ್ತದೆ.
2. ಕರ್ಮಫಲಪ್ರೇಪ್ಸುಃ (ಫಲಾಪೇಕ್ಷೆ):
ರಾಜಸಿಕ ಕರ್ತೃವು ಕೆಲಸವನ್ನು ಕೇವಲ ಫಲ ಪಡೆಯುವ ಸಾಧನವಾಗಿ
ನೋಡುತ್ತಾನೆ. "ಇದರಿಂದ ನನಗೇನು ಸಿಗುತ್ತದೆ?" ಎಂಬುದಷ್ಟೇ ಆತನ ಮುಖ್ಯ ಪ್ರಶ್ನೆ.
ರಾಜಸಿಕ ಕರ್ತೃವಿನ ಪ್ರಮುಖ ಪ್ರೇರಕ ಶಕ್ತಿಯೇ ಆಸೆ.
3. ಲುಬ್ಧಃ (ದುರಾಶೆ/ಲೋಭಿ/ಜಿಪುಣ):
ರಾಜಸಿಕ ಕರ್ತೃವು ಜಿಪುಣ
ಅಥವಾ ದುರಾಶೆಯುಳ್ಳವನಾಗಿರುತ್ತಾನೆ. ಈತನಿಗೆ ಎಷ್ಟು ಸಂಪತ್ತು
ಸಿಕ್ಕಿದರೂ ತೃಪ್ತಿ ಇರುವುದಿಲ್ಲ. ತನಗೆ ಬಂದ ಲಾಭ, ಸಂಪತ್ತು, ಯಶಸ್ಸು ಅಥವಾ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ; ಮತ್ತು ಸಮಾಜದ ಬಡವರಿಗೆ ಸಹಾಯ ಮಾಡಲು ಇಷ್ಟಪಡುವುದಿಲ್ಲ.
4. ಹಿಂಸಾತ್ಮಕಃ (ಹಿಂಸಾ ಪ್ರವೃತ್ತಿ, ಕ್ರೌರ್ಯ):
ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನೇ ಗೆಲ್ಲಬೇಕು ಎನ್ನುವ
ಹಠದಿಂದ ತನ್ನ ಉನ್ನತಿಗಾಗಿ ಅಥವಾ ತನ್ನ ಗುರಿ ಸಾಧನೆಗಾಗಿ ಇತರರ ಕಾಲೆಳೆಯುವುದು,
ಅವರ ಭವಿಷ್ಯವನ್ನು ಹಾಳು ಮಾಡುವುದು, ಸಹೋದ್ಯೋಗಿಗಳಿಗೆ
ಮಾನಸಿಕ ಹಿಂಸೆ ನೀಡುವುದು ಅಥವಾ ವ್ಯವಹಾರದಲ್ಲಿ ಮೋಸ ಮಾಡುವುದು ರಾಜಸಿಕ ಕರ್ತೃವಿನ ಲಕ್ಷಣ.
5. ಅಶುಚಿಃ (ಅಶುದ್ಧತೆ):
ಇಲ್ಲಿ ಅಶುಚಿ ಎಂದರೆ ಕೇವಲ ಶಾರೀರಿಕ ಅಶುದ್ಧತೆ ಮಾತ್ರ ಅಲ್ಲ. ಮಾನಸಿಕ ಅಶುದ್ಧತೆ ಕೂಡಾ ಅಶುಚಿತ್ವ. ಸುಳ್ಳು ಹೇಳುವುದು, ವಂಚಿಸುವುದು, ಕಪಟತನ, ಸ್ವಾರ್ಥಕ್ಕಾಗಿ ಕಾನೂನು ಬಾಹಿರ ತಪ್ಪು ದಾರಿಯನ್ನು ಆಯ್ದುಕೊಳ್ಳುವುದು, ಅಸೂಯೆ
ಮತ್ತು ಕ್ರೋಧದಿಂದ ಕೂಡಿದ ಕಲುಷಿತ ಮನಸ್ಸೂ ಕೂಡ ಅಶುಚಿತ್ವ
6. ಹರ್ಷಶೋಕಾನ್ವಿತಃ (ಭಾವನೆಗಳ ತೀವ್ರ ಏರಿಳಿತ):
ರಾಜಸಿಕ ಕರ್ತೃವಿಗೆ ಭಾವನಾತ್ಮಕ ಸಮತೋಲನ
ಇರುವುದಿಲ್ಲ. ಕೆಲಸ ಯಶಸ್ವಿಯಾದರೆ ಹರ್ಷ ಮತ್ತು ಹೆಮ್ಮೆಯಿಂದ ಬೇರೆಯವರನ್ನು ಕೀಳಾಗಿ ನೋಡುವುದು.
ಅದೇ ಕೆಲಸದಲ್ಲಿ ಅಡೆತಡೆ ಬಂದರೆ ಧೃತಿಗೆಟ್ಟು, ಕೋಪಗೊಂಡು ಅಥವಾ ಖಿನ್ನನಾಗಿ ದುಃಖಕ್ಕೊಳಗಾಗುವುದು.
ಆತನ ನೆಮ್ಮದಿ ಸದಾ ಹೊರಗಿನ ಪರಿಸ್ಥಿತಿಯ ಮೇಲೆ ಆಧಾರಿತವಾಗಿರುತ್ತದೆ.
ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಣಸಿಗುವ
ಬಹುಪಾಲು ಜನರು ರಾಜಸಿಕ ಕರ್ತೃವಿನ ಲಕ್ಷಣಗಳನ್ನು ಹೊಂದಿರುತ್ತಾರೆ. ಕೇವಲ ಹಣ ಮತ್ತು ಅಧಿಕಾರದ ಬೆನ್ನತ್ತಿ,
ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವ ಜೀವಿಗಳಿಗೆ ಈ ಶ್ಲೋಕ ಒಂದು ಕೈಗನ್ನಡಿಯಂತೆ ಇದೆ. "ಏನಾದರೂ
ಮಾಡಿ ನಾನೇ ನಂಬರ್ ಒನ್ ಆಗಬೇಕು" ಎಂಬ ಮಹತ್ವಾಕಾಂಕ್ಷೆ ಕೂಡಾ ರಾಜಸಿಕ ಗುಣದಿಂದಲೇ ಬರುತ್ತದೆ.
ಇದು ತಾತ್ಕಾಲಿಕವಾಗಿ ಭೌತಿಕ ಯಶಸ್ಸು ಮತ್ತು ಹಣವನ್ನು ತಂದುಕೊಡಬಹುದು, ಆದರೆ ಜೀವನದಲ್ಲಿ ಶಾಂತಿ
ಬೇಕೆಂದರೆ ಮನುಷ್ಯನು ಈ ರಾಜಸಿಕ ಗುಣಗಳಿಂದ ಸಾತ್ತ್ವಿಕ ಗುಣಗಳ ಕಡೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ.
अयुक्तः प्राकृतः स्तब्धः शठो नैष्कृतिकोऽलसः ।
विषादी दीर्घसूत्री च कर्ता तामस उच्यते ॥ १८-२ ८
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ 18.28
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸಃ ಉಚ್ಯತೇ
ಯಾವ ಕರ್ತನು (ಕೆಲಸಗಾರನು) ಶಾಸ್ತ್ರವಿಧಿಗಳನ್ನು ಪಾಲಿಸದೆ ಸ್ವಯಂ ನಿಯಂತ್ರಣವಿಲ್ಲದವನೂ, ಸಂಸ್ಕಾರಹಿತ
ಅಸಭ್ಯನೂ, ಹಠಮಾರಿಯೂ, ಮೋಸಗಾರನೂ, ಇತರರ ಕೆಲಸವನ್ನು ಕೆಡಿಸುವ
ಅಥವಾ ಅವಮಾನಿಸುವ ಸ್ವಭಾವದವನೂ,
ಸೋಮಾರಿಯೂ,
ಸದಾ ವಿಷಾದದಿಂದ ಕೂಡಿರುವವನೂ
ಅಥವಾ ನಿರಾಶಾವಾದಿಯೂ
ಮತ್ತು ಕೆಲಸವನ್ನು ಅನಗತ್ಯವಾಗಿ
ಮುಂದೂಡುವವನೂ ಆಗಿದ್ದಾನೋ, ಅಂತಹವನನ್ನು ತಾಮಸಿಕ ಕರ್ತ ಎನ್ನಲಾಗುತ್ತದೆ.
ಈ ಶ್ಲೋಕದಲ್ಲಿ ತಮೋಗುಣ ಪ್ರಧಾನವಾಗಿರುವ ಮನುಷ್ಯನು
(ಅಜ್ಞಾನದಿಂದ ಕೆಲಸ ಮಾಡುವವನು) ಹೇಗೆ ಕಾರ್ಯನಿರ್ವಹಿಸುತ್ತಾನೆ ಮತ್ತು ಅವನ ಸ್ವಭಾವ ಎಂತಹದ್ದು,
ಅವರ ಎಂಟು ಪ್ರಮುಖ ದುರ್ಲಕ್ಷಣಗಳು ಯಾವುವು ಎಂಬುದನ್ನು ತಿಳಿಸಲಾಗಿದೆ:
1. ಅಯುಕ್ತಃ (ಅಶಿಸ್ತು/ಅಸ್ಥಿರತೆ):
ಇವನಿಗೆ ತನ್ನ ಮನಸ್ಸು ಮತ್ತು ಇಂದ್ರಿಯಗಳ ಮೇಲೆ
ಹತೋಟಿ ಇರುವುದಿಲ್ಲ, ಮತ್ತು ಯಾವುದೇ ಶಿಸ್ತು ಇರುವುದಿಲ್ಲ. ಶಾಸ್ತ್ರಗಳ
ಮೇಲಾಗಲಿ ಅಥವಾ ಗುರು-ಹಿರಿಯರ ಮಾರ್ಗದರ್ಶನದ ಮೇಲಾಗಲಿ ನಂಬಿಕೆ ಇರುವುದಿಲ್ಲ. ಶಾಸ್ತ್ರದ ನಿಯಮಗಳನ್ನು
ಗಾಳಿಗೆ ತೂರಿ, ತನ್ನ ಮನಬಂದಂತೆ ಬದುಕುತ್ತಾನೆ. ಇವನ ಮನಸ್ಸು ಸದಾ ಚಂಚಲ ಮತ್ತು ಯಾವುದೇ ಕೆಲಸದಲ್ಲೂ ಏಕಾಗ್ರತೆ
ಇರುವುದಿಲ್ಲ.
2. ಪ್ರಾಕೃತಃ (ಸಂಸ್ಕಾರಹೀನ/ಅಸಭ್ಯ):
ಯಾವುದೇ ಬುದ್ಧಿಶಕ್ತಿ ಅಥವಾ ವಿವೇಚನೆ ಇಲ್ಲದವನು.
ಇವನು ಪ್ರಕೃತಿಯ ನಿಯಮಗಳಿಗೆ ತಕ್ಕಂತೆ ಕೇವಲ ಇಂದ್ರಿಯ ಸುಖ ಭೋಗಗಳಲ್ಲೇ ಮುಳುಗಿರುತ್ತಾನೆ. ಯಾವುದೇ ಉನ್ನತ ಆದರ್ಶಗಳಿಲ್ಲದೆ,
ಕೇವಲ ಪ್ರಾಣಿಗಳಂತೆ ತಿನ್ನುವುದು, ಮಲಗುವುದು ಮತ್ತು ಭೌತಿಕ ಸುಖ ಭೋಗಗಳಲ್ಲೇ ಜೀವನ ಕಳೆಯುವ ಸ್ವಭಾವ.
3. ಸ್ತಬ್ಧಃ (ಹಠಮಾರಿ/ಅಹಂಕಾರಿ):
ಇವನಲ್ಲಿ ಅಹಂಕಾರದ
ತೀವ್ರತೆ ಹೆಚ್ಚಿರುತ್ತದೆ. ತಾನೇ ಸರಿ ಎಂಬ ಭ್ರಮೆಯಲ್ಲಿದ್ದು, ತಪ್ಪು
ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ತಪ್ಪು ತಿಳಿದಿದ್ದರೂ ತಿದ್ದಿಕೊಳ್ಳಲು ಒಪ್ಪುವುದಿಲ್ಲ. ಹಿರಿಯರ ಅಥವಾ ಜ್ಞಾನಿಗಳ ಒಳ್ಳೆಯ
ಮಾತುಗಳನ್ನು ಕೇಳಲು ಸಿದ್ಧನಿರುವುದಿಲ್ಲ. ಗುರು- ಹಿರಿಯರಿಗಾಗಲಿ, ಜ್ಞಾನಿಗಳಿಗಾಗಲಿ
ಗೌರವ ನೀಡದೆ, ತನ್ನದೇ ಹಠ ಸಾಧಿಸುತ್ತಾನೆ. ಯಾವುದೇ ಒಳ್ಳೆಯದಕ್ಕಾಗಿ ಮಾಡುವ ಬದಲಾವಣೆಗಳಿಗೆ ಇವನು
ಸದಾ ವಿರೋಧಿ.
4. ಶಠಃ (ಕಪಟಿ/ವಂಚಕ):
ಇವನ ಮನಸ್ಸಿನಲ್ಲಿ ಒಂದಿದ್ದರೆ, ಹೊರಗೆ ಮುಖದ ಮೇಲೆ ಮತ್ತೊಂದನ್ನು ತೋರಿಸಿ ಜನರನ್ನು ವಂಚಿಸಲು ಸದಾ ಹೊಂಚು ಹಾಕುತ್ತಿರುತ್ತಾನೆ. ತನ್ನ ಸ್ವಾರ್ಥಕ್ಕಾಗಿ ಇತರರನ್ನು ಸುಲಭವಾಗಿ ವಂಚಿಸುವ ಕುತಂತ್ರಿ.
5. ನೈಷ್ಕೃತಿಕಃ (ದುಷ್ಟ/ದ್ರೋಹಿ):
ಇತರರಿಗೆ ಅಪಕಾರ ಮಾಡುವುದರಲ್ಲಿ ಇವನಿಗೆ ಆನಂದ. ಬೇರೆಯವರ
ಏಳಿಗೆ ಅಥವಾ ಉನ್ನತಿಯನ್ನು ಸಹಿಸದೆ, ಅವರ ಕೆಲಸಕ್ಕೆ ಅಡ್ಡಿಪಡಿಸುವುದು ಇವನ ಮುಖ್ಯ ಗುಣ. ಇತರರನ್ನು
ಸದಾ ನಿಂದಿಸಿ ಅವಮಾನಿಸುವವನು. ಸಮಾಜದಲ್ಲಿ ನಕಾರಾತ್ಮಕತೆಯನ್ನು ಹರಡುವುದೇ ಇವನ ಕೆಲಸ.
6. ಅಲಸಃ (ಸೋಮಾರಿ):
ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಮೈಗಳ್ಳತನ ಪ್ರದರ್ಶಿಸುವವನು.
ಮಾಡಬೇಕಾದ ಕೆಲಸವನ್ನು ಮಾಡದೆ ಆಲಸ್ಯದಿಂದ ಕಾಲ ಕಳೆಯುತ್ತಾನೆ. ಜವಾಬ್ದಾರಿ ಮತ್ತು ಕರ್ತವ್ಯಗಳಿಂದ ಸದಾ ದೂರ ಓಡುವವನು.
7. ವಿಷಾದಿ (ನಿರಾಶಾವಾದಿ):
ಸಣ್ಣ ತೊಂದರೆ ಬಂದರೂ ಹತಾಶನಾಗುತ್ತಾನೆ. ಸಣ್ಣ ಕಷ್ಟ
ಬಂದರೂ ಧೃತಿಗೆಟ್ಟು ಮುದುಡಿ ಕುಳಿತುಕೊಳ್ಳುವ, ಜೀವನದಲ್ಲಿ ಯಾವುದೇ ಉತ್ಸಾಹವಿಲ್ಲದ ನಿರಾಶಾವಾದಿ. ಸದಾ ಅಳುಬುರುಕನಾಗಿ,
ತನ್ನ ಹಣೆಬರಹವನ್ನು ದೂಷಿಸುತ್ತಾ, ದುಃಖದಲ್ಲೇ ಮುಳುಗಿರುತ್ತಾನೆ.
8. ದೀರ್ಘಸೂತ್ರೀ (ಕಾಲಹರಣ ಮಾಡುವವನು):
ಇವತ್ತು ಮಾಡಬೇಕಾದ ಕೆಲಸವನ್ನು ನಾಳೆ, ನಾಳೆ ಮಾಡಬೇಕಾದುದನ್ನು
ಮುಂದಿನ ತಿಂಗಳು ಮಾಡೋಣ ಎಂದು ಮುಂದೂಡುವ ಬುದ್ಧಿ. ಒಂದು ಗಂಟೆಯಲ್ಲಿ
ಮುಗಿಸಬಹುದಾದ ಕೆಲಸವನ್ನು ದಿನಗಟ್ಟಲೆ ಎಳೆಯುತ್ತಿರುತ್ತಾನೆ.
ಈ ಶ್ಲೋಕದಲ್ಲಿ ಅಜ್ಞಾನ ಮತ್ತು ತಮೋಗುಣದಿಂದ ಆವೃತನಾದ
ಮನುಷ್ಯನು ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದನ್ನು ತಿಳಿಸುತ್ತಾ; ತಾಮಸಿಕ ಮನುಷ್ಯನಿಗೆ ಕರ್ತವ್ಯದ
ಪ್ರಜ್ಞೆ ಇರುವುದಿಲ್ಲ. ಅವನು ಲೌಕಿಕ ಭೋಗಗಳಲ್ಲೇ ಮುಳುಗಿದ್ದು, ತನ್ನ ಅಹಂಕಾರ ಹಾಗೂ ಸೋಮಾರಿತನದಿಂದ
ತನಗೂ ಹಾಗೂ ಸಮಾಜಕ್ಕೂ ಹಾನಿ ಉಂಟುಮಾಡುತ್ತಾನೆ. ಅವನ ಇಡೀ ಜೀವನವು ನಕಾರಾತ್ಮಕ ಆಲೋಚನೆಗಳು ಹಾಗೂ
ವಿಳಂಬ ನೀತಿಯಿಂದಲೇ ತುಂಬಿರುತ್ತದೆ. ಅಂತಹವನಲ್ಲಿ ವಿವೇಕವಾಗಲಿ,
ಶ್ರಧೆಯಾಗಲಿ ಅಥವಾ
ಆಧ್ಯಾತ್ಮಿಕ ಪ್ರಗತಿಯ ಆಸೆಯಾಗಲಿ, ಇವು ಯಾವುದೂ
ಇರುವುದಿಲ್ಲ ಎಂದು ಹೇಳಿದೆ. ಆ ಮೇಲೆ, ತಾಮಸಿಕ ಕರ್ತನಲ್ಲಿ ಇಲ್ಲಿ ಹೇಳಿದ ಎಲ್ಲಾ ಗುಣಗಳೂ ಇರಬೇಕಂತ
ಏನೂ ಇಲ್ಲ. ಇದರಲ್ಲಿ ಯಾವುದಾದರೂ ಒಂದು ಗುಣ ಇದ್ದರೂ
ಕೂಡ ಅವನು ತಾಮಸಿಕ ಕರ್ತ ಎನ್ನಿಸಿಕೊಳ್ಳುತ್ತಾನೆ.
बुद्धेर्भेदं धृतेश्चैव गुणतस्त्रिविधं श्रृणु ।
प्रोच्यमानमशेषेण पृथक्त्वेन धनञ्जय ॥ १८-२ ९
ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶ್ರೃಣು
ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಞ್ಜಯ 18.29
ಪ್ರೋಚ್ಯಮಾನಮ್ ಅಶೇಷೇಣ ಪೃಥಕ್ತ್ವೇನ ಧನಂಜಯ
ಎಲೈ ಧನಂಜಯನೇ!
ಪ್ರಕೃತಿಯ ಮೂರು ಗುಣಗಳಿಗೆ (ಸತ್ತ್ವ, ರಜಸ್ಸು ಮತ್ತು ತಮಸ್ಸು) ಅನುಗುಣವಾಗಿ ಬುದ್ಧಿ ಮತ್ತು ಧೃತಿಯು (ಸ್ಥಿರತೆ) ಮೂರು ವಿಧವಾಗಿ
ವಿಂಗಡಿಸಲ್ಪಟ್ಟಿದೆ. ಅವುಗಳ ಬಗ್ಗೆ ನಾನು ನಿನಗೆ ಪ್ರತ್ಯೇಕವಾಗಿ ಮತ್ತು
ಸಂಪೂರ್ಣವಾಗಿ ವಿವರಿಸುತ್ತೇನೆ, ಅದನ್ನು ನೀನು ಕೇಳು.
ಬುದ್ಧಿ (ವಿವೇಚನಾ ಶಕ್ತಿ) (Intellect):
ಯಾವುದು ಸರಿ, ಯಾವುದು ತಪ್ಪು; ಯಾವುದು ಕರ್ತವ್ಯ, ಯಾವುದು ಅಕರ್ತವ್ಯ
ಅಥವಾ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು
ಯೋಚಿಸಿ ನಿರ್ಣಯಿಸುವ ಸಾಮರ್ಥ್ಯ.
ಇದು ನಮ್ಮ ಜೀವನದ ದಿಕ್ಸೂಚಿಯಿದ್ದಂತೆ.
ಧೃತಿ (ಸ್ಥಿರತೆ/ಧೈರ್ಯ) (Fortitude/Willpower):
ಕೈಕೊಂಡ ನಿರ್ಧಾರಕ್ಕೆ ಬದ್ಧವಾಗಿರುವ ಇಚ್ಛಾಶಕ್ತಿ. ಸಂಕಲ್ಪ
ಮಾಡಿದ ಹಾದಿಯಲ್ಲಿ ಎಷ್ಟೇ ಕಷ್ಟಗಳು ಅಥವಾ ಅಡೆತಡೆಗಳು ಬಂದರೂ,
ಮನಸ್ಸು, ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿಯತ್ತ ಮುನ್ನಡೆಯುವಂತೆ ಮಾಡುವ
ಆಂತರಿಕ ಸಂಕಲ್ಪಶಕ್ತಿ, ಮನಸ್ಸಿನ ಸ್ಥಿರತೆ, ಧೈರ್ಯ ಮತ್ತು ತಾಳ್ಮೆ.
ಮನುಷ್ಯನು ಮಾಡುವ ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಕೇವಲ ಜ್ಞಾನವಿದ್ದರೆ
ಸಾಲದು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಆಲೋಚನಾ ಶಕ್ತಿ 'ಬುದ್ಧಿ' ಮತ್ತು ಕಷ್ಟ ಬಂದಾಗ
ಕುಗ್ಗದೆ ಮುನ್ನಡೆದು ಕೆಲಸದಲ್ಲಿ ತೋರಿಸುವ ದೃಢತೆ 'ಧೃತಿ' ಇರಬೇಕು. ಬುದ್ಧಿ ಮತ್ತು ಧೃತಿ ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುವ
ಅತ್ಯಂತ ಪ್ರಮುಖ ಅಂಶಗಳಾಗಿವೆ.
ಈ ಬುದ್ಧಿ ಮತ್ತು ಧೃತಿಗಳು, ಪ್ರಕೃತಿಯ ತ್ರಿಗುಣಗಳಾದ
ಸತ್ತ್ವ, ರಜಸ್ಸು ಮತ್ತು ತಮೋಗುಣಗಳಿಂದ ಪ್ರಭಾವಿತಗೊಂಡು, ಅದಕ್ಕೆ ಅನುಗುಣವಾಗಿ ಮೂರು ವಿಧಗಳಾಗಿ
ವಿಭಜನೆಗೊಳ್ಳುತ್ತವೆ ಎಂಬುದನ್ನು ಈ ಶ್ಲೋಕ ತಿಳಿಸುತ್ತದೆ.
ಧನಂಜಯ = ಸಂಪತ್ತನ್ನು
ಜಯಿಸಿದವನು
प्रवृत्तिं च निवृत्तिं च कार्याकार्ये भयाभये ।
बन्धं मोक्षं च या वेत्ति बुद्धिः सा पार्थ सात्त्विकी ॥ १८-३०
ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ
ಬನ್ಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ 18.30
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಕಾರ್ಯ-ಅಕಾರ್ಯೇ ಭಯ-ಅಭಯೇ
ಬಂಧಮ್ ಮೋಕ್ಷಮ್ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ
ಪಾರ್ಥನೇ!
ಯಾವ ಬುದ್ಧಿಯು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳನ್ನು, ಮಾಡಬೇಕಾದ ಮತ್ತು ಮಾಡಬಾರದ ಕರ್ತವ್ಯಗಳನ್ನು,
ಭಯ ಮತ್ತು ಅಭಯದ ಕಾರಣಗಳನ್ನು ಹಾಗೂ
ಬಂಧನ ಮತ್ತು ಮೋಕ್ಷದ ನಿಜವಾದ ಸ್ವರೂಪವನ್ನು ಸರಿಯಾಗಿ ವಿವೇಚಿಸಿ ತಿಳಿಯುತ್ತದೆಯೋ,
ಆ ಬುದ್ಧಿಯೇ ಸಾತ್ವಿಕ ಬುದ್ಧಿ.
ಈ ಶ್ಲೋಕದಲ್ಲಿ ಸಾತ್ತ್ವಿಕ ಬುದ್ಧಿಯ ಲಕ್ಷಣಗಳನ್ನು
ಮತ್ತು ಕಾರ್ಯಕ್ಷೇತ್ರವನ್ನು ನಾಲ್ಕು ಪ್ರಮುಖ ದ್ವಂದ್ವಗಳ (ಜೋಡಿಗಳ) ಮೂಲಕ ವಿವರಿಸಲಾಗಿದೆ:
1. ಪ್ರವೃತ್ತಿಮ್
ಚ ನಿವೃತ್ತಿಮ್ ಚ (ಪ್ರವೃತ್ತಿ ಮತ್ತು ನಿವೃತ್ತಿ)
(Action and Inaction):
ಪ್ರವೃತ್ತಿ ಎಂದರೆ ಲೌಕಿಕ ಜಗತ್ತಿನಲ್ಲಿ ಕರ್ತವ್ಯಗಳನ್ನು ನಿಭಾಯಿಸುವುದು. ಪ್ರಾಪಂಚಿಕ ಜೀವನದಲ್ಲಿ ಸಂಸಾರದ ಮತ್ತು ಜಗತ್ತಿನ ಅಭಿವೃದ್ಧಿಗಾಗಿ ಯಾವ ಕರ್ಮಗಳನ್ನು ಮಾಡಬೇಕು, ಧರ್ಮದ ಹಾದಿಯಲ್ಲಿ ಹೇಗೆ
ಮುನ್ನಡೆಯಬೇಕು, ಯಾವ ಶುಭ ಕಾರ್ಯಗಳಲ್ಲಿ ತೊಡಗಬೇಕು ಎಂದು ತಿಳಿಯುವುದು.
ನಿವೃತ್ತಿ ಎಂದರೆ ಅಂತರಂಗದ ಕಡೆಗೆ ಮುಖ ಮಾಡಿ ಆಧ್ಯಾತ್ಮಿಕವಾಗಿ ಬೆಳೆಯುವುದು. ಆಧ್ಯಾತ್ಮಿಕ ಉನ್ನತಿಗಾಗಿ ಅಥವಾ ಅಧರ್ಮದಿಂದ ದೂರವಿರಲು ಯಾವುದನ್ನು
ತ್ಯಜಿಸಬೇಕು, ಅದಕ್ಕಾಗಿ ಅಧರ್ಮದ ಹಾದಿಯಿಂದ ಅಥವಾ ವಾಸನೆಗಳಿಂದ ಮನಸ್ಸನ್ನು ಹೇಗೆ
ಹಿಂದೆ ಸೆಳೆಯಬೇಕು, ಯಾವಾಗ ಆಧ್ಯಾತ್ಮಿಕ ಸಾಧನೆಗೆ ಒಳಮುಖವಾಗಬೇಕು ಎಂದು ತಿಳಿಯುವುದು.
ಸಾ ತ್ವಿಕ ಬುದ್ಧಿಯುಳ್ಳವನಿಗೆ ಜಗತ್ತಿನಲ್ಲಿ ಯಾವಾಗ ಯಾವ ಮಾರ್ಗದಲ್ಲಿ ತೊಡಗಿಸಿಕೊಳ್ಳಬೇಕು ಅಥವಾ
ಯಾವ ಕರ್ಮಗಳನ್ನು ಮಾಡಬೇಕು (ಪ್ರವೃತ್ತಿ) ಮತ್ತು ಯಾವಾಗ ಯಾವ ಮಾರ್ಗದಿಂದ ದೂರ ಸರಿದು ಅಥವಾ ಯಾವುದನ್ನು ತ್ಯಜಿಸಿ ಶಾಂತವಾಗಿರಬೇಕು
(ನಿವೃತ್ತಿ) ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಅವರು ಇವೆರಡರ ಸಮತೋಲನವನ್ನು
ಸರಿಯಾಗಿ ನಿಭಾಯಿಸುವುದನ್ನು ಅರಿತಿರುತ್ತಾರೆ.
‘ವಾಸನೆಗಳು’ ಎಂದರೆ ಕೇವಲ ಮೂಗಿಗೆ ತಿಳಿಯುವ
ಸುಗಂಧ ಅಥವಾ ದುರ್ಗಂಧವಲ್ಲ. ತತ್ತ್ವಶಾಸ್ತ್ರ ಮತ್ತು ಅಧ್ಯಾತ್ಮದ ಪ್ರಕಾರ, ವಾಸನೆ ಎಂದರೆ
ಮನುಷ್ಯನ ಮನಸ್ಸಿನಲ್ಲಿ ಆಳವಾಗಿ ಹುದುಗಿರುವ ಸಂಸ್ಕಾರಗಳು, ಪ್ರವೃತ್ತಿಗಳು ಅಥವಾ ಪೂರ್ವಜನ್ಮದಲ್ಲಿ ಮಾಡಿದ
ಆಲೋಚನೆಗಳು, ಆಸೆಗಳು ಮತ್ತು ಕರ್ಮಗಳ ಪ್ರಭಾವ ಅಥವಾ ಕರ್ಮದ
ಗುರುತುಗಳು (Impressions).
2. ಕಾರ್ಯ-ಅಕಾರ್ಯೇ (ಕಾರ್ಯ ಮತ್ತು ಅಕಾರ್ಯ) (Duty and Forbidden Action):
ಕಾರ್ಯ ಎಂದರೆ ದೇಶ, ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ನಾವು ಮಾಡಲೇಬೇಕಾದ ಕರ್ತವ್ಯಗಳು. ಅಥವಾ ಶಾಸ್ತ್ರಬದ್ಧವಾದ, ಧರ್ಮಶಾಸ್ತ್ರ ಮತ್ತು ನೈತಿಕತೆಗೆ ಅನುಗುಣವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ
ಸಮಾಜಕ್ಕೆ ಮತ್ತು ತನಗೆ ಹಿತವನ್ನುಂಟುಮಾಡುವ ಕೆಲಸಗಳು.
ಅಕಾರ್ಯ ಎಂದರೆ ನಮಗೂ ಮತ್ತು ಸಮಾಜಕ್ಕೂ ಹಾನಿ ಉಂಟುಮಾಡುವ, ಶಾಸ್ತ್ರವಿರುದ್ಧವಾದ ಅಥವಾ ಮಾಡಬಾರದ ಕೆಟ್ಟ
ಕೆಲಸಗಳು. ಅಥವಾ ಸ್ವಾರ್ಥಕ್ಕಾಗಿ, ಅಧರ್ಮದ ಮತ್ತು ಇತರರಿಗೆ ಹಾನಿ ಮಾಡುವ ಕೆಲಸಗಳು.
ಸಾತ್ತ್ವಿಕ ಬುದ್ಧಿಯುಳ್ಳವನು ಇವೆರಡರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ
ಗುರುತಿಸಿ ಸರಿಯಾದದ್ದನ್ನೇ ಆರಿಸಿಕೊಳ್ಳುತ್ತಾನೆ.
3. ಭಯ-ಅಭಯೇ (ಭಯ ಮತ್ತು ಅಭಯ) (Fear and Fearlessness):
ಭಯ ಎಂದರೆ
ತಪ್ಪು ಕೆಲಸಗಳು ಮತ್ತು ಪಾಪದ ಕೆಲಸಗಳನ್ನು ಮಾಡಲು ಹೆದರುವುದು, ಅಧರ್ಮ ಮತ್ತು ಕೆಟ್ಟ ನಡತೆಗೆ
ಸಿಗುವ ದುಷ್ಪರಿಣಾಮಗಳಿಗೆ
ಹೆದರುವುದು.
ಅಭಯ ಎಂದರೆ ಧರ್ಮದ ಹಾದಿಯಲ್ಲಿ ನಡೆಯುವಾಗ ಅಥವಾ
ಧರ್ಮದ ರಕ್ಷಣೆ ಮಾಡುವಾಗ, ಸತ್ಯವನ್ನು ನುಡಿಯುವಾಗ ಹಾಗೂ ಪರಮಾತ್ಮನ ಶರಣಾದಾಗ ಎಷ್ಟೇ ಕಷ್ಟ ಬಂದರೂ ಯಾವುದೇ ಕಾರಣಕ್ಕೂ ಭಯಪಡದೆ ಧೈರ್ಯವಾಗಿರುವುದು.
4. ಬಂಧಮ್
ಮೋಕ್ಷಮ್ ಚ (ಬಂಧನ ಮತ್ತು ಮೋಕ್ಷ) (Bondage and
Liberation):
ಬಂಧನ ಎಂದರೆ ಅಹಂಕಾರ, ಕಾಮ, ಕ್ರೋಧ, ಲೋಭ, ಮೋಹ ಮತ್ತು ಅತಿಯಾದ ಲೌಕಿಕ ಆಸೆಗಳು ನಮ್ಮನ್ನು ಹೇಗೆ ಈ ಸಂಸಾರ ಚಕ್ರದಲ್ಲಿ
ಸಿಲುಕಿಸುತ್ತವೆ ಎನ್ನುವುದು.
ಮೋಕ್ಷ ಎಂದರೆ ಅಹಂಕಾರ ಮತ್ತು ಆಸೆಗಳನ್ನು ತ್ಯಜಿಸಿ
ಈಶ್ವರಾರ್ಪಣ ಬುದ್ಧಿಯಿಂದ ನಿಷ್ಕಾಮ ಕರ್ಮ ಮಾಡುತ್ತಾ ಬದುಕಿದರೆ
ಹೇಗೆ ಮುಕ್ತಿ ಸಿಗುತ್ತದೆ ಎನ್ನುವುದು.
ಯಾವ ಬುದ್ಧಿಯು ಕರ್ಮಮಾರ್ಗದಲ್ಲಿ ಯಾವ ಶುಭ ಕಾರ್ಯಗಳಲ್ಲಿ ತೊಡಗಬೇಕು (ಪ್ರವೃತ್ತಿ) ಮತ್ತು ಜ್ಞಾನಮಾರ್ಗದಲ್ಲಿ
ಆಧ್ಯಾತ್ಮಿಕ ಉನ್ನತಿಗಾಗಿ ಯಾವುದನ್ನೆಲ್ಲ ತ್ಯಜಿಸ ಬೇಕು (ನಿವೃತ್ತಿ) ಇವುಗಳನ್ನು ತಿಳಿಯುತ್ತದೆಯೋ, ಧರ್ಮಬದ್ಧವಾಗಿ ಮಾಡಲು ಯೋಗ್ಯವಾದ ಕೆಲಸ
ಯಾವುದು ಮತ್ತು ಅಯೋಗ್ಯವಾದ ಕೆಲಸ ಯಾವುದು ಎಂಬುದನ್ನು ತಿಳಿಯುತ್ತದೆಯೋ, ಯಾವುದಕ್ಕೆ ಭಯಪಡಬೇಕು ಮತ್ತು
ಯಾವುದಕ್ಕೆ ಭಯಪಡಬಾರದು ಎಂದು ವಿವೇಚಿಸುತ್ತದೆಯೋ, ಹಾಗೂ ಆತ್ಮನಿಗೆ ಬಂಧನ ಯಾವುದು ಮತ್ತು ಮುಕ್ತಿ
(ಮೋಕ್ಷ) ಯಾವುದು ಎಂಬುದನ್ನು ಸರಿಯಾಗಿ ಗ್ರಹಿಸುತ್ತದೆಯೋ, ಅಂತಹ ಬುದ್ಧಿಯೇ ಸಾತ್ವಿಕ
ಬುದ್ಧಿ. ಸಾತ್ವಿಕ ಬುದ್ಧಿ ಎಂದರೆ ಕೇವಲ ತಿಳುವಳಿಕೆಯಲ್ಲ,
ಅದು ಮನುಷ್ಯನಿಗೆ ಸರಿಯಾದ ದಾರಿಯನ್ನು ತೋರಿಸುವ ವಿವೇಕದಿಂದ ಕೂಡಿದ ಅತ್ಯುನ್ನತ ಶುದ್ಧ
ವಿವೇಚನಾ ಶಕ್ತಿ; ಮತ್ತು ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಯಾವುದು ಶ್ರೇಯಸ್ಕರ ಎಂಬುದನ್ನು
ತೋರಿಸುವ ಒಂದು ಆಂತರಿಕ ದಿಕ್ಸೂಚಿ. ಈ ಬುದ್ಧಿಯುಳ್ಳ ವ್ಯಕ್ತಿಗೆ ಜೀವನದ ಪ್ರತಿಯೊಂದು ಹಂತದಲ್ಲೂ
ಗೊಂದಲಗಳಿರುವುದಿಲ್ಲ. ಸಮಾಜಕ್ಕೆ ಮತ್ತು ತನ್ನ ಆತ್ಮಕಲ್ಯಾಣಕ್ಕೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು
ಎಂಬ ಸ್ಪಷ್ಟವಾದ ಅರಿವು ಇವರಲ್ಲಿರುತ್ತದೆ. ಇಂತವರು ಕೇವಲ ಲೌಕಿಕ ಸುಖಕ್ಕೆ ಮಾರುಹೋಗದೆ, ತಮ್ಮ ಆತ್ಮೋದ್ಧಾರಕ್ಕೆ
ಮತ್ತು ಸಮಾಜದ ಕಲ್ಯಾಣಕ್ಕೆ ಪೂರಕವಾದ ಹಾದಿಯನ್ನೇ ಆರಿಸಿಕೊಳ್ಳುತ್ತಾರೆ.
18-31
यया धर्ममधर्मं च कार्यं चाकार्यमेव च ।
अयथावत्प्रजानाति बुद्धिः सा पार्थ राजसी ॥ १८-३ १
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ
ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ 18.31
ಯಯಾ ಧರ್ಮಮ್ ಅಧರ್ಮಮ್ ಚ ಕಾರ್ಯಮ್ ಚ ಅಕಾರ್ಯಮ್ ಏವ ಚ
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ
यया धर्ममधर्मं च कार्यं चाकार्यमेव च ।
अयथावत्प्रजानाति बुद्धिः सा पार्थ राजसी ॥ १८-३ १
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ
ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ 18.31
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ
ಪಾರ್ಥನೇ!
ಯಾವ ಬುದ್ಧಿಯಿಂದ ಮನುಷ್ಯನು ಧರ್ಮ ಮತ್ತು ಅಧರ್ಮವನ್ನು, ಹಾಗೂ ಮಾಡಬೇಕಾದ ಕೆಲಸ (ಕರ್ತವ್ಯ) ಮತ್ತು
ಮಾಡಬಾರದ ಕೆಲಸವನ್ನು (ಅಕರ್ತವ್ಯವನ್ನು) ಸರಿಯಾಗಿ ಗ್ರಹಿಸದೆ, ತಪ್ಪಾಗಿ ಅರ್ಥ ಮಾಡಿಕೊಂಡು ಗೊಂದಲಕ್ಕೀಡಾಗುತ್ತಾನೋ,
ಆ ಬುದ್ಧಿಯೇ ರಾಜಸಿಕ
ಬುದ್ಧಿ ಎನಿಸಿಕೊಳ್ಳುತ್ತದೆ.
ಈ ಶ್ಲೋಕದಲ್ಲಿ ರಾಜಸಿಕ
ಬುದ್ಧಿಯ ಭ್ರಮೆಯನ್ನು ಮೂರು ಮುಖ್ಯ ಅಂಶಗಳ ಮೂಲಕ ವಿವರಿಸಲಾಗಿದೆ:
ಯಯಾ ಧರ್ಮಮ್ ಅಧರ್ಮಮ್ ಚ (ಧರ್ಮ ಮತ್ತು ಅಧರ್ಮದ
ಗೊಂದಲ):
ರಾಜಸಿಕ ಬುದ್ಧಿಯುಳ್ಳ
ವ್ಯಕ್ತಿಗೆ ಯಾವುದು ಸನಾತನ ಧರ್ಮ, ಯಾವುದು ಸತ್ಯ ಮತ್ತು ಯಾವುದು ಅಧರ್ಮ ಎಂಬುದು ಸ್ಪಷ್ಟವಾಗಿ ಗೊತ್ತಾಗುವುದಿಲ್ಲ.
ತನಗೇನು ಇಷ್ಟವೋ ಅಥವಾ ಯಾವುದು ತನಗೆ ಅನುಕೂಲವಾಗಿದ್ದು ಅದರಿಂದ
ತನಗೆ ಲಾಭವಾಗುತ್ತದೆಯೋ ಅದನ್ನೇ ಧರ್ಮ ಎಂದು ಭಾವಿಸುತ್ತಾನೆ. ತನಗೆ ಅನನುಕೂಲವಾಗಿದ್ದು ನಷ್ಟ ಉಂಟುಮಾಡುವ ಧರ್ಮದ ಹಾದಿಯನ್ನು ಅಧರ್ಮ ಎಂದು ತಪ್ಪು
ತಪ್ಪಾಗಿ ಗ್ರಹಿಸುತ್ತಾನೆ. ಉದಾಹರಣೆಗೆ, ವ್ಯಾಪಾರದಲ್ಲಿ ಸುಳ್ಳು ಹೇಳಿ ಹೆಚ್ಚು ಹಣ ಗಳಿಸುವುದನ್ನು
"ಇದು ಇಂದಿನ ಪ್ರಪಂಚದ ಧರ್ಮ, ಅನಿವಾರ್ಯ, ಮತ್ತು ಅದೇ ಸರಿ" ಎಂದು ಸಮರ್ಥಿಸಿಕೊಳ್ಳುವುದು
ರಾಜಸಿಕ ಬುದ್ಧಿಯ ಲಕ್ಷಣ.
ಕಾರ್ಯಮ್ ಚ ಅಕಾರ್ಯಮ್ ಏವ ಚ (ಕಾರ್ಯ ಮತ್ತು ಅಕಾರ್ಯದ ಅಸ್ಪಷ್ಟತೆ):
'ಕಾರ್ಯ'
ಎಂದರೆ ಸಮಾಜಕ್ಕೆ ಮತ್ತು ತನಗೆ ಶ್ರೇಯಸ್ಸು ತರುವ ಅವಶ್ಯಕ ಕರ್ತವ್ಯ ಕರ್ಮಗಳು, ಅಂದರೆ ಸಮಾಜ ಮತ್ತು ಶಾಸ್ತ್ರದ ದೃಷ್ಟಿಯಿಂದ ಮಾಡಬೇಕಾದ ಉತ್ತಮ ಕೆಲಸ.
'ಅಕಾರ್ಯ'
ಎಂದರೆ ಮಾಡಬಾರದ ನಿಷಿದ್ಧ ಕರ್ಮಗಳು, ಅಂದರೆ ಕೀಳು ಕೆಲಸ.
ರಾಜಸಿಕ ಬುದ್ಧಿಯು
ತಕ್ಷಣದ ಲಾಭಕ್ಕಾಗಿ ಕೀರ್ತಿ, ಕಾಸು ಅಥವಾ ಅಧಿಕಾರ ತಂದುಕೊಡುವ ಮಾಡಬಾರದ ಕೆಲಸಗಳನ್ನೇ (ಅಕಾರ್ಯವನ್ನು) ಮಾಡಲು ಪ್ರೇರೇಪಿಸುತ್ತದೆ
ಮತ್ತು ದೂರದೃಷ್ಟಿಯ ಕೊರತೆಯಿಂದ ಕರ್ತವ್ಯವನ್ನು ಅಥವಾ ಮಾಡಬೇಕಾದ ಕೆಲಸವನ್ನು ಮುಂದೂಡುತ್ತದೆ.
ಅಯಥಾವತ್ ಪ್ರಜಾನಾತಿ (ಅಸ್ಪಷ್ಟ ಅಥವಾ ತಪ್ಪು ತಿಳುವಳಿಕೆ):
ವಿಷಯಗಳನ್ನು ಇದ್ದದ್ದನ್ನು ಇದ್ದ ಹಾಗೆ ನೋಡಲು ಸಾಧ್ಯವಾಗದಿರುವುದು. ವ್ಯಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಸಂಪೂರ್ಣ ಜ್ಞಾನವಿರುವುದಿಲ್ಲ.
ಅವನ ಬುದ್ಧಿ ತೀರ ಮಸುಕಾಗಿಯೂ ಇರುವುದಿಲ್ಲ (ಅದು ತಾಮಸ ಗುಣ), ಆದರೆ ಸ್ವಾರ್ಥ, ಅತಿಯಾದ ಆಸೆ, ಮತ್ತು
ರಾಗ-ದ್ವೇಷಗಳಿಂದ ಕೂಡಿರುತ್ತದೆ. ಇದರಿಂದಾಗಿ ವ್ಯಕ್ತಿಯು ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತನಾಗಿ ತಪ್ಪು ನಿರ್ಧಾರಗಳನ್ನು
ತೆಗೆದುಕೊಳ್ಳುವಂತವನಾಗುತ್ತಾನೆ.
ರಾಜಸಿಕ ಬುದ್ಧಿಯು ಸ್ವಾರ್ಥ, ಅಹಂಕಾರ ಮತ್ತು ತೀವ್ರವಾದ
ಆಸೆಗಳಿಂದ ಮಸುಕಾಗಿರುತ್ತದೆ. ರಜೋಗುಣದಿಂದ ಕೂಡಿದ ವ್ಯಕ್ತಿಯು ತನ್ನ ಸ್ವಾರ್ಥ, ರಾಗ-ದ್ವೇಷಗಳು,
ಅಹಂಕಾರ, ಚಂಚಲತೆ ಮತ್ತು ಅತಿಯಾದ ಆಸೆಗಳ ಕಾರಣದಿಂದಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು
ಸರಿಯಾದ ದೃಷ್ಟಿಕೋನದಲ್ಲಿ ನೋಡಲು ವಿಫಲನಾಗುತ್ತಾನೆ. ಹಾಗೆಂದು ಅವರು ಸಂಪೂರ್ಣ ಕತ್ತಲಲ್ಲಿಯೂ ಇರುವುದಿಲ್ಲ
(ಅದು ತಾಮಸ ಬುದ್ಧಿಯ ಲಕ್ಷಣ), ಆದರೆ ಅವರಿಗೆ ಸರಿಯಾದ ಸ್ಪಷ್ಟತೆ ಇರುವುದಿಲ್ಲ. ಇದರಿಂದಾಗಿ ಅವರಿಗೆ
ಧರ್ಮ ಮತ್ತು ಅಧರ್ಮ, ಕಾರ್ಯ ಮತ್ತು ಅಕಾರ್ಯದ ಅರ್ಥ ಗೊಂದಲಮಯವಾಗಿರುತ್ತದೆ.
18-32
अधर्मं धर्ममिति या मन्यते तमसाऽवृता ।
सर्वार्थान्विपरीतांश्च बुद्धिः सा पार्थ तामसी ॥ १८-३ २
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ
ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ 18.32
ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಮಸಾ ಆವೃತಾ
अधर्मं धर्ममिति या मन्यते तमसाऽवृता ।
सर्वार्थान्विपरीतांश्च बुद्धिः सा पार्थ तामसी ॥ १८-३ २
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ
ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ 18.32
ಸರ್ವ-ಅರ್ಥಾನ್ ವಿಪರೀತಾನ್ ಚ ಬುದ್ಧಿಃ ಸಾ ಪಾರ್ಥ ತಾಮಸೀ
ಪಾರ್ಥ!
ತಮೋಗುಣದ ಅಜ್ಞಾನ ಮತ್ತು ಅಂಧಕಾರದಿಂದ ಸಂಪೂರ್ಣವಾಗಿ ಮುಚ್ಚಿಹೋಗಿರುವ ಯಾವ ಬುದ್ಧಿಯು ಅಧರ್ಮವನ್ನೇ
ಧರ್ಮ ಎಂದು ತಪ್ಪಾಗಿ ಭಾವಿಸುತ್ತದೆಯೋ, ಹಾಗೂ ಎಲ್ಲಾ
ವಿಷಯಗಳನ್ನು ಅದರ ನೈಜ ರೂಪಕ್ಕೆ ತದ್ವಿರುದ್ಧವಾಗಿ ಗ್ರಹಿಸುತ್ತದೆಯೋ, ಅಂತಹ ಬುದ್ಧಿಯೇ
ತಾಮಸಿಕ ಬುದ್ಧಿ.
ಅಧರ್ಮಂ ಧರ್ಮಮಿತಿ ಮನ್ಯತೇ (ಅಧರ್ಮವನ್ನೇ ಧರ್ಮವೆಂದು ತಿಳಿಯುವುದು):
ತಾಮಸ ಬುದ್ಧಿಯ ಪರಮಾವಧಿ ಲಕ್ಷಣವೆಂದರೆ ಇದು ರಾಜಸ ಬುದ್ದಿಯ ಹಾಗೆ ತಪ್ಪು ಮತ್ತು
ಸರಿಯ ನಡುವೆ ಕೇವಲ ಗೊಂದಲ ಹೊಂದುವುದಿಲ್ಲ, ಬದಲಿಗೆ ತಪ್ಪು ಅಥವಾ ಕೆಟ್ಟದ್ದನ್ನೇ ಅತ್ಯಂತ ಸರಿ ಎಂದು
ಬಲವಾಗಿ ನಂಬುತ್ತದೆ. ಇದು ಕೇವಲ ತಪ್ಪು ತಿಳುವಳಿಕೆಯಲ್ಲ, ಇದು ಬುದ್ಧಿಯ ವಿಕೃತಿ. ತಾಮಸಿಕ ಬುದ್ಧಿಯುಳ್ಳವರು ಸಮಾಜಕ್ಕೆ ದ್ರೋಹ ಮಾಡುವುದು, ಹಿಂಸೆ ನೀಡುವುದು ಅಥವಾ ಅನ್ಯಾಯ ಮಾಡುವುದು, ತಮಗೆ ಅಥವಾ ಇತರರಿಗೆ ಹಾನಿ ಮಾಡುವ ಕ್ರೂರ ಮತ್ತು ಅಧರ್ಮದ ಕೆಲಸಗಳನ್ನು ತಮ್ಮ ಹಕ್ಕು ಮತ್ತು ಕರ್ತವ್ಯ ಹಾಗೂ ನ್ಯಾಯದ
ಮತ್ತು ಧರ್ಮದ ಕೆಲಸ ಎಂದು ನಂಬಿರುತ್ತಾರೆ. ಇಂದಿನ ಜಗತ್ತಿನಲ್ಲಿ
ಉಗ್ರಗಾಮಿಗಳ ಹಾಗೂ ಭಯೋತ್ಪಾದನೆಯ ದಾರಿಯಲ್ಲಿ ನಡೆಯುವವರ ಬುದ್ಧಿ ಇದಕ್ಕೆ ಸ್ಪಷ್ಟ ಉದಾಹರಣೆ. ಭಯೋತ್ಪಾದನೆ
ಮಾಡುವವರು ಅಥವಾ ಅಪರಾಧ ಜಗತ್ತಿನಲ್ಲಿ ಇರುವವರು ತಾವು ಮಾಡುತ್ತಿರುವ ಕ್ರೂರ ಕೃತ್ಯಗಳನ್ನೇ ಪವಿತ್ರವಾದ
ಕೆಲಸವೆಂದು ಭಾವಿಸುವುದು ತಾಮಸಿಕ ಬುದ್ಧಿಯ ಪರಮಾವಧಿಯಾಗಿದೆ.
ಸರ್ವ-ಅರ್ಥಾನ್ ವಿಪರೀತಾನ್ ಚ (ಎಲ್ಲವನ್ನೂ ತದ್ವಿರುದ್ಧವಾಗಿ ಗ್ರಹಿಸುವುದು):
ಇವರಿಗೆ ಒಳ್ಳೆಯದು ಕೆಟ್ಟದಾಗಿಯೂ, ಕೆಟ್ಟದ್ದು ಒಳ್ಳೆಯದಾಗಿಯೂ ಕಾಣುತ್ತದೆ. ಇವರ ದೃಷ್ಟಿಕೋನವೇ ವಿಕಾರವಾಗಿರುತ್ತದೆ. ಸತ್ಯವನ್ನು ಹೇಳುವವರು ಮತ್ತು ಇವರ ಒಳಿತಿಗಾಗಿ ಹಿತೋಪದೇಶ
ಮಾಡುವವರು ಇವರಿಗೆ ಅವಮಾನ ಮಾಡಲು ಅಥವಾ ಕೆಡುಕಾಗಳು ಹೀಗೆ ಹೇಳುತ್ತಿದ್ದಾರೆ ಎಂದು ತಪ್ಪು ತಿಳಿಯುತ್ತಾರೆ, ಮತ್ತು ಅವರು ಇವರಿಗೆ ಶತ್ರುಗಳಂತೆ
ಕಾಣುತ್ತಾರೆ. ಕಣ್ಣಿಗೆ ಮಣ್ಣು ಎರಚುವವರು ಮಿತ್ರರಂತೆ ಕಾಣುತ್ತಾರೆ. ತನಗೆ ವಿನಾಶ ತರುವ ದುಷ್ಟ ಆಲೋಚನೆಗಳು ಸುಖ ನೀಡುವಂತೆ ಭಾಸವಾಗುತ್ತವೆ. ಆಲಸ್ಯ, ನಿದ್ದೆ, ಪ್ರಮಾದಗಳು (ತಪ್ಪುಗಳು)
ಇವರಿಗೆ ಜೀವನದ ಪರಮ ಸುಖವೆನಿಸುತ್ತವೆ.
ತಮಸಾವೃತಾ (ಅಜ್ಞಾನದಿಂದ
ಮುಚ್ಚಲ್ಪಟ್ಟಿರುವುದು):
ಹೇಗೆ ದಟ್ಟವಾದ ಮಂಜು ಕವಿದಾಗ ಎದುರಿಗಿರುವ ದಾರಿ ಕಾಣಿಸುವುದಿಲ್ಲವೋ, ಹಾಗೆಯೇ ತಮೋಗುಣವು
ಆವರಿಸಿದಾಗ ಬುದ್ಧಿಯ ವಿವೇಚನಾ ಶಕ್ತಿ ನಿಷ್ಕ್ರಿಯವಾಗುತ್ತದೆ.
ಬುದ್ಧಿಯು ತಮೋಗುಣದಿಂದ ಅಂದರೆ ಅಜ್ಞಾನ, ಸೋಮಾರಿತನ
ಮತ್ತು ಅಂಧಕಾರದಿಂದ ಆವೃತವಾದಾಗ ಮನುಷ್ಯನ ವಿವೇಕ ಶಕ್ತಿ ಸಂಪೂರ್ಣವಾಗಿ ಕುರುಡಾಗುತ್ತದೆ. ಸಾತ್ತ್ವಿಕ
ಬುದ್ಧಿಯು ಸರಿಯಾದ ದಾರಿ ತೋರಿಸಿದರೆ, ರಾಜಸ ಬುದ್ಧಿಯು ಗೊಂದಲದ ದಾರಿ ತೋರಿಸುತ್ತದೆ, ಆದರೆ ತಾಮಸ
ಬುದ್ಧಿಯು ಮನುಷ್ಯನನ್ನು ತಪ್ಪು ದಾರಿಯಲ್ಲೇ ನಡೆಸುತ್ತಾ ಅದುವೇ ಸರಿಯಾದ ದಾರಿ ಎಂದು ಭ್ರಮೆ ಹುಟ್ಟಿಸುತ್ತದೆ.
ತಾಮಸಿಕ ಬುದ್ಧಿಯಲ್ಲಿ ಒಂದು ರೀತಿಯ ಮೊಂಡುತನ ಮತ್ತು ತಪ್ಪು ನಂಬಿಕೆ ಇರುತ್ತದೆ. ಇಲ್ಲಿ ಮನುಷ್ಯನಿಗೆ
ಅಧರ್ಮವೇ ಪರಮ ಧರ್ಮದಂತೆ ಕಾಣುತ್ತದೆ.
18-33
धृत्या यया धारयते मनःप्राणेन्द्रियक्रियाः ।
योगेनाव्यभिचारिण्या धृतिः सा पार्थ सात्त्विकी ॥ १८-३ ३
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇನ್ದ್ರಿಯಕ್ರಿಯಾಃ
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ 18.33
ಧೃತ್ಯಾ ಯಯಾ ಧಾರಯತೇ ಮನಃ-ಪ್ರಾಣ-ಇಂದ್ರಿಯ-ಕ್ರಿಯಾಃ
ಧೃತ್ಯಾ = ದೃಢತೆಯಿಂದ / ತಾಳ್ಮೆಯಿಂದ, ಯಯಾ = ಯಾವ, ಧಾರಯತೇ = ನಿಯಂತ್ರಣದಲ್ಲಿಡುತ್ತಾನೋ (ಸನ್ಮಾರ್ಗದಲ್ಲಿ ನಡೆಸುತ್ತಾನೋ), ಮನಃ-ಪ್ರಾಣ-ಇನ್ದ್ರಿಯ-ಕ್ರಿಯಾಃ = ಮನಸ್ಸು, ಪ್ರಾಣ (ಶ್ವಾಸಕ್ರಿಯೆ) ಮತ್ತು ಇಂದ್ರಿಯಗಳ ಕ್ರಿಯೆಗಳನ್ನು
ಯೋಗೇನ = ಯೋಗಸಾಧನೆಯ ಮೂಲಕ/ ಧ್ಯಾನಯೋಗದ ಮೂಲಕ, ಅವ್ಯಭಿಚಾರಿಣ್ಯಾ = ಏಕಾಗ್ರ ಹಾಗೂ ಚಲಿಸದ (ಅಚಲವಾದ/ ಯಾವುದೇ ಆಕರ್ಷಣೆಗೆ ಒಳಗಾಗದ),
ಸಾ ಧೃತಿಃ = ಆ ದೃಢತೆಯು/ಸಂಕಲ್ಪ ಶಕ್ತಿಯು, ಪಾರ್ಥ = ಎಲೈ ಪಾರ್ಥನೇ, ಸಾತ್ತ್ವಿಕೀ = ಸಾತ್ತ್ವಿಕ ಧೃತಿಯಾಗಿದೆ
ಮನಃಪ್ರಾಣೇನ್ದ್ರಿಯಕ್ರಿಯಾಃ (ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ನಿಯಂತ್ರಣ):
धृत्या यया धारयते मनःप्राणेन्द्रियक्रियाः ।
योगेनाव्यभिचारिण्या धृतिः सा पार्थ सात्त्विकी ॥ १८-३ ३
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇನ್ದ್ರಿಯಕ್ರಿಯಾಃ
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ 18.33
ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ
ಧೃತ್ಯಾ = ದೃಢತೆಯಿಂದ / ತಾಳ್ಮೆಯಿಂದ, ಯಯಾ = ಯಾವ, ಧಾರಯತೇ = ನಿಯಂತ್ರಣದಲ್ಲಿಡುತ್ತಾನೋ (ಸನ್ಮಾರ್ಗದಲ್ಲಿ ನಡೆಸುತ್ತಾನೋ), ಮನಃ-ಪ್ರಾಣ-ಇನ್ದ್ರಿಯ-ಕ್ರಿಯಾಃ = ಮನಸ್ಸು, ಪ್ರಾಣ (ಶ್ವಾಸಕ್ರಿಯೆ) ಮತ್ತು ಇಂದ್ರಿಯಗಳ ಕ್ರಿಯೆಗಳನ್ನು
ಪಾರ್ಥ!
ಪರಮಾತ್ಮನ ಧ್ಯಾನ ಅಥವಾ ಯೋಗಸಾಧನೆಯ ಮೂಲಕ ಮನುಷ್ಯನು ತನ್ನ ಮನಸ್ಸು,
ಪ್ರಾಣ ಮತ್ತು ಇಂದ್ರಿಯಗಳ ಚಟುವಟಿಕೆಗಳನ್ನು ಯಾವುದೇ ಆಕರ್ಷಣೆಗಳಿಗೆ
ಒಳಗಾಗದೆ (ಅವ್ಯಭಿಚಾರಿಣಿ) ಅಚಲ, ಏಕಾಗ್ರ ಹಾಗೂ ದೃಢವಾದ ಸಂಕಲ್ಪ ಶಕ್ತಿಯಿಂದ ನಿಯಂತ್ರಣದಲ್ಲಿಡುತ್ತಾನೋ,
ಅಂತಹ ದೃಢತೆ ಅಥವಾ ಆಂತರಿಕ ಸ್ಥಿರತೆಯೇ ಸಾತ್ತ್ವಿಕ
ಧೃತಿ ಎನಿಸಿಕೊಳ್ಳುತ್ತದೆ.
ಈ ಶ್ಲೋಕ 'ಧೃತಿ' ಅಂದರೆ ಒಳಗಿನ ದೃಢತೆ ಅಥವಾ ಇಚ್ಛಾಶಕ್ತಿಯ
(Will Power) ಮಹತ್ವವನ್ನು ಸೂಚಿಸುತ್ತದೆ ಮತ್ತು ಸಾತ್ವಿಕ ಧೃತಿಯ ಲಕ್ಷಣಗಳನ್ನು ವಿವರಿಸುತ್ತದೆ.
ಮನಃಪ್ರಾಣೇನ್ದ್ರಿಯಕ್ರಿಯಾಃ (ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ನಿಯಂತ್ರಣ):
ಸಾತ್ತ್ವಿಕ ಧೃತಿಯು ಮನುಷ್ಯನ ಅಂತರಂಗದ ಮೂರು ಪ್ರಮುಖ ಶಕ್ತಿಗಳನ್ನು ಹತೋಟಿಯಲ್ಲಿಡುತ್ತದೆ:
1. ಮನಸ್ಸಿನ ನಿಯಂತ್ರಣ: ಮನಸ್ಸಿನಲ್ಲಿ ಮೂಡುವ ಅನಗತ್ಯ ಆಲೋಚನೆಗಳು, ಕಾಮ, ಕ್ರೋಧ, ಆತಂಕ, ಇತ್ಯಾದಿ ವಿಕಾರಗಳನ್ನು
ತಡೆಯುವುದು.
2. ಪ್ರಾಣದ ನಿಯಂತ್ರಣ: ಪ್ರಾಣಾಯಾಮದ
ಮೂಲಕ ಉಸಿರಾಟ ಮತ್ತು ಆಂತರಿಕ ಜೀವಶಕ್ತಿಯನ್ನು ಹತೋಟಿಗೆ ತಂದು ಸಮಸ್ಥಿತಿ ಮತ್ತು ಶರೀರಕ್ಕೆ ಸ್ಥಿರತೆ ನೀಡುವುದು.
3. ಇಂದ್ರಿಯಗಳ ನಿಯಂತ್ರಣ: ಕಣ್ಣು,
ಕಿವಿ, ನಾಲಿಗೆ ಮುಂತಾದ ಜ್ಞಾನೇಂದ್ರಿಯಗಳು ಬಾಹ್ಯ ಜಗತ್ತಿನ ಕೀಳು ಸುಖ ಪಡೆಯುವ ಆಸೆಯಿಂದ ಕೆಟ್ಟ ವಿಷಯಗಳ ಕಡೆಗೆ ಅಥವಾ ತಪ್ಪು ದಾರಿಗೆ ಹೋಗದಂತೆ ತಡೆಯುವುದು.
ಅವ್ಯಭಿಚಾರಿಣ್ಯಾ
ಧೃತ್ಯಾ (ವಿಚಲಿತವಾಗದ ಸಂಕಲ್ಪಶಕ್ತಿ):
'ವ್ಯಭಿಚಾರ' ಎಂದರೆ
ದಾರಿ ತಪ್ಪುವುದು ಅಥವಾ ನಿಷ್ಠೆ ಇಲ್ಲದಿರುವುದು. (ದಾರಿ ತಪ್ಪುವುದು ಎಂದರೆ ತನ್ನ ದಾರಿಯನ್ನು ಬಿಟ್ಟು ಬೇರೆ ಕಡೆಗೆ ಅಲೆಯುವುದು.) 'ಅವ್ಯಭಿಚಾರಿಣಿ' ಎಂದರೆ
ದಾರಿತಪ್ಪದ, ಯಾವುದೇ ಪ್ರಲೋಭನೆಗಳಿಗೂ ಒಳಗಾಗದೆ ಕೇವಲ ಒಂದೇ ಉತ್ತಮ ಗುರಿಗೆ ಬದ್ಧವಾಗಿರುವುದು.
ಸಾತ್ತ್ವಿಕ ಧೃತಿಯುಳ್ಳವನ
ಗಮನವು ಸದಾ ಪರಮಾತ್ಮನ ಮೇಲೆಯೇ ಇರುತ್ತದೆ. ಪರಿಸ್ಥಿತಿಗಳು ಎಷ್ಟೇ ಕಠಿಣವಾಗಿದ್ದರೂ ಅಥವಾ ಎಷ್ಟೇ
ದೊಡ್ಡ ಪ್ರಲೋಭನೆಗಳು ಎದುರಾದರೂ ಅವನು ತನ್ನ ಧರ್ಮದ ಹಾದಿಯಿಂದ ಕದಲುವುದಿಲ್ಲ.
ಯೋಗೇನ (ಯೋಗದ ಮೂಲಕ):
ಈ ರೀತಿಯ ದೃಢತೆಯು ಕೇವಲ ಹಠದಿಂದ ಬರುವುದಿಲ್ಲ. ಇದು ಪ್ರಾಣಾಯಾಮ, ಪರಮಾತ್ಮನ ಮೇಲಿನ ಭಕ್ತಿ, ಮತ್ತು
ನಿರಂತರ ಧ್ಯಾನದ (ಯೋಗದ) ಅಭ್ಯಾಸದಿಂದ ಸಿದ್ಧಿಸುತ್ತದೆ. ಯೋಗವು ಮನಸ್ಸಿಗೆ ಏಕಾಗ್ರ-ಗುರಿಯ ಶಕ್ತಿಯನ್ನು
ನೀಡುತ್ತದೆ ಮತ್ತು ಸಾತ್ತ್ವಿಕ ಸ್ಥಿರತೆ ಸಾಧ್ಯವಾಗುತ್ತದೆ.
ಸಾತ್ತ್ವಿಕ ಧೃತಿ ಎಂದರೆ ಮನುಷ್ಯನ ಅತ್ಯುನ್ನತ ಆತ್ಮಬಲ
ಅಥವಾ ಇಚ್ಛಾಶಕ್ತಿ (Willpower). ಈ ಶಕ್ತಿಯುಳ್ಳ ಸಾಧಕನಿಗೆ ತನ್ನ ಲೌಕಿಕ ಆಸೆಗಳ ಮೇಲೆ ಸಂಪೂರ್ಣ
ಹತೋಟಿ ಇರುತ್ತದೆ. ಅವನ ಆಲೋಚನೆಗಳು ಪ್ರಾಪಂಚಿಕ ಸುಖಗಳ ಕಡೆಗೆ ಹರಿದು ಹೋಗದೆ, ಕೇವಲ ಪರಮಾತ್ಮನ ಕಡೆಗೆ
ಮತ್ತು ಸತ್ಕರ್ಮಗಳ ಕಡೆಗೆ ಮಾತ್ರ ಸರಿಯುತ್ತವೆ. ಇದು ಮನಸ್ಸನ್ನು ನಿಶ್ಚಲವಾಗಿಡುವ ಅದ್ಭುತ ಶಕ್ತಿಯಾಗಿದೆ. ಕಷ್ಟಗಳು ಬಂದಾಗ ಅಥವಾ ಪ್ರಲೋಭನೆಗಳು ಎದುರಾದಾಗ ಈ ದೃಢತೆ ಅಲುಗಾಡುವುದಿಲ್ಲ.
'ಪ್ರಲೋಭನೆ' ಅಥವಾ 'ಪ್ರಲೋಭ'
= ಯಾವುದೋ ಒಂದು ಪ್ರತಿಫಲ, ಹಣ ಅಥವಾ ವಸ್ತುವನ್ನು ಪಡೆಯಲು ಉಂಟಾಗುವ ತಡೆಯಲಾಗದ ಆಸೆ,
ಆಕರ್ಷಣೆ (Allurement / Temptation).
यया तु धर्मकामार्थान् धृत्या धारयतेऽर्जुन ।
प्रसङ्गेन फलाकाङ्क्षी धृतिः सा पार्थ राजसी ॥ १८-३ ४
ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇರ್ಜುನ
ಪ್ರಸಙ್ಗೇನ ಫಲಾಕಾಙ್ಕ್ಷೀ ಧೃತಿಃ ಸಾ ಪಾರ್ಥ ರಾಜಸೀ 18.34
ಪ್ರಸಂಗೇನ ಫಲ-ಆಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ
ಪಾರ್ಥ!
ಕರ್ಮಫಲಗಳನ್ನು ತೀವ್ರವಾಗಿ ಅಪೇಕ್ಷಿಸುವ ಮನುಷ್ಯನು, ಅತಿಯಾದ ಲೌಕಿಕ ಆಸಕ್ತಿಯ ಮತ್ತು ಮಮಕಾರದ ಕಾರಣದಿಂದ
ಧರ್ಮ, ಅರ್ಥ (ಸಂಪತ್ತು) ಮತ್ತು ಕಾಮಗಳನ್ನು (ಲೌಕಿಕ ಸುಖಗಳನ್ನು) ಸಾಧಿಸಲು ಯಾವ ದೃಢತೆಯನ್ನು (ಹಠಶಕ್ತಿಯನ್ನು)
ಬಳಸುತ್ತಾನೋ, ಅಂತಹ ದೃಢತೆ ಅಥವಾ ಹಠ ಅಥವಾ ಸ್ಥಿರತೆಯೇ ರಾಜಸಿಕ ಧೃತಿ.
ಈ ಶ್ಲೋಕದಲ್ಲಿ ರಾಜಸಿಕ ಧೃತಿಯ ಪ್ರಮುಖ ಲಕ್ಷಣಗಳನ್ನುಉಲ್ಲೇಖಿಸಲಾಗಿದೆ:
ಧರ್ಮ-ಕಾಮ-ಅರ್ಥಾನ್
ಧಾರಯತೇ (ಧರ್ಮ-ಅರ್ಥ-ಕಾಮಗಳ ಬೆನ್ನಟ್ಟುವುದು) (ತ್ರಿವರ್ಗಗಳ ಮೇಲಿನ ಪಟ್ಟು):
ಭಾರತೀಯ ತತ್ತ್ವಶಾಸ್ತ್ರದಲ್ಲಿ ಅಥವಾ ಸನಾತನ ಧರ್ಮದಲ್ಲಿ ಜೀವನದ ನಾಲ್ಕು
ಪುರುಷಾರ್ಥಗಳಿವೆ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಸಾತ್ತ್ವಿಕ ಧೃತಿಯು ಮೋಕ್ಷದ
ಕಡೆಗೆ ಮುನ್ನಡೆಸಿದರೆ, ರಾಜಸಿಕ ಧೃತಿ ಉಳ್ಳವರು ಕೇವಲ ಮೊದಲ ಮೂರಕ್ಕೆ ಅಂದರೆ ಧರ್ಮ, ಅರ್ಥ, ಕಾಮಕ್ಕೆ
ಮಾತ್ರ ಪ್ರಾಮುಖ್ಯತೆ ನೀಡುತ್ತಾರೆ. ಇವರು ಮೋಕ್ಷವನ್ನು ಅಂದರೆ ಆಧ್ಯಾತ್ಮಿಕ ಮುಕ್ತಿಯನ್ನು ಸಂಪೂರ್ಣವಾಗಿ
ಮರೆತುಬಿಡುತ್ತಾರೆ. ಇವರು ಧರ್ಮವನ್ನು ಪಾಲಿಸಿದರೂ ಸಹ ಅದು ಕೇವಲ ಪುಣ್ಯ ಸಂಪಾದಿಸಿ ಸ್ವರ್ಗಸುಖ ಅನುಭವಿಸಲು ಅಥವಾ ಸಮಾಜದಲ್ಲಿ ಒಳ್ಳೆಯ ಹೆಸರು,
ಗೌರವ ಮತ್ತು ಕೀರ್ತಿ ಗಳಿಸುವುದಕ್ಕಾಗಿ ಮಾತ್ರ (ಫಲಾಕಾಂಕ್ಷೀ).
ಸಂಪತ್ತು (ಅರ್ಥ) ಮತ್ತು ಆಸೆಗಳ (ಕಾಮ) ಈಡೇರಿಕೆಗಾಗಿಯೇ ಇವರ ಇಡೀ ಜೀವನದ ದೃಢತೆ
ಮುಡಿಪಾಗಿರುತ್ತದೆ ಹೊರತು ಆತ್ಮಶುದ್ಧಿಗಾಗಿ
ಅಲ್ಲ.
ಪ್ರಸಂಗೇನ ಫಲಾಕಾಂಕ್ಷೀ (ಅತಿಯಾದ ಆಸಕ್ತಿ ಮತ್ತು ಫಲದ ಅಪೇಕ್ಷೆ):
ರಾಜಸಿಕ ಸ್ವಭಾವದ ವ್ಯಕ್ತಿಗಳು ಯಾವುದೇ ಕೆಲಸ ಮಾಡಿದರೂ "ಇದರಿಂದ ನನಗೇನು ಲಾಭ?"
ಎಂದು ಯೋಚಿಸುತ್ತಾರೆ. ರಾಜಸಿಕ ದೃಢತೆಯ ಮುಖ್ಯ ಪ್ರೇರಣೆಯೇ ಪ್ರತಿಫಲ.
"ನಾನು ಇಷ್ಟು ಕಷ್ಟಪಟ್ಟರೆ ನನಗೇನು ಸಿಗುತ್ತದೆ?" ಎಂಬ ಲೆಕ್ಕಾಚಾರ ಇವರ ಪ್ರತಿ ಹೆಜ್ಜೆಯಲ್ಲೂ
ಇರುತ್ತದೆ. ಈ ತೀವ್ರ ಆಸಕ್ತಿಯೇ (attachment) ಇವರನ್ನು ಹಗಲಿರುಳು ದುಡಿಯುವಂತೆ ಮಾಡುತ್ತದೆ. ಅವರು
ತಮ್ಮ ಗುರಿಗಳನ್ನು ಸಾಧಿಸಲು ಅತಿಯಾದ ಹಠ ಮತ್ತು ದೃಢತೆಯನ್ನು ಪ್ರದರ್ಶಿಸುತ್ತಾರೆ. ವ್ಯಾಪಾರ, ಉದ್ಯೋಗ, ರಾಜಕೀಯ ಅಥವಾ ಕೌಟುಂಬಿಕ ಜೀವನದಲ್ಲಿ ಇವರು ಅತಿ ದೃಢವಾಗಿ ಕಷ್ಟಪಡುತ್ತಾರೆ.
ಆದರೆ ಆ ಕಷ್ಟದ ಹಿಂದೆ ತೀವ್ರವಾದ ಮೋಹ ಮತ್ತು ಕೇವಲ ಭೌತಿಕ ಉನ್ನತಿ ಹಾಗೂ
ಲೌಕಿಕ ಭೋಗಗಳ ಅತಿಯಾದ
ಆಸೆ, ಚಡಪಡಿಕೆ, ಹಂಬಲ ಮತ್ತು ತವಕ ಇರುತ್ತದೆ. ಇವರು ತಾವು ಮಾಡುವ ಕೆಲಸ, ಗಳಿಸುವ ಹಣ ಮತ್ತು ಅನುಭವಿಸುವ
ಸುಖಭೋಗಗಳಿಗೆ ಸಂಪೂರ್ಣವಾಗಿ ದಾಸರಾಗಿಬಿಡುತ್ತಾರೆ. ಆ ವಿಷಯಗಳಲ್ಲಿ ತೀವ್ರವಾದ ಮಮಕಾರವನ್ನು ಹೊಂದಿರುತ್ತಾರೆ.
ಇದರಿಂದಾಗಿ ಅವರಲ್ಲಿ ಸದಾ ಆತಂಕ, ಸೋಲಿನ ಭಯ ಮತ್ತು ಅಸೂಯೆ ಮನೆಮಾಡಿರುತ್ತದೆ.
ರಾಜಸಿಕ ಧೃತಿ ಎಂದರೆ ಸ್ವಾರ್ಥ, ಲೌಕಿಕ ಯಶಸ್ಸು ಮತ್ತು
ಸುಖಕ್ಕಾಗಿ ಮನುಷ್ಯನು ತೋರಿಸುವ ಅತಿಯಾದ ಇಚ್ಛಾಶಕ್ತಿ (Willpower) ಮತ್ತು ಹಠ ಅಥವಾ ಆಂತರಿಕ ಶಕ್ತಿ.
ರಾಜಸಿಕ ಧೃತಿ ಉಳ್ಳವರು ಸಮಾಜದಲ್ಲಿ ಹೆಸರು, ಕೀರ್ತಿ, ಹಣ (ಅರ್ಥ) ಮತ್ತು ದೈಹಿಕ ಸುಖಭೋಗಗಳು (ಕಾಮ)
ಸಿಗಬೇಕು ಎಂಬ ಉದ್ದೇಶದಿಂದ ಧರ್ಮಕಾರ್ಯಗಳನ್ನೂ ಮಾಡುತ್ತಾರೆ. ಆದರೆ ಇವರಿಗೆ ಪರಮಾತ್ಮನ ಸಾನ್ನಿಧ್ಯ
ಅಥವಾ ಮುಕ್ತಿ ಮುಖ್ಯವಾಗಿರುವುದಿಲ್ಲ. ಇವರ ಪೂರ್ತಿ ಶಕ್ತಿ ಪ್ರಾಪಂಚಿಕ ಲಾಭದ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ.
ರಾಜಸಿಕ ಧೃತಿ ಉಳ್ಳವರು ಲೌಕಿಕವಾಗಿ ಅತ್ಯಂತ ಯಶಸ್ವಿ ಉದ್ಯಮಿಗಳಾಗ ಬಹುದು, ಕೋಟ್ಯಧಿಪತಿಗಳಾಗ ಬಹುದು
ಅಥವಾ ದೊಡ್ಡ ಪದವಿ ಪಡೆಯಬಹುದು. ಆದರೆ ಆಧ್ಯಾತ್ಮಿಕ ದೃಷ್ಟಿಯಿಂದ ಮತ್ತು ಆಂತರಿಕ ಶಾಂತಿಯ ದೃಷ್ಟಿಯಿಂದ
ರಾಜಸಿಕ ಧೃತಿಯು ಮನುಷ್ಯನನ್ನು ಸಂಸಾರದ ಬಂಧನದಿಂದ ಮುಕ್ತಗೊಳಿಸುವುದಿಲ್ಲ. ಅಷ್ಟೇ ಅಲ್ಲದೆ ಫಲ ಸಿಗದೆ
ಇದ್ದಾಗ ಅವರ ದೃಢತೆ ಕ್ರಮೇಣ ಕ್ರೋಧ ಮತ್ತು ನಿರಾಸೆಯಾಗಿ ಬದಲಾಗುತ್ತದೆ.
ನಾಲ್ಕು ಪುರುಷಾರ್ಥಗಳು = ಧರ್ಮ,
ಅರ್ಥ, ಕಾಮ, ಮೋಕ್ಷ. = ತ್ರಿವರ್ಗ + ಅಪವರ್ಗ.
ತ್ರಿವರ್ಗ
= ಧರ್ಮ, ಅರ್ಥ, ಕಾಮ. ಇದು
ಲೌಕಿಕ ಅಥವಾ ಸಂಸಾರ ಜೀವನಕ್ಕೆ
ಸಂಬಂಧಿಸಿದ್ದು. ಬದುಕನ್ನು ಸಮೃದ್ಧವಾಗಿ ನಡೆಸಲು ಇವು ಬೇಕು.
ಅಪವರ್ಗ
= ಮೋಕ್ಷ. ಇದು ಪರಮಾರ್ಥ ಅಥವಾ ಆಧ್ಯಾತ್ಮಿಕ
ಗುರಿ. ಜನನ-ಮರಣಗಳ ಚಕ್ರದಿಂದ ಮುಕ್ತಿ ಪಡೆಯುವುದು.
18-35
यया स्वप्नं भयं शोकं विषादं मदमेव च ।
न विमुञ्चति दुर्मेधा धृतिः सा पार्थ तामसी ॥ १८-३ ५
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ
ನ ವಿಮುಞ್ಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ 18.35
यया स्वप्नं भयं शोकं विषादं मदमेव च ।
न विमुञ्चति दुर्मेधा धृतिः सा पार्थ तामसी ॥ १८-३ ५
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ
ನ ವಿಮುಞ್ಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ 18.35
ಯಯಾ ಸ್ವಪ್ನಮ್ ಭಯಮ್ ಶೋಕಮ್ ವಿಷಾದಮ್ ಮದಮ್ ಏವ ಚ
ನ ವಿಮುಂಚತಿ ದುರ್ಮೇಧಾಃ ಧೃತಿಃ ಸಾ ಪಾರ್ಥ ತಾಮಸೀ
ನ ವಿಮುಂಚತಿ ದುರ್ಮೇಧಾಃ ಧೃತಿಃ ಸಾ ಪಾರ್ಥ ತಾಮಸೀ
ಪಾರ್ಥ!
ದುರ್ಬುದ್ಧಿಯುಳ್ಳ ಅವಿವೇಕಿಯಾದ ಮನುಷ್ಯನು ಯಾವ ತಪ್ಪು ದೃಢತೆಯಿಂದಾಗಿ (ಹಠದಿಂದಾಗಿ) ತನ್ನ ಅತಿಯಾದ
ನಿದ್ದೆ (ಸೋಮಾರಿತನ),
ಭಯ, ದುಃಖ, ನಿರಾಶೆ ಹಾಗೂ ಅಹಂಕಾರಗಳನ್ನು ಬಿಟ್ಟುಕೊಡದೆ
ತನ್ನಲ್ಲೇ ಉಳಿಸಿಕೊಳ್ಳುತ್ತಾನೋ, ಅಂತಹ ನಕಾರಾತ್ಮಕ ದೃಢತೆಯೇ ತಾಮಸಿಕ ಧೃತಿ.
ಈ ಶ್ಲೋಕದಲ್ಲಿ ತಾಮಸಿಕ ಧೃತಿಯುಳ್ಳವರ ಮುಖ್ಯ ಲಕ್ಷಣಗಳ
ವಿವರ ಇದೆ.
ಸ್ವಪ್ನಮ್ (ಅತಿಯಾದ ನಿದ್ದೆ/ಸೋಮಾರಿತನ):
ಇಲ್ಲಿ ಸ್ವಪ್ನ ಎಂದರೆ ಕೇವಲ ರಾತ್ರಿಯ ಕನಸಲ್ಲ. ಹಗಲಿರುಳು
ಸೋಮಾರಿತನದಿಂದ ಕಾಲ ಕಳೆಯುವುದು, ಜವಾಬ್ದಾರಿಗಳಿಂದ ತಪ್ಪಿಸಿಕೊಂಡು ಅಜ್ಞಾನದ ನಿದ್ದೆಯಲ್ಲೇ ಇರಲು ಬಯಸುವುದು. ಕರ್ತವ್ಯದ ಸಮಯದಲ್ಲಿ ಕೆಲಸ ಮಾಡದೆ ಕಾಲಹರಣ
ಮಾಡುವುದು.
ಭಯಮ್ (ಹೆದರಿಕೆ):
ಭವಿಷ್ಯದ ಬಗ್ಗೆ ಇಲ್ಲದ ಸಲ್ಲದ ಕಲ್ಪನೆಗಳನ್ನು ಮಾಡಿಕೊಂಡು,
ಯಾವುದೋ ಭಯ ಭೀತಿಯಲ್ಲಿ ಬದುಕುವುದು ಮತ್ತು ಆ ಭಯದಿಂದ
ಹೊರಬರಲು ಪ್ರಯತ್ನಿಸದೆ ಇರುವುದು. ಹೊಸದೇನನ್ನಾದರೂ ಮಾಡಲು ಹೆದರುವುದು ಮತ್ತು ಸದಾ ಅಸುರಕ್ಷತೆಯ ಭಾವನೆಯಲ್ಲಿರುವುದು.
ಶೋಕಮ್ (ದುಃಖ/ಚಿಂತೆ):
ಹಳೆಯ ಕೆಟ್ಟ ಘಟನೆಗಳನ್ನೇ ನೆನೆದು ಸದಾ ದುಃಖಿಸುತ್ತಿರುವುದು.
ಜೀವನದ ಸಕಾರಾತ್ಮಕ ಮುಖವನ್ನು ನೋಡಲು ನಿರಾಕರಿಸುವುದು.
ವಿಷಾದಮ್ (ನಿರಾಶೆ/ಖಿನ್ನತೆ):
ಯಾವುದೇ ಉತ್ಸಾಹವಿಲ್ಲದೆ, ಸದಾ ಕಾಲ ನಕಾರಾತ್ಮಕವಾಗಿ ಆಲೋಚಿಸುವುದು, "ನನ್ನಿಂದ
ಇದು ಸಾಧ್ಯವಿಲ್ಲ, ನನ್ನ ಬದುಕು ಇಷ್ಟೇ" ಎಂಬ ಕೀಳರಿಮೆಯಿಂದ
ಅಳುಮುಂಜಿಯಾಗಿ ಕುಳಿತುಕೊಳ್ಳುವ ಸ್ವಭಾವವನ್ನು ನೆಚ್ಚಿಕೊಂಡಿರುವುದು. ತಾಮಸ ಬುದ್ಧಿಯವರು
ಈ ದುಃಖದಲ್ಲೇ ಒಂದು ರೀತಿಯ ವಿಕೃತ ಆನಂದವನ್ನು ಕಾಣುತ್ತಾರೆ ಮತ್ತು ಯಾರಾದರೂ ದಾರಿ ತೋರಿಸಿದರೂ ಹೊರಬರಲು
ನಿರಾಕರಿಸುತ್ತಾರೆ.
ಮದಮ್ (ಅಹಂಕಾರ/ಮೂಢ ಹೆಮ್ಮೆ):
ಯಾವುದೇ ಯೋಗ್ಯತೆ ಇಲ್ಲದಿದ್ದರೂ ಹಾಗೂ
ತಮಗೇನೂ ತಿಳಿಯದಿದ್ದರೂ ತಾವೇ ಶ್ರೇಷ್ಠ ಎಂಬ ಅಜ್ಞಾನದ ಅಹಂಕಾರವನ್ನು ಹೊಂದಿರುವುದು. ಅಷ್ಟೇ ಅಲ್ಲದೆ
ತಾವೇ ಶ್ರೇಷ್ಠ ಎಂಬ ಭ್ರಮೆಯಲ್ಲಿದ್ದುಕೊಂಡು,
ಯಾರ ಹಿತವಚನವನ್ನೂ ಕೇಳದೆ ತನ್ನ ಮೂರ್ಖತನವನ್ನೇ ಸಮರ್ಥಿಸಿಕೊಳ್ಳುವುದು.
ನ ವಿಮುಂಚತಿ (ಬಿಟ್ಟುಬಿಡದಿರುವುದು):
ಇವೆಲ್ಲವೂ ತನಗೆ ಕೆಡುಕು ಉಂಟುಮಾಡುತ್ತವೆ ಎಂದು ತಿಳಿದಿದ್ದರೂ,
ತನ್ನ ತಪ್ಪು ಹಠಮಾರಿತನದಿಂದ ಇವುಗಳನ್ನು ಬಿಟ್ಟುಬಿಡದಿರುವುದು.
ದುರ್ಮೇಧಾಃ (ಅವಿವೇಕಿ/ದುರ್ಬುದ್ಧಿ):
ಯಾರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಯುವ ಯೋಗ್ಯತೆ ಇಲ್ಲವೋ ಅವನು ದುರ್ಮೇಧ.
ಇವನು ತನ್ನ ಇಚ್ಛಾಶಕ್ತಿಯನ್ನು
ಪ್ರಗತಿಗಾಗಿ ಬಳಸದೆ, ಯಾವುದು ತನಗೆ ಹಾನಿಕಾರಕವೋ ಅದನ್ನೇ ಅತ್ಯಂತ ದೃಢವಾಗಿ, ಹಠದಿಂದ ಹಿಡಿದುಕೊಂಡಿರುತ್ತಾನೆ.
ತಪ್ಪು ಅಭ್ಯಾಸಗಳು, ವ್ಯಸನಗಳು ಅಥವಾ ಕೆಟ್ಟ ಯೋಚನೆಗಳನ್ನು ಬಿಡಲು ಇವನ ಮನಸ್ಸು ಒಪ್ಪುವುದಿಲ್ಲ.
ಇದು ಅತ್ಯಂತ ಕೆಳಮಟ್ಟದ ಇಚ್ಛಾಶಕ್ತಿಯಾಗಿದೆ.
ತಾಮಸಿಕ ಧೃತಿ ಎಂದರೆ ಒಳ್ಳೆಯದನ್ನು ಸಾಧಿಸುವ ಇಚ್ಛಾಶಕ್ತಿಯಲ್ಲ;
ಬದಲಿಗೆ ತಪ್ಪು ನಂಬಿಕೆಗಳು, ಆಲಸ್ಯ ಮತ್ತು ನಕಾರಾತ್ಮಕ ಗುಣಗಳನ್ನು ಬಿಡಲು ಒಪ್ಪದ ದುರಾಗ್ರಹ ಅಥವಾ ಕೆಟ್ಟ
ಹಠ. ಇಂತಹ ವ್ಯಕ್ತಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಬಯಸದೆ,
ತಮ್ಮ ದುಃಖ ಮತ್ತು ಅಜ್ಞಾನದಲ್ಲೇ ಮುಳುಗಿರಲು ದೃಢಸಂಕಲ್ಪ ಮಾಡಿರುತ್ತಾರೆ.
सुखं त्विदानीं त्रिविधं श्रृणु मे भरतर्षभ ।
अभ्यासाद्रमते यत्र दुःखान्तं च निगच्छति ॥ १८-३ ६
ಸುಖಂ ತ್ವಿದಾನೀಂ ತ್ರಿವಿಧಂ ಶ್ರೃಣು ಮೇ ಭರತರ್ಷಭ
ಅಭ್ಯಾಸಾದ್ರಮತೇ ಯತ್ರ ದುಃಖಾನ್ತಂ ಚ ನಿಗಚ್ಛತಿ 18.36
ಭರತವಂಶ
ಶ್ರೇಷ್ಠನಾದ ಅರ್ಜುನನೇ! ಈಗ ನೀನು ನನ್ನಿಂದ ಮೂರು ವಿಧದ ಸುಖಗಳ ಬಗ್ಗೆ ಕೇಳು. ಯಾವ ಸುಖದಲ್ಲಿ
ಮನುಷ್ಯನು ದೀರ್ಘಕಾಲದ ಅಭ್ಯಾಸ ಅಥವಾ ಸಾಧನೆಯ ಮೂಲಕ ಆನಂದವನ್ನು ಅನುಭವಿಸುತ್ತಾನೋ ಮತ್ತು ಯಾವುದರಿಂದ
ಅವನ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆಯೋ, (ಅಂತಹ ಸುಖದ ವಿವರಣೆ ಹೀಗಿದೆ)
ಹಿಂದಿನ ಶ್ಲೋಕಗಳಲ್ಲಿ ಬುದ್ಧಿ ಮತ್ತು ಧೃತಿಗಳ ಪ್ರಕಾರಗಳು
ಮತ್ತು ಗುಣಗಳನ್ನು ತಿಳಿಸಿದ ನಂತರ, ಇಲ್ಲಿ ಈ ಶೋಕದಲ್ಲಿ, ಮನುಷ್ಯನು ತನ್ನ ಜೀವನದಲ್ಲಿ ಬಯಸುವ ಸುಖದ ಮೂರು ಪ್ರಕಾರಗಳು ಮತ್ತು
ಅಭ್ಯಾಸ ಅಥವಾ ಸಾಧನೆಯ ಮೂಲಕ ದೊರೆತು ಆನಂದವನ್ನುಂಟು ಮಾಡುವ ಮತ್ತು ಜೀವನದ ಎಲ್ಲಾ ದುಃಖಗಳನ್ನು ಶಾಶ್ವತವಾಗಿ
ನಿವಾರಿಸುವಂತಹ ಸುಖದ ವಿವರಣೆ ಕೊಡುವುದಕ್ಕೆ ಮುನ್ನುಡಿಯಂತಿದೆ.
18-37
यत्तदग्रे विषमिव परिणामेऽमृतोपमम् ।
तत्सुखं सात्त्विकं प्रोक्तम् आत्मबुद्धिप्रसादजम् ॥ १८-३ ७
ಯತ್ತದಗ್ರೇ ವಿಷಮಿವ ಪರಿಣಾಮೇಮೃತೋಪಮಮ್
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್ 18.37
ಯತ್ ತತ್ ಅಗ್ರೇ ವಿಷಮ್-ಇವ ಪರಿಣಾಮೇ ಅಮೃತ-ಉಪಮಮ್
यत्तदग्रे विषमिव परिणामेऽमृतोपमम् ।
तत्सुखं सात्त्विकं प्रोक्तम् आत्मबुद्धिप्रसादजम् ॥ १८-३ ७
ಯತ್ತದಗ್ರೇ ವಿಷಮಿವ ಪರಿಣಾಮೇಮೃತೋಪಮಮ್
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್ 18.37
ತತ್ ಸುಖಮ್ ಸಾತ್ತ್ವಿಕಮ್ ಪ್ರೋಕ್ತಮ್ ಆತ್ಮ-ಬುದ್ಧಿ-ಪ್ರಸಾದ-ಜಮ್
ಯಾವ ಸುಖವು ಸಾಧನೆಯ ಆರಂಭದಲ್ಲಿ ವಿಷದಂತೆ ಅತ್ಯಂತ ಕಹಿಯಾಗಿ ಅಥವಾ ಕಷ್ಟಕರವಾಗಿ
ಭಾಸವಾಗುತ್ತದೆಯೋ, ಆದರೆ ನಿರಂತರ ಅಭ್ಯಾಸದ ಕೊನೆಯಲ್ಲಿ ಅಮೃತದಂತೆ ಮಧುರವಾಗಿದ್ದು ಪರಮಾನಂದವನ್ನು
ನೀಡುತ್ತದೆಯೋ ಮತ್ತು ಯಾವುದು ಆತ್ಮ ಹಾಗೂ ಬುದ್ಧಿಯ ಶುದ್ಧತೆ ಮತ್ತು ಪ್ರಸನ್ನತೆಯಿಂದ ಹುಟ್ಟುತ್ತದೆಯೋ,
ಅಂತಹ ಸುಖವನ್ನು 'ಸಾತ್ತ್ವಿಕ ಸುಖ' ಎಂದು ಕರೆಯಲಾಗುತ್ತದೆ.
ಈ ಶೋಕ ಮೂರು ವಿಧದ ಸುಖಗಳಲ್ಲಿ
ಮೊದಲನೆಯದಾದ ಸಾತ್ತ್ವಿಕ ಸುಖದ (ಸತ್ತ್ವಗುಣದಿಂದ ಹುಟ್ಟುವ ಶ್ರೇಷ್ಠ ಸುಖದ) ಮೂರು
ಮುಖ್ಯ ಆಯಾಮಗಳನ್ನು ವಿವರಿಸುತ್ತದೆ.
ಅಗ್ರೇ ವಿಷಮಿವ (ಆರಂಭದಲ್ಲಿ ವಿಷದಂತೆ):
ಯಾವುದೇ ಒಳ್ಳೆಯ
ಕೆಲಸ, ಅಭ್ಯಾಸ, ಆಧ್ಯಾತ್ಮಿಕ ಸಾಧನೆ ಅಥವಾ
ಯಶಸ್ಸಿನ ಹಾದಿಯ ಆರಂಭ ಕಹಿಯಾಗಿರುತ್ತದೆ ಅಥವಾ ಮನಸ್ಸು ಮತ್ತು ಇಂದ್ರಿಯಗಳಿಗೆ ಕಷ್ಟವಾಗುತ್ತದೆ.
ಉದಾಹರಣೆಗೆ: ಮುಂಜಾನೆ ಬೇಗ
ಎದ್ದು ಯೋಗ/ವ್ಯಾಯಾಮ ಮಾಡುವುದು, ಪರೀಕ್ಷೆಗಾಗಿ ದಿನವಿಡೀ ಕಷ್ಟಪಟ್ಟು ಓದುವುದು, ಕೆಟ್ಟ ಅಭ್ಯಾಸಗಳನ್ನು
ಬಿಡುವುದು, ಧ್ಯಾನ ಮಾಡುವುದು ಇವೆಲ್ಲವೂ ಆರಂಭದಲ್ಲಿ 'ವಿಷ'ದಂತೆ ಅತ್ಯಂತ ಕಹಿಯಾಗಿ, ಬೇಸರ ತರಿಸುವಂತೆ
ಇರುತ್ತವೆ. ಮನಸ್ಸು ಇದನ್ನು ನಿರಾಕರಿಸುತ್ತದೆ, ಏಕೆಂದರೆ ಮನಸ್ಸು ಸದಾ ಹಗುರವಾದ ಮತ್ತು
ತತ್ಕಾಲದ ಸುಖಗಳನ್ನೇ ಬಯಸುತ್ತದೆ.
ಪರಿಣಾಮೇ ಅಮೃತೋಪಮಮ್ (ಕೊನೆಯಲ್ಲಿ ಅಮೃತದಂತೆ):
ಆರಂಭದ ಕಷ್ಟವನ್ನು ಸಹಿಸಿಕೊಂಡು
ನಿಯಮಿತವಾಗಿ ಅಭ್ಯಾಸ ಮಾಡಿದಾಗ ಸಿಗುವ ಫಲಿತಾಂಶ ಅಮೃತದಂತಿರುತ್ತದೆ. ಕಷ್ಟಪಟ್ಟು ಓದಿದ ವಿದ್ಯಾರ್ಥಿ
ಹೆಚ್ಚಿನ ಅಂಕಗಳನ್ನು ಪಡೆದು ಅತ್ಯುತ್ತಮ ಉದ್ಯೋಗ ಸಿಕ್ಕಾಗ, ದಿನಾ ವ್ಯಾಯಾಮ ಮಾಡಿದವನು ದೀರ್ಘಕಾಲದ ಒಳ್ಳೆಯ ಆರೋಗ್ಯ ಪಡೆದಾಗ ಸಿಗುವ ಆನಂದವೇ
'ಅಮೃತೋಪಮ'. ಇದು ತಾತ್ಕಾಲಿಕವಲ್ಲ, ದೀರ್ಘಕಾಲ ಬಾಳಿ ಎಂದಿಗೂ ನಾಶವಾಗದ ಸುಖ.
ಆತ್ಮಬುದ್ಧಿಪ್ರಸಾದಜಮ್ (ಆತ್ಮ ಮತ್ತು ಬುದ್ಧಿಯ ಶುದ್ಧತೆಯಿಂದ ಹುಟ್ಟುವುದು):
ಸಾತ್ತ್ವಿಕ ಸುಖವು ಹೊರಗಿನ ಭೌತಿಕ ವಸ್ತುಗಳಿಂದ, ಹಣದಿಂದ ಅಥವಾ ಇಂದ್ರಿಯ ಭೋಗಗಳಿಂದ ಸಿಗುವಂತದ್ದಲ್ಲ. ಲೌಕಿಕ ಸುಖಗಳು ಕಣ್ಣು, ಕಿವಿ, ಮೂಗು ಮುಂತಾದ ಇಂದ್ರಿಯಗಳು
ಬಾಹ್ಯ ವಸ್ತುಗಳೊಂದಿಗೆ ಸಂಪರ್ಕ ಹೊಂದಿದಾಗ ತಾತ್ಕಾಲಿಕವಾಗಿ ಹುಟ್ಟುತ್ತವೆ. ಆದರೆ ಸಾತ್ತ್ವಿಕ ಸುಖವು
ಮನುಷ್ಯನ ಬುದ್ಧಿಯು ಯಾವಾಗ ಲೌಕಿಕ ಆಸೆಗಳಿಂದ ಮುಕ್ತವಾಗಿ, ಶುದ್ಧವಾಗಿ ತನ್ನ ಆತ್ಮದಲ್ಲಿ
ಸ್ಥಿರವಾಗುತ್ತದೆಯೋ, ಆಗ ಒಳಗಿನಿಂದಲೇ ಉಕ್ಕಿ ಬರುವಂತಹ
ಆಂತರಿಕ ಆನಂದವಾಗಿದೆ. ಇದಕ್ಕೆ ಯಾವುದೇ ಬಾಹ್ಯ ಸಾಧನಗಳ ಅಗತ್ಯವಿರುವುದಿಲ್ಲ.
ಸಾತ್ತ್ವಿಕ ಸುಖದ ಮೂಲ ಸೂತ್ರವೇ, ಕೈ ಕೆಸರಾದರೆ ಬಾಯಿಗೆ
ಮೊಸರು ಎನ್ನುವ ಗಾದೆಯಂತೆ, "ಮೊದಲು
ಕಷ್ಟ, ಆಮೇಲೆ ಸುಖ". ಯಾವುದೇ ಒಳ್ಳೆಯ ಕೆಲಸ, ಜ್ಞಾನಾರ್ಜನೆ ಅಥವಾ
ಆಧ್ಯಾತ್ಮಿಕ ಸಾಧನೆಯನ್ನು ಆರಂಭಿಸಿದಾಗ ಮನಸ್ಸು ಮತ್ತು ಇಂದ್ರಿಯಗಳಿಗೆ ಅದು ಇಷ್ಟವಾಗುವುದಿಲ್ಲ.
ಇಂದ್ರಿಯಗಳನ್ನು ಹತೋಟಿಗೆ ತರುವುದು, ಮನಸ್ಸನ್ನು ಶಿಸ್ತಿಗೆ ಒಳಪಡಿಸುವುದು ಆರಂಭದಲ್ಲಿ ಎಲ್ಲರಿಗೂ
ವಿಷ ಕುಡಿದಂತೆ ಕಷ್ಟ ಅನಿಸುತ್ತದೆ. ಆದರೆ, ಬೆಳಿಗ್ಗೆ ಬೇಗ ಎದ್ದು ಧ್ಯಾನ ಮಾಡುವುದು, ಶಿಸ್ತಿನ ಜೀವನ
ನಡೆಸುವುದು, ಕೆಟ್ಟ ಹವ್ಯಾಸಗಳನ್ನು ಬಿಡುವುದು, ಇಂತಹ ಕಠಿಣ ಸಾಧನೆಯನ್ನು ಯಾರು ಕಷ್ಟ ಸಹಿಸಿಕೊಂಡು
ಮಾಡುತ್ತಾರೋ, ಅವರಿಗೆ ಕೊನೆಯಲ್ಲಿ ಸಿಗುವ ಮಾನಸಿಕ ನೆಮ್ಮದಿ, ಶಾಂತಿ ಮತ್ತು ಆತ್ಮದ ಆನಂದ ಅಮೃತದಂತೆ
ಶಾಶ್ವತವಾಗಿರುತ್ತದೆ. ಇದು ಕೇವಲ ಹೊರಗಿನ ವಸ್ತುಗಳಿಂದ ಸಿಗುವ ಸುಖವಲ್ಲ, ಒಳಗಿನ ಆತ್ಮಶುದ್ಧಿಯಿಂದ
ಉಕ್ಕಿ ಹರಿಯುವ ಪರಮಾನಂದ.
ಇಲ್ಲಿ, ಹಿಂದಿನ ಶ್ಲೋಕದಲ್ಲಿ ಪ್ರತಾಪಿಸಿರುವ ಎರಡು
ಅಂಶಗಳಾದ, ಧೀರ್ಘ ಕಾಲದ ಅಭ್ಯಾಸ ಮತ್ತು ದುಃಖಗಳ ಅಂತ್ಯದ ವಿಷಯಗಳ ಬಗ್ಗೆ ಪುನಃ ಒಮ್ಮೆ ಗಮನ ಹರಿಸುವುದು ಸೂಕ್ತ ಅಂತ ಅನ್ನಿಸುತ್ತಿದೆ:
ಅಭ್ಯಾಸಾತ್ ರಮತೇ (ಅಭ್ಯಾಸದಿಂದ
ಸಿಗುವ ಆನಂದ):
ಲೌಕಿಕ ಸುಖಗಳು ತಕ್ಷಣಕ್ಕೆ ಸಿಗುತ್ತವೆ (ಉದಾಹರಣೆಗೆ
ರುಚಿಯಾದ ಆಹಾರ ತಿನ್ನುವುದರಿಂದ, ಸಿನಿಮಾ ನೋಡುವುದರಿಂದ, ಇತ್ಯಾದಿ). ಈ ತರದ ಕ್ಷಣಿಕವಾದ ಇಂದ್ರಿಯ
ಸುಖಗಳು ಆರಂಭದಲ್ಲಿ ಸಿಹಿಯಾಗಿರುತ್ತವೆ ಮತ್ತು ತಕ್ಷಣಕ್ಕೆ ಮಜಾ ನೀಡಬಹುದು,
ಆದರೆ ಅವು ಶಾಶ್ವತವಲ್ಲ. ನಿಜವಾದ, ಶಾಶ್ವತವಾದ ಮತ್ತು ಶ್ರೇಷ್ಠವಾದ
ಸಾತ್ತ್ವಿಕ ಸುಖವು ತಕ್ಷಣಕ್ಕೆ ಸಿಗುವುದಿಲ್ಲ. ಅದಕ್ಕೆ ಅಭ್ಯಾಸ, ದೀರ್ಘಕಾಲದ
ಶಿಸ್ತು, ಸಾಧನೆ ಅಥವಾ ನಿರಂತರ
ಪ್ರಯತ್ನ ಬೇಕಾಗುತ್ತದೆ. ಸಾತ್ವಿಕ ಸುಖ ಅಂದರೆ
ಆಧ್ಯಾತ್ಮಿಕ ಸುಖ, ಜ್ಞಾನದ ಸುಖ ಅಥವಾ ಆರೋಗ್ಯಕರ ಜೀವನದ ಸುಖಗಳು. ಇದರ ಪ್ರಾಪ್ತಿಗಾಗಿ ಮಾಡುವ ಸಾಧನೆಗಳು
ಆರಂಭದಲ್ಲಿ ಕಷ್ಟ ಎನಿಸಿದರೂ, ದೀರ್ಘಕಾಲದ ಅಭ್ಯಾಸ, ಯೋಗ ಮಾಡುವುದು, ಓದುವುದು, ಜ್ಞಾನ ಮತ್ತು ಧ್ಯಾನ
ಮಾಡುವುದರ ಮೂಲಕ ದೊರಕುತ್ತದೆ. ಇದರ ಅಭ್ಯಾಸ ಮಾಡುತ್ತಾ ಹೋದಂತೆ ಮನಸ್ಸು ಅದರಲ್ಲಿ ಸ್ಥಿರವಾಗಿ ಅದ್ಭುತವಾದ
ಆನಂದವನ್ನು ಅನುಭವಿಸಲು ತೊಡಗುತ್ತದೆ.
ದುಃಖಾಂತಂ ಚ ನಿಗಚ್ಛತಿ
(ದುಃಖಗಳ ಅಂತ್ಯ):
ಭೌತಿಕ ವಸ್ತುಗಳಿಂದ ಸಿಗುವ ಸುಖವು ಲೌಕಿಕವಾದ ರಾಜಸಿಕ ಅಥವಾ ತಾಮಸಿಕ ಸುಖ, ಮತ್ತು ಅದು ತಾತ್ಕಾಲಿಕ. ಅದು ಮುಗಿದ ನಂತರ ದುಃಖ, ಅತೃಪ್ತಿ ಅಥವಾ ಜಿಗುಪ್ಸೆಗೆ ಕಾರಣವಾಗುತ್ತವೆ. ಉದಾಹರಣೆಗೆ, ತುಂಬಾ ಹಣ ಸಿಕ್ಕಿದಾಗ ಅಥವಾ ಹೊಸ ಕಾರು ಕೊಂಡಾಗ ಸಿಗುವ ಸುಖ ಕೆಲವು
ದಿನಗಳ ನಂತರ ಮಾಸಿಹೋಗುತ್ತದೆ. ಆದರೆ ಅತ್ಯುನ್ನತ ವಾದ ಸಾತ್ತ್ವಿಕ ಸುಖವು ಕೇವಲ ತಾತ್ಕಾಲಿಕ ಸುಖವಲ್ಲ,
ಅದು ಮನುಷ್ಯನ ಜೀವನದ ಎಲ್ಲಾ
ದುಃಖಗಳನ್ನೂ ಬೇರುಸಹಿತ ಕಿತ್ತೊಗೆಯುವ ಶಕ್ತಿ ಉಳ್ಳದ್ದಾಗಿದೆ.
विषयेन्द्रियसंयोगात् यत्तदग्रेऽमृतोपमम् ।
परिणामे विषमिव तत्सुखं राजसं स्मृतम् ॥ १८-३ ८
ವಿಷಯೇನ್ದ್ರಿಯಸಂಯೋಗಾತ್ ಯತ್ತದಗ್ರೇಮೃತೋಪಮಮ್
ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಮ್ 18.38
ವಿಷಯ - ಇಂದ್ರಿಯ - ಸಂಯೋಗಾತ್ ಯತ್ ತತ್ ಅಗ್ರೇ ಅಮೃತ - ಉಪಮಮ್
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್
ಬಾಹ್ಯ ಪ್ರಪಂಚದ ಭೋಗವಸ್ತುಗಳು ಮತ್ತು ನಮ್ಮ ಇಂದ್ರಿಯಗಳ ಸಂಪರ್ಕದಿಂದ ಹುಟ್ಟುವ
ಯಾವ ಸುಖವು, ಆರಂಭದಲ್ಲಿ ಅಮೃತದಂತೆ
ಅತ್ಯಂತ ಮಧುರವಾಗಿ ತೋರುತ್ತದೆಯೋ, ಆದರೆ ಕೊನೆಯಲ್ಲಿ ವಿಷದಂತೆ ಕಹಿಯಾದ ಮತ್ತು ದುಃಖದಾಯಕವಾದ
ಪರಿಣಾಮವನ್ನು ನೀಡುತ್ತದೆಯೋ, ಅಂತಹ ಲೌಕಿಕ ಸುಖವನ್ನು ರಾಜಸಿಕ
ಸುಖ ಎಂದು ಕರೆಯಲಾಗುತ್ತದೆ
ರಾಜಸಿಕ ಸುಖವು ಕ್ಷಣಿಕವಾದ ಪ್ರಾಪಂಚಿಕ ಆಕರ್ಷಣೆಗಳಿಂದ
ಸಿಗುವ ಸುಖವಾಗಿದ್ದು, ಕೇವಲ ಇಂದ್ರಿಯಗಳನ್ನು ತೃಪ್ತಿಪಡಿಸುವುದರ ಮೇಲೆಯೇ ಆಧಾರಿತವಾಗಿರುತ್ತದೆ.
ಮತ್ತು ಇವು ಮನುಷ್ಯನಿಗೆ ತಕ್ಷಣದ ದೈಹಿಕ ಅಥವಾ ಮಾನಸಿಕ ತೃಪ್ತಿ ನೀಡುವ ಭೋಗಗಳು. ಆರಂಭದಲ್ಲಿ ಇಂತಹ
ಸುಖವನ್ನು ಅನುಭವಿಸುವಾಗ ಮನುಷ್ಯನಿಗೆ ತುಂಬಾ
ಆನಂದವಾಗುತ್ತದೆ, ಸ್ವರ್ಗ ಸುಖ ಸಿಕ್ಕಂತೆ ಭಾಸವಾಗುತ್ತದೆ (ಅಮೃತೋಪಮಮ್). ಆದರೆ ಈ ಸುಖವು ಶಾಶ್ವತವಲ್ಲದ್ದಾಗಿದ್ದು, ಅವುಗಳ ಅತಿಯಾದ ವ್ಯಾಮೋಹ ಮತ್ತು
ಭೋಗದ ಅಂತ್ಯವು ಮನುಷ್ಯನನ್ನು ದೈಹಿಕ ಕಾಯಿಲೆಗಳು, ಮಾನಸಿಕ ಅಶಾಂತಿ, ಆತಂಕ ಮತ್ತು ಪಾಪಪ್ರಜ್ಞೆಗಳಿಗೀಡು
ಮಾಡಿ, ಆಧ್ಯಾತ್ಮಿಕ ಪ್ರಗತಿಯನ್ನು ಕುಂಠಿತಗೊಳಿಸಿ, ಕೊನೆಗೆ ವಿಷದಂತಹ ದುಃಖವನ್ನು ತಂದೊಡ್ಡುತ್ತದೆ.
18-39
यदग्रे चानुबन्धे च सुखं मोहनमात्मनः ।
निद्रालस्यप्रमादोत्थं तत्तामसमुदाहृतम् ॥ १८-३ ९
ಯದಗ್ರೇ ಚಾನುಬನ್ಧೇ ಚ ಸುಖಂ ಮೋಹನಮಾತ್ಮನಃ
ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ 18.39
ಯತ್ ಅಗ್ರೇ ಚ ಅನುಬಂಧೇ ಚ ಸುಖಮ್ ಮೋಹನಮ್ ಆತ್ಮನಃ
यदग्रे चानुबन्धे च सुखं मोहनमात्मनः ।
निद्रालस्यप्रमादोत्थं तत्तामसमुदाहृतम् ॥ १८-३ ९
ಯದಗ್ರೇ ಚಾನುಬನ್ಧೇ ಚ ಸುಖಂ ಮೋಹನಮಾತ್ಮನಃ
ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ 18.39
ನಿದ್ರಾ - ಆಲಸ್ಯ - ಪ್ರಮಾದ – ಉತ್ತಮ್ ತತ್ ತಾಮಸಮ್ ಉದಾಹೃತಮ್
ಯಾವ ಸುಖವು ಆರಂಭದಲ್ಲಿಯೂ
ಮತ್ತು ಅದರ ಅಂತಿಮ ಪರಿಣಾಮದಲ್ಲಿಯೂ ಆತ್ಮಕ್ಕೆ
ಕೇವಲ ಭ್ರಮೆ ಮತ್ತು ಅಜ್ಞಾನವನ್ನುಂಟು ಮಾಡುತ್ತದೆಯೋ, ಹಾಗೂ ಯಾವುದು ಅತಿಯಾದ
ನಿದ್ರೆ, ಸೋಮಾರಿತನ ಮತ್ತು ಬೇಜವಾಬ್ದಾರಿತನದಿಂದ ಹುಟ್ಟುತ್ತದೆಯೋ, ಅಂತಹ ಸುಖವನ್ನು
ತಾಮಸಿಕ
ಸುಖ ಎಂದು ಕರೆಯಲಾಗುತ್ತದೆ.
ಮೋಹನಮಾತ್ಮನಃ (ಆತ್ಮನ / ಬುದ್ಧಿಯ
ಭ್ರಮೆ):
ತಾಮಸಿಕ ಸುಖದ ಮುಖ್ಯ ಲಕ್ಷಣವೆಂದರೆ ಅದು ಮನುಷ್ಯನಿಗೆ
ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ತಿಳಿಯದಂತೆ ಮಾಡುತ್ತದೆ, ಮತ್ತು ಮನುಷ್ಯನ ವಿವೇಚನಾ
ಶಕ್ತಿಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸುತ್ತದೆ. ಮನುಷ್ಯನು ತನ್ನ ಅಜ್ಞಾನ ಮತ್ತು ಸೋಮಾರಿತನವನ್ನೇ
ದೊಡ್ಡ ಸುಖವೆಂಬ ಭ್ರಮೆಗೊಳಗಾಗುತ್ತಾನೆ. ಇದು ನಿಜವಾದ ಸುಖವೇ ಅಲ್ಲ. ತಾಮಸಿಕ ಸುಖಕ್ಕೆ ಒಳಗಾದವನು
ತನ್ನನ್ನು ತಾನು ತಿದ್ದಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ. ತನ್ನ ಸೋಮಾರಿತನ ಮತ್ತು ದುರಭ್ಯಾಸಗಳನ್ನೇ
ಅತ್ಯಂತ ಆರಾಮದಾಯಕ ಸ್ಥಿತಿ ಎಂದು ನಂಬಿ ಅದರಲ್ಲಿಯೇ ಕೊಳೆಯುತ್ತಾನೆ.
ನಿದ್ರಾಲಸ್ಯಪ್ರಮಾದೋತ್ಥಮ್ (ನಿದ್ರೆ, ಸೋಮಾರಿತನ ಮತ್ತು ಅಜಾಗರೂಕತೆಗಳಿಂದ / ಬೇಜವಾಬ್ದಾರಿತನದಿಂದ ಹುಟ್ಟುವ):
ತಾಮಸಿಕ ಸುಖವು ಮೂರು ದುರ್ಗುಣಗಳಿಂದ ಹುಟ್ಟುತ್ತದೆ:
1. ನಿದ್ರೆ (Sleep/Stupor):
ಶಾರೀರಿಕ ಅಗತ್ಯಕ್ಕಿಂತ ಅತಿಯಾಗಿ ನಿದ್ರಿಸುವುದು ಮತ್ತು ಸದಾ ಮಂಪರಿನ ಸ್ಥಿತಿಯಲ್ಲಿರುವುದು.
ಇಲ್ಲಿ ನಿದ್ರೆ ಎಂದರೆ
ಕೇವಲ ಶರೀರಕ್ಕೆ ಬೇಕಾದ ವಿಶ್ರಾಂತಿಯಲ್ಲ. ಕರ್ತವ್ಯದ ಸಮಯದಲ್ಲಿಯೂ ಕುಂಭಕರ್ಣನಂತೆ ಅತಿಯಾಗಿ ನಿದ್ದೆ
ಮಾಡುವುದರಲ್ಲೇ ಆನಂದ ಕಾಣುವುದು.
2. ಆಲಸ್ಯ (Laziness):
ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಮೈಗಳ್ಳತನ ಪ್ರದರ್ಶಿಸುವುದು, ಕೆಲಸದಿಂದ ಓಡಿಹೋಗಿ ಸುಮ್ಮನೆ ಸೋಮಾರಿಯಾಗಿ ಕಾಲ ಕಳೆಯುವುದರಲ್ಲೇ ಆನಂದ ಪಡುವುದು. ಮಾಡಬೇಕಾದ
ಕೆಲಸಗಳನ್ನು ಮುಂದೂಡುವುದು (Procrastination) ಮತ್ತು ಶ್ರಮ ಪಡಲು ಇಷ್ಟಪಡದಿರುವುದು.
3. ಪ್ರಮಾದ
(Madness/Negligence): ಯಾವುದು ಸರಿ, ಯಾವುದು ತಪ್ಪು ಎಂಬ
ಪ್ರಜ್ಞೆ ಇಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುವುದು. ಕರ್ತವ್ಯ ಪ್ರಜ್ಞೆ ಇಲ್ಲದಿರುವುದು, ಉದಾಸೀನತೆ,
ಅಸಡ್ಡೆ
ಮತ್ತು ಹುಚ್ಚುತನದ ನಡವಳಿಕೆ. ಮಾಡಬಾರದ ತಪ್ಪು
ಕೆಲಸಗಳನ್ನು ಮಾಡುವುದು, ಮಾದಕ ದ್ರವ್ಯಗಳಿಗೆ ದಾಸರಾಗುವುದು, ಸಮಯ ಪ್ರಜ್ಞೆ ಇಲ್ಲದೆ ಅಜಾಗರೂಕತೆಯಿಂದ
ಬದುಕುವುದು.
ಯದಗ್ರೇ ಚ ಅನುಬಂಧೇ
ಚ ಮೋಹನಮ್ (ಎಲ್ಲಾ ಹಂತದಲ್ಲೂ
ಭ್ರಮೆ):
ತಾಮಸಿಕ ಸುಖದ ವಿಶೇಷವೇನೆಂದರೆ, ಇದನ್ನು ಅನುಭವಿಸುವಾಗಲೂ
(ಅಗ್ರೇ) ಮನುಷ್ಯನು ಅಜ್ಞಾನದ ಕತ್ತಲೆಯಲ್ಲೇ
ಇರುತ್ತಾನೆ. ಇದರ ಪರಿಣಾಮವಾಗಿ (ಅನುಬಂಧೇ) ಅವನ ಭವಿಷ್ಯವೂ
ಸಂಪೂರ್ಣ ನಾಶವಾಗುತ್ತದೆ. ಇದು ಯಾವುದೇ ಒಳ್ಳೆಯ ಆಲೋಚನೆಗಳಿಗೆ ಆಸ್ಪದ ಕೊಡುವುದಿಲ್ಲ.
ತಾಮಸಿಕ ಸುಖವು ಮನುಷ್ಯನನ್ನು ಪಶುಗಳ ಮಟ್ಟಕ್ಕೆ ತಳ್ಳುವ
ಅತ್ಯಂತ ಕೀಳುಮಟ್ಟದ ಸುಖವಾಗಿದೆ. ಸಾತ್ವಿಕ ಸುಖವು ಆರಂಭದಲ್ಲಿ ಕಷ್ಟವಾಗಿದ್ದರೂ ಕೊನೆಗೆ ಆನಂದ ನೀಡುತ್ತದೆ; ರಾಜಸಿಕ ಸುಖವು ಆರಂಭದಲ್ಲಿ ಮಧುರವಾಗಿದ್ದು ಕೊನೆಗೆ ದುಃಖ ನೀಡುತ್ತದೆ; ಆದರೆ ತಾಮಸಿಕ ಸುಖವು ಆರಂಭದಿಂದ ಕೊನೆಯವರೆಗೂ ಹುಸಿಯಾದ ಭ್ರಮೆಯಾಗಿದ್ದು ಮನುಷ್ಯನ
ಪ್ರಜ್ಞೆಯನ್ನು ಮರಗಟ್ಟಿಸಿ ಯಾವುದೇ ನೈಜ ಆನಂದವನ್ನು
ಕೊಡುವುದಿಲ್ಲ. ಕೇವಲ ಜಡತ್ವ, ಅಮಲು, ನಿದ್ರೆ, ಅತಿಯಾದ ಸೋಮಾರಿತನ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲದೆ
ಬದುಕುವುದರಿಂದ ಸಿಗುವ ಅನುಭವವೇ ಸುಖ ಎಂದು ಭಾಸವಾಗುವುದು ತಾಮಸಿಕ ಸುಖ. ಈ ಅಭ್ಯಾಸಗಳು ಮನುಷ್ಯನ ಮನಸ್ಸನ್ನು ಮತ್ತು
ಬುದ್ಧಿಯನ್ನು ಮಬ್ಬುಗೊಳಿಸಿ ಅವನನ್ನು ತಪ್ಪು ದಾರಿಗೆಳೆದು ಎಂದಿಗೂ ಅಭಿವೃದ್ಧಿ ಹೊಂದಲು ಬಿಡುವುದಿಲ್ಲ.
ತ್ರಿವಿಧ ಸುಖಗಳ ಒಟ್ಟು ಸಾರಾಂಶ:
ಸಾತ್ತ್ವಿಕ ಸುಖ: ಆರಂಭದಲ್ಲಿ ವಿಷ, ಕೊನೆಯಲ್ಲಿ ಅಮೃತ (ಆತ್ಮಸಾಕ್ಷಾತ್ಕಾರ
ಮತ್ತು ಆತ್ಮಜ್ಞಾನದ ಆನಂದ).
ರಾಜಸಿಕ ಸುಖ: ಆರಂಭದಲ್ಲಿ
ಅಮೃತ, ಕೊನೆಯಲ್ಲಿ ವಿಷ (ಇಂದ್ರಿಯ ಭೋಗದ ಆನಂದ).
ತಾಮಸಿಕ ಸುಖ: ಆರಂಭದಿಂದ
ಕೊನೆಯವರೆಗೂ ಕೇವಲ ವಿಷ ಮತ್ತು ಭ್ರಮೆ (ನಿದ್ರೆ, ಆಲಸ್ಯ ಮತ್ತು ಅಜ್ಞಾನದ
ಆನಂದ).
ಮಂಪರು = ಪೂರ್ಣ ನಿದ್ರೆಯೂ ಅಲ್ಲದ ಎಚ್ಚರವೂ ಅಲ್ಲದ ತೂಕಡಿಕೆ, ಸುಸ್ತು, ಜಡತ್ವ ಅಥವಾ
ಅರಿವಿಲ್ಲದ ಸ್ಥಿತಿ.
18-40
न तदस्ति पृथिव्यां वा दिवि देवेषु वा पुनः ।
सत्त्वं प्रकृतिजैर्मुक्तं यदेभिः स्यात्त्रिभिर्गुणैः ॥ १८- ४ ०
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ 18.40
ನ ತತ್ ಅಸ್ತಿ ಪೃಥಿವ್ಯಾಮ್
ವಾ ದಿವಿ ದೇವೇಷು ವಾ ಪುನಃ
ಸತ್ತ್ವಮ್ ಪ್ರಕೃತಿಜೈಃ ಮುಕ್ತಮ್ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ
ಭೂಮಿಯ ಮೇಲಾಗಲಿ, ಸ್ವರ್ಗದಲ್ಲಾಗಲಿ ಅಥವಾ ದೇವಲೋಕದ ದೇವತೆಗಳಲ್ಲಾಗಲಿ, ಭೌತಿಕ
ಪ್ರಕೃತಿಯಿಂದ ಉತ್ಪನ್ನವಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಗುಣಗಳ ಪ್ರಭಾವದಿಂದ ಮುಕ್ತವಾದ ಯಾವುದೇ ಜೀವಿಯಾಗಲಿ ಅಥವಾ
ವಸ್ತುವಾಗಲಿ ಈ ಬ್ರಹ್ಮಾಂಡದಲ್ಲಿ
ಎಲ್ಲಿಯೂ
ಇಲ್ಲ.
न तदस्ति पृथिव्यां वा दिवि देवेषु वा पुनः ।
सत्त्वं प्रकृतिजैर्मुक्तं यदेभिः स्यात्त्रिभिर्गुणैः ॥ १८- ४ ०
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ 18.40
ಸತ್ತ್ವಮ್ ಪ್ರಕೃತಿಜೈಃ ಮುಕ್ತಮ್ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ
ಬ್ರಹ್ಮಾಂಡದ ಸಕಲ ಚರಾಚರ ವಸ್ತುಗಳು ಭೌತಿಕ ಪ್ರಕೃತಿಯ
ನಿಯಮಕ್ಕೆ ಒಳಪಟ್ಟಿವೆ. ದೇಹವನ್ನು ಹೊಂದಿರುವ ಪ್ರತಿಯೊಂದು ಜೀವಿಯೂ - ಮನುಷ್ಯ, ಪ್ರಾಣಿ, ಪಕ್ಷಿ
ಮಾತ್ರವಲ್ಲದೆ ದೇವತೆಗಳು ಸಹ ಪ್ರಕೃತಿಯ ತ್ರಿಗುಣಗಳಾದ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣಗಳ ಪ್ರಭಾವಕ್ಕೆ
ಒಳಗಾಗಿರುತ್ತವೆ. ಆಧುನಿಕ ವಿಜ್ಞಾನದಲ್ಲಿ ಹೇಗೆ ಪ್ರತಿಯೊಂದು ವಸ್ತುವೂ ಪ್ರೋಟಾನ್, ನ್ಯೂಟ್ರಾನ್
ಮತ್ತು ಎಲೆಕ್ಟ್ರಾನ್ ಎಂಬ ಮೂರು ಕಣಗಳಿಂದ ಮಾಡಲ್ಪಟ್ಟಿವೆ ಎಂದು ಹೇಳಲಾಗುತ್ತದೆಯೋ, ಹಾಗೆಯೇ ಆಧ್ಯಾತ್ಮಿಕ
ಶಾಸ್ತ್ರದಲ್ಲಿ ಇಡೀ ಸೃಷ್ಟಿಯು ಸತ್ತ್ವ (ಪ್ರಕಾಶ/ಶಾಂತಿ), ರಜಸ್ (ಕ್ರಿಯೆ/ಆಸೆ) ಮತ್ತು ತಮಸ್ (ಜಡತ್ವ/ಅಜ್ಞಾನ)
ಎಂಬ ಮೂರು ಗುಣಗಳಿಂದ ಕೂಡಿದೆ ಎಂದು ಹೇಳಲಾಗುತ್ತದೆ. ಈ ಗುಣಗಳ ಮಿಶ್ರಣವೇ ಜಗತ್ತಿನ ವೈವಿಧ್ಯತೆಗೆ
ಕಾರಣವಾಗಿದೆ. ಪ್ರತಿಯೊಬ್ಬರಲ್ಲೂ ಈ ಮೂರೂ ಗುಣಗಳ ಮಿಶ್ರಣ ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ.
ಪ್ರತಿಯೊಬ್ಬರ ನಡವಳಿಕೆ, ಯೋಚನೆ ಮತ್ತು ವ್ಯಕ್ತಿತ್ವವು ಈ ಮೂರು ಗುಣಗಳ ಮಿಶ್ರಣದಿಂದಲೇ ರೂಪುಗೊಂಡಿರುತ್ತದೆ.
18-41
ब्राह्मणक्षत्रियविशां शूद्राणां च परंतप ।
कर्माणि प्रविभक्तानि स्वभावप्रभवैर्गुणैः ॥ १८- ४ १
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ 18.41
ಬ್ರಾಹ್ಮಣ-ಕ್ಷತ್ರಿಯ-ವಿಶಾಮ್ ಶೂದ್ರಾಣಾಮ್
ಚ ಪರಂತಪ
ब्राह्मणक्षत्रियविशां शूद्राणां च परंतप ।
कर्माणि प्रविभक्तानि स्वभावप्रभवैर्गुणैः ॥ १८- ४ १
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ 18.41
ಕರ್ಮಾಣಿ ಪ್ರವಿಭಕ್ತಾನಿ
ಸ್ವಭಾವ-ಪ್ರಭವೈಃ ಗುಣೈಃ
ಪರಂತಪ (ಅರ್ಜುನ)! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ತವ್ಯಗಳನ್ನು
ಅವರವರ ಜನ್ಮಸಿದ್ಧ ಜಾತಿಯ ಆಧಾರದ ಮೇಲಲ್ಲ, ಬದಲಿಗೆ ಅವರವರ ಪ್ರಕೃತಿ ಅಥವಾ ಸ್ವಭಾವದಿಂದ ಹುಟ್ಟಿದ ಗುಣಗಳಿಗೆ ಅನುಗುಣವಾಗಿ
ವಿಂಗಡಿಸಲಾಗಿದೆ
ಈ ಶ್ಲೋಕವು ಮಾನವರ ಸ್ವಭಾವ ಮತ್ತು ಅವರ ಗುಣಗಳ ಆಧಾರದ ಮೇಲೆ ಕರ್ತವ್ಯಗಳನ್ನು ಹೇಗೆ ವಿಂಗಡಿಸಲಾಗಿದೆ
ಎಂಬುದನ್ನು ವಿವರಿಸುತ್ತದೆ.
ಹಿಂದಿನ ಶ್ಲೋಕದಲ್ಲಿ ಇಡೀ ಜಗತ್ತು ಪ್ರಕೃತಿಯ ಮೂರು
ಗುಣಗಳಾದ ಸತ್ತ್ವ, ರಜಸ್, ತಮಸ್ ಇವುಗಳಿಂದ ಆವೃತವಾಗಿದ್ದು ಅದರ ಪ್ರಭಾವಕ್ಕೊಳಗಾಗಿದೆ ಎಂದು ತಿಳಿಸಲಾಗಿತ್ತು,
ಈ ಶ್ಲೋಕದಲ್ಲಿ ಆ ಗುಣಗಳು ಮಾನವ ಸಮಾಜದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸುತ್ತದೆ.
ಅಷ್ಟೇ ಅಲ್ಲದೆ
ಭಗವದ್ಗೀತೆಯ ಅತ್ಯಂತ
ಪ್ರಮುಖವಾದ ಸಾಮಾಜಿಕ ಮತ್ತು ತಾತ್ವಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ.
ಸನಾತನ ಧರ್ಮದಲ್ಲಿ
ಉಲ್ಲೇಖಿಸಲಾದ ನಾಲ್ಕು ವರ್ಣಗಳು (ವರ್ಗಗಳು) ಮನುಷ್ಯನ ಹುಟ್ಟಿನಿಂದ ನಿರ್ಧಾರವಾಗುವ ಜಾತಿಗಳಲ್ಲ.
ಹಾಗೆನೇ ಸಮಾಜದಲ್ಲಿ ವ್ಯಕ್ತಿಯೊಬ್ಬನ ಸ್ಥಾನ ಅಥವಾ ವೃತ್ತಿಯು ಅವನ ಹುಟ್ಟಿನಿಂದ ನಿರ್ಧಾರವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ
ಆದ ವಿಶಿಷ್ಟ ಮಾನಸಿಕ ಸ್ವಭಾವ ಮತ್ತು ಸಾಮರ್ಥ್ಯದೊಂದಿಗೆ ಹುಟ್ಟುತ್ತಾನೆ, ಮತ್ತು ಪ್ರಕೃತಿಯ ತ್ರಿಗುಣಗಳಾದ ಸತ್ತ್ವ, ರಜಸ್ ಮತ್ತು ತಮಸ್ಸುಗಳ ವಿಭಿನ್ನ ಮಿಶ್ರಣವನ್ನು
ಹೊಂದಿರುತ್ತಾನೆ. ಆ ಮಾನಸಿಕ ರಚನೆಗೆ ತಕ್ಕಂತೆ ಅವರ ಕರ್ಮಗಳು ಪ್ರಕಟವಾಗುತ್ತವೆ. ಯಾವ ಗುಣವು ಪ್ರಧಾನವಾಗಿದೆಯೋ, ಅದಕ್ಕೆ
ತಕ್ಕಂತೆ ಸಮಾಜದಲ್ಲಿ ಅವನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಹಂಚುವುದು ಸಮಂಜಸ ಮತ್ತು ಸೂಕ್ತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಭಾವಕ್ಕೆ ತಕ್ಕ ಕೆಲಸವನ್ನು ಮಾಡಿದಾಗ ಮಾತ್ರ
ಸಮಾಜದಲ್ಲಿ ಸಮತೋಲನವಿರುತ್ತದೆ.
ಭಗವದ್ಗೀತೆಯ ಪ್ರಕಾರ, ವೈದಿಕ ವರ್ಣ ವ್ಯವಸ್ಥೆಯು
ಇಂದಿನ ಜನ್ಮ ಆಧಾರಿತ ಜಾತಿ ಪದ್ಧತಿಯಲ್ಲ, ಅಥವಾ ಕೇವಲ ಯಾವುದೋ ವಂಶದಲ್ಲಿ ಅಥವಾ ಜಾತಿಯಲ್ಲಿ ಹುಟ್ಟಿದ
ಕಾರಣದಿಂದ ಅಲ್ಲ.
ಭಗವದ್ಗೀತೆಯ ನಾಲ್ಕನೇ ಅಧ್ಯಾಯ 13ನೇ ಶ್ಲೋಕದಲ್ಲಿ “ಚಾತುರ್ವರ್ಣ್ಯಂ ಮಯಾ ಸೃಷ್ಟಂ
ಗುಣಕರ್ಮವಿಭಾಗಶಃ” ಎಂದು ಹೇಳಲಾಗಿದೆ – ಅಂದರೆ ವರ್ಣ ವ್ಯವಸ್ಥೆಯು ಗುಣ ಮತ್ತು ಕರ್ಮಗಳ ಆಧಾರದ
ಮೇಲೆ ಮಾಡುವಂತದ್ದು ಎಂದು. ಆ ಮೇಲೆ ಈ ವಿಭಜನೆಯ ಉದ್ದೇಶ ಸಮಾಜದಲ್ಲಿ ಮೇಲು-ಕೀಳು ಭಾವನೆ ಮೂಡಿಸುವುದಕ್ಕಾಗಿಯೂ ಅಲ್ಲ, ಬದಲಿಗೆ
ಪ್ರತಿಯೊಬ್ಬರೂ ತಮ್ಮ ಸ್ವಭಾವ ಮತ್ತು ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಮಾಡುತ್ತಾ ಸಮಾಜದ ಸುಗಮ ನಿರ್ವಹಣೆ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧಿಸಲು ನೆರವಾಗುವುದಕ್ಕಾಗಿ.
ಮನುಷ್ಯನ ಆಂತರಿಕ ಗುಣ, ಸ್ವಭಾವ ಮತ್ತು ಕರ್ಮಗಳ ಆಧಾರದ ಮೇಲೆ ನಿರ್ಧರಿಸಿರುವ ನಾಲ್ಕು
ವರ್ಣಗಳು ಮತ್ತು ಸ್ವಭಾವ:
ಬ್ರಾಹ್ಮಣ ಸ್ವಭಾವ: ಸತ್ತ್ವ ಗುಣದ ಪ್ರಾಧಾನ್ಯತೆ ಇರುವವರು. ಇವರ ಸ್ವಭಾವ ಜ್ಞಾನಾರ್ಜನೆ, ಅಧ್ಯಾಪನ ಮತ್ತು
ಆಧ್ಯಾತ್ಮಿಕ ಸಾಧನೆ ಮಾಡುವುದು.
(ಶಿಕ್ಷಕರು ಮತ್ತು ತತ್ವಜ್ಞಾನಿಗಳು)
(ಜ್ಞಾನ, ಶಾಂತಿ, ತಪಸ್ಸು, ಪವಿತ್ರತೆ)
ಕ್ಷತ್ರಿಯ ಸ್ವಭಾವ: ರಜೋ ಗುಣ ಪ್ರಧಾನವಾಗಿದ್ದು, ಸ್ವಲ್ಪ ಸತ್ತ್ವ ಗುಣ ಉಳ್ಳವರು. ಇವರು ರಕ್ಷಣೆ,
ಆಡಳಿತ, ಮತ್ತು ನಾಯಕತ್ವ ವಹಿಸುವವರು.
(ಆಡಳಿತಗಾರರು, ಯೋಧರು ಮತ್ತು ರಕ್ಷಕರು)
(ಶೌರ್ಯ, ಸಾಹಸ, ಕ್ರಿಯಾಶೀಲತೆ, ರಕ್ಷಣೆ, ನಾಯಕತ್ವ,
ಮಹತ್ವಾಕಾಂಕ್ಷೆ ಮತ್ತು ಭೋಗದ ಹಂಬಲ)
ವೈಶ್ಯ ಸ್ವಭಾವ: ರಜೋ ಗುಣ ಪ್ರಧಾನವಾಗಿದ್ದು, ಸ್ವಲ್ಪ
ತಮೋಗುಣ ಹೊಂದಿರುವವರು. ಇವರು ವ್ಯಾಪಾರ, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ
ತೊಡಗುವವರು.
(ವ್ಯಾಪಾರಿಗಳು, ರೈತರು ಮತ್ತು ಉದ್ಯಮಿಗಳು)
(ವ್ಯಾಪಾರ, ಕೃಷಿ, ಧನಾರ್ಜನೆ)
ಶೂದ್ರ ಸ್ವಭಾವ: ತಮೋ ಗುಣ ಪ್ರಧಾನವಾಗಿದ್ದು, ಸ್ವಲ್ಪ
ರಜೋಗುಣ ಉಳ್ಳವರು. ಇವರು ಸಮಾಜದ ಇತರ ವರ್ಗಗಳಿಗೆ ಸೇವೆ ಸಲ್ಲಿಸುವ ಮತ್ತು
ಶ್ರಮದಾಯಕ ಕೆಲಸ ಮಾಡುವ ಕಾರ್ಮಿಕರು.
(ಸಮಾಜದ ಇತರ ವರ್ಗಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ
ಉಳ್ಳವರು)
(ಸೇವೆ, ಶ್ರಮದಾಯಕ ಕೆಲಸಗಳು)
ಪರಂತಪ = ಶತ್ರುನಿಗ್ರಹಿ, ವೈರಿಗಳನ್ನು ಜಯಿಸುವವನು, ಶತ್ರುಗಳನ್ನು
ದಹಿಸುವವನು.
18-42
शमो दमस्तपः शौचं क्षान्तिरार्जवमेव च ।
ज्ञानं विज्ञानमास्तिक्यं ब्रह्मकर्म स्वभावजम् ॥ १८- ४ २
ಶಮೋ ದಮಸ್ತಪಃ ಶೌಚಂ ಕ್ಷಾನ್ತಿರಾರ್ಜವಮೇವ ಚ
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ 18.42
ಶಮಃ ದಮಃ ತಪಃ
ಶೌಚಮ್ ಕ್ಷಾಂತಿಃ ಆರ್ಜವಮ್ ಏವ ಚ
शमो दमस्तपः शौचं क्षान्तिरार्जवमेव च ।
ज्ञानं विज्ञानमास्तिक्यं ब्रह्मकर्म स्वभावजम् ॥ १८- ४ २
ಶಮೋ ದಮಸ್ತಪಃ ಶೌಚಂ ಕ್ಷಾನ್ತಿರಾರ್ಜವಮೇವ ಚ
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ 18.42
ಜ್ಞಾನಮ್ ವಿಜ್ಞಾನಮ್ ಆಸ್ತಿಕ್ಯಮ್ ಬ್ರಹ್ಮ-ಕರ್ಮ ಸ್ವಭಾವ-ಜಮ್
ಮನಸ್ಸಿನ ನಿಗ್ರಹ, ಇಂದ್ರಿಯ ಸಂಯಮ, ತಪಸ್ಸು, ಬಾಹ್ಯ-ಆಂತರಿಕ ಶುದ್ಧತೆ, ಕ್ಷಮಾ
ಗುಣ, ಸರಳತೆ, ಶಾಸ್ತ್ರಜ್ಞಾನ, ಆಧ್ಯಾತ್ಮಿಕ ಅನುಭವ ಮತ್ತು ಪರಮಾತ್ಮನಲ್ಲಿ ದೃಢವಾದ ನಂಬಿಕೆ – ಇವೆಲ್ಲವೂ ಬ್ರಾಹ್ಮಣ ಸ್ವಭಾವದವರ ಸಹಜವಾದ ಕರ್ತವ್ಯಗಳು ಮತ್ತು ಗುಣ ಅಥವಾ ಲಕ್ಷಣಗಳಾಗಿವೆ.
ಈ ಶ್ಲೋಕದಲ್ಲಿ ವ್ಯಕ್ತಿಯೊಬ್ಬನ ಹುಟ್ಟಿನ ಆಧಾರದ
ಮೇಲಲ್ಲದೆ, ಅವನ ಗುಣ ಮತ್ತು ಸ್ವಭಾವದ ಆಧಾರದ ಮೇಲೆ
ಸಾತ್ವಿಕ ಪುರುಷ ಅಥವಾ ಬ್ರಾಹ್ಮಣ ಯಾರೆಂಬುದನ್ನು ನಿರ್ಧರಿಸುವ ಸಾತ್ವಿಕ ಗುಣ ಪ್ರಧಾನವಾಗಿರುವ
ವ್ಯಕ್ತಿಯ ಒಂಬತ್ತು ಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ.
1. ಶಮಃ (ಮನೋನಿಗ್ರಹ) (Mental Discipline): ಅಂತರಂಗದ ನಿಗ್ರಹ.
ಅಂತರಂಗವನ್ನು/ ಮನಸ್ಸನ್ನು ಗೆಲ್ಲುವುದು.
ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಬಾಹ್ಯ ಆಕರ್ಷಣೆಗಳಿಗೆ ಮನಸ್ಸು ಚಲಿಸದಂತೆ ತಡೆಯುವುದು ಮತ್ತು ಆಸೆ, ಕೋಪ ಮತ್ತು ಚಂಚಲತೆಗಳಿಗೆ ಬಲಿಯಾಗದೆ ಮನಸ್ಸನ್ನು ಸದಾ ಪ್ರಶಾಂತವಾಗಿ ಇಟ್ಟುಕೊಳ್ಳುವುದು.
2. ದಮಃ (ಇಂದ್ರಿಯ ನಿಗ್ರಹ)
(Sensory Control): ಬಹಿರಂಗದ ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಇವುಗಳ ಮೇಲಿನ ಹತೋಟಿ. ತಪ್ಪು ದಾರಿಗೆ ಎಳೆಯುವ ಭೋಗದ ವಸ್ತುಗಳಿಂದ
ಇಂದ್ರಿಯಗಳನ್ನು ತಡೆಯುವುದು.
3. ತಪಃ (ತಪಸ್ಸು) (Austerity): ಶರೀರ ಮತ್ತು ಮನಸ್ಸನ್ನು ಉನ್ನತ ಧೇಯಕ್ಕಾಗಿ ಅಥವಾ ಸತ್ಕಾರ್ಯಗಳಿಗಾಗಿ ಕಷ್ಟಗಳಿಗೊಡ್ಡುವುದು. ಉಪವಾಸ, ನಿಯಮಿತ ಆಹಾರ, ಸತ್ಯಪಾಲನೆ, ನಿಯಮಗಳನ್ನು ಪಾಲಿಸುವುದು, ಕರ್ತವ್ಯ ನಿಷ್ಠೆ, ವ್ರತಗಳು,
ಮತ್ತು ಧರ್ಮದ ಮಾರ್ಗದಲ್ಲಿ ನಡೆಯಲು ಪಡುವ ಶ್ರಮ ಇವೆಲ್ಲವೂ ತಪಸ್ಸೇ ಆಗಿದೆ.
4. ಶೌಚಮ್ (ಶುದ್ಧತೆ/ಪವಿತ್ರತೆ) (Purity): ಇದು ದ್ವಿಮುಖವಾದುದು. ಕೇವಲ ಸ್ನಾನದಿಂದ ದೇಹ ಶುದ್ಧಿ ಮಾಡಿಕೊಳ್ಳುವುದಷ್ಟೇ ಅಲ್ಲದೆ; ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭ,
ಮತ್ಸರಗಳಿಲ್ಲದೆ ಮನಸ್ಸನ್ನು ನಿರ್ಮಲವಾಗಿಡುವುದು ಆಂತರಿಕ ಶುದ್ಧತೆ ಮತ್ತು ಆಂತರಿಕ ಪಾವಿತ್ರ್ಯತೆ.
5. ಕ್ಷಾಂತಿಃ (ಸಹನೆ/ಕ್ಷಮೆ) (Forbearance/Patience): ಇತರರು ತನಗೆ ಅನ್ಯಾಯ,
ಅಪರಾಧ, ಅಪಕಾರ ಅಥವಾ ನಿಂದನೆಯನ್ನು ಮಾಡಿದರೂ ಪ್ರತಿಯಾಗಿ ದ್ವೇಷ ಸಾಧಿಸದೆ ಅವರನ್ನು ಕ್ಷಮಿಸುವ ಮತ್ತು ಸಹಿಸಿಕೊಳ್ಳುವ ಉದಾತ್ತ ಗುಣ.
6. ಆರ್ಜವಮ್ (ಸರಳತೆ) (Straightforwardness): ನೇರ ನಡೆನುಡಿ.
ಮನಸ್ಸಿನಲ್ಲಿ ಒಂದನ್ನು ಇಟ್ಟುಕೊಂಡು, ಹೊರಗೆ ಇನ್ನೊಂದನ್ನು ಆಡುವ ಅಥವಾ ಪ್ರದರ್ಶಿಸುವ ಕಪಟತನವಿಲ್ಲದೆ
ಸರಳವಾಗಿರುವುದು ಹಾಗೂ ಪ್ರಾಮಾಣಿಕವಾಗಿರುವುದು.
7. ಜ್ಞಾನಮ್ (ಶಾಸ್ತ್ರ ಜ್ಞಾನ) (Knowledge): ವೇದ,
ಉಪನಿಷತ್ತು ಹಾಗೂ ಧರ್ಮಶಾಸ್ತ್ರಗಳ ಸಿದ್ಧಾಂತಗಳನ್ನು ಓದಿ ಅರಿತುಕೊಳ್ಳುವುದು ಮತ್ತು ಆಧ್ಯಾತ್ಮಿಕ ತತ್ವಗಳ ಬಗ್ಗೆ
ಬೌದ್ಧಿಕವಾಗಿ ತಿಳಿದುಕೊಳ್ಳುವುದು.
8. ವಿಜ್ಞಾನಮ್ (ಅನುಭವ ಜ್ಞಾನ) (Wisdom/Realization): ಓದಿ ಕಲಿತ ಜ್ಞಾನವನ್ನು ಕೇವಲ ಕಂಠಪಾಠ ಮಾಡುವುದಕ್ಕೆ ಸೀಮಿತಗೊಳಿಸದೆ, ಅದನ್ನು ದೈನಂದಿನ ಜೀವನದಲ್ಲಿ
ಅಳವಡಿಸಿಕೊಂಡು ತನ್ನ ದೈನಂದಿನ ಜೀವನದಲ್ಲಿ
ಅನುಭವಕ್ಕೆ ತಂದುಕೊಳ್ಳುವುದು (ಆತ್ಮಸಾಕ್ಷಾತ್ಕಾರ).
9. ಆಸ್ತಿಕ್ಯಮ್ (ಆಸ್ತಿಕತೆ) (Faith): ವೇದ
ವಾಕ್ಯಗಳು, ಧರ್ಮ, ಭಗವಂತನ ಅಸ್ತಿತ್ವ, ಮತ್ತು ಕರ್ಮ ಸಿದ್ಧಾಂತದಲ್ಲಿ ಅಚಲವಾದ ವಿಶ್ವಾಸ ಮತ್ತು ಶ್ರದ್ಧೆ ಇಡುವುದು.
ಈ ಗುಣಗಳು ಯಾವುದೇ ಬಾಹ್ಯ ಒತ್ತಡದಿಂದ ಬರುವುದಲ್ಲ,
ಬದಲಿಗೆ ವ್ಯಕ್ತಿಯ ಆಂತರಿಕ ಸತ್ತ್ವಗುಣದ ಪ್ರಾಧಾನ್ಯತೆಯಿಂದ ಸಹಜವಾಗಿಯೇ ಉದ್ಭವಿಸುತ್ತವೆ. ಇಂತಹ
ಗುಣಗಳುಳ್ಳವರು ಸಮಾಜಕ್ಕೆ ಜ್ಞಾನದ ಬೆಳಕನ್ನು ಮತ್ತು ಸನ್ಮಾರ್ಗವನ್ನು ತೋರಿಸುವ ಯೋಗ್ಯತೆ ಹೊಂದಿರುತ್ತಾರೆ. ಇಂದಿನ ಕಾಲದಲ್ಲಿ ಸಾಮಾನ್ಯ ಜನರು
ತಪ್ಪಾಗಿ ಎನಿಸಿಕೊಂಡ ಹಾಗೆ, ಇದು ಕೇವಲ ಒಂದು ಜಾತಿಗೆ ಸೀಮಿತವಾಗಿರದೆ, ಈ ಗುಣಗಳನ್ನು ಅಳವಡಿಸಿಕೊಂಡ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ.
ಮತ್ತು ಈ ಶ್ಲೋಕದಲ್ಲಿ ಉಲ್ಲೇಖಿಸಲಾದ ಒಂಬತ್ತು
ಗುಣಗಳು ಆಧ್ಯಾತ್ಮಿಕ ಪಥದಲ್ಲಿ ನಡೆಯುವ ಪ್ರತಿಯೊಬ್ಬರಿಗೂ ಅತ್ಯಗತ್ಯ.
18-43
शौर्यं तेजो धृतिर्दाक्ष्यं युद्धे चाप्यपलायनम् ।
दानमीश्वरभावश्च क्षात्रं कर्म स्वभावजम् ॥ १८- ४ ३
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ 18.43
ಶೌರ್ಯಮ್ ತೇಜಃ ಧೃತಿಃ -
ದಾಕ್ಷ್ಯಮ್ ಯುದ್ಧೇ ಚ - ಅಪಿ – ಅಪಲಾಯನಮ್
शौर्यं तेजो धृतिर्दाक्ष्यं युद्धे चाप्यपलायनम् ।
दानमीश्वरभावश्च क्षात्रं कर्म स्वभावजम् ॥ १८- ४ ३
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ 18.43
ದಾನಮ್ - ಈಶ್ವರ-ಭಾವಃ - ಚ ಕ್ಷಾತ್ರಮ್
ಕರ್ಮ ಸ್ವಭಾವ-ಜಮ್
ಪರಾಕ್ರಮ, ತೇಜಸ್ಸು, ಧೈರ್ಯ, ಕಾರ್ಯದಕ್ಷತೆ, ಯುದ್ಧರಂಗದಿಂದ ಓಡಿಹೋಗದಿರುವುದು,
ದಾನಶೀಲತೆ ಮತ್ತು ಆಳುವ ಅಥವಾ ನಾಯಕತ್ವದ
ಸಾಮರ್ಥ್ಯ — ಇವೆಲ್ಲವೂ ಕ್ಷತ್ರಿಯ ಸ್ವಭಾವದವರ ಸಹಜವಾದ ಕರ್ತವ್ಯ ಕರ್ಮ ಮತ್ತು ಲಕ್ಷಣಗಳಾಗಿವೆ.
ಸಮಾಜದ ಆಡಳಿತ ನಡೆಸುವ ಮತ್ತು ರಕ್ಷಣೆ ನೀಡುವ ಕ್ಷತ್ರಿಯನಾದವನಿಗೆ
ಇರಬೇಕಾದ ಏಳು ಮುಖ್ಯ ಗುಣಗಳ ಪಟ್ಟಿ:
1. ಶೌರ್ಯಮ್ (ಪರಾಕ್ರಮ) (Heroism/Bravery):
ಯಾವುದೇ ಕಷ್ಟದ ಅಥವಾ ಅಪಾಯದ ಸಂದರ್ಭ ಅಥವಾ ಶತ್ರು ಎದುರಾದರೂ ಹೆದರದೆ, ಎದುರಿಸಲು ಹಿಂಜರಿಯದ ವೀರತ್ವ, ದೈಹಿಕ ಮತ್ತು ಮಾನಸಿಕ
ಪರಾಕ್ರಮ.
2. ತೇಜಃ (ಪ್ರಭಾವ/ವ್ಯಕ್ತಿತ್ವ) (Splendor/Radiance):
ಅಧರ್ಮದ ಮತ್ತು ಅನ್ಯಾಯದ ಮುಂದೆ ತಲೆ ಬಾಗದ, ಶತ್ರುಗಳ ಮುಂದೆ ಮಂಕಾಗದ ಉದಾತ್ತ ಘನತೆ. ಇತರರಲ್ಲಿ ಗೌರವ ಮೂಡಿಸುವ
ವ್ಯಕ್ತಿತ್ವ ಮತ್ತು ಇತರರನ್ನು ಪ್ರಭಾವಿಸುವ ತೇಜಸ್ಸು.
3. ಧೃತಿಃ (ಧೈರ್ಯ/ಸ್ಥಿರತೆ) (Fortitude/Determination):
ಎಷ್ಟೇ ದೊಡ್ಡ ಕಷ್ಟ, ಬಿಕ್ಕಟ್ಟು ಅಥವಾ ವಿಪತ್ತುಗಳು ಎದುರಾದರೂ, ದೈಹಿಕ ಮತ್ತು ಮಾನಸಿಕ ಅಡೆತಡೆಗಳು ಎದುರಾದರೂ,
ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೆ ಮತ್ತು ತನ್ನ ಧ್ಯೇಯದಿಂದ ವಿಚಲಿತನಾಗದೆ ದೃಢವಾಗಿ ನಿಲ್ಲುವ ಮನೋಬಲ.
4. ದಾಕ್ಷ್ಯಮ್ (ದಕ್ಷತೆ)
(Resourcefulness/Skill): ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು
ಕಾರ್ಯವನ್ನು ಚತುರತೆಯಿಂದ ಯಶಸ್ವಿಯಾಗಿ
ಮುಗಿಸುವ ಕಾರ್ಯಕ್ಷಮತೆ.
5. ಯುದ್ಧೇ ಚಾಪ್ಯಪಲಾಯನಮ್ (ರಣರಂಗದಿಂದ
ಓಡಿಹೋಗದಿರುವುದು) (Not fleeing from battle):
ನ್ಯಾಯಕ್ಕಾಗಿ, ಸಮಾಜದ ರಕ್ಷಣೆಗಾಗಿ ಮತ್ತು ಧರ್ಮಕ್ಕಾಗಿ
ಹೋರಾಡುವಾಗ ಪ್ರಾಣದ ಹಂಗು ತೊರೆದು ನಿಲ್ಲುವುದು, ರಣರಂಗದಿಂದ ಓಡಿಹೋಗದಿರುವುದು.
6. ದಾನಮ್ (ಔದಾರ್ಯ) (Generosity):
ಸಂಪತ್ತಿನ ಮೇಲಿನ ವ್ಯಾಮೋಹ ತೊರೆದು ತನ್ನಲ್ಲಿರುವ ಸಂಪತ್ತನ್ನು
ಸಮಾಜದ ಕಲ್ಯಾಣಕ್ಕಾಗಿ ಮತ್ತು ದೀನ-ದಲಿತರ ಉದ್ಧಾರಕ್ಕಾಗಿ ಮುಕ್ತ ಹೃದಯದಿಂದ ಧಾರಾಳವಾಗಿ
ದಾನ ಮಾಡಿ ಹಂಚುವ ಉದಾರ ಮನೋಭಾವ.
7. ಈಶ್ವರಭಾವಃ (ನಾಯಕತ್ವ)
(Leadership): ಪರಮಾತ್ಮನಂತೆ ಪ್ರಜೆಗಳನ್ನು
ಅತ್ಯಂತ ನ್ಯಾಯಯುತವಾಗಿ ಮತ್ತು ಪ್ರೇಮದಿಂದ ಪಾಲಿಸುವ ಹಾಗೂ ಸಮಾಜಕ್ಕೆ ಸರಿಯಾದ
ಆಜ್ಞೆಗಳನ್ನು ನೀಡಿ ಮುನ್ನಡೆಸುವ ನಾಯಕತ್ವ ಗುಣ, ಹಾಗೂ ಸಮಾಜದಲ್ಲಿ ನ್ಯಾಯ-ಧರ್ಮಗಳನ್ನು
ಪರಿಪಾಲಿಸುವ ಆಡಳಿತ ಸಾಮರ್ಥ್ಯ. ಇದು ಅಹಂಕಾರದ ಆಡಳಿತವಲ್ಲ, ಬದಲಿಗೆ ಜವಾಬ್ದಾರಿಯುತ
ರಕ್ಷಣೆ.
ಕ್ಷತ್ರಿಯ ಎಂದರೆ ಕೇವಲ ಯುದ್ಧ ಮಾಡುವವರಲ್ಲ; ಸಮಾಜದಲ್ಲಿ
ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸುವ, ಅನ್ಯಾಯವನ್ನು ವಿರೋಧಿಸುವ ಮತ್ತು ಧರ್ಮವನ್ನು ಎತ್ತಿಹಿಡಿಯುವ
ಶಕ್ತಿ. ಸಮಾಜದಲ್ಲಿ ಧರ್ಮದ ಸ್ಥಾಪನೆಗೆ ಮತ್ತು ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ ಇಂತಹ ಕ್ಷತ್ರಿಯ
ಸ್ವಭಾವದ ನಾಯಕರು ಅತ್ಯಗತ್ಯ. ಬ್ರಾಹ್ಮಣ ಸ್ವಭಾವವು ಆಂತರಿಕ ಶಾಂತಿ ಮತ್ತು ಜ್ಞಾನಕ್ಕೆ ಒತ್ತು ನೀಡಿದರೆ,
ಕ್ಷತ್ರಿಯ ಸ್ವಭಾವವು ಬಾಹ್ಯ ಸಮಾಜದ ಸುವ್ಯವಸ್ಥೆ, ಪ್ರಗತಿ ಮತ್ತು ನ್ಯಾಯದ ರಕ್ಷಣೆಗೆ ಶಕ್ತಿ ಹಾಗೂ
ಆಡಳಿತಾತ್ಮಕ ವ್ಯವಸ್ಥೆಯನ್ನು ಒದಗಿಸುತ್ತದೆ. ಯಾವ ವ್ಯಕ್ತಿಯಲ್ಲಿ ಮೇಲೆ ಹೇಳಿರುವ ಏಳು ವೀರ ಗುಣಗಳು
ಇರುತ್ತವೆಯೋ, ಅವರು ಕ್ಷತ್ರಿಯ ಗುಣದವರಾಗಿರುತ್ತಾರೆ.
कृषिगौरक्ष्यवाणिज्यं वैश्यकर्म स्वभावजम् ।
परिचर्यात्मकं कर्म शूद्रस्यापि स्वभावजम् ॥ १८- ४ ४
ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ 18.44
ಕೃಷಿ - ಗೋರಕ್ಷ್ಯ – ವಾಣಿಜ್ಯಮ್ ವೈಶ್ಯ – ಕರ್ಮ
ಸ್ವಭಾವ – ಜಮ್
ಪರಿಚರ್ಯಾ – ಆತ್ಮಕಮ್ ಕರ್ಮ ಶೂದ್ರಸ್ಯ
– ಅಪಿ ಸ್ವಭಾವ - ಜಮ್
ಬೇಸಾಯ ಮಾಡುವುದು, ಗೋರಕ್ಷಣೆ ಮತ್ತು ವ್ಯಾಪಾರ ವ್ಯವಹಾರಗಳು ವೈಶ್ಯ ಸ್ವಭಾವದವರ
ಸಹಜವಾದ ಕರ್ತವ್ಯ ಮತ್ತು ಕರ್ಮಗಳಾಗಿವೆ. ಹಾಗೆಯೇ, ಸಮಾಜದ ಇತರರಿಗೆ ಸೇವೆ ಸಲ್ಲಿಸುವುದು ಮತ್ತು ಸಮಾಜದ
ವಿವಿಧ ರಂಗಗಳಲ್ಲಿ ಕೆಲಸಗಳ ಮೂಲಕ ನೆರವಾಗುವುದು ಶೂದ್ರ ಸ್ವಭಾವದವರ ಸಹಜವಾದ ಕರ್ತವ್ಯ / ಕರ್ಮ ಮತ್ತು
ಲಕ್ಷಣಗಳಾಗಿವೆ.
ಈ ಶ್ಲೋಕ, ವೈಶ್ಯ ಮತ್ತು ಶೂದ್ರ ಸ್ವಭಾವದ ಸಹಜ ಗುಣಗಳು ಮತ್ತು ಅವರ ಕರ್ತವ್ಯಗಳನ್ನು ವಿವರಿಸುತ್ತದೆ.
ಸಮಾಜದ ಆರ್ಥಿಕ ನಿರ್ವಹಣೆ, ಸ್ಥಿರತೆ ಮತ್ತು ದೈನಂದಿನ
ಕಾರ್ಯನಿರ್ವಹಣೆಗೆ ಅಗತ್ಯವಿರುವ ಎರಡು ಪ್ರಮುಖ ವರ್ಗಗಳ ಕರ್ತವ್ಯಗಳ ವಿವರಣೆ ಇಲ್ಲಿದೆ.
ವೈಶ್ಯ ಸ್ವಭಾವವು ರಜೋಗುಣ ಮತ್ತು ತಮೋಗುಣಗಳ ಮಿಶ್ರಣವಾಗಿದ್ದು,
ಸಮಾಜಕ್ಕೆ ಬೇಕಾದ ಅನ್ನ, ಆಹಾರ, ಸಂಪತ್ತು ಮತ್ತು ದ್ರವ್ಯಗಳನ್ನು ಒದಗಿಸುವ ಆರ್ಥಿಕ ಜವಾಬ್ದಾರಿಯನ್ನು
ಹೊಂದಿರುತ್ತದೆ.
ಶೂದ್ರ ಸ್ವಭಾವವು ತಮೋಗುಣ ಪ್ರಧಾನವಾಗಿದ್ದು (ಕೆಲವೊಮ್ಮೆ
ಸ್ವಲ್ಪ ರಜಸ್ಸಿನ ಮಿಶ್ರಣ ಇರಬಹುದು), ದೈಹಿಕ ಶ್ರಮ ಮತ್ತು ಸೇವೆಯ ಮೂಲಕ, ಇಡೀ ಸಮಾಜದ ವ್ಯವಸ್ಥೆಯು
ಸುಗಮವಾಗಿ ನಡೆಯುವಂತೆ, ಉಳಿದ ಮೂರು ವರ್ಣಗಳಿಗೆ ಆಧಾರ ಸ್ತಂಭವಾಗಿ ನಿಲ್ಲುತ್ತದೆ.
ವರ್ಣವ್ಯವಸ್ಥೆಯು ಕೇವಲ ಒಂದು ಶ್ರಮ ವಿಭಜನೆ (Division of Labor)
ಆಗಿದೆಯೇ ಹೊರತು ಕೆಲವರು ತಪ್ಪಾಗಿ ತಿಳಿದುಕೊಂಡ ಹಾಗೆ ಉಚ್ಚ - ನೀಚ ಭೇದಭಾವ ಅಲ್ಲ. ಹಾಗೆನೇ ಈ ಕರ್ತವ್ಯಗಳು
ಗುಣ ಮತ್ತು ಸ್ವಭಾವದ ಆಧಾರದ ಮೇಲೆ ಸಮಾಜದ ಸಮತೋಲನಕ್ಕಾಗಿ ಹಂಚಲ್ಪಟ್ಟಿವೆಯೇ ಹೊರತು ಯಾವುದೇ ತಾರತಮ್ಯದಿಂದಲ್ಲ.
ಶರೀರಕ್ಕೆ ಬೇರೆ ಬೇರೆ ಅಂಗಗಳಾದ ತಲೆ, ತೋಳುಗಳು, ಹೊಟ್ಟೆ ಮತ್ತು ಪಾದಗಳು ಹೇಗೆ ಸಮಾನವಾಗಿ ಮುಖ್ಯವೋ,
ಹಾಗೆಯೇ ಸಮಾಜದ ಸುಗಮ ಮುನ್ನಡೆಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕೂ ಸ್ವಭಾವದ ಕರ್ಮಗಳು
ಅತ್ಯಗತ್ಯ. ಯಾರೊಬ್ಬರೂ ಮೇಲಲ್ಲ, ಯಾರೊಬ್ಬರೂ ಕೀಳಲ್ಲ, ಮತ್ತು ಯಾವ ಕೆಲಸವೂ ಮೇಲಲ್ಲ, ಯಾವ ಕೆಲಸವೂ
ಕೀಳಲ್ಲ; ಪ್ರತಿಯೊಬ್ಬರೂ ತಮ್ಮ ಸಹಜ ಸ್ವಭಾವ ಮತ್ತು ಸಾಮರ್ಥ್ಯಕ್ಕೆ ತಕ್ಕ ಕೆಲಸವನ್ನು ಪ್ರಾಮಾಣಿಕವಾಗಿ
ಮಾಡುವುದು ಸಮಾಜದ ಸಮತೋಲನ ಮತ್ತು ನಿರ್ವಹಣೆಗೆ ಅಗತ್ಯವಿರುವ ವ್ಯವಸ್ಥೆ.
स्वे स्वे कर्मण्यभिरतः संसिद्धिं लभते नरः ।
स्वकर्मनिरतः सिद्धिम् यथा विन्दति तच्छृणु ॥ १८- ४ ५
ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿನ್ದತಿ ತಚ್ಛೃಣು 18.45
ಸ್ವೇ ಸ್ವೇ ಕರ್ಮಣಿ
– ಅಭಿರತಃ ಸಂಸಿದ್ಧಿಮ್ ಲಭತೇ ನರಃ
ಸ್ವಕರ್ಮ-ನಿರತಃ ಸಿದ್ಧಿಮ್ ಯಥಾ ವಿಂದತಿ
ತತ್ - ಶೃಣು
ಸ್ವೇ ಸ್ವೇ = ತಮ್ಮ ತಮ್ಮ / ಅವರವರ / ಆಯಾ, ಕರ್ಮಣಿ = ಕರ್ತವ್ಯಗಳಲ್ಲಿ / ಕರ್ಮಗಳಲ್ಲಿ, ಅಭಿರತಃ = ಶ್ರದ್ಧೆಯಿಂದ / ಆಸಕ್ತಿಯುಳ್ಳವನಾಗಿ
/ ನಿಷ್ಠೆಯಿಂದ ತೊಡಗಿಕೊಂಡ, ಸಂಸಿದ್ಧಿಮ್ = ಸರ್ವೋಚ್ಚ ಪರಿಪೂರ್ಣತೆಯನ್ನು (ಆತ್ಮಜ್ಞಾನ
ಅಥವಾ ಮೋಕ್ಷವನ್ನು), ಲಭತೇ = ಪಡೆಯುತ್ತಾನೆ / ಹೊಂದುತ್ತಾನೆ, ನರಃ = ಮನುಷ್ಯನು
ಸ್ವಕರ್ಮ-ನಿರತಃ = ತನ್ನ ಕರ್ತವ್ಯದಲ್ಲಿ ನಿರತನಾದವನು, ಸಿದ್ಧಿಮ್ = ಆ ಸಿದ್ಧಿಯನ್ನು / ಯಶಸ್ಸನ್ನು,
ಯಥಾ = ಹೇಗೆ, ವಿಂದತಿ = ಪಡೆದುಕೊಳ್ಳುತ್ತಾನೋ, ತತ್ = ಅದನ್ನು (ಆ ವಿಧಾನವನ್ನು), ಶೃಣು = ಕೇಳು
ಸ್ವಕರ್ಮ-ನಿರತಃ = ತನ್ನ ಕರ್ತವ್ಯದಲ್ಲಿ ನಿರತನಾದವನು, ಸಿದ್ಧಿಮ್ = ಆ ಸಿದ್ಧಿಯನ್ನು / ಯಶಸ್ಸನ್ನು,
ಯಥಾ = ಹೇಗೆ, ವಿಂದತಿ = ಪಡೆದುಕೊಳ್ಳುತ್ತಾನೋ, ತತ್ = ಅದನ್ನು (ಆ ವಿಧಾನವನ್ನು), ಶೃಣು = ಕೇಳು
ಪ್ರತಿಯೊಬ್ಬ ಮನುಷ್ಯನೂ ಅವರವರ ಸಹಜ ಗುಣ ಮತ್ತು ಸ್ವಭಾವಕ್ಕೆ ಅನುಗುಣವಾಗಿ ನಿಯೋಜಿತವಾದ
ಕರ್ತವ್ಯಗಳಲ್ಲಿ ಶ್ರದ್ಧೆಯಿಂದ ತೊಡಗಿಕೊಳ್ಳುವುದರ ಮೂಲಕ ಪರಮ ಸಿದ್ಧಿಯನ್ನು (ಜೀವನದ ಪೂರ್ಣತೆಯನ್ನು)
ಪಡೆದುಕೊಳ್ಳಬಹುದು. ತನ್ನ ಸ್ವಾಭಾವಿಕ ಕರ್ಮದಲ್ಲಿ ನಿರತನಾದವನು ಆ ಸಿದ್ಧಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ
ಎಂಬುದನ್ನುಈಗ ಕೇಳು.
ಈ ಶ್ಲೋಕ ಮನುಷ್ಯನು ತನ್ನ ಸಹಜ ಕರ್ತವ್ಯಗಳ ಮೂಲಕವೇ
ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಬಹುದು ಎಂಬುದನ್ನು ತಿಳಿಸಿಕೊಡುತ್ತದೆ.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ
ಸ್ವಭಾವ (ಪ್ರಕೃತಿ) ಮತ್ತು ಗುಣಗಳನ್ನು ಹೊಂದಿರುತ್ತಾನೆ. ಪ್ರತಿಯೊಬ್ಬರಿಗೂ ಅವರವರ ಗುಣ ಮತ್ತು ಸ್ವಭಾವಕ್ಕೆ
ತಕ್ಕಂತೆ ಸರಿ ಹೊಂದುವ ಕೆಲವು ಕೆಲಸ ಮತ್ತು ಕರ್ತವ್ಯಗಳು (ಸ್ವಧರ್ಮ/ಸ್ವಕರ್ಮ) ಇರುತ್ತವೆ. ಈ ಸಹಜ
ಗುಣಗಳಿಗೆ ಅನುಗುಣವಾಗಿ ಬರುವ ಕರ್ತವ್ಯಗಳನ್ನು (ಸ್ವಧರ್ಮವನ್ನು) ಹಾಗೂ ಸಮಾಜದಲ್ಲಿ ತನಗಿರುವ ಸ್ಥಾನ
ಮತ್ತು ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದೂ ಆಧ್ಯಾತ್ಮಿಕ ಸಾಧನೆಯಾಗಿದೆ.
ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಅಥವಾ ಮುಕ್ತಿಯನ್ನು
ಪಡೆಯಲು ಸಂಸಾರವನ್ನು ಅಥವಾ ಕೆಲಸವನ್ನು ತ್ಯಜಿಸಿ ಸನ್ಯಾಸಿಯಾಗಬೇಕಾಗಿಲ್ಲ, ಅಥವಾ ತನಗೆ ಒಗ್ಗದ ಅಸಾಧ್ಯವಾದ
ಯಾವ ಕೆಲಸವನ್ನೂ ಮಾಡಬೇಕಾಗಿಲ್ಲ. ಒಬ್ಬ ವಿದ್ಯಾರ್ಥಿ, ಒಬ್ಬ ಪೋಷಕ, ಒಬ್ಬ ಉದ್ಯೋಗಿ ಅಥವಾ ಸಮಾಜದ
ಯಾವುದೇ ವರ್ಗದ ವ್ಯಕ್ತಿ ತನ್ನ ಪಾಲಿನ ಜವಾಬ್ದಾರಿಯನ್ನು ಯಾವುದೇ ಸ್ವಾರ್ಥವಿಲ್ಲದೆ, ಪ್ರಾಮಾಣಿಕವಾಗಿ
ನಿರ್ವಹಿಸಿದರೆ, ಆ ಕರ್ಮವೇ ಅವನ ಪರಮ ಸಿದ್ಧಿಯ ಮಾರ್ಗವಾಗಿ ಅವನನ್ನು ಮುಕ್ತಿಯತ್ತ ಮುನ್ನಡೆಸುತ್ತದೆ.
ಒಂದು ರೀತಿಯಲ್ಲಿ ಇದು ಕರ್ಮಯೋಗದ ರಹಸ್ಯ ಅನ್ನಬಹುದು.
ಸ್ವೇ ಸ್ವೇ ಕರ್ಮಣಿ = ತಮ್ಮ ತಮ್ಮ ಕರ್ತವ್ಯ /
ಸ್ವಕರ್ಮ / ಸ್ವಧರ್ಮ: ಸ್ವಕರ್ಮ ಎಂದರೆ ಕೇವಲ ಯಾಂತ್ರಿಕವಾಗಿ
ಮಾಡುವ ಕೆಲಸವಲ್ಲ. ಇದು ವ್ಯಕ್ತಿಯ ಆಂತರಿಕ ಗುಣ (ಸತ್ತ್ವ, ರಜಸ್, ತಮಸ್) ಮತ್ತು ಸಾಮರ್ಥ್ಯಕ್ಕೆ
ಹೊಂದಿಕೆಯಾಗುವ ಕರ್ತವ್ಯವಾಗಿದೆ. ಲೋಕದಲ್ಲಿ ಎಲ್ಲರಿಗೂ ಒಂದೇ ರೀತಿಯ ಕೆಲಸ ಮಾಡಲು ಸಾಧ್ಯವಿಲ್ಲ ಮತ್ತು
ಅದು ಪ್ರಕೃತಿ ನಿಯಮವೂ ಅಲ್ಲ. ಒಬ್ಬ ಶಿಕ್ಷಕನಿಗೆ ಬೋಧನೆ ಮಾಡುವುದು ಸಹಜ ಕರ್ಮವಾದರೆ, ಸೈನಿಕನಿಗೆ
ದೇಶ ಕಾಯುವುದು ಸಹಜ ಕರ್ಮ. ಯಾರೂ ಮತ್ತೊಬ್ಬರ ಕರ್ತವ್ಯವನ್ನು ನೋಡಿ ಆಕರ್ಷಿತರಾಗಿ ತನ್ನ ಸಹಜ ಕರ್ಮವನ್ನು
ಬಿಡಬಾರದು. ಇನ್ನೊಬ್ಬರ ಕರ್ತವ್ಯವು ಆಕರ್ಷಕವಾಗಿ ಕಂಡರೂ, ಅದನ್ನು ನಕಲು ಮಾಡುವುದಕ್ಕಿಂತ ತನ್ನದೇ
ಆದ ಸಹಜ ಕರ್ತವ್ಯವನ್ನು ಮಾಡುವುದು ಶ್ರೇಯಸ್ಕರ.
18-46
यतः प्रवृत्तिर्भूतानां येन सर्वमिदं ततम् ।
स्वकर्मणा तमभ्यर्च्य सिद्धिं विन्दति मानवः ॥ १८- ४ ६
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿನ್ದತಿ ಮಾನವಃ 18.46
ಯತಃ ಪ್ರವೃತ್ತಿಃ – ಭೂತಾನಾಮ್ ಯೇನ ಸರ್ವಮ್
– ಇದಮ್ ತತಮ್
यतः प्रवृत्तिर्भूतानां येन सर्वमिदं ततम् ।
स्वकर्मणा तमभ्यर्च्य सिद्धिं विन्दति मानवः ॥ १८- ४ ६
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿನ್ದತಿ ಮಾನವಃ 18.46
ಸ್ವ- ಕರ್ಮಣಾ ತಮ್ – ಅಭ್ಯರ್ಚ್ಯ ಸಿದ್ಧಿಮ್ ವಿಂದತಿ ಮಾನವಃ
ಯಾವ ಪರಮಾತ್ಮನಿಂದ ಸಮಸ್ತ ಜೀವಿಗಳ ಉತ್ಪತ್ತಿ ಮತ್ತು ಚಟುವಟಿಕೆಗಳು ನಡೆಯುತ್ತವೆಯೋ
ಹಾಗೂ ಯಾರು ಈ ಇಡೀ ಜಗತ್ತನ್ನು ವ್ಯಾಪಿಸಿದ್ದಾರೋ, ಆ ಪರಮಾತ್ಮನನ್ನು ಮನುಷ್ಯನು ತನ್ನ ಸ್ವಾಭಾವಿಕ
ಕರ್ತವ್ಯಗಳ (ಕರ್ತವ್ಯ ಕರ್ಮಗಳ) ಮೂಲಕ ಪೂಜಿಸಿ, ಪರಮ ಸಿದ್ಧಿಯನ್ನು (ಮೋಕ್ಷವನ್ನು) ಪಡೆದುಕೊಳ್ಳುತ್ತಾನೆ.
ಪರಮಾತ್ಮನನ್ನು ಆರಾಧಿಸಲು ಅಥವಾ ಆಧ್ಯಾತ್ಮಿಕ ಮುಕ್ತಿಯನ್ನು
ಪಡೆಯಲು, ನಾವು ದೇವಸ್ಥಾನಗಳಲ್ಲಿ ಹಣ್ಣು ಹೂವುಗಳನ್ನು ಅರ್ಪಿಸಬೇಕಾಗಿಲ್ಲ, ಅಥವಾ ಎಲ್ಲವನ್ನೂ ತೊರೆದು
ಕಾಡಿಗೆ ಹೋಗಿ ತಪಸ್ಸು ಮಾಡಬೇಕಾಗಿಲ್ಲ. ಈ ಸೃಷ್ಟಿಯ ಪ್ರತಿಯೊಂದು ಜೀವಿಯೂ ಪರಮಾತ್ಮನಿಂದಲೇ ಬಂದಿದೆ
ಮತ್ತು ಅವನೇ ಎಲ್ಲೆಡೆ ಈ ಸೃಷ್ಟಿಯ ಕಣಕಣದಲ್ಲೂ ತುಂಬಿದ್ದಾನೆ. ಹಾಗಾಗಿ, ಸಮಾಜದಲ್ಲಿ ನಮಗೆ ಸಿಕ್ಕಿರುವ
ಸ್ವಧರ್ಮ ಅಥವಾ ಸ್ವಕರ್ಮವನ್ನು, ಅಂದರೆ ಉದ್ಯೋಗವನ್ನು, ಜವಾಬ್ದಾರಿಗಳನ್ನು ಅಥವಾ ಕರ್ತವ್ಯಗಳನ್ನು
ಪ್ರಾಮಾಣಿಕವಾಗಿ, ಅಹಂಕಾರವಿಲ್ಲದೆ ಮತ್ತು ಯಾವುದೇ ಫಲಾಪೇಕ್ಷೆಯಿಲ್ಲದೆ, ಸಮಾಜದ ಸೇವೆ ಹಾಗೂ ಪರಮಾತ್ಮನ
ಸೇವೆ ಎಂದು ಭಾವಿಸಿ ಮಾಡುವುದೇ ಅತ್ಯುನ್ನತ ಪೂಜೆಯಾಗಿದೆ. ಈ ರೀತಿ ಅವರವರ ದೈನಂದಿನ ಕರ್ತವ್ಯಗಳನ್ನು
ನಿಯತ್ತಾಗಿ ಮಾಡುವುದರಿಂದ ಮನುಷ್ಯನ ಮನಸ್ಸು ಶುದ್ಧವಾಗಿ, ಅವನು ಮೋಕ್ಷಕ್ಕೆ ಅರ್ಹನಾಗುತ್ತಾನೆ, ಮತ್ತು
ಆ ಕೆಲಸವೇ ದೇವರಿಗೆ ಸಲ್ಲಿಸುವ ಅರ್ಚನೆಯಾಗಿ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುತ್ತದೆ.
'ಸ್ವಕರ್ಮಣಾ ತಮಭ್ಯರ್ಚ್ಯ' = ತನ್ನ
ಸಹಜವಾದ ಕರ್ತವ್ಯ ಕರ್ಮಗಳ ಮೂಲಕ
ಆ ಪರಮಾತ್ಮನನ್ನು ಪೂಜಿಸಿ.
ಕಾಯಕವೇ ಕೈಲಾಸ - Work is Worship - ಕೆಲಸವೇ ಪೂಜೆ
- ಸ್ವಕರ್ಮವೇ ಆರಾಧನೆ.
ಸಾಮಾನ್ಯವಾಗಿ ಪೂಜೆ ಎಂದರೆ
ಜನರು ದೀಪ ಹಚ್ಚುವುದು, ಹೂವು ಅರ್ಪಿಸುವುದು ಅಥವಾ ಮಂತ್ರ ಜಪಿಸುವುದು ಎಂದು ತಿಳಿದಿರುತ್ತಾರೆ. ನಾವು ದೇವಸ್ಥಾನದಲ್ಲಿ ಹಣ್ಣು, ಹೂವು,
ದೀಪಗಳಿಂದ ದೇವರನ್ನು ಪೂಜಿಸುವುದು ಆರಾಧನೆಗೆ ಎಷ್ಟು ಸಮಂಜಸವೋ; ನಮ್ಮ ವೃತ್ತಿ ಅಥವಾ ಕರ್ತವ್ಯವನ್ನು
ಅತ್ಯಂತ ನಿಷ್ಠೆ ಮತ್ತು ಶ್ರದ್ದೆಯಿಂದ ಮಾಡುವುದು ಕೂಡ ಶ್ರೇಷ್ಠವಾದ ಆರಾಧನೆಗೆ ಅಥವಾ ದೇವರ ಪೂಜೆಗೆ ಅಷ್ಟೇ
ಸಮಂಜಸವಾಗಿದೆ. ಪ್ರತಿಯೊಬ್ಬ
ವ್ಯಕ್ತಿಗೂ ಅವನದೇ ಆದ ಸ್ವಭಾವ ಮತ್ತು ಯೋಗ್ಯತೆಗೆ ತಕ್ಕಂತೆ ಕೆಲವು ಕರ್ತವ್ಯಗಳಿರುತ್ತವೆ. ಒಬ್ಬ
ವೈದ್ಯ ರೋಗಿಯನ್ನು ಗುಣಪಡಿಸುವುದು, ಒಬ್ಬ ಸೈನಿಕ ದೇಶ ಕಾಯುವುದು, ಒಬ್ಬ ರೈತ ಅನ್ನ ಬೆಳೆಯುವುದು,
ಒಬ್ಬ ಶಿಕ್ಷಕ ಪಾಠ ಮಾಡುವುದು — ಇವೆಲ್ಲವೂ ಅವರವರ ಸ್ವಕರ್ಮಗಳು. ಈ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ
ಹಾಗೂ ಭಗವಂತನ ಸೇವೆ ಎಂದು ನಿಷ್ಕಾಮ ಭಾವದಿಂದ ಮಾಡಿದಾಗ ಅದು ಕೇವಲ ಲೌಕಿಕ ಕೆಲಸವಾಗಿ ಉಳಿಯದೆ ದಿವ್ಯ
ಆರಾಧನೆಯಾಗಿ ಮಾರ್ಪಡುತ್ತದೆ.
श्रेयान्स्वधर्मो विगुणः परधर्मात्स्वनुष्ठितात् ।
स्वभावनियतं कर्म कुर्वन्नाप्नोति किल्बिषम् ॥ १८- ४ ७
ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್
ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ 18.47
सहजं कर्म कौन्तेय सदोषमपि न त्यजेत् ।
सर्वारम्भा हि दोषेण धूमेनाग्निरिवावृताः ॥ १८- ४ ८
ಸಹಜಂ ಕರ್ಮ ಕೌನ್ತೇಯ ಸದೋಷಮಪಿ ನ ತ್ಯಜೇತ್
ಸರ್ವಾರಮ್ಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ 18.48
असक्तबुद्धिः सर्वत्र जितात्मा विगतस्पृहः ।
नैष्कर्म्यसिद्धिं परमां संन्यासेनाधिगच्छति ॥ १८- ४ ९
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ 18.49
सिद्धिं प्राप्तो यथा ब्रह्म तथाप्नोति निबोध मे ।
समासेनैव कौन्तेय निष्ठा ज्ञानस्य या परा ॥ १८- ५०
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ
ಸಮಾಸೇನೈವ ಕೌನ್ತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ 18.50
बुद्ध्या विशुद्धया युक्तो धृत्याऽत्मानं नियम्य च ।
शब्दादीन् विषयांस्त्यक्त्वा रागद्वेषौ व्युदस्य च ॥ १८- ५१
ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ
ಶಬ್ದಾದೀನ್ ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ 18.51
विविक्तसेवी लघ्वाशी यतवाक्कायमानसः ।
ध्यानयोगपरो नित्यं वैराग्यं समुपाश्रितः ॥ १८- ५२
ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ 18.52
अहङ्कारं बलं दर्पं कामं क्रोधं परिग्रहम् ।
विमुच्य निर्ममः शान्तो ब्रह्मभूयाय कल्पते ॥ १८- ५३
ಅಹಙ್ಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್
ವಿಮುಚ್ಯ ನಿರ್ಮಮಃ ಶಾನ್ತೋ ಬ್ರಹ್ಮಭೂಯಾಯ ಕಲ್ಪತೇ 18.53
ब्रह्मभूतः प्रसन्नात्मा न शोचति न काङ्क्षति ।
समः सर्वेषु भूतेषु मद्भक्तिं लभते पराम् ॥ १८- ५४
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಙ್ಕ್ಷತಿ
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ 18.54
भक्त्या मामभिजानाति यावान्यश्चास्मि तत्त्वतः ।
ततो मां तत्त्वतो ज्ञात्वा विशते तदनन्तरम् ॥ १८- ५५
ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನನ್ತರಮ್ 18.55
सर्वकर्माण्यपि सदा कुर्वाणो मद्व्यपाश्रयः ।
मत्प्रसादादवाप्नोति शाश्वतं पदमव्ययम् ॥ १८- ५६
ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ
ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ 18.56
चेतसा सर्वकर्माणि मयि संन्यस्य मत्परः ।
बुद्धियोगमुपाश्रित्य मच्चित्तः सततं भव ॥ १८- ५७
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ 18.57
मच्चित्तः सर्वदुर्गाणि मत्प्रसादात्तरिष्यसि ।
अथ चेत्त्वमहङ्कारात् न श्रोष्यसि विनङ्क्ष्यसि ॥ १८- ५८
ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಯಸಿ
ಅಥ ಚೇತ್ತ್ವಮಹಙ್ಕಾರಾತ್ ನ ಶ್ರೋಷ್ಯಸಿ ವಿನಙ್ಕ್ಷ್ಯಸಿ 18.58
यदहङ्कारमाश्रित्य न योत्स्य इति मन्यसे ।
मिथ्यैष व्यवसायस्ते प्रकृतिस्त्वां नियोक्ष्यति ॥ १८- ५९
ಯದಹಙ್ಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ
ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ 18.59
स्वभावजेन कौन्तेय निबद्धः स्वेन कर्मणा ।
कर्तुं नेच्छसि यन्मोहात् करिष्यस्यवशोऽपि तत् ॥ १८- ६०
ಸ್ವಭಾವಜೇನ ಕೌನ್ತೇಯ ನಿಬದ್ಧಃ ಸ್ವೇನ ಕರ್ಮಣಾ
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋಪಿ ತತ್ 18.60
18-61
ईश्वरः सर्वभूतानां हृद्देशेऽर्जुन तिष्ठति ।
भ्रामयन्सर्वभूतानि यन्त्रारूढानि मायया ॥ १८- ६१
ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ
ಭ್ರಾಮಯನ್ಸರ್ವಭೂತಾನಿ ಯನ್ತ್ರಾರೂಢಾನಿ ಮಾಯಯಾ 18.61
18-62
तमेव शरणं गच्छ सर्वभावेन भारत ।
तत्प्रसादात्परां शान्तिं स्थानं प्राप्स्यसि शाश्वतम् ॥ १८- ६२
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ
ತತ್ಪ್ರಸಾದಾತ್ಪರಾಂ ಶಾನ್ತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ 18.62
18-63
इति ते ज्ञानमाख्यातं गुह्याद्गुह्यतरं मया ।
विमृश्यैतदशेषेण यथेच्छसि तथा कुरु ॥ १८- ६३
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು 18.63
18-64
सर्वगुह्यतमं भूयः श्रृणु मे परमं वचः ।
इष्टोऽसि मे दृढमिति ततो वक्ष्यामि ते हितम् ॥ १८- ६४
ಸರ್ವಗುಹ್ಯತಮಂ ಭೂಯಃ ಶ್ರೃಣು ಮೇ ಪರಮಂ ವಚಃ
ಇಷ್ಟೋಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ 18.64
18-65
मन्मना भव मद्भक्तो मद्याजी मां नमस्कुरु ।
मामेवैष्यसि सत्यं ते प्रतिजाने प्रियोऽसि मे ॥ १८- ६५
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಸಿ ಮೇ 18.65
18-66
सर्वधर्मान्परित्यज्य मामेकं शरणं व्रज ।
अहं त्वा सर्वपापेभ्यो मोक्षयिष्यामि मा शुचः ॥ १८- ६६
ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ 18.66
18-67
इदं ते नातपस्काय नाभक्ताय कदाचन ।
न चाशुश्रूषवे वाच्यं न च मां योऽभ्यसूयति ॥ १८- ६७
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಭ್ಯಸೂಯತಿ 18.67
18-68
य इमं परमं गुह्यं मद्भक्तेष्वभिधास्यति ।
भक्तिं मयि परां कृत्वा मामेवैष्यत्यसंशयः ॥ १८- ६८
ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ 18.68
18-69
न च तस्मान्मनुष्येषु कश्चिन्मे प्रियकृत्तमः ।
भविता न च मे तस्मात् अन्यः प्रियतरो भुवि ॥ १८- ६९
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ
ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ 18.69
18-70
अध्येष्यते च य इमं धर्म्यं संवादमावयोः ।
ज्ञानयज्ञेन तेनाहम् इष्टः स्यामिति मे मतिः ॥ १८- ७०
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ
ಜ್ಞಾನಯಜ್ಞೇನ ತೇನಾಹಮ್ ಇಷ್ಟಃ ಸ್ಯಾಮಿತಿ ಮೇ ಮತಿಃ 18.70
18-71
श्रद्धावाननसूयश्च श्रृणुयादपि यो नरः ।
सोऽपि मुक्तः शुभाँल्लोकान् प्राप्नुयात्पुण्यकर्मणाम् ॥ १८- ७१
ಶ್ರದ್ಧಾವಾನನಸೂಯಶ್ಚ ಶ್ರೃಣುಯಾದಪಿ ಯೋ ನರಃ
ಸೋಪಿ ಮುಕ್ತಃ ಶುಭಾಲ್ಲೋಕಾನ್ ಪ್ರಾಪ್ನುಯಾತ್ಪುಣ್ಯಕರ್ಮಣಾಮ್ 18.71
18-72
कच्चिदेतच्छ्रुतं पार्थ त्वयैकाग्रेण चेतसा ।
कच्चिदज्ञानसंमोहः प्रनष्टस्ते धनञ्जय ॥ १८- ७२
ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ
ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಞ್ಜಯ 18.72
18-73
अर्जुन उवाच
नष्टो मोहः स्मृतिर्लब्धा त्वत्प्रसादान्मयाच्युत ।
स्थितोऽस्मि गतसन्देहः करिष्ये वचनं तव ॥ १८- ७३
ಅರ್ಜುನ ಉವಾಚ
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ
ಸ್ಥಿತೋಸ್ಮಿ ಗತಸನ್ದೇಹಃ ಕರಿಷ್ಯೇ ವಚನಂ ತವ 18.73
18-74
सञ्जय उवाच
इत्यहं वासुदेवस्य पार्थस्य च महात्मनः ।
संवादमिममश्रौषम् अद्भुतं रोमहर्षणम् ॥ १८- ७४
ಸಞ್ಜಯ ಉವಾಚ
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ
ಸಂವಾದಮಿಮಮಶ್ರೌಷಮ್ ಅದ್ಭುತಂ ರೋಮಹರ್ಷಣಮ್ 18.74
18-75
व्यासप्रसादाच्छ्रुतवान् एतद्गुह्यमहं परम् ।
योगं योगेश्वरात्कृष्णात् साक्षात्कथयतः स्वयम् ॥ १८- ७५
ವ್ಯಾಸಪ್ರಸಾದಾಚ್ಛ್ರುತವಾನ್ ಏತದ್ಗುಹ್ಯಮಹಂ ಪರಮ್
ಯೋಗಂ ಯೋಗೇಶ್ವರಾತ್ಕೃಷ್ಣಾತ್ ಸಾಕ್ಷಾತ್ಕಥಯತಃ ಸ್ವಯಮ್ 18.75
18-76
राजन्संस्मृत्य संस्मृत्य संवादमिममद्भुतम् ।
केशवार्जुनयोः पुण्यं हृष्यामि च मुहुर्मुहुः ॥ १८- ७६
ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ 18.76
18-77
तच्च संस्मृत्य संस्मृत्य रूपमत्यद्भुतं हरेः ।
विस्मयो मे महान् राजन् हृष्यामि च पुनः पुनः ॥ १८- ७७
ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ 18.77
18-78
यत्र योगेश्वरः कृष्णो यत्र पार्थो धनुर्धरः ।
तत्र श्रीर्विजयो भूतिः ध्रुवा नीतिर्मतिर्मम ॥ १८- ७८
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೋ ಭೂತಿಃ ರ್ಧ್ರುವಾ ನೀತಿರ್ಮತಿರ್ಮಮ 18.78
ॐ तत्सदिति
श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे मोक्षसन्न्यासयोगो नाम अष्टादशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಮೋಕ್ಷಸನ್ನ್ಯಾಸ ಯೊಗೊ ನಾಮ ಅಷ್ಟಾದಶೋಧ್ಯಾಯಃ
ईश्वरः सर्वभूतानां हृद्देशेऽर्जुन तिष्ठति ।
भ्रामयन्सर्वभूतानि यन्त्रारूढानि मायया ॥ १८- ६१
ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ
ಭ್ರಾಮಯನ್ಸರ್ವಭೂತಾನಿ ಯನ್ತ್ರಾರೂಢಾನಿ ಮಾಯಯಾ 18.61
तमेव शरणं गच्छ सर्वभावेन भारत ।
तत्प्रसादात्परां शान्तिं स्थानं प्राप्स्यसि शाश्वतम् ॥ १८- ६२
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ
ತತ್ಪ್ರಸಾದಾತ್ಪರಾಂ ಶಾನ್ತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ 18.62
इति ते ज्ञानमाख्यातं गुह्याद्गुह्यतरं मया ।
विमृश्यैतदशेषेण यथेच्छसि तथा कुरु ॥ १८- ६३
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು 18.63
सर्वगुह्यतमं भूयः श्रृणु मे परमं वचः ।
इष्टोऽसि मे दृढमिति ततो वक्ष्यामि ते हितम् ॥ १८- ६४
ಸರ್ವಗುಹ್ಯತಮಂ ಭೂಯಃ ಶ್ರೃಣು ಮೇ ಪರಮಂ ವಚಃ
ಇಷ್ಟೋಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ 18.64
मन्मना भव मद्भक्तो मद्याजी मां नमस्कुरु ।
मामेवैष्यसि सत्यं ते प्रतिजाने प्रियोऽसि मे ॥ १८- ६५
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಸಿ ಮೇ 18.65
सर्वधर्मान्परित्यज्य मामेकं शरणं व्रज ।
अहं त्वा सर्वपापेभ्यो मोक्षयिष्यामि मा शुचः ॥ १८- ६६
ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ 18.66
इदं ते नातपस्काय नाभक्ताय कदाचन ।
न चाशुश्रूषवे वाच्यं न च मां योऽभ्यसूयति ॥ १८- ६७
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಭ್ಯಸೂಯತಿ 18.67
य इमं परमं गुह्यं मद्भक्तेष्वभिधास्यति ।
भक्तिं मयि परां कृत्वा मामेवैष्यत्यसंशयः ॥ १८- ६८
ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ 18.68
न च तस्मान्मनुष्येषु कश्चिन्मे प्रियकृत्तमः ।
भविता न च मे तस्मात् अन्यः प्रियतरो भुवि ॥ १८- ६९
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ
ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ 18.69
अध्येष्यते च य इमं धर्म्यं संवादमावयोः ।
ज्ञानयज्ञेन तेनाहम् इष्टः स्यामिति मे मतिः ॥ १८- ७०
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ
ಜ್ಞಾನಯಜ್ಞೇನ ತೇನಾಹಮ್ ಇಷ್ಟಃ ಸ್ಯಾಮಿತಿ ಮೇ ಮತಿಃ 18.70
श्रद्धावाननसूयश्च श्रृणुयादपि यो नरः ।
सोऽपि मुक्तः शुभाँल्लोकान् प्राप्नुयात्पुण्यकर्मणाम् ॥ १८- ७१
ಶ್ರದ್ಧಾವಾನನಸೂಯಶ್ಚ ಶ್ರೃಣುಯಾದಪಿ ಯೋ ನರಃ
ಸೋಪಿ ಮುಕ್ತಃ ಶುಭಾಲ್ಲೋಕಾನ್ ಪ್ರಾಪ್ನುಯಾತ್ಪುಣ್ಯಕರ್ಮಣಾಮ್ 18.71
कच्चिदेतच्छ्रुतं पार्थ त्वयैकाग्रेण चेतसा ।
कच्चिदज्ञानसंमोहः प्रनष्टस्ते धनञ्जय ॥ १८- ७२
ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ
ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಞ್ಜಯ 18.72
अर्जुन उवाच
नष्टो मोहः स्मृतिर्लब्धा त्वत्प्रसादान्मयाच्युत ।
स्थितोऽस्मि गतसन्देहः करिष्ये वचनं तव ॥ १८- ७३
ಅರ್ಜುನ ಉವಾಚ
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ
ಸ್ಥಿತೋಸ್ಮಿ ಗತಸನ್ದೇಹಃ ಕರಿಷ್ಯೇ ವಚನಂ ತವ 18.73
सञ्जय उवाच
इत्यहं वासुदेवस्य पार्थस्य च महात्मनः ।
संवादमिममश्रौषम् अद्भुतं रोमहर्षणम् ॥ १८- ७४
ಸಞ್ಜಯ ಉವಾಚ
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ
ಸಂವಾದಮಿಮಮಶ್ರೌಷಮ್ ಅದ್ಭುತಂ ರೋಮಹರ್ಷಣಮ್ 18.74
व्यासप्रसादाच्छ्रुतवान् एतद्गुह्यमहं परम् ।
योगं योगेश्वरात्कृष्णात् साक्षात्कथयतः स्वयम् ॥ १८- ७५
ವ್ಯಾಸಪ್ರಸಾದಾಚ್ಛ್ರುತವಾನ್ ಏತದ್ಗುಹ್ಯಮಹಂ ಪರಮ್
ಯೋಗಂ ಯೋಗೇಶ್ವರಾತ್ಕೃಷ್ಣಾತ್ ಸಾಕ್ಷಾತ್ಕಥಯತಃ ಸ್ವಯಮ್ 18.75
राजन्संस्मृत्य संस्मृत्य संवादमिममद्भुतम् ।
केशवार्जुनयोः पुण्यं हृष्यामि च मुहुर्मुहुः ॥ १८- ७६
ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ 18.76
तच्च संस्मृत्य संस्मृत्य रूपमत्यद्भुतं हरेः ।
विस्मयो मे महान् राजन् हृष्यामि च पुनः पुनः ॥ १८- ७७
ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ 18.77
यत्र योगेश्वरः कृष्णो यत्र पार्थो धनुर्धरः ।
तत्र श्रीर्विजयो भूतिः ध्रुवा नीतिर्मतिर्मम ॥ १८- ७८
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ
ತತ್ರ ಶ್ರೀರ್ವಿಜಯೋ ಭೂತಿಃ ರ್ಧ್ರುವಾ ನೀತಿರ್ಮತಿರ್ಮಮ 18.78
श्रीकृष्णार्जुनसंवादे मोक्षसन्न्यासयोगो नाम अष्टादशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಮೋಕ್ಷಸನ್ನ್ಯಾಸ ಯೊಗೊ ನಾಮ ಅಷ್ಟಾದಶೋಧ್ಯಾಯಃ